ವಾಂತಿ ತಲೆನೋವು ತಡೆಯಲು ಅದ್ಭುತ ಮನೆಮದ್ದುಗಳು

ಕೆಲವರಿಗೆ ಪ್ರಯಾಣಿಸುವಾಗ ಪಿತ್ತೋದ್ರೇಕವಾಗಿ ವಾಂತಿ ಮತ್ತು ತಲೆನೋವು ಉಂಟಾಗುತ್ತದೆ. ಇದನ್ನು ಪ್ರಯಾಣದ ರೋಗವೆನ್ನುತ್ತಾರೆ. ಪ್ರಯಾಣ ಮಾಡುವಾಗ ಕಿವಿಯೊಳಗಿನ ಆಂತರಿಕ ಅಂಗವ್ಯೂಹಕ್ಕೆ ತೊಂದರೆಯಾಗುವ ಕಾರಣದಿಂದಾಗಿ ಇದು ಉಂಟಾಗುತ್ತದೆ.....

By: Suma
Subscribe to Boldsky

ಸಮಯ ಸಿಕ್ಕಾಗ ಪ್ರಯಾಣದ ಮಜವನ್ನು ಅನುಭವಿಸುವುದು ನಮ್ಮ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಿದೆ. ಹೊಸ ಸ್ಥಳಗಳನ್ನು ನೋಡುವುದು, ಅಲ್ಲಿನ ವಿಶೇಷತೆಗಳನ್ನು ಅರಿತುಕೊಳ್ಳುವುದು ಹೀಗೆ ನಾವುಗಳು ಕುಳಿತಲ್ಲಿ ಕುಳಿತಿರದೇ ಪ್ರಯಾಣದ ಸುಖವನ್ನು ಆಸ್ವಾದಿಸುತ್ತೇವೆ.

ಪ್ರಯಾಣ ಮಾಡಹೊರಟಿದ್ದೀರಿ ಎಂದಾದಲ್ಲಿ ಅದಕ್ಕೆ ತಕ್ಕಂತೆ ಯೋಜನೆಗಳನ್ನು ನೀವು ರೂಪಿಸಬೇಕು. ಒಂದು ಸ್ಥಳದ ಮಾಹಿತಿಯನ್ನು ಸಂಪೂರ್ಣವಾಗಿ ಕಲೆಹಾಕಬೇಕು. ಅದಕ್ಕೆ ತಕ್ಕಂತೆ ಬಜೆಟ್ ಅನ್ನು ಹೊಂದಿಸಬೇಕು. ಪ್ರಯಾಣದ ಅವಧಿಯಲ್ಲಿ ವಾಕರಿಕೆ ಸಮಸ್ಯೆಯೇ? ಇಲ್ಲಿದೆ ಸಿಂಪಲ್ ಟಿಪ್ಸ್

ಆದರೆ ಪ್ರಯಾಣ ಸಮಯದಲ್ಲಿ ನೀವು ಅತಿಮುಖ್ಯವಾಗಿ ಗಮನ ಹರಿಸಬೇಕಾದ್ದು ನಿಮ್ಮ ಆರೋಗ್ಯದ ಕಡೆಗಾಗಿದೆ. ಹೆಚ್ಚಿನವರಿಗೆ ಪ್ರಯಾಣದ ವೇಳೆಯಲ್ಲಿ ವಾಂತಿಯಾಗುವುದ ಸರ್ವೇ ಸಾಮಾನ್ಯವಾಗಿದೆ. ಅವರಿಗೆ ದೀರ್ಘ ಪ್ರಯಾಣವೆಂದರೆ ಅಲರ್ಜಿವುಂಟಾಗುತ್ತದೆ. ತಲೆನೋವು ಉಂಟಾಗಿ ವಾಂತಿಯಾಗುವುದರಿಂದಲೇ ಇಂತಹವರು ಪ್ರಯಾಣವೆಂದರೆ ಭಯಬೀಳುತ್ತಾರೆ. ತಮಗೂ ತೊಂದರೆ ಅಲ್ಲದೆ ಇತರರಿಗೂ ತೊಂದರೆ ಎಂಬುದು ಇವರ ಮನದಲ್ಲಿ ಮೂಡಿ ತಮ್ಮ ಆಸೆಯನ್ನು ಕೈಬಿಡುತ್ತಾರೆ.

