Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಎಲ್ಲಾ ಬಗೆಯ ಹಣ್ಣುಗಳನ್ನು ಪ್ರತಿದಿನ ತಿನ್ನಬಹುದೇ?

ಈ ಲೇಖನವು ನಿಮಗೆ ಯಾವ ಬಗೆಯ ಹಣ್ಣುಗಳನ್ನು ದಿನವೂ ತಿನ್ನಬಹುದು? ಯಾವ ರೀತಿಯ ಹಣ್ಣುಗಳನ್ನು ಅಪರೂಪಕ್ಕೆ ತಿಂದರೆ ಒಳ್ಳೆಯದು ಎಂಬ ಮಾಹಿತಿಯನ್ನು ನೀಡಲಿದೆ.
ಬೆರಿ ಹಣ್ಣುಗಳು: ಸ್ಟ್ರಾಬರಿ, ರಾಸ್ ಬರಿ, ಬ್ಲ್ಯಾಕ್ ಬೆರಿ ಹಣ್ಣುಗಳನ್ನು ತಿನ್ನಬಹುದು. ಇದರಲ್ಲಿ antioxidants ಪ್ರಮಾಣ ಮತ್ತು ವಿಟಮಿನ್ ಜಾಸ್ತಿ ಇರುತ್ತದೆ. ಇವುಗಳನ್ನು ಸಲಾಡ್ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.
ಚೆರಿ ಹಣ್ಣುಗಳು: ಚೆರಿ ಹಣ್ಣುಗಳಲ್ಲಿ ಸಕ್ಕರೆ ಅಂಶ ಸ್ವಲ್ಪ ಅಧಿಕವಿದ್ದರೂ ಕಡಿಮೆ ಪ್ರಮಾಣದಕಲ್ಲಿ ಕಾರ್ಬೋಹೈಡ್ರೇಟ್ ಹೊಂದಿದೆ. ಅಲ್ಲದೆ ಇದು ಅಧಿಕ
ನಾರಿನಂಶವನ್ನು ಹೊಂದಿರುವುದರಿಂದ ತಿನ್ನುವುದು ಒಳ್ಳೆಯದು.
ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕ್ಯಾಲೋರಿ ಅಧಿಕವಿದ್ದರೂ ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು.
ಪೀಚ್ ಹಣ್ಣುಗಳು ಮತ್ತು ಆಪ್ರಿಕೋಟ್ ಗಳು: ಇದರಲ್ಲಿ ವಿಟಮಿನ್ ಸಿ ಮತ್ತು ನಾರಿನಂಶವಿರುವುದರಿಂದ ಪ್ರತಿದಿನ ತಿನ್ನುವುದು ಒಳ್ಳೆಯದು.
ಸೇಬು ಮತ್ತು ದ್ರಾಕ್ಷಿ: ಸೇಬು ಮತ್ತು ದ್ರಾಕ್ಷಿಯಲ್ಲಿ antioxidants ಪ್ರಮಾಣ ಅಧಿಕವಿದ್ದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಈ ಕೆಳಗಿನ ಹಣ್ಣುಗಳನ್ನು ಅಪರೂಪಕ್ಕೆ ತಿಂದರೆ ಒಳ್ಳೆಯದು:
ಸಲಹೆ: ಮಧುಮೇಹಿಗಳು ಈ ಹಣ್ಣು ತಿನ್ನದಿರುವುದು ಒಳ್ಳೆಯದು.
ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಪೊಟ್ಯಾಷಿಯಂ ಅಂಶ ಜಾಸ್ತಿ ಇದ್ದರೂ ಸಕ್ಕರೆ ಅಂಶ ಕೂಡ ಅದಿಕವಿರುವುದರಿಂದ ದಿನಾ ತಿನ್ನುವ ಬದಲು ಅಪರೂಪಕ್ಕೆ ತಿನ್ನುವುದು ಒಳ್ಳೆಯದು.
ಮಾವಿನ ಹಣ್ಣು ಮತ್ತು ಪಪ್ಪಾಯಿ: ಈ ಹಣ್ಣುಗಳನ್ನು ಅಪರೂಪಕ್ಕೆ ತಿನ್ನುವುದು ಒಳ್ಳೆಯದು. ಕೆಲವರಿಗೆ ಮಾವಿನ ಹಣ್ಣು ದಿನಾ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಅದರಲ್ಲೂ ಹೆಣ್ಣು ಮಕ್ಕಳು ಪಪ್ಪಾಯಿಯನ್ನು ದಿನಾ ತಿನ್ನದಿರುವುದು ಒಳ್ಳೆಯದು.
ಪೈನಾಪಲ್: ಪೈನಾಪಲ್‌ನಲ್ಲಿ ಆರೋಗ್ಯಕರ ಪೋಷಕಾಂಶವಿದ್ದರೂ ಅದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಆದ್ದರಿಂದ ಅಪರೂಪಕ್ಕೆ ತಿನ್ನುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications