For Quick Alerts
ALLOW NOTIFICATIONS  
For Daily Alerts

ಸಪೋಟದಲ್ಲಿ 23 ಆರೋಗ್ಯ ವೃದ್ಧಿ ಗುಣಗಳಿವೆ!

By Super
|

ನಮ್ಮ ದೇಹವೆಂಬ ಯಂತ್ರ ಕೊಂಚ ಹೊತ್ತು ಸರಿಯಾಗಿ ಕೆಲಸ ಮಾಡದೇ ಇದ್ದರೂ ನಮ್ಮ ಆರೋಗ್ಯದಲ್ಲಿ ನಾವು ಏರುಪೇರನ್ನು ಕಾಣಬಹುದಾಗಿದೆ. ತಲೆನೋವು, ವಾಂತಿ, ಜ್ವರ, ಶೀತ, ಮೈಕೈ ನೋವು ಹೀಗೆ ರೋಗ ಸಣ್ಣದೇ ಆಗಿರಲಿ ದೊಡ್ಡದೇ ಆಗಿರಲಿ ಈ ಕಾಯಿಲೆಗಳು ನಮ್ಮನ್ನು ಕಂಗೆಡಿಸಿಬಿಡುತ್ತವೆ. ಇದರಿಂದ ದೇಹಕ್ಕೆ ಸುಸ್ತು, ಬಳಲಿಕೆ ಉಂಟಾಗುತ್ತದೆ ಮತ್ತು ನಿಶ್ಯಕ್ತಿ ನಮ್ಮನ್ನು ಕಾಡುತ್ತದೆ.

ಈ ಸಮಯದಲ್ಲಿ ನಾವು ತೆಗೆದುಕೊಳ್ಳುವ ದೈನಂದಿನ ಆಹಾರದ ಜೊತೆಗೆ ಪ್ರೋಟೀನ್ ವಿಟಮಿನ್‎ಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರೋಟೀನ್ ವಿಟಮಿನ್‎ಗಳನ್ನು ನಾವು ಔಷಧದ ರೂಪದಲ್ಲಿ ತೆಗೆದುಕೊಳ್ಳುವುದಕ್ಕಿಂತ ನೈಸರ್ಗಿಕವಾಗಿ ಈ ಆಹಾರಗಳನ್ನು ತೆಗೆದುಕೊಳ್ಳಬೇಕು. ಅದು ತರಕಾರಿ ಇಲ್ಲವೇ ಹಣ್ಣಿನ ರೂಪದಲ್ಲಾದರೂ ಆಗಬಹುದು. ಎಲ್ಲಾ ಹಣ್ಣು ತರಕಾರಿಗಳು ತಮ್ಮದೇ ಆದ ಪ್ರಾಮುಖ್ಯತೆ ಮತ್ತು

