Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಸರಿಗಮಪ ಕಾರ್ಯಕ್ರಮದಲ್ಲಿ ಮಗಳ ಕಾಲಿಗೆ ಬಿದ್ದ ಅಪ್ಪ: ಪ್ರೀತಿಯನ್ನು ಮನಸ್ಸಿನಲ್ಲಿಯೇ ತಡೆಹಿಡಿಯಬೇಡಿ ಅಪ್ಪಂದಿರೇ...
'ನಾನು ತುಂಬಾ ಹಾಡಿನ ಕಾರ್ಯಕ್ರಮಕ್ಕೆ ಹೋಗುತ್ತಿರುತ್ತೇನೆ, ಅಲ್ಲಿ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರೂ ಬಂದು ನೀನು ತುಂಬಾ ಚೆನ್ನಾಗಿ ಹಾಡಿದೆ ಎಂದು ಹೇಳುತ್ತಾರೆ, ಆದರೆ ಅಪ್ಪಾ ನೀವು ಒಂದು ದಿನವೂ ನನ್ನನ್ನು ಹೊಗಳಿಲ್ಲ, ಇದುವರೆಗೂ ನಾನು ನೋವು ತುಂಬಾನೇ ಕಾಡುತ್ತಿದೆ. ಎಲ್ಲಾ ಅಪ್ಪಂದಿರು ಮಗಳನ್ನು ಎತ್ತಿ ಮುದ್ದಾಡಿ ಅವಳ ಜೊತೆ ಕೂತು ಮಾತನಾಡುವಾಗ ನನ್ನ ಅಪ್ಪ ಏಕೆ ನನ್ನ ಮುದ್ದಾಡಲ್ಲ ಎಂಬ ನೋವು ನನ್ನನ್ನು ಕಾಡುವುದು.
ಅಪ್ಪಾ ನಾನು ನಿನ್ನ ಬಳಿ ಕೇಳುವುದಿಷ್ಟೇ ನಿನಗೆ ನನ್ನ ಮೇಲೆ ಪ್ರೀತಿ ಇದೆಯೇ? ಎಂದು ಗೊತ್ತಾಗಬೇಕು, ಅಲ್ಲದೆ ನೀನು ನನ್ನನ್ನು ಅಪ್ಪಿ ನನಗೆ ಪ್ರೀತಿ ಮುತ್ತು ಕೊಡಬೇಕು' ಎಂದು ಮಗಳು ಆ ಸ್ಟೇಜ್ ಮೇಲೆ ಹೇಳುತ್ತಿದ್ದಂತೆ ತಂದೆ ಮಗಳ ಕಾಲಿಗೆ ಬೀಳುತ್ತಾರೆ, ಅಲ್ಲಿರುವ ಜಡ್ಜಸ್, ಇತರ ಸ್ಪರ್ಧಿಗಳು, ಮ್ಯೂಸಿಕ್ ಟೀಂನವರು ಕಣ್ಗಗಳು ಅವರಿಗರಿಯದಂತೆಯೇ ತುಂಬಿ ಬರುತ್ತದೆ, ಆ ದೃಶ್ಯ ನೋಡುತ್ತಿದ್ದ ವೀಕ್ಷಕರಿಗೂ ಕಣ್ತುಂಬಿ ಬರುವುದು ಹಾಗಿದೆ ಆ ದೃಶ್ಯ.

ಆ ಒಂದು ಕ್ಷಣ ಆ ಮಗಳು ಅನುಭವಿಸಿದ ನೋವು, ಅಪ್ಪನಿಗೆ ತನ್ನ ತಪ್ಪು ಅರಿವಾದ ಕ್ಷಣ ಎಲ್ಲವೂ ಆ ಒಂದು ದೃಶ್ಯದಲ್ಲಿ ಕಾಣಬಹುದು. ತಮಿಳಿನ ಪ್ರಸಿದ್ಧ ಸರಿಗಮಪ ಕಾರ್ಯಕ್ರಮದಲ್ಲಿ ನಡೆದ ಘಟನೆಯದು. ಕನ್ನಡದ ಮೆಚ್ಚಿನ ಗಾಯಕ, ಸರಿಗಮಪದ ತೀರ್ಪುಗಾರರಲ್ಲಿ ಒಬ್ಬರಾಗಿರುವ ವಿಜಯ್ ಪ್ರಕಾಶ್ ಆ ಕಾರ್ಯಕ್ರಮದಲ್ಲಿಯೂ ತೀರ್ಪುಗಾರರಾಗಿದ್ದಾರೆ, ಅವರ ಜೊತೆಗೆ ಪ್ರಸಿದ್ಧ ಗಾಯಕರಾದ ಶ್ರೀನಿವಾಸ, ಸೈಂಧವಿ, ಕಾರ್ತಿಕ್ ಇವರೆಲ್ಲಾ ಈ ಕಾರ್ಯಕ್ರಮದಲ್ಲಿದ್ದಾರೆ.
