For Quick Alerts
ALLOW NOTIFICATIONS  
For Daily Alerts

ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳು ಯಾವುವು?

|

ನೀವೂ ಶಿಕ್ಷಕಿ, ಒಬ್ಬ ಉದ್ಯೋಗಿ ಏನೇ ಆಗಿರಿ ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳು ನಿಮ್ಮನ್ನು ಪ್ರಫುಲ್ಲಗೊಳಿಸುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದು ಚರಾಚರಾ ವಸ್ತುಗಳೂ ಹಲವಾರು ಚಟುವಟಿಕೆಯಲ್ಲಿ ಆನಂದವನ್ನು ಕಂಡುಕೊಳ್ಳುತ್ತವೆ. ಅದೇ ರೀತಿ ಮನುಷ್ಯರಾದ ನಾವೂ ಕೂಡ ಒಂದಿಲ್ಲೊಂದು ಚಟುವಟಿಕೆಗಳನ್ನು ದಿನನಿತ್ಯದ ಕೆಲಸದೊಂದಿಗೆ ಪ್ರಯತ್ನಿಸಲೇಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಯುವ ಮುನ್ನ ಮಾಡಬೇಕಾದ ಸಾಹಸಕ್ರೀಡೆಗಳು

ಈ ಚಟುವಟಿಕೆಗಳು ಗುಂಪಿನಲ್ಲಿ ಅತ್ಯಂತ ಪರಿಣಾಮಕಾರಿ ಪ್ರಭಾವವನ್ನು ಬಿರುತ್ತದೆ. ನಿಮ್ಮ ಕಚೇರಿಯಲ್ಲಿ ಅಥವಾ ನೀವು ಉದ್ಯೋಗ ನಿರ್ವಹಿಸುತ್ತಿರುವ ಶಾಲೆ, ಕಾಲೇಜು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತಮ ತಂಡದ ರಚನೆಯನ್ನು ಈ ಮುದನೀಡುವ ಚಟುವಟಿಕೆಗಳು ಮಾಡುತ್ತವೆ.

ನಿಮ್ಮ ಸಹೋದ್ಯೋಗಿಗಳೊಂದಿಗೆ ಮೋಜಿನ ಚಟುವಟಿಕೆಗಳನ್ನು ನೀವು ಹಮ್ಮಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಉಂಟಾಗಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ರಚನೆಯಾಗುತ್ತದೆ. ತಂಡದಲ್ಲಿನ ಸಮಸ್ಯೆ ನಿವಾರಣೆ ರೀತಿ, ಒಗ್ಗಟ್ಟು, ಸಂವಹನದ ಮಹತ್ವವನ್ನು ಈ ಚಟುವಟಿಕೆಗಳು ನಿಮಗೆ ತಿಳಿಸಿಕೊಡುತ್ತವೆ. ನಿಮ್ಮ ಕಚೇರಿಯ ಸಿಬ್ಬಂದಿಗಳೊಂದಿಗೆ ಗುಂಪು ಕಟ್ಟಿ ವಾರಾಂತ್ಯದಲ್ಲಿ ಮನಸ್ಸಿಗೆ ಮುದ ನೀಡುವ ಹಲವಾರು ಚಟುವಟಿಕೆಗಳನ್ನು ನಿಮಗೆ ಹಮ್ಮಿಕೊಳ್ಳಬಹುದು.

ಈ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನೀವು ದೂರದೂರಕ್ಕೆ ಹೋಗಬೇಕೆಂದಿಲ್ಲ ನಿಮ್ಮ ಸುತ್ತಲಿನ ಪರಿಸರವನ್ನು ಆರಿಸಿಕೊಂಡು ಮೋಜು ವಿನೋದಗಳನ್ನು ಆನಂದಿಸಬಹುದು. ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕೆಲವು ಚಟುವಟಿಕೆಗಳು ಇಲ್ಲಿವೆ. ನಿಮ್ಮ ಸಹೋದ್ಯೋಗಿಗಳ ಅಥವಾ ಶಾಲಾ ಮಕ್ಕಳ ಗುಂಪನ್ನು ಕಟ್ಟಕೊಂಡು ಈ ಚಟುವಟಿಕೆಯೊಂದಿಗೆ ನೀವು ಸಂಭ್ರಮಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಾಟನ್ ಕ್ಯಾಂಡಿಯ ಕೆಲವು ತಮಾಷೆ ಸತ್ಯಗಳು

1.ಡ್ರಮ್ ಸರ್ಕಲ್ (ಗುಂಪು)

1.ಡ್ರಮ್ ಸರ್ಕಲ್ (ಗುಂಪು)

