Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ನಿಜವಾದ ಕರಿಮಣಿ ಮಾಲೀಕನಾಗಲು ಈ 6 ಅರ್ಹತೆಗಳಿರಬೇಕು
ಕರಿಮಣಿ ಮಾಲಿಕ ನಾನಲ್ಲ ಎಂಬವುದು ಎಷ್ಟು ವೈರಲ್ ಆಗಿದೆ ಎಂದರೆ ಇದಕ್ಕೆ ರೀಲ್ಸ್ ಮಾಡದವರೇ ವಿರಳ ಅನ್ನಬಹುದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ಕರಿಮಣಿ ಮಾಲಿಕ ಹಾಡನ್ನು ಗುನುಗುತ್ತಿದ್ದಾರೆ.
ಕೆಲವರು ಇದನ್ನು ಕರಿ ಮಣಿ ಮಾಲೀಕ ನೀನಲ್ಲ ಎಂದರೆ ಇನ್ನು ಕೆಲವರು ಕರಿಮಣಿ ಮಾಲೀಕ ನೀ.. ನಲ್ಲ ಅಂತಿದ್ದಾರೆ, ಒಟ್ಟಿನಲ್ಲಿ ಈ ಹಾಡಿನ ಕ್ರೇಝ್ ಅಂತೂ ಸಕತ್ ಆಗಿದೆ, 2 ದಶಕ ಹಿಂದಿನ ಹಾಡು ಈಗೀನ ಕಾಲದವರಿಗೆ ಇಷ್ಟವಾಗಿದ್ದು ಇನ್ನೂ ವಿಶೇಷ.

ಇದೀಗ ಈ ಹಾಡನ್ನು ಮತ್ತಷ್ಟು ಡೆವಲಪ್ ಮಾಡಿ ಕರಿಮಾಣಿ ಮಾಲೀಕ ರಾವುಲ್ಲ ಎಂದು ಹಾಡುತ್ತಿದ್ದಾರೆ, ಇದನ್ನು ಕೇಳುವಾಗ ತಮಾಷೆ ಅನಿಸುವುದು, ಆದರೆ ನಿಜವಾದ ಕರಿಮಣಿ ಮಾಲೀಕ ಯಾರು ಎಂಬುವುದು ತುಂಬಾ ಜವಾಬ್ದಾರಿಯುತ ಸ್ಥಾನ, ಯಾರು ಆ ಸ್ಥಾನವನ್ನು ತುಂಬುತ್ತಾರೋ ಅವರು ಮಾತ್ರ ಕರಿಮಣಿ ಮಾಲೀಕನಾಗಲು ಸಾಧ್ಯ..ಆದ್ದರಿಂದ ಕರಿಮಣಿ ಮಾಲೀಕನಿಗೆ ಕೆಲ ಯೋಗ್ಯತೆಗಳಿರಬೇಕು.
ಹಾಗಾದರೆ ಕರಿಮಣಿ ಮಾಲೀಕನಾಗಲು ಅವನಲ್ಲಿರುವ ಯೋಗ್ಯತೆಗಳೇನು ಎಂಬುವುದು ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ, ಆ ಅರ್ಥಪೂರ್ಣ ಸಾಲುಗಳು ನಿಮಗಾಗಿ:
ಭೋಗೇಷು ರಾಜ:
ಕರಿಮಣಿ ಮಾಲೀಕನಾದವ ತನ್ನ ಪತ್ನಿಯನ್ನು ರಾಣಿತರ ನೋಡಿಕೊಳ್ಳಬೇಕು, ಅವಳಿಗೆ ಒಂದಿಷ್ಟೂ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಕೆಲವರು ಪತ್ನಿಯನ್ನು ರಾಣಿ ತರ ನೋಡಿಕೊಳ್ಳುತ್ತೇನೆ ಎಂದು ಹೇಳಿ ಸೇವಕಿ ತರ ನೋಡಿಕೊಳ್ಳುತ್ತಾನೆ, ಅಂಥವನು ಕರಿಮಣಿ ಮಾಲೀಕನಾಗಲಾರ.
ವಚನೇಷು ರಾಮ:
ನುಡಿದ ವಚನ ಶ್ರೀರಾಮನಂತಿರಬೇಕು, ಪತ್ನಿಗೆ ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಕೊಟ್ಟ ಮಾತನ್ನು ತಪ್ಪಬಾರದು, ತನ್ನ ಹೆಂಡತಿಗೆ ಸದಾ ರಕ್ಷೆಯನ್ನು ನೀಡಬೇಕು. ಶ್ರೀರಾಮ ಸೀತೆಗಾಗಿ ಮಾಡಿದ ಹೋರಾಟ ರಾಮಾಯಣವಾಗುವುದು, ಪತಿಯಾದವ ತನ್ನ ಪತ್ನಿಯನ್ನು ಎಂಥದ್ದೇ ಪರಿಸ್ಥಿತಿ ಇರಲಿ ಅಲ್ಲಿಂದ ಪಾರು ಮಾಡಬೇಕು, ಅವಳನ್ನು ಖುಷಿಯಾಗಿಡಬೇಕು, ಅವಳಿಗೆ ವಂಚನೆ ಮಾಡಬಾರದು.