ಲಕ್ಷಾಂತರ ಜನರು ನೋಡುತ್ತಿರುವ ಕಾರ್ಯಕ್ರಮದ ಸ್ಪರ್ಧಿ ಆಗಿರುವ ಆ ಹೆಣ್ಮಗಳು ತನ್ನ ಅಪ್ಪನಿಗೆ ಒಂದು ಹಾಡು ಡೆಡಿಕೇಟ್ ಮಾಡಿದ ಬಳಿಕ ಆ್ಯಂಕರ್ ಅರ್ಚನಾ ಆ ಹೆಣ್ಮಗಳ ಅಪ್ಪ-ಅಮ್ಮನನ್ನು ವೇದಿಕೆ ಮೇಲೆ ಕರೆಸುತ್ತಾರೆ, ಮಗಳು ಅಪ್ಪನಿಗಾಗಿ ಬರೆದ ಆ ಪತ್ರ ನೀಡುತ್ತಾರೆ, ಆದರೆ ಅಪ್ಪನಿಗೆ ಅದನ್ನು ಓದುವಾಗ ದುಃಖ ತಡೆಯಲಾರದೆ ಮಗಳ ಕೈಗೆ ಕೊಡುತ್ತಾರೆ, ಆವಾಗ ಮಗಳು ತನ್ನ ನೋವನ್ನು, ತಂದೆಯಿಂದ ತಾನು ಪ್ರೀತಿಯನ್ನು ಹಂಬಲಿಸುತ್ತಿದ್ದೇನೆ ಎಂಬುವುದನ್ನು ಈ ಮೇಲಿನಂತೆ ಹೇಳುತ್ತಾಳೆ, ಆವಾಗ ತಂದೆ ಆ ಮಗಳ ಕಾಲಿಗೆ ಬೀಳಲು ಹೋಗುತ್ತಾರೆ, ಮಗಳು ಅಪ್ಪನನ್ನು ತಡೆಯುತ್ತಾಳೆ, ಅತ್ಯಂತ ಭಾವುಕ ಕ್ಷಣವದು.
ಅಪ್ಪ ಹೇಳಿದ್ದು ಹೊಗಳಿದರೆ ಮಗಳು ಎಲ್ಲಿ ಸಾಧಿಸುವುದಿಲ್ಲವೋ ಎಂಬ ಭಯದಲ್ಲಿ ಏನೂ ಹೇಳುತ್ತಿರಲಿಲ್ಲ
ಅಪ್ಪಾ ನೀನು ನನ್ನನ್ನು ಹೊಗಳಿಲ್ಲ, ಮುದ್ದಿಸಲಿಲ್ಲ ಎಂದು ಮಗಳು ನೋವಿನಿಂದ ಹೇಳಿದಾಗ ಹಾಗೆ ಮಾಡದಿರುವುದಕ್ಕೆ ತಂದೆಗೆ ತನ್ನದೇ ಆದ ಕಾರಣವಿತ್ತು. ಮಗಳ ಯಶಸ್ಸು ಕಂಡು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದರು, ಹೆಮ್ಮೆ ಪಡುತ್ತಿದ್ದರು, ಆದರೆ ಈ ಬಗ್ಗೆ ಅವಳಿಗೆ ಹೇಳಿದರೆ ಎಲ್ಲಿ ಜಂಭ ಬರುತ್ತೋ, ತನ್ನ ಸಾಧನೆ ಕಡೆಗೆ ಗಮನ ಕೊಡುವುದಿಲ್ಲವೋ ಎಂಬ ಭಯ ಆ ತಂದೆಗೆ ಹಾಗಾಗಿ ನಾನು ಏನನ್ನೂ ಹೇಳಿರಲಿಲ್ಲ ಎಂದು ಹೇಳುತ್ತಾರೆ.
