For Quick Alerts
ALLOW NOTIFICATIONS  
For Daily Alerts

ಕಳ್ಳಕಾಕರಿಂದ ನಿಮ್ಮ ಮನೆ ರಕ್ಷಿಸಲು ಉಪಾಯ

|
Best Home Security Tips
ಕಳ್ಳರು ತುಂಬಾ ಜಾಣರು, ವಸ್ತುಗಳನ್ನು ಸಾಕಷ್ಟು ಎಚ್ಚರಿಕೆ ವಹಿಸಿ ಇಟ್ಟರೂ ಕ್ಷಣಾರ್ಧದಲ್ಲಿ ಅಲ್ಲಿಂದ ಅಪಹರಿಸಿ ಬಿಡುತ್ತಾರೆ. ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋಗುವಾಗ ಮನಸ್ಸಿನಲ್ಲಿ ಪುಟ್ಟ ಭಯ ಇದ್ದೇ ಇರುತ್ತದೆ. ಮನೆಯಲ್ಲಿ ಕಳ್ಳತನ ಆದ ಮೇಲೆ ಯೋಚಿಸುವುದಕ್ಕಿಂತ ಮುನ್ನಚ್ಚರಿಕೆಯಿಂದ ಇರುವುದು ಒಳ್ಳೆಯದು.
ಮನೆ ಸುರಕ್ಷತೆಗೆ ಈ ಕೆಳಗಿನ ಕೆಲ ಸಲಹೆಗಳನ್ನು ಪಾಲಿಸಬಹುದು.

1.ಮನೆಯಿಂದ ಹೊರಗೆ ಹೋಗುವಾಗ ಲ್ಯಾಂಡ್ ಲೈನ್ ಫೋನ್ ಶಬ್ದವನ್ನು ಕಡಿಮೆಯಲ್ಲಿ ಇಡಿ. ಫೋನ್ ಜೋರಾಗಿ ಬಡಿದುಕೊಳ್ಳುತ್ತಿದ್ದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗುತ್ತದೆ.

2. ಮನೆ ಗೋಡೆಗೆ ಒರಗಿಸಿ ಏಣಿಯನ್ನು ಇಡಬಾರದು. ಮನೆಗೆ ಒಳ್ಳೆಯ ಸೆನ್ಸಾರ್ ಲೈಟ್ ಅಳವಡಿಸಬೇಕು. ಅದನ್ನು ಮನೆಯವರು ಹೇಗೆ ಬಳಸಬೇಕೆಂದು ಮಾಹಿತಿ ನೀಡಿರಬೇಕು.

3. ಮನೆಗೆ ಮತ್ತು ಗೇಟಿಗೆ ಗಟ್ಟಿಯಾದ ಬೀಗವನ್ನು ಹಾಕಬೇಕು. ಮನೆಯಲ್ಲಿ ನಿದ್ರೆ ಮಾಡುವ ಮುಂಚೆ ಕಿಟಕಿಗಳನ್ನು ಸರಿಯಾಗಿ ಹಾಕಿ ಮಲಗಬೇಕು.

4. ಕೀಯನ್ನು ಮನೆಯ ಮುಂದೆ ಬಚ್ಚಿಟ್ಟು ಹೋಗಬಾರದು, ಹಾಗೆ ಮಾಡಿದರೆ ಕಳ್ಳರು ಸುಲಭವಾಗಿ ಕೀಯನ್ನು ಹುಡುಕಿ ತೆಗೆಯುತ್ತಾರೆ.

5. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪಕ್ಕದ ಮನೆಯವರ ಹತ್ತಿರ ಮನೆ ಕಡೆ ಸ್ವಲ್ಪ ನೋಡಿಕೊಳ್ಳಲು ಹೇಳಿ ಹೋಗಬೇಕು.

6. ಮನೆಗೆ ಬೆಲೆಬಾಳುವ ವಸ್ತುಗಳನ್ನು ತಂದರೆ ಅದರ ಬಾಕ್ಸ್ ಹೊರಗೆ ಕಾಣುವಂತೆ ಇಡಬಾರದು, ಅಲ್ಲದೆ ಅಧಿಕ ಹಣ, ಚಿನ್ನ, ಇನ್ಸೂರೆನ್ಸ್ ಪಾಲಿಸಿಗಳನ್ನು ಬ್ಯಾಂಕ್ ನಲ್ಲಿ ಸೇಫ್ ಲಾಕರ್ ನಲ್ಲಿ ಇಡಬೇಕು.

7. ಅಪರಿಚಿತರು ಮನೆ ಅಕ್ಕ-ಪಕ್ಕ ಸುಳಿದಾಡುತ್ತಿದ್ದರೆ ಗಮನ ಹರಿಸಬೇಕು.

English summary

Best Home Security Tips | Tips For Home | ಕಳ್ಳತನ ಆಗದಿರಲು ಕೆಲ ಸಲಹೆಗಳು | ಮನೆಗೆ ರಕ್ಷಣೆಗೆ ಕೆಲ ಸಲಹೆ

One of the biggest enemies of safeguarding home is thinking that “It can never happen". Although we all know that prevention is important, most people don"t take enough steps they need to protect their home and family.
Story first published: Saturday, December 17, 2011, 16:39 [IST]
X
Desktop Bottom Promotion