Latest Updates
-
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಬಿಸಿಲ ಬೇಗೆಯಲ್ಲಿ ದಂಪತಿಗಳ ನಡುವೆ ಹೆಚ್ಚಿದ ಕಿರಿಕಿರಿ: ಸಂಬಂಧ ಹಾಳಾಗದಂತೆ ತಡೆಯಲು ಈ ಟಿಪ್ಸ್ ಪಾಲಿಸಿ -
ಬಿಸಿಗಾಳಿಯ ಆರ್ಭಟಕ್ಕೆ ಹೆದರಬೇಡಿ: ಎಸಿ ಇಲ್ಲದಿದ್ದರೂ ನಿಮ್ಮ ಮನೆಯನ್ನು ಐಸ್ನಂತೆ ತಂಪಾಗಿರಿಸುವ ಅದ್ಭುತ ಟ್ರಿಕ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ ತಡೆಯಲು ಈ ಆಹಾರಗಳೇ ನಿಮ್ಮ ಬೆಸ್ಟ್ ಫ್ರೆಂಡ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರವಿರಲಿ!
20ರ ಹರೆಯದಲ್ಲಿಯೆ ಪ್ರಾರಂಭಿಸಿ ಆರೋಗ್ಯ ತಪಾಸಣೆ

ಇಪ್ಪತ್ತರಲ್ಲಿ ಆರೋಗ್ಯವಾಗಿಯೆ ಇರುತ್ತಾರೆ. ಆದ್ದರಿಂದ ಆರೋಗ್ಯ ತಪಾಸಣೆ ಬಗ್ಗೆ ಹೆಚ್ಚಿನ ಒತ್ತುಕೊಡುವುದಿಲ್ಲ. ಈ ಪ್ರಾಯದಲ್ಲಿ ಅನುಸರಿಸುವ ಜೀವನಶೈಲಿ, ಆರೋಗ್ಯ ಕಾಳಜಿ ಎಲ್ಲವೂ 30 ನಂತರ ನಿಮ್ಮ ಮೇಲೆ ಪ್ರಭಾವ ಬೀಳುವುದು.
ಆದ್ದರಿಂದ ಇಪ್ಪತ್ತರ ಹರೆಯದ ಮಹಿಳೆಯರು ಈ ಕೆಳಗಿನ ವಿಷಯಗಳತ್ತ ಸ್ವಲ್ಪ ಗಮನ ನೀಡಿದರೆ ಮುಂದೆ ಬರುವ ಕಾಯಿಲೆಗಳನ್ನು ತಪ್ಪಿಸಬಹುದು.
1. ಆರೋಗ್ಯಕರ ಲೈಂಗಿಕತೆ: ಇಪ್ಪತ್ತರ ಹರೆಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತದೆ. ಮದುವೆಯಾದ ನಂತರ ಲೈಂಗಿಕ ಸಮಸ್ಯೆಗಳಿದ್ದರೆ ಹೆಚ್ಚಿನವರು ಅದರ ಬಗ್ಗೆ ಹಿರಿಯರಲ್ಲಿ ಅಥವಾ ಫ್ರೆಂಡ್ಸ್ ಹತ್ತಿರ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ, ವೈದ್ಯರನ್ನು ಕಾಣುವುದಿಲ್ಲ. ಇಂತಹ ಸಮಸ್ಯೆಗಳಿದ್ದರೆ ವೈದ್ಯರನ್ನು ಕಾಣಲು ಯಾವುದೇ ಸಂಕೋಚ ತೋರಬಾರದು. ಇದರ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ದೇಹದ ಆರೋಗ್ಯ ಹೆಚ್ಚಿಸಲು ನೀವು ಅನುಸರಿಬೇಕಾದ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ.
2. ಪಾಪ್ ಸ್ಮಿಯರ್ ಟೆಸ್ಟ್: ಆರೋಗ್ಯಕರ ಲೈಂಗಿಕತೆ ಅನುಸರಿಸದಿದ್ದರೆ ವೈರಾಣುಗಳಿಂದ ಹರಡುವ ಯೂಟ್ರಸ್ ಕ್ಯಾನ್ಸರ್ ಉಂಟಾಗಬಹುದು. ಇದನ್ನು ತಡೆಯಲು ಇರುವ ಒಂದೇ ಮಾರ್ಗ ಅಂದರೆ ಪಾಪ್ ಸ್ಮಿಯರ್ ಟೆಸ್ಟ್ (Pap smear test) ಮಾಡಿಸಬೇಕು. ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ತಪಪ್ದೆ ಮಾಡಿಸಿಕೊಳ್ಳುವುದು ಒಳ್ಳೆಯದು.
3. ತಿನ್ನುವ ಕಾಯಿಲೆ: ಇಪ್ಪತ್ತರ ಕರೆಯದ ಹೆಣ್ಣು ಮಕ್ಕಳು ಜೀರೊ ಫಿಗರ್ ಪಡೆಯಬೇಕೆಂದು ಅನಾರೋಗ್ಯಕರವಲ್ಲದ ಡಯಟ್ ಪಾಲಿಸುತ್ತಾರೆ. ಇದರ ಪರಿಣಾಮ ದೇಹದಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆ. ಅಲ್ಲದೆ ಈ ರೀತಿಯ ಆಹಾರಕ್ರಮದಿಂದ ಸಣ್ಣ ಪ್ರಾಯದಲ್ಲಿಯೆ ಬೊಲಿಮಿಯೂ ಕಾಯಿಲೆ ಉಂಟಾಗುವುದು. ಇದು ಬಂದರೆ ವಿಪರೀತ ಹಸಿವು ಉಂಟಾಗುವುದು ಮತ್ತು ಖಿನ್ನತೆಯಿಂದ ನರಳುತ್ತಾರೆ. ಫ್ರಿನ್ಸ್ ಡಯಾನ ಈ ಕಾಯಿಲೆಯಿಂದ ನರಳುತ್ತಿದ್ದಳು.
4. ಮುಟ್ಟುವಿನ ತೊಂದರೆ: ಅನಿಯಮಿತ ಮುಟ್ಟು ಇದ್ದರೆ ಈಗ ಅನಿಸುವುದಿಲ್ಲ. ಆದರೆ 30ರ ನಂತರ ಇದೇ ಅನೇಕ ಸಮಸ್ಯೆಗಳಿಗೆ ಕಾರಣವಾಗುವುದು. ಈ ರೀತಿಯ ಅನಿಯಮಿತ ಮುಟ್ಟು ಪಾಲಿ ಸಿಸ್ಟಿಕ್ ಓವರಿ(PCOS) ಅಂದರೆ ಗರ್ಭಕೋಶದ ತೊಂದರೆಗೆ ಕಾರಣವಾಗಬಹುದು. ಮುಟ್ಟುವಿನ ಸಮಸ್ಯೆ ಅನಾವಶ್ಯಕ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications