For Quick Alerts
ALLOW NOTIFICATIONS  
For Daily Alerts

ಯುಸಿ ವೆಬ್‌ನಿಂದ ಭ್ರಾತೃತ್ವದ ಶುಭಾಶಯಗಳು

By Manu
|

ಭಾರತದ ನಂ.1 ಮೊಬೈಲ್ ಬ್ರೌಸರ್, ಎಂದೆನಿಸಿರುವ ಯುಸಿ ಬ್ರೌಸರ್ ಇತ್ತೀಚೆಗೆ ಒಂದು ಆಂಧೋಲನವನ್ನು ಹಮ್ಮಿಕೊಂಡಿತ್ತು. ಅದೇನಪ್ಪಾ ಅಂದರೆ ದೀಪಾವಳಿಗೆ ಜನರು ಹೇಗೆ ಶುಭಾಶಯಗಳನ್ನು ವ್ಯಕ್ತಪಡಿಸಿದರು ಎಂಬ ಕುರಿತು ಇದು ಸಮೀಕ್ಷೆಯನ್ನು ನಡೆಸಿತು. ಸುಮಾರು 15 ಲಕ್ಷ ಯುಸಿ ಬ್ರೌಸರ್ ಬಳಕೆದಾರರು ದೇಶಾದಾದ್ಯಂತ ದೀಪಾವಳಿ ಶುಭಾಶಯಗಳನ್ನು #WishWithUC ಮೂಲಕ ವಿನಿಮಯ ಮಾಡಿಕೊಂಡರು. ಈ ಆಂಧೋಲನವು ರಾಷ್ಟ್ರ ವ್ಯಾಪ್ತಿ ನಡೆದ ಹಬ್ಬಕ್ಕೆ ತನ್ನದೇ ಆದ ಭಾವನಾತ್ಮಕ ಬೆಂಬಲವನ್ನು ನೀಡಿತು.

ಅಲ್ಲದೆ ಈ ದೀಪಾವಳಿಯ ಶುಭಾಶಯಗಳನ್ನು ತಿಳಿಸುವ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷತೆ ಇತ್ತು. ಅದೇನಪ್ಪಾ ಎಂದರೆ ಬಾಲನ್ನು ಬಾಣ ಬಿರುಸುಗಳಂತೆ ಮೈದಾನದಿಂದ ಹೊರಗೆ ಹಾರಿಸುತ್ತಿದ್ದ, ಸಿಕ್ಸರ್‌ಗಳ ರಾಜ ಯುವರಾಜ್ ಸಿಂಗ್ ಈ ಆಂಧೋಲನವನ್ನು ಉದ್ಘಾಟನೆ ಮಾಡಿದರು. ಯುಸಿ ಬ್ರೌಸರ್ ಯುವರಾಜ್ ಸಿಂಗ್ ಅವರ ಮೂಲಕ "#HarGharUCDiwali"ಆಂಧೋಲನವನ್ನು ಫೇಸ್‍ಬುಕ್, ಟ್ವಿಟರ್ ಮತ್ತು ಯುಸಿ ಬ್ರೌಸರ್‌‌ನಲ್ಲಿ ಆರಂಭಿಸಿತು. ಯಾರೂ ಸೃಜನಶೀಲತೆಯಿಂದ ಶುಭಾಶಯವನ್ನು ತಿಳಿಸುತ್ತಾರೋ ಆ ಅದೃಷ್ಟಶಾಲಿಗಳಿಗೆ, ವಿಶೇಷ ಉಡುಗೊರೆ ಮತ್ತು ಬಹುಮಾನಗಳನ್ನು ನೀಡುವುದಾಗಿ ಸಹ ಘೋಷಿಸಿತ್ತು.

ಹಲವಾರು ಶುಭಾಶಯಗಳು ಅದ್ಭುತವಾಗಿದ್ದವು ಮತ್ತು ಸೃಜನಶೀಲತೆಯಿಂದ ಸಹ ಕೂಡಿದ್ದವು. ಕೆಲವೊಂದು ನಗು ತರಿಸುವಂತಿದ್ದವು, ಮತ್ತೆ ಕೆಲವೊಂದು ಮನ ಮಿಡಿಯುವಂತಿದ್ದವು ಎಂಬುದು ವಿಶೇಷ. ಈ ಆಂಧೋಲನದ ಮೂಲ ಉದ್ದೇಶ ಜನರಲ್ಲಿ ದೀಪಾವಳಿಯ ಶುಭಾಶಯಗಳನ್ನು ಕಳುಹಿಸುವ ಮನೋಭಾವವನ್ನು ಬೆಳೆಸುವುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದು ಕೇವಲ ಯಾಂತ್ರಿಕವಾಗಿ ಕಳುಹಿಸುವ ಶುಭಾಶಯಗಳಲ್ಲಿ ಒಂದಾಗಿ ಹೋಗಿದೆ. ಅದಕ್ಕಾಗಿ ಸ್ವಲ್ಪ ಪೂರ್ಣ ಮನಸ್ಸಿನಿಂದ ಶುಭಾಶಯವನ್ನು ಕೋರುವ ಪ್ರವೃತ್ತಿಯನ್ನು ಜನರಲ್ಲಿ ತರಲು ಈ ಆಂಧೋಲನವನ್ನು ಮಾಡಲಾಯಿತು ಎಂದು ಆಯೋಜಕರು ತಿಳಿಸಿದರು. #WishWithUC ಎಂಬ ಟ್ಯಾಗ್ ಮೇಲೆ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸಾವಿರಾರುಗಟ್ಟಲೆ ಶುಭಾಶಯಗಳು ವಿನಿಮಯವಾದವು.

