Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ದಂಪತಿಗಳು ಚುಂಬಿಸುವುದನ್ನು ನಿಲ್ಲಿಸಿದರೆ ಏನಾಗುತ್ತದೆ? ಸಂಬಂಧದಲ್ಲಿ ಆಗುವ ಬದಲಾವಣೆ ಏನು ಗೊತ್ತಾ?
ಒಂದು ಚುಂಬನವು ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತೆ. ಚುಂಬನದಿಂದ ಹಲವು ಆರೋಗ್ಯಕರ ಲಾಭಗಳಿವೆ ಎಂಬುದನ್ನು ನಾವು ತಿಳಿದಿದ್ದೇವೆ. ಚುಂಬನ ಆತ್ಮೀಯತೆ, ವಾತ್ಸಾಲ್ಯವನ್ನು ಸೂಚಿಸುತ್ತದೆ. ಇದು ಸಂಬಂಧದಲ್ಲಿರುವ ಆಳ, ಪ್ರೀತಿ, ಒಬ್ಬರಿಗೊಬ್ಬರು ನೀಡುವ ಮಮತೆಯ ಪ್ರತೀಕವಾಗಿರುತ್ತೆ. ಇನ್ನು ನೀವು ದಂಪತಿಗಳ ನಡುವೆ ಈ ಪ್ರೀತಿ ಇದ್ದರೆ ಸಂಬಂಧಗಳು ಮತ್ತಷ್ಟು ಬಿಗಿಯಾಗುತ್ತವೆ, ಏನೆ ಮನಸ್ಥಾಪಗಳು ಇದ್ದರೂ ಸರಿ ಹೋಗುತ್ತದೆ ಎಂದು ನಂಬಲಾಗಿದೆ.
ಆದ್ರೆ ಪ್ರಣಯ ಮತ್ತು ವಿವಾಹಿತ ಸಂಬಂಧದಲ್ಲಿರುವವರು ಆಗಾಗ ಚುಂಬಿಸುತ್ತಿರಬೇಕು ಎಂಬುದು ಅಲಿಖಿತ ನಿಯಮ. ಮುತ್ತು ನೀಡುವುದು ಪ್ರೀತಿಯ ಒಂದು ಸಂಕೇತವೂ ಹೌದು. ಅನ್ಯೋನ್ಯತೆ ವ್ಯಕ್ತಪಡಿಸುವ ಒಂದು ಪ್ರಣಯ ಕ್ರಿಯೆ ಅಂತಲೂ ಹೇಳಬಹುದು. ದಂಪತಿಯ ನಡುವೆ ಈ ಅನ್ಯೋನ್ಯತೆ ಜೀವಂತವಾಗಿ ಇರುವವರೆಗೂ ಸಂಬಂಧ ಚೆನ್ನಾಗಿರುತ್ತದೆ.

ಆದ್ರೆ ಒಂದು ವೇಳೆ ದಂಪತಿಗಳು ಚುಂಬಿಸುವುದು ನಿಲ್ಲಿಸಿದರೆ ಅಥವಾ ಬಿಟ್ಟು ಬಿಟ್ಟರೆ ಅದರ ಪರಿಣಾಮ ಏನಾಗುತ್ತದೆ. ಇದರಿಂದ ಸಂಬಂಧದಲ್ಲಿ ಯಾವ ರೀತಿಯ ಅಂಶಗಳಿಗೆ ಕಾರಣವಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದಂಪತಿಗಳು ಚುಂಬಿಸುವುದನ್ನು ನಿಲ್ಲಿಸಿದಾಗ ಉಂಟಾಗುವಂತಹ ಮೊದಲ ಪರಿಣಾಮ ಹಾಗೂ ಅತ್ಯಂತ ಕೆಟ್ಟ ಪರಿಣಾಮ ಎಂದರೆ ಇಬ್ಬರ ನಡುವೆ ಬೆಳೆಯುವ ಭಾವನಾತ್ಮಕ ಅಂತರ. ಚುಂಬನವು ಮನಸ್ಸಿಗೂ ಸಂಬಂಧಿಸಿದ ವಿಚಾರ ಆಗಿರುವುದರಿಂದ ಇಬ್ಬರ ನಡುವಿನ ಭಾವನಾತ್ಮಕ ಸಂಬಂಧದಲ್ಲಿ ಎರು ಪೇರಾಗುವುದು ಇಲ್ಲವೆ ಅನ್ಯೋನ್ಯತೆ ಕಡಿಮೆಯಾಗುವುದನ್ನು ನಾವು ನೋಡಬಹುದು.