ಚತುರಸ್ಯ ಕೃಷ್ಣ:
ತುಂಬಾ ಬುದ್ಧಿವಂತನಾಗಿರಬೇಕು, ಶ್ರೀಕೃಷ್ಣನಂತೆ ತನ್ನ ಕುಟುಂಬವನ್ನು ಕಾಪಾಡಲು ಉಪಾಯ ಬಲ್ಲವನು ಆಗಿರಬೇಕು, ತನ್ನ ಕುಟುಂಬಕ್ಕೆ ಯಾವುದೇ ವಿಪತ್ತು ಬರದಂತೆ ತಡೆದು ಕುಟುಂಬವನ್ನು ರಕ್ಷಿಸುವವನು ಆಗಬೇಕು. ನ್ಯಾಯದ ಪರ ಇರುವವನು ಆಗಿರಬೇಕು, ಸತ್ಯ-ಧರ್ಮವನ್ನು ಗೌರವಿಸಬೇಕು. ಇಂಥ ಪುರುಷ ಪಡೆದವಳು ಅದೃಷ್ಟವಂತೆ.
ಧೈರ್ಯೇಷು ಕರ್ಣ:
ಕರ್ಣ ತನ್ನವರನ್ನೂ ಎಂದಿಗೂ ಬಿಟ್ಟುಕೊಟ್ಟಿಲ್ಲ, ಅದರಂತೆ ಪತಿಯೂ ತನ್ನ ನಂಬಿ ಬಂದವಳನ್ನು ಎಂದಿಗೂ ಬಿಟ್ಟುಕೊಡಬಾರದು, ದುರ್ಯೋದನಿಗೆ ಕರ್ಣ ಸ್ನೇಹಕ್ಕಾಗಿ ತನ್ನ ಸಹೋದರರ ವಿರುದ್ಧ ನಿಲ್ಲುತ್ತಾನೆ, ಅದರಂತೆ ಪತ್ನಿಗೆ ಆಪತ್ತು ಬಂದರೆ ಅವನು ತನ್ನವರ ಎದುರು ನಿಲ್ಲಲು ಕೂಡ ಹಿಂದೆ ಮುಂದೆ ನೋಡಬಾರದು, ಅವಳ ರಕ್ಷಣೆಗೆ ಸದಾ ಸಿದ್ಧನಿರಬೇಕು.
ರೂಪೇಷ ಇಂದ್ರ:
ರೂಪದಲ್ಲಿ ಆತ ಇಂದ್ರನಂತಿರಬೇಕು, ವ್ಯಕ್ತಿ ತನ್ನ ಅಂದಕ್ಕಿಂತ ತನ್ನ ಗುಣದಿಂದ ತುಂಬಾ ಸುಂದರನ್ನಾಗಿ ಕಾಣುತ್ತಾನೆ. ಆದ್ದರಿಂದ ಇಲ್ಲಿ ರೂಪ ಅನ್ನುವುದು ಬಾಹ್ಯ ರೂಪವಲ್ಲ, ಅದು ಆಂತರಿಕ ಸೌಂದರ್ಯ ಆಗಿರಬೇಕು, ಅಂಥ ಗುಣವನ್ನೇ ಪತ್ನಿ ಮೆಚ್ಚಿಕೊಳ್ಳುವುದು.
ಕಾಮೇಷು ಮದನ:
ಮನ್ಮಥನಂತೆ ಇರಬೇಕು ಗಂಡನಾದವ, ಅವಳಿಗೆ ದೈಹಿಕ ಸುಖ ನೀಡಬೇಕು, ತನ್ನ ರಸಮಯ ಮಾತುಗಳಿಂದ ಮಾನಸಿಕ ಹಾಗೂ ದೈಹಿಕ ಸಂತೃಪ್ತಿ ನೀಡಬೇಕು. ಸುಖ ಸಂಸಾರಕ್ಕೆ ಲೈಂಗಿಕ ತೃಪ್ತಿ ಅಡಿಪಾಯ. ಅದ್ದರಿಂದಲೇ ಅವನು ಕಾಮೆಷ ಮದನನಾಗಿರಬೇಕು ಎಂದು ಹೇಳಲಾಗಿದೆ.
ಷಟ್ಧರ್ಮಯುಕ್ತ ಮನಧರ್ಮ ರಮಣ: ಈ 6 ಗುಣಗಳನ್ನು ಹೊಂದಿರುವವನೇ ನಿಜವಾದ ಕರಿಮಣಿ ಮಾಲೀಕ... ಈ ಗುಣಗಳು ಇದ್ದರೆ ಕರಿಮಣಿ ಮಾಲೀಕ ನೀನಲ್ಲ ಅಂತ ಹಾಡಿ....



Click it and Unblock the Notifications