What Indians Wished For This Diwali: A UC web Analysis

ಈ ಶುಭಾಶಯ ಆಂಧೋಲನದ ಆಯೋಜಕರು ಈ ಆಂಧೋಲನದಲ್ಲಿ ವಿನಿಮಯವಾದ ಶುಭಾಶಯಗಳ ಮೇಲೆ ಮನಃಶಾಸ್ತ್ರೀಯ ಅಧ್ಯಯನವನ್ನು ಸಹ ನಡೆಸಿದರು, ಇವುಗಳಲ್ಲಿ ವಿನಿಮಯವಾದ ಶುಭಾಶಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳಲ್ಲಿ ಬಹುತೇಕವು ವೈಯಕ್ತಿಕ ಮನವಿಗಳ ಕುರಿತಾಗಿದ್ದವು. ಇನ್ನುಳಿದವು ಸಂತೋಷ ಹಂಚಿಕೊಂಡರೆ, ಇನ್ನೂ ಕೆಲವು ಇತರರಿಗೆ ಸಹಾಯ ಮಾಡುವಂತಾಗಿದ್ದವು, ಇನ್ನೂ ಕೆಲವು ಸ್ವಾರ್ಥ ಆಲೋಚನೆ ಹೊಂದಿದ್ದರೆ, ಇನ್ನುಳಿದವು ಕುಟುಂಬ, ಸ್ನೇಹಿತರು ಮತ್ತು ದುರ್ಬಲ ಜನರ ಕುರಿತಾಗಿ ಕಾಳಜಿ ವ್ಯಕ್ತಪಡಿಸುತ್ತಿದ್ದವು. ಬನ್ನಿ ಇದರ ಬಳಕೆದಾರರ ಶುಭಾಶಯಗಳಲ್ಲಿ ಅತ್ಯಂತ ಗಮನ ಸೆಳೆದ ಶುಭಾಶಯಗಳನ್ನು ಈ ಕೆಳಗೆ ನೀಡಿದ್ದೇವೆ, ನೀವು ಸಹ ಓದಿಕೊಳ್ಳಿ.

ಈ ಶುಭಾಶಯಗಳ ಅಂಕಿ ಅಂಶವು ಕೆಲವೊಂದು ಕುತೂಹಲ ಕೆರಳಿಸುವ ಅಂಶಗಳನ್ನು ಹೊಂದಿದ್ದವು. ಇವುಗಳಲ್ಲಿ ಕೆಲವೊಂದು ಕೋರಿಕೆಗಳು ಸಹ ಇದ್ದವು, ಅವುಗಳಲ್ಲಿ ಬಹುತೇಕವು ಯುಸಿ ಬ್ರೌಸರ್‌ನ ಇಂಟಾರ‍್ಯಾಕ್ಟಿವ್ ಗೇಮ್ ಮೂಲಕ ಕೋರಲಾಗಿದ್ದವು. ಹಲವರು ತಮಗೆ ಐ-ಫೋನ್6ಎಸ್ ಬೇಕೆಂದು ಕೋರಿದ್ದರು. ಇದರ ಜೊತೆಗೆ ಸಂಪತ್ತು ಮತ್ತು ಕುಟುಂಬದ ಸಂತೋಷವನ್ನು ಸುಮಾರು ಜನ ಕೋರಿದ್ದರು. ಇವುಗಳನ್ನು ಹೊರತುಪಡಿಸಿ ಮತ್ತಷ್ಟು ಕುತೂಹಲ ಕೆರಳಿಸುವ ಅಂಶಗಳನ್ನು ಸಹ ಸುಮಾರು ಜನ ಕೇಳಿಕೊಂಡಿದ್ದರು. ಬನ್ನಿ ಅವುಗಳನ್ನು ಸಹ ತಿಳಿದುಕೊಳ್ಳೋಣ.

