Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ಮಂತ್ರ ಮಾಂಗಲ್ಯದಲ್ಲಿ ಹೇಳುವ ಮಂತ್ರಗಳಾವುವು? ಈ ಬಗೆಯ ಮದುವೆ ಸಮಾಜಕ್ಕೆ ತುಂಬಾನೇ ಒಳ್ಳೆಯದು
ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಮದುವೆಯ ಬಳಿಕ ಮಂತ್ರ ಮಾಂಗಲ್ಯ ತುಂಬಾನೇ ಸದ್ದು ಮಾಡುತ್ತಿದೆ, ಈ ಬಗೆಯ ಮದುವೆ ಹೊಸ ಟ್ರೆಂಡ್ ಉಂಟು ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ಮದುವೆಯ ಪರಿಕಲ್ಪನೆ ತುಂಬಾನೇ ಸುಂದರವಾಗಿದೆ. ಇದನ್ನು ಮಾಡಿದವರು ರಾಷ್ಟ್ರಕವಿ ಕುವೆಂಪು. ಈ ಮದುವೆ ಮೂಲಕ ವಿಶ್ವ ಮಾನವನಾಗು ಎಂಬ ಸಂದೇಶ ನೀಡಿದ್ದಾರೆ.
'ಓ ನನ್ನ ಚೇತನ ಆಗು ನೀ ಅನಿಕೇತನ' ಎಂದು ಕುವೆಂಪುರವರು ಹೇಳಿದ್ದಾರೆ, ಅಲ್ಲದೆ ಮಂತ್ರ ಮಾಂಗಲ್ಯ ಎಂಬ ಪರಿಕಲ್ಪನೆ ತರುವುದರ ಮೂಲಕ ವಿಶ್ವಮಾನವನನಾಗುವತ್ತ ಹೆಜ್ಜೆ ಹಾಕಬಹುದು ಎಂಬುವುದನ್ನು ತಿಳಿಸಿದ್ದಾರೆ.
ಮಂತ್ರ ಮಾಂಗಲ್ಯ ಎಂದರೆ ಸರಳ ವಿವಾಹ... ಆದರೆ ಈ ವಿವಾಹವನ್ನು ಮಾಡುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಸಾಂಪ್ರದಾಯಕವಾಗಿ ಮಾಡುವ ಮದುವೆಗಳಲ್ಲಿ ಮಂತ್ರಗಳಿರುವಂತೆ ಈ ಮದುವೆಯಲ್ಲಿಯೂ ಮಂತ್ರಗಳಿರುತ್ತದೆ, ಆದರೆ ಆ ಮಂತ್ರಗಳು ಸಂಸ್ಕೃತದಲ್ಲಿ ಇರಲ್ಲ, ಶುದ್ಧ ಕನ್ನಡದಲ್ಲಿದೆ.

ಕುವೆಂಪುರವರು ಮಂತ್ರ ಮಾಂಗಲ್ಯ ಎಂಬ ಚಿಕ್ಕ ಪುಸ್ತಕ ಬರೆದಿದ್ದಾರೆ, ಅದರಲ್ಲಿ ಮೊದಲು ಶ್ಲೋಕಗಳಿದ್ದೆವು, ನಂತರ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಈ ರೀತಿ ವಿವರಿಸಿದ್ದಾರೆ
ಮಂತ್ರ ಮದುವೆ ಮಾಡುವಾಗ ಈ ರೀತಿ ಹೇಳಲಾಗುವುದು
ಶ್ರೀಯುತ ......... ಎಂಬ ವರನೆ
ಶ್ರೀಮತಿ ........... ಎಂಬ ಮದುವೆ
ನಿಮ್ಮಿಬ್ಬರ ವಿವಾಹದ ಈ ಸಂದರ್ಭದಲ್ಲಿ ಈ ಕೆಲವು ಮೂಲಭೂತ ಸ್ವಾತಂತ್ರ್ಯದ ಸಂದೇಶಗಳನ್ನು ತಿಳಿಸಿದ್ದೇವೆ. ದಯವಿಟ್ಟು ನೀವಿಬ್ಬರೂ ಗಮನವಿಟ್ಟು ಕೇಳಿಕೊಳ್ಳಿರಿ.
1. ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲಾ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ.
2. ನೀವು ಇನ್ನು ಈ ಭೂಮಂಡಲದ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ. ಹಾಗೆಯೇ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ.
3. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ
4. ನಿಮ್ಮನ್ನು ಎಲ್ಲ ಆಚಾರ ಸಂಪ್ರದಾಯಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
5. ನಿಮ್ಮನ್ನು ಎಲ್ಲಾ ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ.
6 ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ನೀನು ಬೇರೆ ಸುಮುಹೂರ್ತಗಳನ್ನೂ, ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ.
7. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ, ಮನುಷ್ಯನ ಜೀವಿತಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಿಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು.
8. ನೀವು ಯಾವುದೇ ಮನೆದೇವರು ಅಥವಾ ಕುಲದೇವರುಗಳ ಅಡಿಯಾಳಾಗಿ ಬದುಕಬೇಕಾಗಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು.
9. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ, ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ.
10 ಹೆಂಡತಿಯಾಗಲೀ, ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ, ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ.
11. ಗಂಡ - ಹೆಂಡಿರನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿಯೊಂದೇ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಯಾವ ಶಾಸ್ತ್ರಾಚಾರದ ಪ್ರಕಾರ ಮದುವೆಯಾದರೂ ವ್ಯರ್ಥ.
12. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು ತಿಳಿಸಿದರೆ ದೇವರು ಇಲ್ಲವೆಂದು ಹೇಳಿ.
13. ನಿಮ್ಮ ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ.
14. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿಸಿದರೆ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ.
15. ನಮ್ಮ ಅನುಭವವನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು, ನಿರ್ಭೀತಿಯಿಂದ ವಾಸ್ತವ ಸ್ಥಿತಿಯನ್ನು ನೋಡುವುದು ಸತ್ಯಾನ್ವೇಷಣೆಯ ಮೊದಲನೆಯ ಹಂತ. ಜ್ಞಾನ ಯೋಗದ ಮೊದಲ ಪಾಠ.
16. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವನಿಗೆ ತಮಸ್ಸಿನಿಂದಲೂ, ಅಜ್ಞಾನದಿಂದಲೂ ವಿಮುಕ್ತಿಯೇ ಇಲ್ಲ.
17. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಮಠಾಧಿಪತಿಗಳನ್ನು ಆಚಾರರನ್ನೂ ಜಗದ್ಗುರುಗಳನ್ನೂ ತಿರಸ್ಕರಿಸಿರಿ.
18.ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ತೀರ್ಥಕ್ಷೇತ್ರಗಳನ್ನೂ, ದೇವಸ್ಥಾನಗಳನ್ನೂ ತಿರಸ್ಕರಿಸಿರಿ, ದೇವರ ಹೆಸರಿನಲ್ಲಿ ದರೋಡೆ ಮಾಡುವ ಯಾತ್ರಾಸ್ಥಳಗಳನ್ನು ತಿರಸ್ಕರಿಸಿರಿ.
ವರದಕ್ಷಿಣೆ ಅಥವಾ ವಧುದಕ್ಷಿಣೆಯಂಥ ಯಾವುದೇ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯಲ್ಲೂ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತ್ತಿದ್ದೀರಿ.
ಎಲ್ಲ ಮತಧರ್ಮ, ಕಂದಾಚಾರ, ಅಜ್ಞಾನಗಳಿಂದ ವಿಮುಕ್ತರಾಗಿರುವ ವಧೂವರರೇ, ಮಾನವ ಕೋಟಿಯನ್ನು ನಿಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ ಕರ್ತವ್ಯವನ್ನು ನೀವು ಮಾಡಿದಿರಿ, ಇನ್ನು ನೀವು ಯಾವುದೇ ಧರ್ಮಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಮತಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಶಾಸ್ತ್ರಾಚಾರವನ್ನೂ ಅನುಸರಿಸಬೇಕಾದ ಅಗತ್ಯವಿಲ್ಲ. ಮೇಲೆ ಬೋಧಿಸಿರುವ ಪ್ರತಿಜ್ಞಾವಿಧಿಗಳೇ ನಿಮ್ಮ ಜೀವನದ ದಾರಿದೀಪವಾಗಲಿ. ಮೌಢ್ಯ, ಅಜ್ಞಾನ, ಅಂಧಕಾರಗಳ ವಿರುದ್ಧ ಭಾರತೀಯರಾದ ನಾವೆಲ್ಲ ಹೂಡಿರುವ ಈ ಮಹಾ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಾವು ವಿನಂತಿಸಿಕೊಳ್ಳುತ್ತೇವೆ. ನೀವು ಇಲ್ಲಿ ಈ ದಿನದಿಂದ ದಂಪತಿಗಳೆಂದು ನಾವು ಘೋಷಿಸುತ್ತೇವೆ.
