For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

By Hemanth P
|

ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೆ ಪೌಷ್ಠಿಕಾಂಶ ಮತ್ತು ಆಮ್ಲಜನಕವನ್ನು ಸರಬರಾಜು ಮಾಡುವಲ್ಲಿ ರಕ್ತವು ಮಹತ್ವದ ಪಾತ್ರ ವಹಿಸುತ್ತದೆ. ಇದು ನಮ್ಮ ದೇಹದ ವ್ಯವಸ್ಥೆಗೆ ಬೇಕಾಗಿರುವ ಅತೀ ಮಹತ್ವದ ಅಂಶ. ನಮ್ಮ ದೇಹದಲ್ಲಿನ ಪ್ರಮುಖ ಅಂಗಾಂಗಗಳು ಚಟುವಟಿಕೆ ನಡೆಸಲು ರಕ್ತದ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದ ನಮ್ಮ ರಕ್ತಕ್ಕೆ ಯಾವುದೇ ರೀತಿಯ ಸಮಸ್ಯೆ ಅಥವಾ ಅನಾರೋಗ್ಯ ಉಂಟಾದರೆ ಆಗ ದೇಹದ ಎಲ್ಲಾ ಅಂಗಾಂಗಗಳಿಗೂ ಇದರ ಪರಿಣಾಮವಾಗುತ್ತದೆ. ನೈಸರ್ಗಿಕ ರಕ್ತ ಶುದ್ದೀಕರಣ ಆಹಾರಕ್ರಮವನ್ನು ಸಾಮಾನ್ಯವಾಗಿ ರಕ್ತ ಶುದ್ಧೀಕರಣ ಆಹಾರಕ್ರಮವೆಂದು ಕರೆಯಲಾಗುತ್ತದೆ. ಇದರಿಂದ ವ್ಯಕ್ತಿಯೊಬ್ಬನ ದೇಹದಲ್ಲಿರುವ ಎಲ್ಲಾ ವಿಷಾಯುಕ್ತ ಅಂಶಗಳನ್ನು ಮತ್ತು ರಕ್ತನಾಳಗಳಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ.

ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಆಹಾರವು ಅತ್ಯುತ್ತಮ ಮದ್ದು. ರಕ್ತ ಶುದ್ದೀಕರೀಸುವ ಆಹಾರಗಳಲ್ಲಿ ಹಣ್ಣು, ತರಕಾರಿ, ಗಿಡಮೂಲಿಕೆ, ಮಸಾಲೆಗಳು ಮತ್ತು ಪಾನೀಯಗಳಾದ ಜ್ಯೂಸ್ ಅಥವಾ ಚಹಾ ಕೂಡ ಒಳಗೊಂಡಿದೆ.

ಮಾಲಿನ್ಯ, ಆಹಾರ ಸಂಯೋಜನೆ, ಪರೋಕ್ಷ ಧೂಮಪಾನ ಮತ್ತು ಇತರ ವಿಷಕಾರಿ ಅಂಶಗಳನ್ನು ಹಣ್ಣು, ತರಕಾರಿ, ಬೀಜ, ಎಣ್ಣೆ ಮತ್ತು ಬೀನ್ಸ್ ಗಳಿಂದ ಹೊರಹಾಕಬಹುದು.