ಯುವರಾಜ್ ಸಿಂಗ್‌ರ ಅಭಿಮಾನಿಗಳೇ 30% ಶುಭಾಶಯ ಮತ್ತು ಕೋರಿಕೆಗಳನ್ನು ತಿಳಿಸಿದ್ದರು ಯುವರಾಜ್ ಸಿಂಗ್ ಸ್ವತಃ ಬಳಕೆದಾರರ ಶುಭಾಶಯ ಮತ್ತು ಕೋರಿಕೆಗಳನ್ನು ತಿಳಿದುಕೊಳ್ಳಲು ಗೇಮ್ ಒಳಗೆ ನಡೆಸಿದ ಸಂವಾದದಿಂದಾಗಿ, ಹಲವಾರು ಶುಭಾಶಯಗಳು ಅವರಿಗೆ ಸಂದಾಯವಾಯಿತು. ಸುಮಾರು 30% ಶುಭಾಶಯಗಳು ಅವರಿಗೆ ಹಾರೈಕೆಯಾದವು. ಇದರಿಂದಾಗಿ ಯುಸಿ ಬ್ರೌಸರ್ ಬಳಕೆದಾರರಲ್ಲಿ ಬಹುತೇಕ ಜನ ಅವರ ಅಭಿಮಾನಿಗಳು ಇರುವುದು ಇದರಿಂದ ಖಚಿತವಾಯಿತು. ಸುಮಾರು ಜನರಿಗೆ ದೀಪಾವಳಿಯಲ್ಲಿ ಯುವರಾಜ್ ಜೊತೆಗೆ ಸಂವಾದ ನಡೆಸಿದ್ದೇ ದೀಪಾವಳಿಯ ವಿಶೇಷ ಅನುಭವವಾಗಿ ಸಹ ದಾಖಲಾಯಿತು.

ಎಲ್ಲಾ ಜನರ ನಡುವಿನ ಭ್ರಾತೃತ್ವ ಸಾಬೀತಾಯಿತು
ಹೌದು, ದೀಪಾವಳಿ ಸಂದರ್ಭದಲ್ಲಿ ನಡೆದ ಈ ಆಂಧೋಲನಕ್ಕೆ ಧರ್ಮ, ಜಾತಿ, ಕುಲ ಮತ್ತು ಮತಗಳ ಭೇದವಿಲ್ಲದೆ ಹಲವಾರು ಜನರು ಭಾಗವಹಿಸಿದರು. ಮತ್ತು ಅವರೆಲ್ಲರೂ ಸಹ ದೀಪಾವಳಿಯ ಸಂತಸವನ್ನು ಇತರರೊಂದಿಗೆ ಹಂಚಿಕೊಂಡರು. ಯುಸಿ ಬ್ರೌಸರ್‌ನ ಫೇಸ್‌ಬುಕ್ ಪುಟದಲ್ಲಿ ಮುಕ್ತ ಕಂಠದಿಂದ ಶುಭಾಶಯಗಳನ್ನು ಹಬ್ಬ ಆಚರಿಸುತ್ತಿರುವ ಇತರರಿಗೆ ಇವರು ತಿಳಿಸಿದರು. ಕೆಲವೊಂದನ್ನು ನೀವೇ ಓದಿ.. ಷಾ ಉಮರ್ ಷಾ: # ನಾವು ನಮ್ಮ ಧರ್ಮದ ಪ್ರಕಾರ ಈ ಹಬ್ಬವನ್ನು ಆಚರಿಸುವುದಿಲ್ಲ, ಆದರೆ ನಾನು ನನ್ನ ಹಿಂದೂ ಸೋದರರಿಗೆ ದೀಪಾವಳಿಯ ಮುಬಾರಕ್ ತಿಳಿಸುತ್ತೇನೆ ಮತ್ತು ನಾನು ನನ್ನ ನೆಚ್ಚಿನ ಬ್ರೌಸರ್ ಆದ ಯುಸಿ ಬ್ರೌಸರ್‌ನಿಂದ ಏನನ್ನಾದರೂ ಈ ಸಂದರ್ಭದಲ್ಲಿ ಗೆಲ್ಲುತ್ತೇನೆ ಎಂದು ಭಾವಿಸುತ್ತೇನೆ. ಸುದಿಪ್ತ ಸರ್ಕಾರ್: ಧರ್ಮವು ಯಾವತ್ತಿಗೂ ತಡೆಗೋಡೆಯೇ ಅಲ್ಲ, ದೀಪಾವಳಿಯಲ್ಲಿ (Diwali) "ಅಲಿ" ಇದ್ದಾನೆ ಮತ್ತು ರಂಜಾನ್‌ನಲ್ಲಿ(Ramjan) "ರಾಮ"ನಿದ್ದಾನೆ.