ಆರೋಗ್ಯ ಅಂಶಗಳನ್ನು ಒಳಗೊಂಡಿದ್ದು ಇಂದಿನ ಲೇಖನದಲ್ಲಿ ಅಂತಹುದೇ ವಿಟಮಿನ್‎ಯುಕ್ತ ಹಣ್ಣಿನ ಕುರಿತ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಅದುವೇ ಚಿಕ್ಕು ಅಥವಾ ಸಪೋಟಾ. ಕ್ಯಾಲೋರಿ ಶ್ರೀಮಂತ ಹಣ್ಣಾಗಿರುವ ಚಿಕ್ಕು ತನ್ನ ನ್ಯೂಟ್ರಿಶನಲ್ ಪ್ರಯೋಜನಗಳಿಂದ ಹೆಸರುವಾಸಿಯಾಗಿದೆ. ಮಾವಿನ ಹಣ್ಣು, ಬಾಳೆ ಹಣ್ಣು ಮತ್ತು ಹಲಸಿನ ಹಣ್ಣಿನಲ್ಲಿರುವ ಕ್ಯಾಲೋರಿ ಅಂಶಗಳು ಇದರಲ್ಲಿ ಇದೆ. ತ್ವರಿತ ಶಕ್ತಿಯನ್ನು ಒದಗಿಸುವ ಹೆಚ್ಚು ಪ್ರಸಿದ್ಧ ಹಣ್ಣು ಇದಾಗಿದೆ. ನೈಸರ್ಗಿಕ ಫ್ರುಕ್ಟೋಸ್ ಮತ್ತು ಸರ್ಕೋಸ್ ಸಕ್ಕರೆ ಇದರಲ್ಲಿದ್ದು ಇದು ಎನರ್ಜಿ ಬೂಸ್ಟರ್‎ನಂತೆ ಕೆಲಸ ಮಾಡುತ್ತದೆ. ಹೆಚ್ಚುವರಿ ನ್ಯೂಟ್ರೀನ್ ಮತ್ತು ಮಿನರಲ್‎ಗಳ ಭಂಡಾರವೇ ಚಿಕ್ಕುವಿನಲ್ಲಿದೆ. ಉತ್ಕರ್ಷಣ ನಿರೋಧಿ ಅಂಶಗಳಿಂದ ಶ್ರೀಮಂತವಾಗಿರುವ ಚಿಕ್ಕು ವಿಟಮಿನ್ ಇ, ಎ ಮತ್ತು ಸಿಯನ್ನು ಹೊಂದಿದೆ. ಕಬ್ಬಿಣ ಮತ್ತು ತಾಮ್ರದ ಗುಣಗಳು ಚಿಕ್ಕುವಿನಲ್ಲಿದ್ದು ಆರೋಗ್ಯಕ್ಕೆ ಅತ್ಯತ್ತುಮ ಎಂದೆನಿಸಿದೆ. ಫೈಬರ್ ಅಂಶವನ್ನು ಚಿಕ್ಕುವು ಒಳಗೊಂಡಿದ್ದು ಮಲಬದ್ಧತೆಯನ್ನು ನಿವಾರಿಸಿ ಕ್ಯಾನ್ಸರ್ ಉಂಟುಮಾಡುವ ಜೀವಾಣು ಕೊಲೊನ್ ಲೋಳೆಪೊರೆಯನ್ನು ನಿವಾರಿಸುತ್ತದೆ.

ಶ್ರೀಮಂತ ವಿಟಮಿನ್ ಎ ಅಂಶ ಇದರಲ್ಲಿದ್ದು ದೇಹವನ್ನು ಶ್ವಾಸಕೋಶ ಮತ್ತು ಬಾಯಿಕುಳಿಯ ಕ್ಯಾನ್ಸರ್‎ನಿಂದ ಸಂರಕ್ಷಿಸುತ್ತದೆ.ಚಿಕ್ಕೂವಿನಲ್ಲಿರುವ ಟ್ಯಾನಿಸ್ ಸೂಕ್ಷ್ಮಕ್ರಿಮಿಗಳ ವಿರುದ್ಧ, ಆಂಟಿವೈರಲ್, ಪರಾವಲಂಬಿ ವಿರೋಧಿ, ಉರಿಯೂತ ನಿರೋಧಿ ಅಂಶಗಳಿಂದ ಕೂಡಿದೆ. ಇನ್ನು ಡಯೆಟ್‏ಗೂ ಈ ಹಣ್ಣು ಅತ್ಯುತ್ತಮ ಎಂದೆನಿಸಿದ್ದು ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಒಳಗೊಂಡಿದೆ. ಬನ್ನಿ ಇಂದಿನ ಲೇಖನದಲ್ಲಿ ಚಿಕ್ಕು ಹಣ್ಣಿನ ಇನ್ನಷ್ಟು ಆರೋಗ್ಯ ಅಂಶಗಳನ್ನು ಕುರಿತು ತಿಳಿದುಕೊಳ್ಳೋಣ...

1.ಕಣ್ಣುಗಳಿಗೆ ಒಳ್ಳೆಯದು

1.ಕಣ್ಣುಗಳಿಗೆ ಒಳ್ಳೆಯದು

ಸಪೋಟ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ವಿಟಮಿನ್ ಎ ವಯಸ್ಸಾದಮೇಲೆ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಆದ್ದರಿಂದ ಒಳ್ಳೆಯ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಪೋಟ ಹಣ್ಣನ್ನು ತಿನ್ನಬೇಕು.

