For Quick Alerts
ALLOW NOTIFICATIONS  
For Daily Alerts

ಇದು ಮಾಮೂಲಿ ಚಹಾ ಅಲ್ಲ, ನೈಸರ್ಗಿಕ ಚಹಾ!

By C.M. Prasad
|

"ನೀವು ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಚಹಾವನ್ನು ಖರೀದಿಸಿ ಆನಂದದಿಂದ ಸವಿಯುತ್ತಾ ಸಂಭ್ರಮಿಸಬಹುದು". ಇದು ನಮ್ಮ ಪೂರ್ವಜರೊಬ್ಬರ ಹೇಳಿಕೆಯಾಗಿದ್ದು, ಈ ಹೇಳಿಕೆಯನ್ನು ಗಮನಿಸಿದರೆ ಚಹಾ ಸವಿದ ಆನಂದ ಎಷ್ಟಿರಬಹುದೆಂದು ನೀವುಗಳು ಊಹಿಸಬಹುದು. ಆಡುಮುಟ್ಟದ ಸೊಪ್ಪಿಲ್ಲ, ಚಹಾ ಸವಿಯದ ವ್ಯಕ್ತಿಯಿಲ್ಲ. ನಿಜ ಬೆಳಗ್ಗೆ ಎದ್ದ ಕೂಡಲೇ ಚಹಾವನ್ನು ಸೇವಿಸಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ನಮ್ಮಲ್ಲಿ ಕೆಲವರಂತೂ ಮೇಲಿಂದ ಮೇಲೆ ಚಹಾ ಕುಡಿಯುವುದನ್ನು ನಿಲ್ಲಿಸಲಾರರು.

ಹಾಗಾಗಿ ನೀವು ದಿನನಿತ್ಯ ಕುಡಿಯುವ ಚಹಾದಲ್ಲಿ ಉತ್ಕರ್ಷಣ ನಿರೋಧಕ (antioxidant) ಅಂಶಗಳು ಹೆಚ್ಚಿದ್ದು, ಕ್ಯಾನ್ಸರ್ ಮತ್ತು ಇತ್ಯಾದಿ ಮಾರಣಾಂತಿಕ ರೋಗಗಳಿಂದ ತಡೆಯುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ದಿನನಿತ್ಯ ಸೇವಿಸುವ ಚಹಾಕ್ಕೆ ಮನೆಯಲ್ಲಿಯೇ ಸಿಗುವ ಒಂದಿಷ್ಟು ಗಿಡಮೂಲಿಕೆ ಸತ್ವಗಳನ್ನು ಸೇರಿಸಿ ಸವಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಈ ಗಿಡಮೂಲಿಕೆಗಳು ನಿಮ್ಮ ಮನೆಯ, ಕೈತೋಟ ಅಥವಾ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುತ್ತವೆ. ನಿಮ್ಮ ಹತ್ತಿರದ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಸಹ ದೊರೆಯುತ್ತದೆ. ಚಹಾಗೆ ಸೇರಿಸಬಹುದಾದ ಹಾಗೂ ಆರೋಗ್ಯಕ್ಕೆ ಉತ್ತಮವಾದ ಹಾಗಾದರೆ ಆ ನೈಸರ್ಗಿಕ ಸತ್ವಗಳು ಯಾವುದು, ಎಂಬುದನ್ನು ಮುಂದೆ ಓದಿ...

Drink These Herbal Teas For A Healthy Life

ಪುದಿನ
ಪುದಿನ ಚಹಾದಿಂದ ಅನೇಕ ರೀತಿಯ ಔಷಧೀಯ ಉಪಯೋಗಗಳು ಸಾಕಷ್ಟಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ (antioxidant) ಸತ್ವವು ಅಧಿಕವಿದ್ದು, ಹೊಟ್ಟೆ ಉಬ್ಬುರವನ್ನು ನಿಯಂತ್ರಿಸಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಜ್ವರವನ್ನು ತಕ್ಷಣವೇ ಕಡಿಮೆಗೊಳಿಸಿ ಹೆಚ್ಚಾಗುವ ಆತಂಕವನ್ನು ನಿವಾರಿಸುತ್ತದೆ. ಪುದಿನ ಎಲೆಯು ಹೆಚ್ಚು ಆಹ್ಲಾದಕರದಿಂದ ಕೂಡಿದ್ದು, ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಮೊದಲಿಗೆ ಕೆಲವು ತಾಜಾ ಪುದಿನ ಎಲೆಗಳನ್ನು ಕಲಸಿ ಕುದಿಯುವ ನೀರಿಗೆ ಹಾಕಿ. ಚಹಾ ಪುಡಿ ಬೆರೆಸಿ ಸ್ವಲ್ಪ ಸಮಯ ಕುದಿಯಲು ಬಿಡಿ. ನಂತರ ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆಯನ್ನು ಬೆರೆಸಿ. ಆರೋಗ್ಯಕರವಾದ ಹಾಗೂ ಸವಿಯಾದ ಪುದಿನ ಚಹಾ ಸೇವಿಸಲು ಸಿದ್ಧ. ಹೆಚ್ಚು ರುಚಿಕರವಾಗಿದ್ದು, ಇದರೊಡನೆ ಆರೋಗ್ಯಕ್ಕೂ ಉಪಯುಕ್ತವಾದ ಸತ್ವವಿದ್ದು, ಸವಿಯುವುದು ನಿಜಕ್ಕೂ ಯೋಗ್ಯವಲ್ಲವೇ? ಪುದಿನ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಶುಂಠಿ ಚಹಾ

