Latest Updates
-
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಅನುಪಮಾ ಸ್ಕರ್ಟ್‌ನಲ್ಲಿ ಸುಂದರಿ ಕರೀನಾ ಕಪೂರ್
ಕರೀನಾ ಕಪೂರ್ ಇತ್ತೀಚೆಗೆ ಹೊರಗಡೆ ಅಷ್ಟೊಂದು ಕಂಡುಬರುತ್ತಿಲ್ಲ. ಏಕೆಂದರೆ ಅವರೀಗ ಯಾವುದೇ ಚಿತ್ರಗಳಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಆಕೆ ತಮ್ಮ ಚಿತ್ರದ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲ. ಆದರೆ ಈ ಬಾರಿ ಆಕೆ ತಮ್ಮ ಬಿಡುಗಡೆಯಾಗುತ್ತಿರುವ ಚಿತ್ರದ ಶೂಟಿಂಗ್‌ನಲ್ಲಿ ಕಂಡುಬಂದಿದ್ದು ಅವರ ಧಿರಿಸು ಅದ್ಭುತವಾಗಿತ್ತು. ಸ್ಟ್ರಿಪ್ ಸ್ಕರ್ಟ್‌ನಲ್ಲಿ ಅವರು ಮನಮೋಹಕಿಯಾಗಿ ಕಾಣುತ್ತಿದ್ದರು.
ಸಿಂಗಮ್ 2 ನ ಸೆಟ್‌ನಲ್ಲಿ ಕರೀನಾ ಕಪೂರ್ ಅನುಪಮಾ ದಯಾಲ್ ಸಂಗ್ರಹದ ಸ್ಕರ್ಟ್ ಅನ್ನು ಧರಿಸಿದ್ದರು. ಈ ಚಿತ್ರದಲ್ಲಿ ಕರೀನಾ ಹೆಚ್ಚು ಆಸಕ್ತಿಕರ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದನೆಯ ಲೆಹಂಗಾ ಮಾದರಿಯ ಸ್ಕರ್ಟ್ ಮತ್ತು ಪಟಿಯಾಲಾವನ್ನು ಅವರು ಧರಿಸಿದ್ದು ಆಕೆಯ ಪಾತ್ರಕ್ಕೆ ಸೂಕ್ತವಾಗಿದೆ.
ಅನುಪಮಾ ದಯಾಲ್ ವಿನ್ಯಾಸದ ಧಿರಿಸಿನಲ್ಲಿ ಕರೀನಾ ಸಿಂಗಮ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಪ್ಪು ಮತ್ತು ಬಿಳಿ ಬಣ್ಣದ ಲೆಹಂಗ ಸ್ಕರ್ಟ್ ಇದಾಗಿದ್ದು ವಿಲ್ ಲೈಫ್‌ಸ್ಟೈಲ್ ಫ್ಯಾಶನ್ ವೀಕ್ 2013 ರಲ್ಲಿ ಈ ಸ್ಕರ್ಟ್ ಅನುಪಮಾ ದಯಾಲ್‌ರ ಸಂಗ್ರಹದಲ್ಲಿ ಒಂದಾಗಿತ್ತು.

ಒಂದೇ ಬಗೆಯ ಧಿರಿಸಿನಲ್ಲಿ ಕಂಡುಬಂದ ವಿದ್ಯಾ ಹಾಗೂ ಕರೀನಾ
ಕರೀನಾರನ್ನು ಕೆಂಪು ಬಣ್ಣದಲ್ಲಿ ಕಾಣುವುದು ಕಣ್ಣಿಗೆ ಹಬ್ಬವೆಂದೇ ಹೇಳಬಹುದು. ದೇಸೀ ಲುಕ್‌ನಲ್ಲಿ ಬೇಬೋ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ಹೆಚ್ಚು ಸಂತಸವನ್ನುಂಟು ಮಾಡಿದೆ. ಬಿಳಿ ಮತ್ತು ಕೆಂಪು ಪಟ್ಟಿಯುಳ್ಳ ಲಂಗವು ಕೆಂಪನೆಯ ಟಾಪ್‌ನೊಂದಿಗೆ ಜೋಡಿಯಾಗಿದೆ. ಇದಕ್ಕೆ ಸರಿಯಾಗಿ ಅವರು ಝಮುಕಿಯನ್ನು ಕೈ ಕಡಗವನ್ನು ಧರಿಸಿದ್ದು ದೇಸೀ ಲುಕ್‌ಗೆ ಇನ್ನಷ್ಟು ಸೊಗಸನ್ನು ನೀಡಿದೆ ಎಂದೇ ಹೇಳಬಹುದು.
ಒಟ್ಟಾರೆ ಕರೀನಾರ ಈ ಲುಕ್ ಅವರ ಸ್ಟೈಲ್‌ಗೆ ಹೊಸ ಇಮೇಜನ್ನು ತಂದುಕೊಟ್ಟಿದೆ ಎಂದೇ ಹೇಳಬಹುದು. ಹಳ್ಳಿಗಾಡಿನ ಸೊಗಡನ್ನು ಅವರು ಈ ಚಿತ್ರದಲ್ಲಿ ಪೂರ್ಣವಾಗಿ ಹೊಂದಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಕರೀನಾರ ಈ ಲುಕ್ ನಿಮಗೂ ಇಷ್ಟವಾಯಿತೇ?



Click it and Unblock the Notifications