ವರನ ಸಹಿ:
ವಧುವಿನ ಸಹಿ:
ಸಾಕ್ಷಿಗಳು:
ವರನ ತಂದೆ - ತಾಯಿ ಸಹಿ:
ವಧುವಿನ ತಂದೆ - ತಾಯಿ ಸಹಿ:
ಬಂಧು, ಬಳಗ, ಸ್ನೇಹಿತರ ಸಹಿ:
ಮಾಂಗಲ್ಯ ಮದುವೆ ಮಾಡುವವರು ಈ ನಿಯಮಗಳನ್ನು ಆಚರಿಸಲೇಬೇಕು
* ಮದುವೆ ತುಂಬಾ ಸರಳವಾಗಿ ಮಾಡಬೇಕು
* ಯಾವುದೇ ರೀತಿಯ ವರದಕ್ಷಿಣೆ ಪಡೆಯಬಾರದು. ಮದುವೆಗೆ ವಧುವಿನ ಮನೆಯವರು ವರನಿಗೆ ಯಾವುದೇ ಉಡುಗೊರೆ ಕೂಡ ನೀಡಬಾರದು
* ಗಂಡು- ಹೆಣ್ಣಿನ ಕುಟುಂಬದವರು ಸೇರಿ 200 ಜನ ಮೀರಬಾರದು
* ನವ ಜೋಡಿಗೆ ಅತಿಥಿಗಳು ಯಾವುದೇ ಉಡುಗೊರೆ ನೀಡುವಂತಿಲ್ಲ
* ಕೆಲ ಮದುವೆಯಲ್ಲಿ ತಾಳಿ ಕಟ್ಟುತ್ತಾರೆ, ಆದರೆ ಇನ್ನು ಕೆಲವು ಮದುವೆಯಲ್ಲಿ ಹಾರವನ್ನು ಮಾತ್ರ ಬದಲಾಯಿಸುತ್ತಾರೆ.
* ಮಾಂಗಲ್ಯ ಕಟ್ಟಲು ರಾಹುಕಾಲ, ಗುಳಿಗಕಾಲ ಅಂತ ನೋಡುವುದಿಲ್ಲ
* ವೇದಿಕೆ ಮೇಲೆ ವದೂ-ವರ, ಅವರ ಪೋಷಕರು ಹಾಗೂ ಮಂತ್ರ ಬೋಧಿಸುವವರನ್ನು ಬಿಟ್ಟು ಮತ್ತಾರು ಇರಬಾರದು.
* ಮಾಂಗಲ್ಯ ಪ್ರತಿಜ್ಞಾ ವಿಧಿಯನ್ನು ವಧು ವರರು ಓದಿ ನಂತರ ಸಹಿ ಹಾಕಬೇಕು.
* ನಂತರ ಸಬ್ ರಿಜಿಸ್ಟಾರ್ ಆಫೀಸ್‌ನಲ್ಲಿ ನೊಂದಾಯಿಸಬೇಕು.
ಮೊತ್ತ ಮೊದಲ ಮಂತ್ರ ಮಾಂಗಲ್ಯ ಮದುವೆ'
ಕುವೆಂಪುರವರು ಮೊತ್ತ ಮೊದಲ ಮಂತ್ರ ಮಾಂಗಲ್ಯ ಮದುವೆಯನ್ನು ತಮ್ಮ ಮಗ ತೇಜಸ್ವಿನಿಯವರಿಗೆ ಮಾಡಿದರು.



Click it and Unblock the Notifications