ಪಟ್ಟಿಯಲ್ಲಿರುವ ಒಂದು ಅತ್ಯುತ್ತಮ ಚಟುವಟಿಕೆ ಇದಾಗಿದೆ. ಈ ಚಟುವಟಿಕೆ ವಿನೋದವನ್ನು ಹಮ್ಮಿಕೊಳ್ಳುವ ಪ್ರತಿಯೊಬ್ಬ ಸದಸ್ಯನಿಗೂ ಡ್ರಮ್ ಬಾರಿಸಲು ಗೊತ್ತಿರಬೇಕು. ಹೀಗೆ ಬಾರಿಸುವಾಗ ಬರುವ ಸಂಗೀತ ಮನಸ್ಸಿನಲ್ಲಿ ಮೂಡಿರುವ ದ್ವೇಷ, ಅಸೂಯೆಯನ್ನು ದೂರಮಾಡಿ ಸಮಾಧಾನ ಖುಷಿಯನ್ನು ನೀಡುತ್ತದೆ. ಆಂತರಿಕ ಕೌಶಲ್ಯವನ್ನು ಈ ಗುಂಪುಗಾರಿಕೆ ಸಂಗೀತದ ಹಿತವಾದ ನಾದದೊಂದಿಗೆ ಕಲಿಸಿಕೊಡುತ್ತದೆ.

2.ಹನೋಯ್ ಟವರ್

2.ಹನೋಯ್ ಟವರ್

ಯೋಜನೆ, ಕ್ರಿಯಾತ್ಮಕತೆ, ಮತ್ತು ಸಂವಹನ ತಂಡಕ್ಕೆ ಅತ್ಯವಶ್ಯಕವಾದುದು. ಹನೋಯ್ ಟವರ್ ರಚನೆಯಲ್ಲಿನ ಕ್ರಿಯಾತ್ಮಕತೆ ಸಮಸ್ಯೆಯನ್ನು ಒಟ್ಟಾಗಿ ಹೇಗೆ ನಿವಾರಿಸಬಹುದೆಂಬ ಅರಿವನ್ನು ನಿಮಗೆ ಮಾಡಿಕೊಡುತ್ತದೆ.

3.ಲ್ಯಾಂಡ್ ಮೈನ್

3.ಲ್ಯಾಂಡ್ ಮೈನ್

ಈ ಆಟದಲ್ಲಿನ ನಿಯಮಗಳು ಗುಂಪಿನ ಹೊಣೆಗಾರಿಕೆಯನ್ನು, ಸಂವಹನವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ. ಈ ಆಟದಲ್ಲಿನ ಮಾರ್ಗದರ್ಶನವು ನಿಮ್ಮ ಉತ್ತಮ ಸಂವಹನಕ್ಕೆ ದಾರಿ ಮಾಡಿಕೊಡುತ್ತದೆ.

4.ಬುಲ್ ರಿಂಗ್

4.ಬುಲ್ ರಿಂಗ್

ಒಟ್ಟಾಗಿ ಸೇರಿ ಒಂದು ಸಾಧನೆಯನ್ನು ಮಾಡುವುದು ಹೇಗೆ ಎಂಬುದು ಈ ಆಟದಿಂದ ನಮಗೆ ತಿಳಿದು ಬರುತ್ತದೆ. ಕಡಿಮೆ ಸ್ಥಳಾವಕಾಶದಲ್ಲಿ ಕೂಡ ಈ ಆಟವನ್ನು ನಿಮಗೆ ಆಡಬಹುದು.

5.ಕ್ರಿಯಾತ್ಮಕವಾಗಿ ಅಡಚಣೆ ಅರಿಯುವಿಕೆ (ಡೈನಾಮಿಕ್ ಅಬೆಸ್ಟೇಕಲ್ ಕೋರ್ಸ್)

5.ಕ್ರಿಯಾತ್ಮಕವಾಗಿ ಅಡಚಣೆ ಅರಿಯುವಿಕೆ (ಡೈನಾಮಿಕ್ ಅಬೆಸ್ಟೇಕಲ್ ಕೋರ್ಸ್)

ತಂಡದಲ್ಲಿನ ಸದಸ್ಯರಿಗೆ ಉತ್ತಮ ತಂಡವನ್ನು ಹೇಗೆ ಕಟ್ಟಬೇಕೆಂಬ ಮೂಲ ಮಂತ್ರವನ್ನು ಈ ಆಟ ತಿಳಿಸಿಕೊಡುತ್ತದೆ. ಒಂದು ಅಡಚಣೆಯನ್ನು ಕ್ರಿಯಾತ್ಮಕವಾಗಿ ಹೇಗೆ ಪರಿಹರಿಸಬಹುದೆಂಬ ಪಾಠ ಈ ಆಟದಿಂದ ದೊರೆಯುತ್ತದೆ. ನಿಮ್ಮ ತಂಡವನ್ನು ಬಲಶಾಲಿ ಮತ್ತು ಪರಿಣಾಮಕಾರಿಯಾಗಿ ಮಾಡುವಲ್ಲಿ ಈ ಚಟುವಟಿಕೆಯ ಪಾತ್ರ ಹಿರಿದು.

English summary

Fun Team Building Activities To Try Out

Whether you are a teacher, employee or even a student, you need to find the time to enjoy yourself with nature in all its glory. There are a number of places in Bangalore where you and your employees can simply hang out.
X
Desktop Bottom Promotion