ಸೇಬು

ಸೇಬು

ಒಂದು ರೀತಿಯ ನಾರಿನಾಂಶವಾಗಿರುವ ಪೆಕ್ಟಿನ್ ಸೇಬಿನಲ್ಲಿ ಉನ್ನತ ಮಟ್ಟದಲ್ಲಿದೆ. ಇದು ಕೊಲೆಸ್ಟ್ರಾಲ್ ಹಾಗೂ ದೇಹದಲ್ಲಿರುವ ಭಾರದ ಲೋಹಗಳನ್ನು ಬಂಧಿಸುತ್ತದೆ. ಇದು ವಿಷಕಾರಿ ಅಂಶ ಬೆಳೆಯುವುದನ್ನು ತಡೆಯಲು ನೆರವಾಗುತ್ತದೆ ಮತ್ತು ಕರುಳನ್ನು ಶುದ್ದೀಕರಿಸುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಪೌಷ್ಠಿಕಾಂಶಗಳಿಂದ ತುಂಬಿರುವ ಬೆಣ್ಣೆಹಣ್ಣು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ ಮತ್ತು ಅಪಧಮನಿ ಘಾತುಕ ವಿಷತ್ವ ತಡೆದು ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಬೆಣ್ಣೆಹಣ್ಣಿನಲ್ಲಿ ಗ್ಲುಟಾಥಿಯೋನ್ ಎನ್ನುವ ಪೌಷ್ಠಿಕಾಂಶವಿದೆ. ಇದು ಕನಿಷ್ಠ ಮೂವತ್ತರಷ್ಟು ಕಾರ್ಸಿನೊಜೆನ್ಸ್ ತಡೆದು ಯಕೃತ್ ಸಂಶ್ಲೇಷಕ ರಾಸಾಯನಿಕಗಳು ನಿರ್ವಿಷ್ಟಗೊಳಿಸಲು ಸಹಾಯ ಮಾಡುತ್ತದೆ.

ಗಾಜರುಗಡ್ಡೆ

ಗಾಜರುಗಡ್ಡೆ

ಇದನ್ನು ನೀವು ಸೂಪ್ ಅಥವಾ ಪದಾರ್ಥ ಮಾಡಿ ತಿನ್ನುವುದರಿಂದ ಅದರಲ್ಲಿರುವ ಕೆಲವೊಂದು ನೈಸರ್ಗಿಕ ರಕ್ತಶುದ್ದೀಕರಣ ಮತ್ತು ಯಕೃತ್ ಶುದ್ದೀಕರಣ ಅಂಶವೂ ದೇಹಕ್ಕೆ ತುಂಬಾ ನೆರವಾಗಲಿದೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಇದು ಚಿಕಿತ್ಸಾ ಗುಣ ಹೊಂದಿರುವ ಅತ್ಯಂತ ಒಳ್ಳೆಯ ಆಹಾರ. ಬೆರಿಹಣ್ಣುಗಳು ಅಂಗಾಂಶ ಹಾನಿಕಾರಕವಾದ ಪರಿಣಾಮಗಳು ಕಡಿಮೆ ಮಾಡುವ ನೈಸರ್ಗಿಕ ಆಸ್ಪಿರಿನ್ ಹೊಂದಿದೆ. ಮೂತ್ರನಾಳಗಳಲ್ಲಿ ಬ್ಯಾಕ್ಟೀರಿಯಾ ತಡೆದು ಆ್ಯಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದು ಸೋಂಕು ನಿವಾರಣೆಗೆ ನೆರವಾಗುತ್ತದೆ.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿವೆ. ಇದರಿಂದ ಯಕೃತ್ತು ಹೆಚ್ಚುವರಿ ಹಾರ್ಮೋನುಗಳು ಮುರಿಯಲು ಸಹಾಯ ಮಾಡುತ್ತದೆ. ಎಲೆಕೋಸು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಮತ್ತು ಧೂಮಪಾನದಿಂದಾಗಿ ಬರುವಂತಹ ಕೆಲವೊಂದು ಹಾನಿಕಾರಕ ಅಂಶಗಳನ್ನು ತಟಸ್ಥಗೊಳಿಸುತ್ತದೆ.

