For Quick Alerts
ALLOW NOTIFICATIONS  
For Daily Alerts

ನಿಮ್ಮ ವ್ಯಕ್ತಿತ್ವವನ್ನು ಉಗುರುಗಳ ಆಕಾರದ ಮೂಲಕ ತಿಳಿದುಕೊಳ್ಳಬಹುದೇ?

By Deepak M
|

ಇತ್ತೀಚೆಗೆ ಇಂಟರ್‌ನೆಟ್‍ನಲ್ಲಿ ಒಂದು ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನಪ್ಪಾ ಎಂದರೆ" ಜಪಾನ್‍ನಲ್ಲಿ ಇತ್ತೀಚೆಗೆ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳುವ ಹೊಸ ವಿಧಾನ" ಶುರುವಾಗಿದೆಯಂತೆ. ಅದು ಯಾವುದೋ ಒಂದು ಗುಣವನ್ನು ನೋಡಿ ಆ ವ್ಯಕ್ತಿಯ ವ್ಯಕ್ತಿತ್ವ ತಿಳಿದುಕೊಳ್ಳುವ ಬಗೆ ಇದಲ್ಲ. ಅದರ ಬದಲಿಗೆ ನಮ್ಮ ಉಗುರುಗಳ ಹಿಂದೆ ಇರುವ ಚರ್ಮದ ಆಕಾರ ಎಂದರೆ ನೇಲ್ ಬೆಡ್ ಎಂದು ಸಹ ಕರೆಯಲಾಗುವ ಭಾಗವನ್ನು ನೋಡಿ ವ್ಯಕ್ತಿತ್ವವನ್ನು ಅಳೆಯುವ ವಿಧಾನ ಇದು.

ಉದ್ದನೆಯ ನೇಲ್ ಬೆಡ್‍ಗಳು ಸೃಜನಶೀಲತೆಯೊಂದಿಗೆ ಸಂಬಂಧವನ್ನು ಹೊಂದಿದ್ದರೆ, ಅಗಲವಾಗಿ ಚಾಚಿ ಕೊಂಡಿರುವ ನೇಲ್ ಬೆಡ್‍ಗಳು, ಆ ವ್ಯಕ್ತಿ ಉತ್ತಮ ವಾಗ್ಮಿ ಅಥವಾ ಭಾಷಣಕಾರನೆಂದು ಸೂಚಿಸುತ್ತದೆ. ಚೌಕಾಕಾರದ ಉಗುರುಗಳು ಧೈರ್ಯವನ್ನು ಸೂಚಿಸುತ್ತವೆ ಮತ್ತು ಇನ್ನುಳಿದ ಆರು ಬಗೆಯ ಉಗುರುಗಳು ಇನ್ನಿತರ ವ್ಯಕ್ತಿತ್ವಗಳೊಂದಿಗೆ ಸಂಬಂಧವನ್ನು ಹೊಂದಿವೆ.

ಇವೆಲ್ಲವುಗಳನ್ನು ನಾವು ನಂಬಲೇಬೇಕಾದ ಬಗೆಯಲ್ಲಿ ಇವುಗಳನ್ನು ವಿಶ್ಲೇಷಿಸಲಾಗುತ್ತದೆ. ಇಲ್ಲಿ ನಾವು ವಿವಿಧ ಬಗೆಯ ಉಗುರುಗಳ ರಚನೆ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿತ್ವಗಳನ್ನು ಇಲ್ಲಿ ನೀಡಿದ್ದೇವೆ. ಓದಿ ನೋಡಿಕೊಳ್ಳಿ, ನಿಮ್ಮ ಉಗುರು ಎಂತಹದು ಮತ್ತು ನಿಮ್ಮ ವ್ಯಕ್ತಿತ್ವ ಎಂತಹುದು ಎಂಬುದನ್ನು:

