Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ನಂದನ್ ನಿಲೇಕಣಿ ಯಾಕಿಂಗಾದರೋ ಶಿವಾ !?

ಬಲಿಷ್ಠ ಜನ ಲೋಕಪಾಲ ಮಸೂದೆಗಾಗಿ ಅಣ್ಣಾ ನಡೆಸುತ್ತಿರುವ ಹೋರಾಟ ಅಣ್ಣ ನಿಲೇಕಣಿಗೆ ಬಾಲಿಶವಾಗಿದೆಯಂತೆ. ಈ ಹೋರಾಟದ ಹಿಮ್ಮೇಳದಲ್ಲಿ ನಿಲೇಕಣಿ ನಮ್ಮ ದೇಶದ ಸಂಸತ್ತಿನ ಸ್ಥಾಯಿ ಸಮಿತಿಯನ್ನು (standing committee) ಇಡೀ ವಿಶ್ವದಲ್ಲೇ ಅದ್ವಿತೀಯ ಎಂದೆಲ್ಲ ಕೊಂಡಾಡಿದ್ದಾರೆ. ok fine!
'ಈ ಭೂಮಿ ಮೇಲಿನ ನಾಲ್ಕಾರು ಸಂಸತ್ತುಗಳನ್ನು ನೇರವಾಗಿ ಪರಾಮರ್ಶಿಸಿದ್ದೇನೆ. ನೂರಾರು ವಿಶ್ವ ನಾಯಕರನ್ನು ಭೇಟಿ ಮಾಡಿದ್ದೇನೆ. ಆದರೆ ನಮ್ಮಲ್ಲಿರುವಂತಹ standing committee ಅಲ್ಲೆಲ್ಲೂ ಕಂಡುಬರಲಿಲ್ಲ. ನಮ್ಮ ಸಮಿತಿಯ ಕಾರ್ಯತತ್ಪರತೆ ಅಮೋಘ. ಸಮಿತಿಯಲ್ಲಿನ ಪರಿಣತರ ಪರ/ವಿರೋಧ ಪ್ರಶ್ನಾವಳಿ ವೈಖರಿ ವಿಷಯವನ್ನು ಪರಿಪೂರ್ಣ ದೃಷ್ಟಿಯಿಂದ ನೋಡುತ್ತದೆ.
;ಒಟ್ನಲ್ಲಿ ಬಾಟಮ್ ಲೈನ್ ಏನಪಾ ಅಂತಂತಂದರೆ standing committee ಅನುಮೋದಿಸುವ ಮಸೂದೆಗಳೆಲ್ಲ ಶಂಖುವಿಂದ ಬಂದ ತೀರ್ಥದಂತೆ ಪಂಚಾಮೃತವಾಗಿರುತ್ತದೆ' ಎಂದಿದ್ದಾರೆ ಅಣ್ಣ ನಿಲೇಕಣಿ.
ok fine! ಅಣ್ಣ ನಿಲೇಕಣಿ ನೀವೇಳಿದ್ದೆಲ್ಲ ಒಪ್ಕೋತೀವಿ. ಆದರೆ ನೀವೇ ಹೇಳಿದಂತೆ ಈ second-to-none standing committee ಇದುವರೆಗೆ ಅನುಮೋದಿಸಿರುವ ಮಸೂದೆಗಳೆಲ್ಲ ಏನಾಗಿವೆ ಅಣ್ಣ? ಅವೆಲ್ಲ ಅದ್ಭುತವಾಗಿ ಕಾರ್ಯತತ್ಪರವಾಗಿವೆಯಾ ಅಣ್ಣ? ಹಾಗಾದರೆ ಇಂತಹ standing committeeಯಿಂದಲೇ ಅನುಮೋದಿತವಾದ ಕಾನೂನುಗಳ ಹೊರತಾಗಿಯೂ ಯಾಕಣ್ಣ ಭಾರತದಲ್ಲಿ ಭ್ರಷ್ಟ ವ್ಯವಸ್ಥೆ ತಾಂಡವವಾಡುತ್ತಿದೆ. ಇಡೀ ಭಾರತ 'ನಂದನ'ವನವಾಗಿರಬೇಕಿತ್ತಲ್ಲ ಅಣ್ಣ.



Click it and Unblock the Notifications