ಸಾಕಷ್ಟು ಅಪ್ಪಂದಿರು ಇದೇ ರೀತಿ ಯೋಚಿಸುತ್ತಾರೆ
ಅಪ್ಪ ಎಂದರೆ ಸ್ವಲ್ಪ ಬಿಗುಮಾನದಿಂದ ಇರಬೇಕು, ಆವಾಗ ಮಾತ್ರ ಭಯ ಪಡುತ್ತಾರೆ, ಇಲ್ಲದಿದ್ದರೆ ಮಕ್ಕಳು ನನ್ನ ಮಾತು ಕೇಳಲ್ಲ ಎಂಬ ಭಾವನೆ ಹಲವು ಅಪ್ಪಂದಿರಲ್ಲಿ ಇರುತ್ತದೆ, ಹೀಗಾಗಿ ಮಕ್ಕಳು ಏನಾದರೂ ಸಾಧನೆ ಮಾಡಿದರೆ ಹೌದಾ ಅಂತ ಹೇಳಿ ತಮ್ಮ ಖುಷಿಯನ್ನು ಮನಸ್ಸಿನಲ್ಲಿ ಅದುಮಿಡುವ ಪ್ರಯತ್ನ ಮಾಡುತ್ತಾರೆ, ಮಕ್ಕಳು ಹಾಗೂ ಅಪ್ಪನ ನಡುವೆ ಒಂದು ಅಂತರ ಬೆಳೆಯುತ್ತದೆ, ಅಪ್ಪನ ಪ್ರೀತಿ ಮಕ್ಕಳಿಗೆ ತಿಳಿಯದೇ ಹೋಗುವ ಸಾಧ್ಯತೆ ಹೆಚ್ಚು, ಹಾಗಾಗಿ ಅಪ್ಪಂದಿರೇ ನಿಮ್ಮ ಭಾವನೆಗಳನ್ನು ತೋರಿಸದೆ ಬಚ್ಚಿಡಬೇಡಿ, ಪ್ರೀತಿ ತೋರಿಸುವಾಗ ಪ್ರೀತಿಸಿ, ಮುದ್ದಿಸಿ, ಗದರಬೇಕಾದ ಸಮಯದಲ್ಲಿ ಗದರಿ, ಅವರಿಗೆ ಎಚ್ಚರಿಕೆ ನೀಡಿ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸದೆ ಮಾತ್ರ ಇರಬೇಡಿ, ಇಲ್ಲದಿದ್ದರೆ ಹೀಗೆ ಆಗುವುದು ಮಕ್ಕಳು ನಿಮಗೆ ಅವರ ಮೇಲೆ ಪ್ರೀತಿ ಇಲ್ಲ ಎಂದು ಭಾವಿಸುತ್ತಾರೆ.
ನಾಳೆ ಹೇಗೆ ಎಂಬುವುದು ಯಾರಿಗೂ ಗೊತ್ತಿಲ್ಲ ಹಾಗಾಗಿ ಮಕ್ಕಳ ಮೇಲೆ ನಿಮಗಿರುವ ಪ್ರೀತಿಯನ್ನು ಬಚ್ಚಿಡಬೇಡಿ, ಪ್ರೀತಿಸಿದರೆ ಅವರು ಹಾಳಾಗಲ್ಲ, ತಪ್ಪು ದಾರಿ ತುಳಿಯಲ್ಲ, ನಿಮ್ಮ ಪ್ರೀತಿಗೆ ಧಕ್ಕೆಯಾಗಬಾರದು ಎಂದು ಮತ್ತಷ್ಟು ಜಾಗ್ರತೆಯಿಂದ ಹೆಜ್ಜೆ ಇಡುತ್ತಾರೆ. ಅದೇ ನೀವು ಅವರಿಗೆ ಪ್ರೀತಿ ತೋರದಿದ್ದರೆ ನಿಮ್ಮ ಮೇಲೆ ಬೇಸರ, ಕೋಪ ಎಲ್ಲವೂ ಆ ಚಿಕ್ಕ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುವುದು.
ಈ ವೀಡಿಯೋ ತಮಿಳಿನಲ್ಲಿ ಇರುವುದು, ಭಾಷೆ ಅರ್ಥ ಆದರೆ ಕೇಳಿ ನೋಡಿ, ಆದರೆ ಇಲ್ಲಿ ವ್ಯಕ್ತವಾದ ಭಾವನೆ ಇದೆಯೆಲ್ಲಾ ಅದು ಬಹುತೇಕ ಮನೆಯಲ್ಲಿ ನಡೆಯುತ್ತಿರುವುದು ಹಾಗಾಗಿ ಆ ಮಗಳು ತಂದೆಯನ್ನು ಇಲ್ಲಿ ಉದಾಹರಣೆಯಾಗಿ ನೀಡಿದ್ದೇವೆ. ಎಷ್ಟೇ ಬ್ಯುಸಿ ಇರಲಿ, ಮಕ್ಕಳ ಜೊತೆ ಸಮಯ ಕಳೆಯಿರಿ.



Click it and Unblock the Notifications