ನಮಗೆಲ್ಲರಿಗು ತಿಳಿದಿರುವಂತೆ ನಮ್ಮ ಆರೋಗ್ಯವು ನಮ್ಮ ಉಗುರುಗಳಲ್ಲಿಯೂ ಸಹ ಪ್ರತಿಬಿಂಬಗೊಳ್ಳುತ್ತದೆ. ನಮ್ಮ ದೇಹದಲ್ಲಿನ ಪೋಷಕಾಂಶಗಳ ಕೊರತೆಯು ಮೊದಲು ಕಂಡು ಬರುವುದು ಉಗುರುಗಳಲ್ಲಿ. ಇದರ ಜೊತೆಗೆ ಇನ್ನಿತರ ಆರೋಗ್ಯದ ಸಮಸ್ಯೆಗಳು ಸಹ ಉಗುರುಗಳ ಮೂಲಕ ತಮ್ಮ ಇರುವಿಕೆಯನ್ನು ದೃಢಪಡಿಸಿದೆ. ಆದರೆ ವ್ಯಕ್ತಿತ್ವ? ಇದು ತಮಾಷೆ ಅನ್ನಿಸುತ್ತೆ ಬಿಡಿ, ಅದರ ಬಗ್ಗೆ ನಮಗೆ ಎಳ್ಳಷ್ಟು ನಂಬಿಕೆಯಿಲ್ಲ ಎನ್ನುತ್ತೀರಲ್ಲವೆ? ಆದರೆ ನಾವಿಲ್ಲಿ ಈ ತಮಾಷೆಯ ವಿಶ್ಲೇಷಣೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ನೀವು ಜ್ಯೋತಿಷ್ಯ ಮತ್ತು ನಿತ್ಯ ಭವಿಷ್ಯಗಳನ್ನು ಹೇಗೆ ನಂಬುತ್ತೀರೋ, ಹಾಗೆಯೇ ಇದನ್ನು ಸಹ ಒಮ್ಮೆ ಓದಿ. ತಮಾಷೆಯಾಗಿ ತೋರುವ ಕೆಲವು ಸಂಗತಿಗಳು ನಿಮಗೆ ಕಾಣಿಸುತ್ತವೆ. ಒಮ್ಮೆ ಓದಿ, ಸ್ವಲ್ಪ ವಿಭಿನ್ನವಾಗಿರುವ ಈ ವರದಿಯನ್ನು.

ಚೆಂದವಾಗಿ ಕಾಣಲು ಉಗುರುಗಳು ಅಂದವಾಗಿರಬೇಕು

ಲಂಬವಾಗಿ ಉದ್ದವಾಗಿರುವ ಉಗುರುಗಳು

ಲಂಬವಾಗಿ ಉದ್ದವಾಗಿರುವ ಉಗುರುಗಳು

ನೀವು ಸೌಮ್ಯ ಸ್ವಭಾವದ ರಸಿಕ ಮನೋಭಾವದವರು ಎಂಬುದನ್ನು ಇದು ಸೂಚಿಸುತ್ತದೆ. ಲಂಬವಾಗಿ ಉದ್ದವಾಗಿರುವ ಉಗುರುಗಳು ಬಹುಶಃ ನಿಮ್ಮ ಬಲ ಮೆದುಳು ತುಂಬಾ ಅಭಿವೃದ್ಧಿಯನ್ನು ಹೊಂದಿರಬಹುದು. ಜೊತೆಗೆ ನಿಮ್ಮ ಕಲ್ಪನಾಶಕ್ತಿಯು ಸಹ ಅದ್ಭುತ. ಇದೆಲ್ಲದರ ಫಲವಾಗಿ ನೀವು ಅತಿ ಸೂಕ್ಷ್ಮತೆ ಹಾಗು ಸೃಜನಶೀಲತೆಯನ್ನು ಹೊಂದಿರುತ್ತೀರಿ. ಆದರೆ ನೀವು ನಿಮ್ಮ ಸುತ್ತ-ಮುತ್ತಲಿನ ವಾತಾವರಣದಲ್ಲಿ ಜರುಗುವ ಸಂಗತಿಗಳಿಗೆ ಸುಲಭವಾಗಿ ಪ್ರತಿಕ್ರಿಯೆಯನ್ನು ತೋರುತ್ತೀರಿ. ಆದ್ದರಿಂದ ಮೋಸ ಹೋಗುವ ಸಂಭವವೆ ಅಧಿಕವಾಗಿರುತ್ತದೆ. ಈ ಕುರಿತು ನೀವು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ಇನ್ನೂ ಎಡ ಮೆದುಳಿನ ವಿಚಾರಕ್ಕೆ ಬಂದರೆ, ನೀವು ಇದರಲ್ಲಿ ತೀರಾ ಹಿಂದೆ ಉಳಿದಿರುತ್ತೀರಿ. ಬಹುತೇಕ ವಿಚಾರಗಳನ್ನು ನೀವು ಅರ್ಥ ಮಾಡಿಕೊಳ್ಳಲು ಹಿಂದೆ ಬಿದ್ದಿರುತ್ತೀರಿ ಮತ್ತು ಕೆಲವೊಮ್ಮೆ ನೀವು ಈ ವಿಚಾರಗಳ ಬಗ್ಗೆ ಗೊಂದಲಕ್ಕೆ ಬಿದ್ದು, ಜಗಳದಲ್ಲಿ ಇವುಗಳ ಮುಕ್ತಾಯವಾಗುತ್ತದೆ.