ಶುಂಠಿಯು ಸಹ ಉತ್ತಮವಾದ ನೈಸರ್ಗಿಕವಾದ ಸತ್ವದ ಗುಣಗಳನ್ನು ಗಿಡಮೂಲಿಕೆಯಾಗಿದ್ದು, ಇದರ ಚಹಾ ಕೂಡ ಆರೋಗ್ಯಕ್ಕೆ ಅತ್ಯುತ್ತಮ ಮತ್ತು ರುಚಿಕರ. ಇದರಲ್ಲಿರುವ ಮಸಾಲೆ ಗುಣವು ಮಸಾಲೆ ಚಹಾ ಇಚ್ಚಿಸುವವರಿಗೆ ಹೆಚ್ಚು ರುಚಿಕರ ಮತ್ತು ಆರೋಗ್ಯಕರದಾಯಕವಾಗಿದೆ. ಇದಕ್ಕೆ ಏಲಕ್ಕಿ ಮತ್ತು ಲವಂಗವನ್ನು ಬೆರೆಸಿದರೆ ನಿಜಕ್ಕೂ ಮಸಾಲೆಯುಕ್ತ ಚಹಾ ಆಗುವುದರಲ್ಲಿ ಅನುಮಾನವಿಲ್ಲ. ಶುಂಠಿಯ ಬೇರು ಅಥವಾ ಪುಡಿಯನ್ನು ಸಹ ಚಹಾಕ್ಕೆ ಬಳಸಬಹುದಾಗಿದ್ದು, ಇದೊಂದು ಉತ್ತಮ ಚಹಾ ಸವಿದ ಅನುಭವ ನೀಡುತ್ತದೆ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ತುಳಸಿ ಎಲೆಗಳ ಚಹಾ
ನಿಮಗೆ ನೆನಪಿದೆಯೇ? ಚಿಕ್ಕ ವಯಸ್ಸಿನಲ್ಲಿ ನಮ್ಮ ತಾಯಿಯು ನಮಗೆ ಶೀತ ಹಾಗೂ ನೆಗಡಿಯಾದಾಗ ತುಳಿಸಿಯ ಚಹಾವನ್ನು ಮಾಡಿಕೊಡುತ್ತಿದ್ದರು. ಅದನ್ನು ಸವಿಯುತ್ತಲೇ ಕೆಮ್ಮು ಮತ್ತು ನೆಗಡಿಯು ಮಾಯವಾಗುತ್ತಿತ್ತು. ತುಳಸಿ ಎಲೆಯಲ್ಲಿ ಅದ್ಭುತವೆಸಿಸುವ ಔಷಧೀಯ ಗುಣಾತ್ಮಕ ಸತ್ವಗಳು ಅಡಗಿದೆ. ಇದರಿಂದ ಕೆಮ್ಮು, ನೆಗಡಿಯನ್ನು ನಿವಾರಿಸಿ, ಆತಂಕವನ್ನು ದೂರಮಾಡುತ್ತದೆ ಹಾಗೂ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಬಿಡುವಿಲ್ಲದ ಕೆಲಸದ ಬದುಕಿನಲ್ಲಿ ಒಂದು ಕಪ್ ತುಳಸಿ ಚಹಾ ಸೇವನೆ ನಿಜಕ್ಕೂ ನಿಮ್ಮನ್ನು ಉಲ್ಲಸಿತಗೊಳಿಸಿ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನೀವು ಮಾಡಬೇಕಿರುವುದು ಇಷ್ಟೇ. ಅಂಗೈಯಷ್ಟು ತುಳಸಿ ಎಲೆಗಳನ್ನು ಚಹಾ ಮಿಶ್ರಣಕ್ಕೆ ಬೆರೆಸಿ ಸವಿಯಾದ ಮತ್ತು ಆರೋಗ್ಯಕರವಾದ ಚಹಾ ಸವಿಯಲು ಸಿದ್ಧ. ಆಸ್ವಾದಿಸಿ ಆನಂದಿಸಿ. ತುಳಸಿ-ಗ್ರೀನ್ ಟೀಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ

English summary

Drink These Herbal Teas For A Healthy Life

We all love our morning cup of tea, don't we? Some of us are so addicted to our tea that we cannot stop ourselves from drinking it over and over again. Our favourite tea is packed with antioxidants, protects against cancer and even fights immune system! Have a look of Drinking Herbal Teas For A Healthy Life
Story first published: Wednesday, December 9, 2015, 20:17 [IST]
X
Desktop Bottom Promotion