ಪರಿಸರ ಕಾಳಜಿ ಇರುವ ದೀಪಾವಳಿಗೆ ಸಲಹೆ
ಪಟಾಕಿಗಳನ್ನು ಸುಡುವ ಕುರಿತು ಇತ್ತೀಚಿನ ನಿರ್ಬಂಧಗಳ ಕುರಿತು ಗಮನ ಸೆಳೆದವರು ಕೆಲವರು. ಪಟಾಕಿ ಸುಡುವುದು ತಪ್ಪು ಎಂಬ ಕುರಿತು ಪರ-ವಿರೋಧ ಈಗಲೂ ಚರ್ಚೆಯಾಗುತ್ತಿದೆ. ಆದರೆ ಸುಮಾರು ಜನ ಪರಿಸರ ಕಾಳಜಿ ಇರುವ ದೀಪಾವಳಿಗೆ ಮನಸ್ಸು ಮಾಡಲು ಸೂಚಿಸಿದ್ದರು. ಅಲ್ಲದೆ ಸುರಕ್ಷಿತ ದೀಪಾವಳಿಗೆ ಸಹ ಸಲಹೆ ನೀಡಿದ್ದರು. ಪರಿಸರ ಮಾಲಿನ್ಯ ರಹಿತ ದೀಪಾವಳಿಯನ್ನು ಆಚರಿಸಿ, ಆ ಹಣವನ್ನು ನಿರ್ಗತಿಕರಿಗೆ ನೀಡುವ ಸಲಹೆಗಳನ್ನು ಮತ್ತು ಮನವಿಗಳನ್ನು ಸಹ ಹಂಚಿಕೊಳ್ಳಲಾಗಿತ್ತು ಇಲ್ಲಿ.

ಯುಸಿ ವೆಬ್ ಕುರಿತು
ಯುಸಿ ವೆಬ್.ಇನ್.(ಯುಸಿ ವೆಬ್) ಎಂಬುದು ಮೊಬೈಲ್ ಇಂಟರ್‌ನೆಟ್ ಸಾಫ್ಟ್‌ವೇರ್ ಮತ್ತು ಸೇವೆಯನ್ನು ನೀಡುವ ಮುಂಚೂಣಿ ಕಂಪನಿಯಾಗಿದೆ. 2004 ರಲ್ಲಿ ಇದು ಆರಂಭವಾದಾಗಿನಿಂದಲೂ, ಯುಸಿ ವೆಬ್ ತನ್ನ ಸೇವೆಯನ್ನು ಮೊಬೈಲ್ ಇಂಟರ್‌ನೆಟ್ ರಂಗದಲ್ಲಿ ವಿಶ್ವದಾದ್ಯಂತ ನೀಡುತ್ತಾ ಬಂದಿದೆ. ಯುಸಿ ವೆಬ್‌ನ ಉನ್ನತ ಉತ್ಪನ್ನವೆಂದರೆ ಅದು ಯುಸಿ ಬ್ರೌಸರ್. ಇದು ಸುಮಾರು 200 ಉತ್ಪಾದಕರ 3,000 ವಿವಿಧ ಮಾದರಿಯ ಮೊಬೈಲ್‌ನಲ್ಲಿ ಲಭ್ಯವಿರುವ ಬ್ರೌಸರ್ ಆಗಿದೆ. ಇದು ಹಲವಾರು ಮುಖ್ಯ ಆಪರೇಟಿಂಗ್ ಸಿಸ್ಟೆಂ ಜೊತೆಗೆ ಹೊಂದಾಣಿಕೆಯಾಗುವುದು ಇದರ ವಿಶೇಷತೆ. 150 ದೇಶಗಳಲ್ಲಿರುವ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ. ಇಂಗ್ಲೀಷ್, ರಶಿಯನ್, ಇಂಡೋನೇಷಿಯನ್ ಮತ್ತು ವಿಯೆಟ್ನಾಮೀಸ್ ಒಳಗೊಂಡಂತೆ 11 ಭಾಷೆಗಳಲ್ಲಿ ಇದು ಕಾರ್ಯ ನಡೆಸುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಯು www.ucweb.com. ನಲ್ಲಿ ಲಭಿಸುತ್ತದೆ. UCWeb Inc ಎಂಬುದು ಅಲಿಬಾಬಾ ಗ್ರೂಪ್ಸ್ ಮೊಬೈಲ್ ಬ್ಯುಸಿನೆಸ್‌ನ ಒಂದು ಅಂಗ ಸಂಸ್ಥೆಯಾಗಿದೆ.

English summary

What Indians Wished For This Diwali: A UC web Analysis

UC Browser, India's No. 1 mobile browser, received a whopping response to its Diwali Wishes campaign on browser and social media channels. Nearly 1.5 million wishes have been made on UC Browser by users across the country under the #WishWithUC campaign, offering a peek into the national sentiment.
Story first published: Friday, November 27, 2015, 18:19 [IST]
X
Desktop Bottom Promotion