ಅಗಲವಾಗಿರುವ ಚಾಚಿಕೊಂಡಿರುವ ಉಗುರುಗಳು

ಅಗಲವಾಗಿರುವ ಚಾಚಿಕೊಂಡಿರುವ ಉಗುರುಗಳು

ನೀವು ಮುಂಗೋಪಿ ಸ್ವಭಾವದ ತತ್ವಜ್ಞಾನಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಎಡ ಮೆದುಳು ತುಂಬಾ ಬೆಳವಣಿಗೆಯನ್ನು ಹೊಂದಿದೆ ಎಂಬುದನ್ನು ಕೂಡ ಸೂಚಿಸುತ್ತದೆ, ಮತ್ತು ನೀವು ಹೆಚ್ಚಿನ ಸ್ಪಷ್ಟತೆಯನ್ನು ಹೊಂದಿರುವ ವ್ಯಕ್ತಿಯೆಂದು ಇದರಿಂದ ತಿಳಿಯುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಇತರ ಮುಂದೆ ಇಡುತ್ತೀರಿ. ಇದರಿಂದ ಜನರು ನೀವು ಒಬ್ಬ ನೇರ ನಡೆ-ನುಡಿ ಇರುವ ಮನುಷ್ಯ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೂ ಸಹ ನೀವು ತಾಳ್ಮೆಯಿಲ್ಲದಿರುವ ಮುಂಗೋಪವನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಿ. ಅದಕ್ಕಾಗಿ ಸ್ವಲ್ಪ ಆತ್ಮ ಸಂಯಮವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಆದರೆ ನೀವು ಯಾವುದೇ ಕಾರಣಕ್ಕು ಬಲ ಮೆದುಳು ಬಲಶಾಲಿಯಾಗಿರುವವರಂತೆ, ಹೃದಯದ ಮಾತನ್ನು ಕೇಳುವ ಗುಣವನ್ನು ಹೊಂದಿರುವುದಿಲ್ಲ.

ವೃತ್ತಾಕಾರದ ಅಥವಾ ಮೊಟ್ಟೆಯಾಕಾರದ ಉಗುರುಗಳು

ವೃತ್ತಾಕಾರದ ಅಥವಾ ಮೊಟ್ಟೆಯಾಕಾರದ ಉಗುರುಗಳು

ನೀವು ಸುಮ್ಮನೆ ಕುಳಿತಿರುವ ಶಾಂತಿ ಪ್ರಿಯರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಪಾಡಿಗೆ ನಿಮ್ಮದೇ ಆದ ವೇಗದಲ್ಲಿ ಸಾಗುವ ಜಾಯಮಾನ ನಿಮ್ಮದು. ನೀವು ಜನರ ಜೊತೆಗೆ ಚೆನ್ನಾಗಿ ಬೆರೆಯುವ ಮನೋಭಾವದವರು ಮತ್ತು ನಿಮ್ಮ ಸುತ್ತ-ಮುತ್ತ ಇರುವ ಜನರು ವಾದ ಪ್ರತಿವಾದಕ್ಕೆ ನಿಂತಾಗ ನ್ಯಾಯ ನಿರ್ಣಯವನ್ನು ಮಾಡುವುದಕ್ಕೆ ನೀವೇ ನಿಲ್ಲುವಿರಿ. ನಿಮ್ಮ ವರ್ಣ ರಂಜಿತವಾದ ವ್ಯಕ್ತಿತ್ವವು ಇತರರಿಂದ ಪ್ರಶಂಸೆಗೆ ಒಳಪಡುತ್ತದೆ. ಆದರೆ ನೀವು ಇತರರಿಗೆ ಸಾಮಾನ್ಯ ವ್ಯಕ್ತಿಯೆಂಬ ಮನೋಭಾವನೆಯನ್ನು ಉಂಟು ಮಾಡಿ ಬಿಡುತ್ತೀರಿ. ಇದರಿಂದ ನಿಮ್ಮ ಸ್ನೇಹಿತರು ನಿಮ್ಮ ಕುರಿತಾಗಿ ಭರವಸೆಯನ್ನು ಕಳೆದುಕೊಳ್ಳುತ್ತಾರೆ ಎಚ್ಚರವಿರಲಿ. ಇತರರಿಗೆ ಹೋಲಿಸಿದಲ್ಲಿ ನೀವು ಉತ್ತಮರು ಎಂಬುದರಲ್ಲಿ ಸಂಶಯವಿಲ್ಲ.