2.ಶಕ್ತಿಯ ಮೂಲ

2.ಶಕ್ತಿಯ ಮೂಲ

ಸಪೋಟಹಣ್ಣಿನಲ್ಲಿ ಗ್ಲೂಕೋಸ್ ಅಂಶವು ಅಧಿಕವಾಗಿರುವುದರಿಂದ ಶಕ್ತಿನೀಡುವುದಕ್ಕೆ ಸಹಕಾರಿಯಾಗಿದೆ. ಕ್ರೀಡಾಪಟುಗಳಿಗೆ ಹೆಚ್ಚು ಹೆಚ್ಚು ಶಕ್ತಿಯ ಅಗತ್ಯವಿರುವುದರಿಂದ ಸಪೋಟಹಣ್ಣನ್ನು ತಿನ್ನಲು ಅವಶ್ಯಕ ಎಂದು ಹೇಳಲಾಗಿದೆ.

3.ಉದ್ರೇಕ ಪ್ರತಿರೋಧಕ ಗುಣ

3.ಉದ್ರೇಕ ಪ್ರತಿರೋಧಕ ಗುಣ

ಸಪೋಟದಲ್ಲಿರುವ ಅತಿ ಹೆಚ್ಚಿನ ಟ್ಯಾನಿನ್ ಅಂಶವು ಪ್ರಮುಖ ಉರಿಯೂತ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಅನ್ನನಾಳದ ಉರಿಯೂತ, ಕರುಳಿನ ಉರಿಯೂತ, ಕೆರಳಿಸುವ ಕರುಳಿನ ಸಹಲಕ್ಷಣಗಳು ಮತ್ತು ಜಠರದ ಉರಿಯೂತಗಳಂತಹ ರೋಗಗಳನ್ನು ತಡೆಗಟ್ಟಿ ಜೀರ್ಣಾಂಗದ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದು ಯಾವುದೇ ಊತ ಮತ್ತು ನೋವುಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.

4.ಕೆಲವು ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ಸಹಕಾರಿ

4.ಕೆಲವು ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ಸಹಕಾರಿ

ಇದರಲ್ಲಿರುವ ವಿಟಮಿನ್ ಎ ಮತ್ತು ಬಿ ಗಳು ದೇಹದ ಓಳಗಿನ ಲೋಳೆಯ ಒಳಪದರದ ಆರೋಗ್ಯವನ್ನು ಕಾಪಾಡುವುದಲ್ಲದೆ, ಚರ್ಮದ ರಚನೆಯ ಆರೋಗ್ಯವನ್ನೂ ಸಹಾ ಕಾಪಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್), ನಾರಿನಾಂಶಗಳು ಮತ್ತು ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನೊದಗಿಸುತ್ತವೆ.

5.ಮೂಳೆಗಳ ಆರೋಗ್ಯ

5.ಮೂಳೆಗಳ ಆರೋಗ್ಯ

ಹೆಚ್ಚುವರಿ ಪ್ರಮಾಣದಲ್ಲಿ ಕ್ಯಾಲ್ಸಿಯುಮ್, ರಂಜಕ (ಫಾಸ್ಫರಸ್) ಮತ್ತು ಕಬ್ಬಿಣ ಅಂಶಗಳು ಮೂಳೆಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಅಗತ್ಯವಿದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯುಮ್, ಕಬ್ಬಿಣ ಮತ್ತು ರಂಜಕಾಂಶಗಳು ಅಧಿಕಪ್ರಮಾಣದಲ್ಲಿರುವುದರಿಂದ ಮೂಳೆಗಳ ಸಹಿಷ್ಣುತೆ ಮತ್ತು ಬಲವನ್ನು ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

6.ಮಲಬದ್ಧತೆಗೆ ಪರಿಹಾರ

6.ಮಲಬದ್ಧತೆಗೆ ಪರಿಹಾರ

ಸಪೋಟ ಹಣ್ಣಿನಲ್ಲಿ ಆಹಾರಕ್ರಮದ ನಾರಿನಾಂಶ( 5.6/100 gms,) ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ. ಹೀಗಾಗಿ ಇದೊಂದು ಮಲಬದ್ಧತೆ ವಿಸರ್ಜನೆ ಮಾಡಿಸುವ ಔಷಧಿಯೆಂದು ಪರಿಗಣಿಸಬಹುದು. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಬರುವುದನ್ನು ತಡೆಯುತ್ತದೆ.

