Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್!
ಶಾಲಾ ಬಾಲಕನ ಆಹುತಿ: ನೆಲಮಂಗಲ ರೆಸಾರ್ಟಲ್ಲಿ ಯಾವುದೂ ಸರಿಯಿಲ್ಲ

ಆತಂಕದ ವಿಷಯವೆಂದರೆ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ನವರು ತಮ್ಮ ರೆಸಾರ್ಟಿಗೆ ವಿವಿಧ ಹೆಸರುಗಳನ್ನು ನೀಡಿ ಶಾಲೆಗಳನ್ನು ವಂಚಿಸುತ್ತಿದೆ. ಈ ಮಧ್ಯೆ, ಪ್ರೆಸಿಡೆನ್ಸಿ ರೆಸಾರ್ಟ್ ಎಂಬ ಹೆಸರಿನ ಇದೇ ರೆಸಾರ್ಟಿಗೆ ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಶಾಲೆಯೂ ಮಕ್ಕಳನ್ನು ಇದೇ ಬುಧವಾರ ಪಿಕ್ನಿಕ್ ಗೆ ಕರೆದುಕೊಂಡು ಹೋಗಲು ಸಜ್ಜಾಗಿದೆ. ಆದರೆ ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಈ ರೆಸಾರ್ಟಿಗೆ ಕಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ವಾಸ್ತವವಾಗಿ, ಹೆಸರಿಗಷ್ಟೇ ಉತ್ತಮ ರೆಸಾರ್ಟ್ ಎನಿಸಿಕೊಂಡಿರುವ ರೆಸಿಡೆನ್ಸಿ ಹಾಲಿಡೇ ರೆಸಾರ್ಟ್ ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸುರಕ್ಷಾ ಕ್ರಮಗಳು ಇಲ್ಲ. ಬಾಲಕ ತೇಜಸ್ ನ ಸಾವಿಗೆ ಇದೇ ಕಾರಣ ಎಂದು ಪೋಷಕರು ದೂರಿದ್ದಾರೆ.
ಹಣದ ದುರಾಸೆಗೆ ಬಿದ್ದು ಮೂರ್ನಾಲ್ಕು ಶಾಲೆಗಳ ಮಕ್ಕಳನ್ನು ಒಟ್ಟಿಗೇ ಕರೆಸಿಕೊಳ್ಳುವ ಈ ರೆಸಾರ್ಟಿನವರು ಮಕ್ಕಳ ಸುರಕ್ಷತೆಯತ್ತ ಗಮನವೇ ಹರಿಸುತ್ತಿಲ್ಲ. ಇಲ್ಲಿರುವುದು ಎಲ್ಲಾ ಹರಕುಮುರುಕು ಸೌಲಭ್ಯಗಳು. ಸ್ವಿಮ್ಮಿಂಗ್ ಪೂಲ್ ಅಂತೂ ಅಪಾಯದ ಕೂಪವಾಗಿದೆ. ಇನ್ನು ಮಕ್ಕಳಿಗೆ ಇಲ್ಲಿ ನೀಡುವ ತಿಂಡಿ ತಿನಿಸೂ ಕಳಪೆ ಮಟ್ಟದ್ದು. ಇರುವ ನಾಲ್ಕಾರು ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇದೇ ರೆಸಾರ್ಟ್ ಗೆ ಪಿಕ್ ನಿಕ್ ನಿಗದಿಪಡಿಸಿರುವ ಬೇರೆ ಬೇರೆ ಶಾಲೆಗಳ ಮಕ್ಕಳನ್ನು ಇಲ್ಲಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆಯವರು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿರುವ ಸೌಲಭ್ಯಗಳ ಬಗ್ಗೆ ತನಿಖೆ ನಡೆಸಬೇಕು. ಪಿಕ್ನಿಕ್ ಹೆಸರಿನಲ್ಲಿ ಮಕ್ಕಳನ್ನು ಇಲ್ಲಿಗೆ ಕರೆತರುವುದಕ್ಕೆ ಅನುಮತಿ ನೀಡಬಾರದು ಎಂದು ಪೋಷಕರು ಸರಕಾರವನ್ನು ಆಗ್ರಹಿಸಿದ್ದಾರೆ.



Click it and Unblock the Notifications