ಚೌಕಾಕಾರದ ಉಗುರುಗಳು

ಚೌಕಾಕಾರದ ಉಗುರುಗಳು

ನೀವು ಗಂಭೀರ ಮತ್ತು ಕಠಿಣ ನಿಲುವಿನ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ನೀವು ಧೈರ್ಯವನ್ನು ಹೊಂದಿರುವ ವ್ಯಕ್ತಿಯಾಗಿರುವಿರಿ: ಹಲವು ಜನ ಗಂಡಸರು ಈ ವಿಭಾಗದಡಿಯಲ್ಲಿ ಬರುತ್ತಾರೆ. ನಿಮ್ಮ ಗಂಭೀರ ನಿಲುವು ಮತ್ತೊಂದು ಒಳ್ಳೆಯ ಅಂಶವಾಗಿದೆ. ಆದರೆ ನಿಮ್ಮ ಕಠಿಣ ನಿಲುವು ಮತ್ತು ರಾಜಿಯಾಗದ ಗುಣಗಳು ಒಂದು ಅಮೂಲ್ಯವಾದ ಕಲ್ಲಿನ ಮೇಲೆ ಸೀಳು ಬಿಟ್ಟ ಹಾಗೆ ಕಾಣುತ್ತದೆ. ನಿಮ್ಮ ಹಠವಾದಿತನವನ್ನು ಮತ್ತು ರಾಜಿಯಾಗದ ಗುಣಗಳನ್ನು ತ್ಯಾಗಮಾಡಿದರೆ, ಎಲ್ಲ ಕೆಲಸಗಳು ನೀವು ನೆನೆಸಿದಂತೆ ಆಗುವುದರಲ್ಲಿ ಸಂಶಯವಿಲ್ಲ.

ತ್ರಿಭುಜಾಕಾರ ಅಥವಾ ತಲೆಕೆಳಗಾದ ತ್ರಿಭುಜ

ತ್ರಿಭುಜಾಕಾರ ಅಥವಾ ತಲೆಕೆಳಗಾದ ತ್ರಿಭುಜ

ನೀವೊಬ್ಬ ಭಾವುಕತನ್ನವನ್ನು ಹೊಂದಿರುವ ಅದ್ಭುತವಾದ ಪ್ರತಿಭೆ ಎಂಬುದನ್ನು ಸೂಚಿಸುತ್ತದೆ. ನೀವು ಹೊಸ ಆಲೋಚನೆಗಳನ್ನು ಒದಗಿಸುವವರು ಮತ್ತು ಇತರರು ನೋಡಲು ಸಾಧ್ಯವಾಗದ ಪ್ರತಿಯೊಂದು ಸೂಕ್ಷ್ಮವನ್ನು ಸದಾ ಗಮನಿಸುವವರು. ಅದರಲ್ಲಿಯೂ ತಲೆಕೆಳಗಾದ ತ್ರಿಭುಜವನ್ನು ಹೊಂದಿರುವವರು ಸ್ವಲ್ಪ ಮಹತ್ವಾಕಾಂಕ್ಷೆವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇನ್ನೂ ತಲೆ ಎತ್ತಿ ನಿಂತಿರುವ ತ್ರಿಭುಜವನ್ನು ಹೊಂದಿರುವವರು ಸ್ವಲ್ಪ ಹೆಚ್ಚಿಗೆ ಭಾವುಕರಾಗಿದ್ದು, ತಮ್ಮ ಸುತ್ತ- ಮುತ್ತಲಿನ ಜನರಲ್ಲಿನ ಅವಿವೇಕವನ್ನು ಸಹಿಸಿಕೊಳ್ಳುವುದಿಲ್ಲ. ಇವರು ತಮ್ಮ ಕೆಲಸಗಳನ್ನು ತಮ್ಮದೇ ಆದ ವೇಗದಲ್ಲಿ ನಿರ್ವಹಿಸಿಕೊಂಡು ಹೋಗುವುದಕ್ಕಾಗಿ ಇತರರಿಂದ ಟೀಕೆಗೆ ಒಳಗಾಗುತ್ತಾರೆ.