7.ಗರ್ಭಾವಸ್ಥೆಯ ಸಮಯದಲ್ಲಿ ಪ್ರಯೋಜನಗಳು

7.ಗರ್ಭಾವಸ್ಥೆಯ ಸಮಯದಲ್ಲಿ ಪ್ರಯೋಜನಗಳು

ಈ ಹಣ್ಣಿನಲ್ಲಿ ಧಾರಾಳವಾಗಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಬಹಳ ಪ್ರಯೋಜನಕಾರಿ. ಇದು ದೌರ್ಬಲ್ಯ, ವಾಕರಿಕೆ ಮತ್ತು ತಲೆತಿರುಗುವ ಲಕ್ಷಣಗಳನ್ನು ಕಡಿಮಾಡಲು ಸಹಾಯವಾಗುತ್ತದೆ.

8.ರಕ್ತನಿಲುಗಡೆಯ ಗುಣಲಕ್ಷಣಗಳು

8.ರಕ್ತನಿಲುಗಡೆಯ ಗುಣಲಕ್ಷಣಗಳು

ರಕ್ತಸ್ರಾವದ ಮೂಲಿಕೆಯೆಂದೇ ಹೆಸರುಮಾಡಿಕೊಂಡಿರುವ ಈ ಹಣ್ಣು ರಕ್ತಸ್ತಂಭಕ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಈ ಮೂಲಿಕೆಯು ಪೈಲ್ಸ್ ಮತ್ತು ಅದರ ಸಂದರ್ಭದಲ್ಲಿ ಆಗುವ ರಕ್ತಸ್ರಾವವನ್ನು ತಗ್ಗಿಸುವಲ್ಲಿ ಸಹಾಯಮಾಡುತ್ತದೆ. ಈ ಹಣ್ಣಿನ ಬೀಜವನ್ನು ಚೆನ್ನಾಗಿ ಪುಡಿಮಾಡಿ ಪೇಸ್ಟ್ ಮಾಡಿಕೊಂಡು ಚುಚ್ಚುವಿಕೆ ಮತ್ತು ಕೀಟಗಳ ಕಡಿತಗಳ ಮೇಲೆ ಹಚ್ಚಿದರೆ ಉರಿತ ಶಮನ ವಾಗುವುದು.

9.ಆಂಟಿ ವೈರಸ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು

9.ಆಂಟಿ ವೈರಸ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು

ಈ ಹಣ್ಣಿನಲ್ಲಿ ಪಾಲಿಫೆನೋಲಿಕ್ ಉತ್ಕರ್ಷಣನಿರೋಧಕ ಇರುವುದರಿಂದ ಅನೇಕ ವಿರೋಧೀ ವೈರುಸ್, ವಿರೋಧೀ ಪರಾವಲಂಬಿ (ಪ್ಯಾರಾಸೈಟ್) ಮತ್ತು ವಿರೋಧೀ ಬ್ಯಾಕ್ಟೀರಿಯ ಗುಣಗಳನ್ನು ಹೊಂದಿದೆ. ಈ ನಿರೋಧಕಗಳು ಬ್ಯಾಕ್ಟೀರಿಯ ಮನುಷ್ಯನದೇಹದೊಳಕ್ಕೆ ಪ್ರವೇಶ ಮಾಡುವುದನ್ನು ತಡೆಯುತ್ತದೆ. ವಿಟಮಿನ್ ಸಿ ಅಪಾಯಕಾರಿ ಮುಕ್ತ ಮೂಲ ಸ್ವರೂಪಗಳನ್ನು ನಾಶಪಡಿಸುತ್ತದೆ. ಹಾಗೂ ಇದರಲ್ಲಿರುವ ಪೊಟ್ಯಾಸಿಯುಮ್, ಕಬ್ಬಿಣ ಮತ್ತು ಫೋಲೇಟ್, ನಿಯಾಸಿನ್ ಮತ್ತು ಪ್ಯಾಂಟೋಥೆನಿಕ್ ಆಮ್ಲಗಳು ಜೀರ್ಣಾಂಗ ವ್ಯವಸ್ತೆಯ ಕಾರ್ಯಗಳು ಸುಸೂತ್ರವಾಗಿ ನಡೆಸಲು ಅನುಕೂಲವಾಗುತ್ತದೆ.