ಚುಂಬಿಸುವುದನ್ನು ನಿಲ್ಲಿಸುವ ಜೋಡಿಯು ಅವರ ನಡುವಿನ ಭಾವನಾತ್ಮಕ ಅನ್ಯೋನ್ಯತೆಯು ಕ್ಷೀಣಿಸುತ್ತಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಪರಿಣಾಮವಾಗಿ, ಅವುಗಳ ನಡುವಿನ ಅಂತರವು ಹೆಚ್ಚಾಗುತ್ತದೆ. ಹಾಗೆ ಇಬ್ಬರ ನಡುವೆ ಸಂಬಂಧದಲ್ಲಿ ಯಾವುದಾದರು ಕಾರಣಕ್ಕೆ ಅಸಮಧಾನ ಇರಬಹುದು. ಇದು ತಪ್ಪು ಗ್ರಹಿಕೆಗೂ ಕಾರಣವಾಗಬಹುದು.
ಪ್ರಣಯ ಸಂಬಂಧದಲ್ಲಿ ದೈಹಿಕ ಅನ್ಯೋನ್ಯತೆಗೆ ಚುಂಬನವು ಆರಂಭಿಕ ಹಂತವಾಗಿದೆ. ಇದು ದಂಪತಿಗಳ ಉತ್ಸಾಹ ಮತ್ತು ಬಯಕೆಯನ್ನು ಉತ್ತೇಜಿಸುತ್ತದೆ. ಆದ್ರೆ ದಾಂಪತ್ಯದಲ್ಲಿ ಚುಂಬನ ಇರದೇ ಇದ್ದರೆ ಈ ಸಂಬಂಧ ಹೆಚ್ಚು ಪ್ರೀತಿ, ಅನ್ಯೋನ್ಯತೆಯಿಂದ ದೂರ ಸರಿಯುತ್ತಿದೆ ಎಂದರ್ಥವಂತೆ. ಚುಂಬನವು ಪ್ರೀತಿಯ ಅಭಿವ್ಯಕ್ತಿ ಮಾತ್ರವಲ್ಲದೆ ಸಂಬಂಧದಲ್ಲಿ ಸುಂದರವಾದ ಸಂವಹನ ಸಾಧನವಾಗಿದೆ.
ಸಂಬಂಧದಲ್ಲಿ ಸಂವಹನವು ಮುಖ್ಯವಾಗಿದೆ ಚುಂಬನದಂತಹ ಕ್ರಿಯೆಗಳು ಕೂಡಾ ದಾಂಪತ್ಯದಲ್ಲಿ ಮುಖ್ಯ. ಒಮ್ಮೆ ನೀವು ಈ ಚುಂಬನ ನಿಲ್ಲಿಸಿದರೆ ಇಬ್ಬರ ನಡುವಿನ ಮಧುರ ಸಂವಹನ ಕ್ರಿಯೆಯ ಮೇಲೂ ಪರಿಣಾಮ ಬೀರಲಿದೆಯಂತೆ. ಮಧುರ ಮಾತುಕಥೆಗಳು ತುಂಬಿರುತ್ತಿದ್ದ ಕಡೆಗಳಲ್ಲಿ ಈಗ ಸಿಟ್ಟು, ಕೋಪ ಉಂಟಾಗುತ್ತಿರಬಹುದು. ಇದರಲ್ಲಿ ಹಲವು ಮನಸ್ಥಾಪ ಇರಬಹುದು.
ಚುಂಬನವು ಒಬ್ಬರ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ಮಾರ್ಗವಲ್ಲ, ಆದರೆ ಇದು ಸ್ವಾಭಿಮಾನದ ಪ್ರತೀಕವೂ ಆಗಿರುತ್ತದೆ. ದಂಪತಿ ಚುಂಬನವನ್ನು ನಿಲ್ಲಿಸಿದ್ದರೆ ಅವರ ಸ್ವಾಭಿಮಾನ ಹಾಗು ಆತ್ಮವಿಶ್ವಾಸದ ಮೇಲೆಯು ಪರಿಣಾಮ ಬೀರಲಿದೆಯಂತೆ. ಹಾಗೆ ನಿಮ್ಮಿಬ್ಬರ ನಡುವಿನ ಈ ಸಮಸ್ಯೆ ಮುಂದೆ ಮನೆಯ ಎಲ್ಲ ಸದಸ್ಯರೊಂದಿಗಿನ ಸಂಬಂಧದ ಮೇಲೆಯೂ ಪರಿಣಾಮ ಬೀರಬಹುದಂತೆ.
ಕೆಲವು ಸಂಬಂಧದಲ್ಲಿ ಚುಂಬನ ನಡೆದಿರುವುದೇ ಇಲ್ಲ ಎಂದುಕೊಳ್ಳಿ. ಈ ಸಂಬಂಧದ ಆರಂಭದಿಂದಲೂ ಸಂತೋಷ ಕಾಣಲಾಗುವುದಿಲ್ಲ. ಎಲ್ಲಿ ಸಂಬಂಧದಲ್ಲಿ ಅರ್ಥವಿರುತ್ತದೆಯೋ, ಅನ್ಯೋನ್ಯತೆ, ಪ್ರೀತಿ ಇರಲಿದೆಯೋ ಅಲ್ಲಿ ಚುಂಬನದಂತಹ ಸಾಮಾನ್ಯ ಅಫೆಕ್ಷನ್ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ.



Click it and Unblock the Notifications