Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪತ್ನಿ ಈ 6 ವಿಚಾರಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ..! ಏನಿದು ಗೊತ್ತಾ?
ಪತಿ ಪತ್ನಿ ಸಂಬಂಧವೆಂದರೆ ಅದೊಂದು ಏಳು ಜನ್ಮದ ಬಂಧ ಎನ್ನಲಾಗುತ್ತದೆ. ಆದರೆ ಇತ್ತಿಚಿನ ದಿನಗಳಲ್ಲಿ ಈ ಸಂಬಂಧ ಒಂದೇ ಜನ್ಮ ಇದ್ದರೆ ಸಾಕು ಎನಿಸಿಬಿಟ್ಟಿದೆ. ಯಾವುದೇ ದಿನವನ್ನು ಯಶಸ್ವಿ ಮತ್ತು ಆನಂದದಾಯಕವಾಗಿಸಲು ಬೆಳಗಿನ ಸಮಯವು ಬಹಳ ಮುಖ್ಯವಾಗಿದೆ. ಹಾಗೆ ಒಳ್ಳೆಯ ಸಂಬಂಧಕ್ಕಾಗಿ ಚಾಣಕ್ಯ ತನ್ನ ನೀತಿಯಲ್ಲಿ ಹಲವು ಬಗೆ ಹೇಳಿದ್ದಾನೆ.
ಚಾಣಕ್ಯರು ಪ್ರಾಯೋಗಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾನೆ. ಚಾಣಕ್ಯ ನೀತಿಯು ಗಂಡ-ಹೆಂಡತಿ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಅವೆಲ್ಲವೂ ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಬ್ಬ ಹೆಂಡತಿಯು ಉದ್ದೇಶಪೂರ್ವಕವಾಗಿ ತನ್ನ ಪತಿಯಿಂದ ಕೆಲವು ವಿಷಯಗಳನ್ನು ಮರೆಮಾಡುತ್ತಾಳಂತೆ. ಈ ರಹಸ್ಯವನ್ನು ಅವಳು ತನ್ನ ಗಂಡನಿಗೆ ಎಂದಿಗೂ ಹೇಳುವುದಿಲ್ಲವಂತೆ.

ಇದು ಪತಿ ಪತ್ನಿ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂಬ ಕಾರಣಕ್ಕೆ ಆಕೆ ಕೆಲವು ವಿಚಾರಗಳನ್ನು ಎಂದಿಗೂ ಪತಿಯೊಂದಿಗೆ ಹಂಚಿಕೊಳ್ಳುವುದಿಲ್ಲವಂತೆ. ಹಾಗಾದರೆ ಆ ವಿಚಾರಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ ನೋಡಿ.
ಹಣದ ವಹಿವಾಟುಗಳು
ಹೆಂಡತಿಯನ್ನು ಮನೆಯ ಲಕ್ಷ್ಮೀದೇವಿ ಎಂದು ಕರೆಯುತ್ತಾರೆ. ಕುಟುಂಬದ ಆರ್ಥಿಕ ನಿರ್ವಹಣೆಯ ಜವಾಬ್ದಾರಿಯೂ ಮಹಿಳೆಯರ ಮೇಲಿದೆ. ಆದ್ದರಿಂದ ಅವಳು ಉಳಿತಾಯದಿಂದ ಹಣವನ್ನು ಉಳಿಸುತ್ತಾಳೆ. ಬಿಕ್ಕಟ್ಟಿನ ಸಮಯದಲ್ಲಿ ಅವಳು ತನ್ನ ಗಂಡನನ್ನು ಬೆಂಬಲಿಸುತ್ತಾಳೆ. ಅದಕ್ಕಾಗಿಯೇ ಅವಳನ್ನು ಲಕ್ಷ್ಮಿ ಎಂದು ಕರೆಯುತ್ತಾರೆ. ಚಾಣಕ್ಯನ ಪ್ರಕಾರ, ಹೆಂಡತಿ ತನ್ನ ಗಂಡನ ಅಥವಾ ತನ್ನ ಸ್ವಂತ ಗಳಿಕೆಯ ಕೆಲವು ಭಾಗವನ್ನು ಖರ್ಚು ಮಾಡದೆ ಇಡುತ್ತಾಳೆ. ಅವಳು ಎಂದಿಗೂ ತನ್ನ ಗಂಡನಿಗೆ ಹೇಳುವುದಿಲ್ಲ. ಕುಟುಂಬದ ಕಷ್ಟದ ಸಮಯದಲ್ಲಿ ಅವರು ಈ ಹಣವನ್ನು ಬಳಸುತ್ತಾಳೆ. ಆದರೆ ಎಂದಿಗೂ ಆಕೆಯ ಆರ್ಥಿಕ ಸ್ಥಿತಿಯ ಕುರಿತು ಪತ್ನಿಯೊಂದಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲವಂತೆ.
ಆರೋಗ್ಯ ಸಮಸ್ಯೆಗಳು
ಚಾಣಕ್ಯನ ನೀತಿಶಾಸ್ತ್ರವು ಹೇಳುವಂತೆ ಹೆಂಡತಿಯು ಹೆಚ್ಚಿನ ಸಂದರ್ಭಗಳಲ್ಲಿ ತನ್ನ ಆರೋಗ್ಯದ ಸಮಸ್ಯೆಗಳನ್ನು ತನ್ನ ಗಂಡನಿಗೆ ಹೇಳುವುದಿಲ್ಲ. ಮನೆಯ ಯಜಮಾನಿಯು ಆರೋಗ್ಯದ ಬಗ್ಗೆ ಸದಾ ನಿರ್ಲಕ್ಷ್ಯ ವಹಿಸುತ್ತಾರೆ ಎಂದರೆ ತಪ್ಪಾಗದು. ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ದೇಹಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿದ್ದರೂ ಅವರು ಅದನ್ನು ತಮ್ಮ ಗಂಡನಿಗೆ ಹೇಳುವುದಿಲ್ಲ. ಏಕೆಂದರೆ ಆಕೆ ತನ್ನ ಗಂಡನ ಸಮಸ್ಯೆಗಳನ್ನು ಸೇರಿಸಲು ಬಯಸುವುದಿಲ್ಲ.
