ಗಿಡಮೂಲಿಕೆ ಚಹಾದ ಲಾಭ ಸಿಗಬೇಕಿದ್ದರೆ, ಇವುಗಳನ್ನು ಕಡೆಗಣಿಸಿ

ಗಿಡಮೂಲಿಕೆ ಚಹಾವನ್ನು ತಯಾರಿಸುವ ನಾವು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳಿಂದಾಗಿ ನಮಗೆ ಆರೋಗ್ಯಕಾರಿ ಲಾಭಗಳು ಸಿಗುವುದಿಲ್ಲ. ಗಿಡಮೂಲಿಕೆ ಚಹಾ ಕ್ರಮ ಸರಿಯಾಗಿ ಇಲ್ಲದೆ ಇದ್ದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು..

By: Hemanth
Subscribe to Boldsky

ತೂಕ ಕಳೆದುಕೊಳ್ಳುವ ಪ್ರಯತ್ನ ಮಾಡಿ ಕಂಗೆಟ್ಟಿದ್ದೀರಾ? ನೀವು ಎಷ್ಟೇ ಮದ್ದು, ವ್ಯಾಯಾಮ ಮಾಡಿದರೂ ತೂಕ ಹಾಗೆ ಇದೆಯಾ? ಹಾಗಾದರೆ ನೀವು ಎಲ್ಲವನ್ನೂ ಬಿಟ್ಟು ಈ ಗಿಡಮೂಲಿಕೆ ಚಹಾವನ್ನು ಕುಡಿಯಬೇಕು. ಕೆಲವೇ ತಿಂಗಳಲ್ಲಿ ಅತಿಯಾದ ತೂಕ, ಕೊಲೆಸ್ಟ್ರಾಲ್ ಅನ್ನು ಕಳೆದುಕೊಳ್ಳಬಹುದು.

ಇಷ್ಟು ಮಾತ್ರವಲ್ಲದೆ ತಲೆನೋವು ಹಾಗೂ ಶೀತದಂತಹ ಸಮಸ್ಯೆಯನ್ನೂ ಇದರಿಂದ ನಿವಾರಿಸಬಹುದು. ಗಿಡಮೂಲಿಕೆ ಚಹಾವನ್ನು ಕುಡಿಯುವ ಮೂಲಕ ನೀವು ತೂಕವನ್ನು ಇಳಿಸಬಹುದಾಗಿದೆ. ತುಳಸಿ, ರೋಸ್ಮೆರಿ, ಕ್ಯಾಮೊಮೈಲ್, ಶುಂಠಿ ಮತ್ತು ಲೆಮನ್‌ಗ್ರಾಸ್‌ನಿಂದ ಮಾಡಿದಂತಹ ಚಹಾದಿಂದ ತೂಕ ಇಳಿಸಿಕೊಳ್ಳಬಹುದು.   ಇದು ಮಾಮೂಲಿ ಚಹಾ ಅಲ್ಲ, ನೈಸರ್ಗಿಕ ಚಹಾ!

ಆದರೆ ಗಿಡಮೂಲಿಕೆ ಚಹಾವನ್ನು ತಯಾರಿಸುವ ನಾವು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳಿಂದಾಗಿ ನಮಗೆ ಆರೋಗ್ಯಕಾರಿ ಲಾಭಗಳು ಸಿಗುವುದಿಲ್ಲ. ಗಿಡಮೂಲಿಕೆ ಚಹಾ ಮಾಡುವ ಕ್ರಮ ಸರಿಯಾಗಿ ಇಲ್ಲದೆ ಇದ್ದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ಯಾವ ತಪ್ಪುಗಳನ್ನು ಮಾಡುತ್ತೇವೆ ಮತ್ತು ಅದನ್ನು ಕಡೆಗಣಿಸುವುದು ಎಷ್ಟು ಮುಖ್ಯ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.   ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ

ಗಿಡಮೂಲಿಕೆ ಚಹಾವನ್ನು ತಯಾರಿಸಿ ತಕ್ಷಣ ಕುಡಿದರೆ ಅದರಿಂದ ಹಲವಾರು ಲಾಭಗಳು ನಮ್ಮ ದೇಹಕ್ಕೆ ಸಿಗುತ್ತದೆ. ವಿಟಮಿನ್ ಹಾಗೂ ಖನಿಜಾಂಶಗಳು ದೇಹವನ್ನು ಸೇರಿಸಿಕೊಳ್ಳುವುದು. ಗಿಡಮೂಲಿಕೆ ಚಹಾ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಲವಾರು ಅಧ್ಯಯನಗಳು ಕೂಡ ಹೇಳಿವೆ. ಆದರೆ ಈ ಗಿಡಮೂಲಿಕೆ ಚಹಾವನ್ನು ತಯಾರಿಸುವಾಗ ಮಾಡುವಂತಹ ಕೆಲವೊಂದು ತಪ್ಪುಗಳನ್ನು ತಿಳಿದುಕೊಳ್ಳಿ ಮತ್ತು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಿ.....  