10.ಅತಿಸಾರ ನಿರೋಧಕ

10.ಅತಿಸಾರ ನಿರೋಧಕ

ಸಪೋಟ ಹಣ್ಣಿನಲ್ಲಿ ಭೇದಿಮಾಡಿಸುವ ಗುಣವಿರುವುದರಿಂದ ಇದು ವಿರೋಧೀ ಅತಿಸಾರಕ್ಕೆ (ಆಂಟಿ-ಡಯಾರಿಯ) ಒಳ್ಳೆಯದು. ನೀರಿನಲ್ಲಿ ಈ ಹಣ್ಣನ್ನು ಕುದಿಸಿ ಮಾಡಿದ ಕಷಾಯ (ಡಿಕಾಕ್ಷನ್) ಅತಿಸಾರವನ್ನು ಗುಣಪಡಿಸುತ್ತದೆ. ಹಾಗೂ ಪೈಲ್ಸ್ ಮತ್ತು ಆಮಶಂಕೆಯ ನಿವಾರಣೆಗೆ ಒಳ್ಳೆಯದು.

11.ಮಾನಸಿಕ ಆರೋಗ್ಯ

11.ಮಾನಸಿಕ ಆರೋಗ್ಯ

ಇದರಲ್ಲಿರುವ ಪ್ರಬಲ ನಿದ್ರಾಜನಕ (ಸೆಡೇಟಿವ್) ಉದ್ರೇಕಗೊಂಡಿರುವ ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆಮಾಡುತ್ತದೆ. ಆದ್ದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯದು.

12.ಶೀತ ಮತ್ತು ಕೆಮ್ಮು

12.ಶೀತ ಮತ್ತು ಕೆಮ್ಮು

ಮೂಗಿನ ಒಳಭಾಗ ಮತ್ತು ಶ್ವಾಸನಾಳದಿಂದ ಶ್ಲೇಷ್ಮ ಮತ್ತು ಸಿಂಬಳವನ್ನು ನಿವಾರಿಸಿ ದೀರ್ಘಕಾಲದ ರಕ್ಷಣೆಕೊಡುತ್ತದೆ. ಆದ್ದರಿಂದ ಇದು ಶೀತ ಮತ್ತು ಕೆಮ್ಮು ನಿವಾರಣೆಗೆ ಸಹಾಯಮಾಡುತ್ತದೆ.

13.ಮೂತ್ರಪಿಂಡದ ಕಲ್ಲುಗಳು (ಕಿಡ್ನಿಸ್ಟೋನ್ಸ್)

13.ಮೂತ್ರಪಿಂಡದ ಕಲ್ಲುಗಳು (ಕಿಡ್ನಿಸ್ಟೋನ್ಸ್)

ಈ ಹಣ್ಣಿನ ಬೀಜಗಳ ಪುಡಿಯಲ್ಲಿ ಮೂತ್ರವರ್ಧಕ ಗುಣಗಳಿರುವುದರಿಂದ ಮೂತ್ರಪಿಂಡದಲ್ಲಿ ಉಂಟಾಗುವ ಕಲ್ಲುಗಳನ್ನು ಉಚ್ಚಾಡಿಸಲು ಸಹಾಯಮಾಡುತ್ತದೆ. ಹಾಗೆಯೇ ಮೂತ್ರಪಿಂಡ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.

14.ತೂಕನಷ್ಟಕ್ಕೆ ಸಹಾಯಕ

14.ತೂಕನಷ್ಟಕ್ಕೆ ಸಹಾಯಕ

ಇದು ಪರೋಕ್ಷವಾಗಿ ತೂಕನಷ್ಟಮಾಡುತ್ತದೆ ಮತ್ತು ಜಠರದ ಕಿಣ್ವಗಳ ಸ್ರವಿಸುವಿಕೆಯನ್ನು ನಿಯಂತ್ರಿಸುವ ಮೂಲಕ ಬೊಜ್ಜುಬರುವುದನ್ನು ತಡೆಯುತ್ತದೆ. ಹಾಗೆಯೇ ಚಯಾಪಚಯ ಕ್ರಿಯೆಯನ್ನು (ಮೆಟಬಾಲಿಸಮ್) ನಿಯಂತ್ರಿಸುತ್ತದೆ.