ಕ್ಯಾನ್ ಬೆರೀಸ್

ಕ್ಯಾನ್ ಬೆರೀಸ್

ನಿಮ್ಮ ಮೂತ್ರಕೋಶದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ ನ್ನು ಇದು ಶುದ್ದೀಕರಿಸುತ್ತದೆ. ಕ್ಯಾನ್ ಬೆರೀಸ್ ನಲ್ಲಿ ಆ್ಯಂಟಿ ಬಯೋಟಿಕ್ ಮತ್ತು ಆ್ಯಂಟಿ ವೈರಲ್ ಅಂಶಗಳಿವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಹಾನಿಕಾರಕ ಬ್ಯಾಕ್ಟೀರಿಯಾ, ಕರುಳಿನ ಪರಾವಲಂಬಿಗಳು ಮತ್ತು ವೈರಸ್ ಶುದ್ದೀಕರಿಸಲು ಬೆಳ್ಳುಳ್ಳಿ ತಿನ್ನಿ. ಇದು ರಕ್ತ ಮತ್ತು ಕರುಳಿನಿಂದ ಹಾನಿಕಾರಕ ಅಂಶಗಳನ್ನು ತೆಗೆಯುತ್ತದೆ. ಇದರಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿರುವ ವಿಷಕಾರಕ ಅಂಶಗಳನ್ನು ಹೊರತೆಗೆಯುತ್ತದೆ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ರೂಬಿ ಕೆಂಪು ದ್ರಾಕ್ಷಿಯನ್ನು ಬೆಳಗ್ಗಿನ ಉಪಹಾರದಲ್ಲಿ ಸೇವಿಸುವುದರಿಂದ ಅದರಲ್ಲಿನ ಪೆಕ್ಟಿನ್ ನಾರಿನಾಂಶ ಕೊಲೆಸ್ಟ್ರಾಲ್ ನ್ನು ಬಂಧಿಸಿ, ರಕ್ತ ಶುದ್ಧೀಕರಿಸುತ್ತದೆ. ಪೆಕ್ಟಿನ್ ದೇಹದಲ್ಲಿರುವ ಭಾರವಾದ ಲೋಹದಂಶಗಳನ್ನು ಬಂಧಿಸಿ ದೇಹದಿಂದ ಹೊರಹಾಕಲು ನೆರವಾಗುತ್ತದೆ.

ಅರಿಶಿನ

ಅರಿಶಿನ

ಭಾರತೀಯ ಆಹಾರಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂತಹ ಹಳದಿ ಮಸಾಲೆಯೇ ಅರಿಶಿನ. ಇದರಲ್ಲಿರುವ ಔಷಧಿಯ ಗುಣಗಳು ರಕ್ತವನ್ನು ಶುದ್ಧೀಕರಿಸುವ ಗುಣ ಹೊಂದಿದೆ. ಇದರಲ್ಲಿರುವ ನಿರ್ವಿಷ್ಟಗೊಳಿಸುವ ಅಂಶಗಳು ರಕ್ತನಾಳಗಳನ್ನು ಶುದ್ದೀಕರಿಸುತ್ತದೆ.

ಚಹಾ

ಚಹಾ

ಚಹಾದಲ್ಲಿ ರಕ್ತ ಶುದ್ಧೀಕರಿಸುವ ಹಲವಾರು ರೀತಿಯ ಗಿಡಮೂಲಿಕೆ ಅಂಶಗಳಿವೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ರಕ್ತ ಶುದ್ಧೀಕರಣಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವೊಂದು ರೀತಿಯ ಚಹಾಗಳೆಂದರೆ ಶುಂಠಿ ಚಹಾ, ಪುದೀನಾ ಚಹಾ ಮತ್ತು ಸೇವಂತಿ ಚಹಾ ಇತ್ಯಾದಿ. ರಕ್ತ ಶುದ್ಧೀಕರಿಸಲು ಗ್ರೀನ್ ಟೀಯನ್ನು ಸೇವಿಸಬಹುದು.

English summary

Natural Blood Purifiers For Good Health

Blood is an important element in your body and system that serves a lot of purpose like transporting nutrients and oxygen to organs etc. major organs depend on blood to function making it critical to our system.
X
Desktop Bottom Promotion