ಅಂತಹವರಿಗಾಗಿ ಇಂದಿನ ಲೇಖನದಲ್ಲಿ ನಾವು ಅತಿ ಪ್ರಬಲವಾದ ಮನೆಮದ್ದುಗಳನ್ನು ಸೂಚಿಸುತ್ತಿದ್ದೇವೆ. ನಿಮ್ಮ ವಾಕರಿಕೆ ತಲೆನೋವುಗಳನ್ನು ಪ್ರಯಾಣ ಸಮಯದಲ್ಲಿ ಈ ಮದ್ದುಗಳು ತಡೆಹಿಡಿಯಲಿದ್ದು ನಿಮ್ಮ ಆತಂಕವನ್ನು ದೂರವಾಗಿಸಲಿವೆ. ಬನ್ನಿ ಆ ಮದ್ದುಗಳೇನು ಎಂಬುದನ್ನು ಕಂಡುಕೊಳ್ಳೋಣ.....  


ಲಿಂಬೆ ಮತ್ತು ಕಲ್ಲುಪ್ಪು

ನೀವು ಪ್ರಯಾಣಿಸುತ್ತಿರುವಾಗ, ನಿಮಗೆ ತಲೆನೋವು ಮತ್ತು ವಾಂತಿಯ ಅನುಭವ ಆಗುತ್ತಿದೆ ಎಂದಾದಲ್ಲಿ ಸಣ್ಣ ತುಂಡು ಲಿಂಬೆಯನ್ನು ಚಿಟಿಕೆ ಕಲ್ಲುಪ್ಪಿನೊಂದಿಗೆ ತೆಗೆದುಕೊಳ್ಳಿ. ಇದು ನಿಮಗೆ ಸಹಕಾರಿಯಾಗಲಿದೆ.

ದೀರ್ಘ ಶ್ವಾಸವನ್ನು ತೆಗೆದುಕೊಳ್ಳಿ

ನೀವು ಬಸ್ಸು ಅಥವಾ ಕಾರಿನಲ್ಲಿ ಕುಳಿತುಕೊಂಡಾಗ, ನಿಧಾನವಾಗಿ ನೀಳವಾದ ಶ್ವಾಸವನ್ನು ತೆಗೆದುಕೊಳ್ಳಿ. ಇದು ವಾಂತಿಯ ಲಕ್ಷಣವನ್ನು ನಿವಾರಿಸಿ ತಲೆನೋವನ್ನು ದೂರಮಾಡಲಿದೆ.

ಪುದೀನಾ ಎಣ್ಣೆ

ನಿಮ್ಮ ಕರವಸ್ತ್ರಕ್ಕೆ ಅಥವಾ ಟಿಶ್ಯೂ ಪೇಪರ್‌ಗೆ ಸ್ವಲ್ಪ ಹನಿಗಳಷ್ಟು ಪುದೀನಾ ಎಣ್ಣೆಯನ್ನು ಹಾಕಿ. ಇದು ನಿಮ್ಮ ಪ್ರಯಾಣದಲ್ಲಿ ತಲೆದೋರುವ ಸಮಸ್ಯೆಗಳನ್ನು ನಿವಾರಿಸಲಿದೆ.  ಪುದೀನಾ ಎಣ್ಣೆಯಲ್ಲಿದೆ ಮ್ಯಾಜಿಕ್ ಗುಣಗಳು

ಶುಂಠಿ

ಮನೆಮದ್ದಾಗಿ ಶುಂಠಿಯನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ತಲೆನೋವು ನಿವಾರಣೆಗಾಗಿ ಶುಂಠಿ ಚಹಾ ಅಥವಾ ಮಾತ್ರೆಯನ್ನು ತೆಗೆದುಕೊಳ್ಳಿ ಇದರಿಂದ ವಾಂತಿ ಕೂಡ ನಿಲ್ಲುತ್ತದೆ.  ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ತುಪ್ಪದ ಮಸಾಜ್

ನೀವು ವಾಹನದಲ್ಲಿ ಪ್ರಯಾಣ ಹೋಗುತ್ತಿದ್ದೀರಿ ಎಂದಾದಲ್ಲಿ ಪ್ರಯಾಣಕ್ಕೆ ಒಂದು ದಿನ ಮುಂಚಿತವಾಗಿ ನಿಮ್ಮ ಕಾಲುಗಳಿಗೆ ತುಪ್ಪವನ್ನು ಸವರಿಕೊಳ್ಳಿ. ಪ್ರಯಾಣ ಸಮಯದಲ್ಲಿ ತಲೆದೋರುವ ವಾಂತಿ ಮತ್ತು ತಲೆನೋವಿನ ಸಮಸ್ಯೆಯನ್ನು ಇದು ನಿವಾರಿಸಲಿದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

Home Remedies To Avoid Vomiting & Headaches While Travelling

There are several ways to treat motion sickness but of all the methods, home remedies are the best. This article explains a few of these home remedies.
Please Wait while comments are loading...
Subscribe Newsletter