15.ದೇಹವನ್ನು ಶುದ್ಧಿಗೊಳಿಸುವ ಗುಣ

15.ದೇಹವನ್ನು ಶುದ್ಧಿಗೊಳಿಸುವ ಗುಣ

ಸಪೋಟ ಹಣ್ಣು ಪದೇ ಪದೇ ಆಗುವ ಮೂತ್ರವಿಸರ್ಜನೆಯ ಮೂಲಕ ದೇಹದಿಂದ ತ್ಯಾಜ್ಯವಸ್ತುಗಳನ್ನು ತೆಗೆದುಹಾಕುತ್ತದೆ. ಇದು ದೇಹದಲ್ಲಿ ನೀರು ಸೇರಿಕೊಳ್ಳುವುದನ್ನು ಕಾಪಾಡಿಕೊಂಡರೆ ನೀರಿನ ಹಿಡಿದಿಡುವಿಕೆಯನ್ನು ತಡೆಯುತ್ತದೆ.

16.ಹಲ್ಲಿನ ಕುಳಿಗಳು (ಕ್ಯಾವಿಟೀಸ್)

16.ಹಲ್ಲಿನ ಕುಳಿಗಳು (ಕ್ಯಾವಿಟೀಸ್)

ಹಸಿಹಣ್ಣಿನಲ್ಲಿರುವ ಲ್ಯಾಟೆಕ್ಸ್‌ನಿಂದ ಹಲ್ಲುಗಳ ಕುಳಿಗಳನ್ನು ತುಂಬಲು ಕಚ್ಚಾ ವಸ್ತುವಿನಂತೆ ಬಳಸಬಹುದು.

17.ಹೊಳೆಯುವ ಚರ್ಮ

17.ಹೊಳೆಯುವ ಚರ್ಮ

ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯಮಾಡುತ್ತದೆ. ಇದರಲ್ಲಿರುವ ವಿಟಮಿನ್ ಇ ನಿಮ್ಮ ಚರ್ಮವನ್ನು ಪೋಷಿಸಿ ಸುಂದರ ಚರ್ಮಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಪೋಟ ಹಣ್ಣನ್ನು ತಿನ್ನುವುದು ಚರ್ಮಕ್ಕೆ ಒಳ್ಳೆಯದು.

18.ಕೂದಲನ್ನು ಮೃದುಮಾಡುವುದು

18.ಕೂದಲನ್ನು ಮೃದುಮಾಡುವುದು

ಇದರ ಬೀಜದಿಂದ ತೆಗೆಯಲಾದ ಎಣ್ಣೆಯು ಕೂದಲಿಗೆ ತೇವಾಂಶ ಮತ್ತು ಮೃದುತ್ವಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಎಣ್ಣೆಯು ಕೂದಲಿಗೆ ನವಿರು ಮತ್ತು ಕಾಂತಿ ನೀಡಿ, ಸುರುಳಿ ಕೂದಲಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಜಿಡ್ಡಿನ ಗುರುತು ಉಳಿಸದೆ ಸುಲಭವಾಗಿ ಕೂದಲಿಗೆ ಹೀರುಕೊಳ್ಳುತ್ತದೆ.

19.ಕೂದಲು ಉದುರುವುದನ್ನು ತಡೆಯುತ್ತದೆ

19.ಕೂದಲು ಉದುರುವುದನ್ನು ತಡೆಯುತ್ತದೆ

ಸಪೋಟ ಬೀಜದ ಎಣ್ಣೆ ನೆತ್ತಿಯ ಚರ್ಮದ ಪರಿಸ್ಥಿತಿಯನ್ನು ಸರಿಪಡಿಸಿ ಪೋಷಿಸುತ್ತದೆ. ಇದರಿಂದ ಆಅರೋಗ್ಯಕರ ಕೂದಲು ಬೆಳೆಯಲು ಸಹಾಯವಾಗುತ್ತದೆ. ಕೆಲವು ಎಣ್ಣೆಗಳಿಂದ ಉಂಟಾಗಿರುವ ಚರ್ಮದ ಉರಿಯೂತಗಳಿಂದ ಕೂದಲು ಉದುರುವುದನ್ನು ತಡೆಯಲು ಪರಿಣಾಮಕಾರಿಯಾಗಿದೆ.

