Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಮನೀಶ್ ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಕಂಗೊಳಿಸಿದ ಕರೀನಾ
ಬಾಲಿವುಡ್‌ನಲ್ಲಿ ಪ್ರಸ್ತುತ ಮಿಂಚುತ್ತಿರುವ ಸ್ಟೈಲ್ ರಾಣಿ ಎಂದರೆ ಕರೀನಾ ಕಪೂರ್. ಯಾವುದೇ ಈವೆಂಟ್‌ನಲ್ಲಿ ಕೂಡ ಮಿಲಿಯಗಟ್ಟಲೆ ಕಣ್ಣುಗಳು ಈ ಸುಂದರಿಯ ಮೇಲಿರುತ್ತದೆ. ಕೋಲ್ಕತ್ತಾದಲ್ಲಿ ನಡೆದ ಐಟಿಸಿ ಡೀಲರ್ ಮೀಟ್‌ನಲ್ಲಿ, ಪಿಂಕಿ ಸೂಟ್‌ನಲ್ಲಿ ಕಂಗೊಳಿಸಿದ ಕರೀನಾ ಮನೀಶ್ ಮಲ್ಹೋತ್ರಾ ವಿನ್ಯಾಸದಲ್ಲಿ ಕಣ್ಣು ಕೋರೈಸುವಂತೆ ಕಂಡುಬಂದಿದ್ದರು.
ಮನೀಶ್ ಮಲ್ಹೋತ್ರಾ ಧಿರಿಸನ್ನು ಕರೀನಾ ಮೊದಲ ಬಾರಿ ತೊಡುತ್ತಿಲ್ಲ ಹಲವಾರು ಬಾರಿ ಬೇರೆ ಬೇರೆ ವಿನ್ಯಾಸದ ಧಿರಿಸುಗಳನ್ನು ತೊಟ್ಟು ಮಿಂಚಿದ್ದಾರೆ. ನಿಯೋನ್ ಬಣ್ಣದ ಸೀರೆ, ಸ್ಟೈಲಿಶ್ ಅನಾರ್ಕಲಿ, ಹೀಗೆ ವಿಭಿನ್ನ ಸ್ಟೈಲ್‌ಗಳನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.

ಈವೆಂಟ್‌ನಲ್ಲಿ, ಕರೀನಾ ಕಪೂರ್ ಹಲವಾರು ಹೃದಯಗಳನ್ನು ಕದ್ದಿದ್ದು ತಮ್ಮ ಸುಂದರವಾದ ನಗುವಿನಿಂದ ಮನಸೆಳೆದಿದ್ದಾರೆ. ಪಿಂಕ್ ಬಣ್ಣದ ಧಿರಿಸಿನಲ್ಲಿ ಮನವನ್ನು ಕದ್ದಂತೆ ಕಂಗೊಳಿಸಿರುವ ಕರೀನಾ, ಕೋಲ್ಕತ್ತಾ ಈವೆಂಟ್‌ಗೆ ಇನ್ನಷ್ಟು ಮುದ್ದಾಗಿ ಸ್ಟೈಲ್ ಆಗಿ ಕಂಡುಬಂದಿದ್ದಾರೆ.
ಒಂದೇ ಬಗೆಯ ಧಿರಿಸಿನಲ್ಲಿ ಕಂಡುಬಂದ ವಿದ್ಯಾ ಹಾಗೂ ಕರೀನಾ
ಮನೀಶ್ ಮಲ್ಹೋತ್ರಾ ವಿನ್ಯಾಸದ ಧಿರಿಸಿನಲ್ಲಿ ಕರೀನಾ ಡ್ಯಾಶಿಂಗ್ ಆಗಿ ಕಂಡುಬಂದಿದ್ದಾರೆ, ದ್ವಿ ಬಣ್ಣದ ಸೂಟ್ ಬೇಬಿ ಪಿಂಕ್ ಟಾಪ್ ಮತ್ತು ಬಿಳಿ ಪೈಜಾಮಾ ಮನಸೆಳೆಯುವಂತಿತ್ತು. ಸೂಟ್‌ನ ಬಾರ್ಡರ್‌ಗೆ ಸಿಲ್ವರ್ ತಿನ್ ರಿಮ್ ಅನ್ನು ಅನ್ವಯಿಸಿಕೊಂಡಿರುವ ಕರೀನಾ ಪಿಂಕ್ ದುಪ್ಪಾಟ್ಟಾವನ್ನು ಸೂಟ್‌ಗೆ ಜೋಡಿಸಿಕೊಂಡಿದ್ದಾರೆ.
ಬಿಳಿ ಪೈಜಾಮ ಮತ್ತು ಮನೀಶ್ ಮಲ್ಹೋತ್ರಾ ವಿನ್ಯಾಸದ ಸೂಟ್ ಎರಡೂ ಈಡುಜೋಡಾದ ಕಾಂಬಿನೇಶನ್ ಆಗಿದೆ. ಸೂಟ್‌ನ ಕೆಳಭಾಗದಲ್ಲಿ ಗ್ಯಾದರಿಂಗ್ ಇದ್ದು ಆಕೆಯ ಸೊಂಟವನ್ನು ಬಿಗಿದು ಹಿಡಿದುಕೊಂಡಿತ್ತು. ಕರೀನಾ ನೀಟಾಗಿರುವ ಬನ್ ಹೇರ್‌ಸ್ಟೈಲ್ ಅನ್ನು ಈ ಧಿರಿಸಿಗೆ ಮಾಡಿಕೊಂಡಿರುವ ಕರೀನಾ ಗೋಲ್ಡನ್ ಸ್ಟ್ರಾಪಿ ಸ್ಯಾಂಡಲ್‌ಗಳು ಮತ್ತು ವಜ್ರದ ಆಭರಣಗಳನ್ನು ಸೂಟ್‌ಗೆ ತಕ್ಕಂತೆ ತೊಟ್ಟುಕೊಂಡಿದ್ದಾರೆ.
ಪಿಂಕ್ ಚೆರ್ರಿ ಬಣ್ಣದ ಲಿಪ್‌ಸ್ಟಿಕ್ ಅನ್ನು ಪಿಂಕ್ ಬ್ಲಶ್ ಅನ್ನು ಕೆನ್ನೆಗೆ ತೊಟ್ಟುಕೊಂಡಿರುವ ಕರೀನಾ ಕೊಂಚ ಡಿಫರೆಂಟ್ ಆಗಿ ತೋರುತ್ತಿದ್ದಾರೆ. ಕರೀನಾ ಕಪೂರ್‌ರ ಈ ಲುಕ್ ಮಾತ್ರ ಇಲ್ಲಿಯವರೆಗಿನ ಬೆಸ್ಟ್ ಲುಕ್‌ಗಳಲ್ಲಿ ಒಂದಾಗಿತ್ತು ಎಂದು ನಮಗೆ ಹೇಳಬಹುದು. ನಿಮಗೂ ಹೀಗೆ ಅನ್ನಿಸಿದೆಯೇ?



Click it and Unblock the Notifications