ಬಾದಾಮಿ ಆಕಾರ

ಬಾದಾಮಿ ಆಕಾರ

ನೀವು ಪ್ರಾಮಾಣಿಕ ಮತ್ತು ನಂಬಿಕಸ್ಥರು ಎಂಬುದನ್ನು ಸೂಚಿಸುತ್ತದೆ. ನೀವು ಅದ್ಭುತ ಕಲ್ಪನಾ ಸಾಮರ್ಥ್ಯವನ್ನು ಹೊಂದಿರುವಿರಿ ಮತ್ತು ನಿಮ್ಮೊಂದಿಗೆ ವ್ಯವಹರಿಸುವವರೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳುವಿರಿ. ನಿಮ್ಮಲ್ಲಿ ಕರುಣೆ ಮತ್ತು ವಿನಯ ತುಂಬಿರುತ್ತದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಅದು ನೀವು ಸಹಿಸಲು ಸಾಧ್ಯವಾಗದಿದ್ದಾಗ, ನಿಮ್ಮಲ್ಲಿರುವ ಕಡಿಮೆ ಸಹಿಷ್ಣುತಾ ಗುಣವು ಮತ್ತು ಮುಂಗೋಪತನವು ನಿಮ್ಮನ್ನು ಕಾಡುತ್ತದೆ. ಹಾಗಾಗಿ ಒಂದು ಫೋಟೊ ತೆಗೆಯಲು ನಿಮ್ಮನ್ನು ಕರೆದಾಗ, ಸ್ವಲ್ಪ ಪಕ್ಕಕ್ಕೆ ಹೋಗಿ ಹಾಗು ನಿಮ್ಮ ಮನಸ್ಸನ್ನು ತಣ್ಣಗೆ ಮಾಡಿಕೊಂಡು ನಂತರ ಫೋಟೊಗೆ ಮುಖ ತೋರಿಸಿ.

ಕತ್ತಿ ಆಕಾರ

ಕತ್ತಿ ಆಕಾರ

ನೀವೊಬ್ಬ ಮಹತ್ವಾಕಾಂಕ್ಷಿ ಮತ್ತು ಆದರ್ಶವಾದಿ ಎಂಬುದನ್ನು ಸೂಚಿಸುತ್ತದೆ. ನೀವು ಯಾವುದೇ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಗುರಿಗಳನ್ನು ಸಾಧಿಸಲು ಹಿಂದೇಟು ಹಾಕುವುದಿಲ್ಲ. ನಿಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಇದು ಎಲ್ಲಿಯವರೆಗು ಸಹಕರಿಸುತ್ತದೆಯೋ, ಅಲ್ಲಿಯವರೆಗು ಅದನ್ನು ನೀವು ಮಾಡುತ್ತೀರಿ. ಒಂದು ಪಕ್ಷ ಇದು ನಿಮಗೆ ಹಿಡಿಸದಿದ್ದರು ಸಹ ಅದನ್ನು ನೀವು ಮಾಡುತ್ತೀರಿ. ಆದರೂ ನೀವು ಸಹಕರಿಸುವ ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಿರುತ್ತೀರಿ. ಅದರಲ್ಲೂ ತುಂಬಾ ಆರಾಮವಾಗಿ ಕೆಲಸ ಮಾಡುವ ಮತ್ತು ನಿಮ್ಮೊಂದಿಗೆ ಸಹಕರಿಸದ ಜನರೊಂದಿಗೆ ಕೆಲಸ ಮಾಡುವಾಗ ನೀವು ತಾಳ್ಮೆ ಕಳೆದುಕೊಳ್ಳುತ್ತೀರಿ. ಇತರರೊಂದಿಗೆ ಬೆರೆತು ಕೆಲಸ ಮಾಡುವ ಗುಣವನ್ನು ನೀವು ಬೆಳೆಸಿಕೊಂಡರೆ ನಿಮಗೇ ಒಳ್ಳೆಯದು.

English summary

Can the Shape of Your Nails Reveal What Type of Person You Are?

Here are all the different nail shapes linked with characteristics—you can see each personality description further down the page: Now, we do know that your health can be reflected in your nails—it’s the first place nutritional deficiencies and other health issues can show up. But personality? It’s a fun idea, but there’s not one ounce of evidence to support this theory.
X
Desktop Bottom Promotion