20.ತಲೆಹೊಟ್ಟಿನ ನಿವಾರಣೆ

20.ತಲೆಹೊಟ್ಟಿನ ನಿವಾರಣೆ

ಇದರ ಬೀಜಗಳನ್ನು ಚೆನ್ನಾಗಿ ಅರೆದು ಪೇಸ್ಟ್‌ಮಾಡಿ ಹರಳೆಣ್ಣೆಯಜೊತೆ ಮಿಶ್ರಣ ಮಾಡಿಕೊಂಡು ನೆತ್ತಿಯಮೇಲೆ ಹಚ್ಚಿ. ಒಂದು ರಾತ್ರಿಕಳೆದು ಮಾರನೇ ದಿನ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಮೃದುವಾಗುವುದಲ್ಲದೆ ತಲೆಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು.

21.ಸುಕ್ಕುಗಳನ್ನು ಕಡಿಮಮಾಡುವುದು

21.ಸುಕ್ಕುಗಳನ್ನು ಕಡಿಮಮಾಡುವುದು

ಸಪೋಟ ಹಣ್ಣಿನಲ್ಲಿ ಉತ್ಕರ್ಷಣ ವಿರೋಧಿಗಳು (ಆಂಟಿಆಕ್ಸಿಡೆಂಟ್ಸ್) ಸಮೃದ್ಧವಾಗಿವೆ. ಆದ್ದರಿಂದ ಇದು ವಯಸ್ಸಾಗುವಿಕೆಯ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ನಿಮ್ಮ ಶರೀರದ ಮೇಲೆ ಬರುವ ಸುಕ್ಕುಗಳನ್ನು ತಗ್ಗಿಸುವಲ್ಲಿ ಪರಿಣಾಮಕಾರಿಯಾಗಿದೆ.

22.ಚರ್ಮದ ಮುಲಾಮು

22.ಚರ್ಮದ ಮುಲಾಮು

ಇದರ ಬೀಜದ ತಿರುಳನ್ನು ಚರ್ಮದ ಮುಲಾಮಿನಂತೆ ಬಳಸಬಹುದು. ಬೀಜದಿಂದ ಎಣ್ಣೆ ತೆಗೆದನಂತರ ಉಳಿಯುವ ಪುಡಿಯನ್ನು ನೋವು ಇರುವ ಚರ್ಮದ ಮೇಲೆ ಪೋಲ್ಟೀಸ್ ಮಾಡಿ ನೋವು ನಿವಾರಣೆಗೆ ಉಪಯೋಗಿಸಬಹುದು.

23.ಶಿಲೀಂದ್ರ(ಫಂಗಲ್) ಬೆಳೆವಣಿಗೆಯನ್ನು ತಡೆಯುತ್ತದೆ

23.ಶಿಲೀಂದ್ರ(ಫಂಗಲ್) ಬೆಳೆವಣಿಗೆಯನ್ನು ತಡೆಯುತ್ತದೆ

ಸಪೋಟ ಗಿಡದಿಂದ ಹಾಲಿನಂತೆ ಬರುವ ರಸವನ್ನು ಚರ್ಮದಮೇಲೆ ಪ್ರಯೋಗಿಸಿದರೆ ಚರ್ಮದ ಮೇಲಿರುವ ಸಣ್ಣ ಗಂಟುಗಳ ಮತ್ತು ಶಿಲೀಂದ್ರಗಳ ಬೆಳವಣಿಗೆಯನ್ನು ತಡೆಯಬಹುದು.

English summary

23 Health Benefits Of Chiku (Sapota)

Sapota is one of those fruits which are great for health besides being extremely delicious, thanks to the wide array of nutrients contained in this fruit. The tasty flesh of this fruit is easily digestible and replenishes our body by providing energy due to its high content of glucose.
X
Desktop Bottom Promotion