For Quick Alerts
ALLOW NOTIFICATIONS  
For Daily Alerts

ವಿಶ್ವ ರಕ್ತದಾನ ದಿನ 2021: ರಕ್ತದಾನ ಮಾಡುವುದರಿಂದ ಆಗುವ ಲಾಭಗಳೇನು?

By Staff
|

ರಕ್ತದಾನ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ ರಕ್ತದಾನ ಮಾಡಿದವರಿಗೂ ಕೂಡ ಅನುಕೂಲವಾಗಲಿದೆ.
ರಕ್ತದಿಂದ ವಿವಿಧ ರೋಗಿಗಳ ಗಾಯಗಳ ಚಿಕಿತ್ಸೆಗೆ ಬೇಕಾಗುವ ಮತ್ತು ಜೀವ ಉಳಿಸಲು ಅಗತ್ಯವಿರುವ ರಕ್ತ ದೊರಕುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಾಕಷ್ಟು ಜನರಿಗೆ ರಕ್ತ ದಾನ ಮಾಡಿದವರು ದೇವರಿದ್ದಂತೆ. ಒಂದು ಜೀವವನ್ನು ಉಳಿಸುವ ಈ ಕಾರ್ಯದಿಂದ ಆಗುವ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು.

ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್‌ 14ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ.

ಆರೋಗ್ಯಯುತ ವ್ಯಕ್ತಿಯೊಬ್ಬ 18 ರಿಂದ 60 ವರ್ಷದವರೆಗೆ ಯಾವುದೇ ವ್ಯಕ್ತಿ 50 ಕ್ಕಿಂತ ಹೆಚ್ಚು ತೂಕ ಇರುವವರು 450 ಎಂ ಎಲ್ ನಷ್ಟು ರಕ್ತವನ್ನು ಕೊಡಬಹುದು. ಪುರುಷರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.ಸ್ತ್ರೀಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

Health benefits of donating blood

ರಕ್ತದಾನ ಮಹಾದಾನ.ಆಗಾಗ ರಕ್ತದಾನ ಮಾಡುವುದರಿಂದ ಅವಶ್ಯಕತೆ ಇರುವವರಿಗೆ ಅನುಕೂಲವಾಗುತ್ತದೆ ಜೊತೆಗೆ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೂ ಅನುಕೂಲವಾಗುತ್ತದೆ. ರಕ್ತದಾನ ಮಾಡುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ತಿಳಿಯೋಣ ಬನ್ನಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

1.ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿಡುತ್ತದೆ ಮತ್ತು ಹೃದಯಾಘಾತ ತಪ್ಪಿಸುತ್ತದೆ.

2.ರಕ್ತದಾನ ಮಾಡುವುದರಿಂದ ದೇಹದಲ್ಲಿ ಬರುವ ವಿವಿಧ ರೀತಿಯ ಕ್ಯಾನ್ಸರ್ ನಿಂದ ದೂರ ಉಳಿಯಬಹುದು.

3.ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ.

4.ಹೆಚ್ಚಿನ ಕ್ಯಲೋರಿಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೈ ಬ್ಲಡ್ ಫ್ರೆಶರ್ ಸಮಸ್ಯೆ ಬಾರದಂತೆ ತಡೆಯಬೇಕೆ?

5.ರಕ್ತದಾನ ಮಾಡುವುದರಿಂದ ಕೇವಲ ರಕ್ತ ಅವಶ್ಯಕವಿರುವವರ ಜೀವ ಉಳಿಸುವುದು ಮಾತ್ರವಲ್ಲ ರಕ್ತ ಕೊಡುವವರಿಗೆ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಸಹಾಯಕವಾಗುತ್ತದೆ.

6.ಇದು ಕಬ್ಬಿಣದ ಅಂಶವನ್ನು ಹೆಚ್ಚಿಸಿ ರಕ್ತವು ದಪ್ಪವಾಗುವಂತೆ ಮಾಡುತ್ತದೆ. ಹಾನಿಯಾಗುವುದನ್ನು ತಪ್ಪಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ರಕ್ತವನ್ನು ಕೊಡುವುದರಿಂದ ಒಂದು ಜೀವವನ್ನು ಉಳಿಸುವ ಅವಕಾಶ ದೊರಕುತ್ತದೆ.

English summary

Blood donation day: Health benefits of donating blood

Now a day’s donating blood became mandatory due to several reasons, but the good thing is Giving blood not only provides an essential lifeline to those in need, but it could have health benefits for the donor too.
X
Desktop Bottom Promotion