ಮದುವೆಯ ಮುನ್ನ ನಡೆದ ಘಟನೆಗಳು
ಮದುವೆಗೂ ಮುನ್ನ ಆಕೆಯ ಜೀವನದಲ್ಲಿ ನಡೆದಿರುವ ಅದೆಷ್ಟೋ ವಿಚಾರಗಳನ್ನು ಆಕೆ ಪತಿ ಬಳಿ ಹೇಳುವುದಿಲ್ಲವಂತೆ. ಆರೆ ಪತಿ ಇದಕ್ಕೆ ತದ್ವಿರುದ್ದ. ಆಕೆಗೆ ಮದುವೆಗೂ ಮುನ್ನ ಒಳ್ಳೆಯ ಸ್ನೇಹಿತನಿದ್ದರೂ ಆತನ ಕುರಿತು ಎಲ್ಲಿಯೂ ಆಕೆ ಪ್ರಸ್ತಾಪ ಮಾಡುವುದಿಲ್ಲವಂತೆ. ಇದಿಷ್ಟೇ ಅಲ್ಲ ಮದುವೆಗೂ ಮುನ್ನ ಆಕೆ ಬೇರೊಂದು ಸಂಬಂಧ ಅರ್ಧಕ್ಕೆ ನಿಂತು ಹೋಗಿದ್ದರೆ ಅದನ್ನು ಪತಿ ಎದುರು ಹೇಳಿಕೊಳ್ಳವುದಿಲ್ಲವಂತೆ. ಏಕೆಂದರೆ ಪತಿ ತನ್ನ ಬಗ್ಗೆ ಅನ್ಯತಾ ಭಾವಿಸುತ್ತಾನೆ ಎಂಬ ದುಗುಡ ಆಕೆಯನ್ನು ಕಾಡುತ್ತಿರುತ್ತದೆಯಂತೆ.
ಪ್ರೀತಿಯ ಆಸೆಗಳು
ಪತಿ-ಪತ್ನಿಯ ಸಂಬಂಧದಲ್ಲಿ ಪ್ರೀತಿ ಮತ್ತು ಪ್ರಣಯ ಬಹಳ ಮುಖ್ಯ. ಪ್ರೀತಿ ಪತಿ-ಪತ್ನಿಯನ್ನು ಹೃದಯಕ್ಕೆ ಹತ್ತಿರವಾಗಿಸುತ್ತದೆ. ಪತಿ ತನ್ನ ಹೆಂಡತಿಯನ್ನು ಖಾಸಗಿ ಕ್ಷಣದ ಬಗ್ಗೆ ಕೇಳಿದಾಗ, ಆಕೆ ಈ ಬಗ್ಗೆ ಮಾತನಾಡಲು ಮುಂದಾಗುವುದಿಲ್ಲವಂತೆ. ಆಕೆ ಪ್ರೀತಿಯನ್ನು ಎಲ್ಲರ ಮುಂದೆ ತೋರ್ಪಡಿಸಲು ಇಷ್ಟ ಪಡುವುದಿಲ್ಲ. ಬದಲಿಗೆ ಪತಿಯನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುವವಳು ಆಕೆಯೇ ಆಗಿರುತ್ತಾಳಂತೆ.
ಅಭಿಪ್ರಾಯದ ವ್ಯತ್ಯಾಸಗಳು
ಕೌಟುಂಬಿಕ ನಿರ್ಧಾರಗಳಲ್ಲಿ ಪತಿ-ಪತ್ನಿಯರ ಒಪ್ಪಿಗೆ ಅತ್ಯಗತ್ಯ. ಆದರೆ ಕೆಲವೊಮ್ಮೆ ಕೆಲವು ನಿರ್ಧಾರಗಳು ಹೆಂಡತಿಗೆ 'ಹೌದು' ಎಂದು ಹೇಳಲು ಬಯಸುವುದಿಲ್ಲ. ಮನೆಯಲ್ಲಿ ಯಾವುದೇ ವಾದ-ವಿವಾದಗಳು ಆಗದಂತೆ ಗಂಡನ ಮಾತನ್ನು ಹೆಂಡತಿ ಒಪ್ಪಿಕೊಳ್ಳುತ್ತಾಳೆ. ತನಗೆ ಇಷ್ಟವಿಲ್ಲದಿದ್ದರೂ ಗಂಡನ ಪ್ರತಿಯೊಂದು ನಿರ್ಧಾರವನ್ನು ಹೆಂಡತಿ ಬೆಂಬಲಿಸುತ್ತಾಳೆ. ಪತಿ ಸಂತೋಷವಾಗಿರಲು ಮತ್ತು ಮನೆಯಲ್ಲಿ ಯಾವುದೇ ಘರ್ಷಣೆಯಾಗದಂತೆ ಅವಳು ತನ್ನ ಅಸಮ್ಮತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ.



Click it and Unblock the Notifications