ಹಾಲನ್ನು ಸೇರಿಸಬೇಡಿ

ತೂಕ ಕಳೆದುಕೊಳ್ಳಬೇಕೆಂದು ತಯಾರಿಸುವ ಗಿಡಮೂಲಿಕೆ ಚಹಾಗೆ ಹಾಲನ್ನು ಸೇರಿಸಿದರೆ ಅದರಿಂದ ಯಾವುದೇ ಲಾಭವಾಗದು. ಹಾಲಿನಲ್ಲಿರುವ ಪೋಷಕಾಂಶಗಳು ತೂಕ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು. ಹಾಲು ಹಾಗೂ ತುಳಸಿ ಒಂದಕ್ಕೊಂದು ವಿರುದ್ಧ. ಇವುಗಳನ್ನು ಸೇರಿಸಿದರೆ ಅಡ್ಡಪರಿಣಾಮ ಉಂಟಾಗಬಹುದು.

ಸಕ್ಕರೆ ಬೇಡ

ಗಿಡಮೂಲಿಕೆ ಚಹಾಗೆ ಸಕ್ಕರೆ ಸೇರಿಸುವುದರಿಂದ ಮತ್ತಷ್ಟು ಕ್ಯಾಲರಿ ಸೇರ್ಪಡೆಗೊಳಿಸಿದಂತೆ ಆಗುತ್ತದೆ. ಹೀಗೆ ಮಾಡಿದರೆ ಗಿಡಮೂಲಿಕೆ ಚಹಾವನ್ನು ಕುಡಿಯುವ ಉದ್ದೇಶವೇ ಹಾಳಾಗುತ್ತದೆ. ಇದಕ್ಕೆ ಸಕ್ಕರೆ ಸೇರಿಸಬೇಡಿ. ಹಾಗೊಂದು ವೇಳೆ ಸಿಹಿ ಬೇಕಿದ್ದರೆ ಜೇನುತುಪ್ಪ ಅಥವಾ ಸ್ವಲ್ಪ ಬೆಲ್ಲ ಸೇರಿಸಿ.

ಮತ್ತೆ ಬಿಸಿ ಮಾಡಬೇಡಿ

ಗಿಡಮೂಲಿಕೆ ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ನೈಸರ್ಗಿಕ ಗಿಡಮೂಲಿಕೆ ಲಾಭಗಳು ಮಾಯವಾಗುತ್ತದೆ. ಇದನ್ನು ಮಾಡಿದ ತಕ್ಷಣ ಕುಡಿದರೆ ಮಾತ್ರ ಅದರಲ್ಲಿರುವ ಆರೋಗ್ಯಕಾರಿ ಲಾಭಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತದೆ.

ಎಲ್ಲಾ ಸಮಯದಲ್ಲೂ ಕುಡಿಯಬೇಡಿ

ನಿಮಗೆ ಬೇಕೆಂದಾಗ ಅಥವಾ ಎಲ್ಲಾ ಸಮಯದಲ್ಲೂ ಗಿಡಮೂಲಿಕೆ ಚಹಾವನ್ನು ಕುಡಿಯಬಾರದು. ಇದನ್ನು ಒಂದು ಸಮಯದಲ್ಲಿ ಕುಡಿಯಬೇಕು. ಉದಾಹರಣೆಗೆ ಬೆಳಿಗ್ಗೆ ಬೇಗನೆ ತುಳಸಿಯ ಚಹಾವನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಯಾವುದೇ ಗಿಡಮೂಲಿಕೆ ಚಹಾ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಚಹಾ ಮಾಡುವಾಗ ಮುಚ್ಚಳ ಮುಚ್ಚದಿರಿ

ಚಹಾವನ್ನು ಮಾಡುವಾಗ ಅದರ ಮುಚ್ಚಳವನ್ನು ಮುಚ್ಚಬಾರದು. ಯಾಕೆಂದರೆ ನೀರನ್ನು ಆವಿಯಾಗಲು ಬಿಡಬೇಕು. ಆಯುರ್ವೇದದ ಪ್ರಕಾರ ಹೀಗೆ ಮಾಡುವುದರಿಂದ ಗಿಡಮೂಲಿಕೆ ಚಹಾದಲ್ಲಿರುವಂತಹ ಆರೋಗ್ಯಕಾರಿ ಲಾಭಗಳು ನಮಗೆ ಲಭ್ಯವಾಗುತ್ತದೆ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

English summary

avoid these mistakes with herbal tea

Today in this article, we will explain about the mistakes that one needs to avoid while preparing herbal tea. When prepared and drunk in the right way, only then will one get its benefits.
Please Wait while comments are loading...
Subscribe Newsletter