Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಲಕ್ಷಣಗಳು ನಿಮ್ಮ ಪತಿಗೆ ನಿಮ್ಮನ್ನು ಕಂಡರೆ ಆಗೋದಿಲ್ಲ ಅನ್ನೋದನ್ನು ಸೂಚಿಸುತ್ತದೆ!
ಎಲ್ಲರ ಸಂಬಂಧವೂ ಕಡೆವರೆಗೂ ಚೆನ್ನಾಗಿ ಇರಬೇಕೆಂದೇನಿಲ್ಲ. ಸಂಬಂಧದಲ್ಲಿ ಪ್ರೀತಿ ಹೇಗಿರುತ್ತದೋ ಅದೇ ರೀತಿ ಬಿರುಕು ಕಾಣಿಸಿಕೊಳ್ಳುವುದು ಕೂಡ ಸಹಜ. ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಇದ್ದ ಆ ಉತ್ಸಾಹ, ಪ್ರೀತಿ ಸಂಬಂಧ ಹಳೆಯದಾಗುತ್ತಿದ್ದಂತೆ ಕಳೆದು ಹೋಗುತ್ತದೆ. ಆರಂಭದಲ್ಲಿ ತೋರುತ್ತಿದ್ದ ಪ್ರೀತಿಯನ್ನು ಪತಿ ಈಗೀಗ ನಿಮಗೆ ತೋರಿಸೋದಿಲ್ಲ. ಹೆಜ್ಜೆ ಹೆಜ್ಜೆಗೂ ಜಗಳವಾಡುತ್ತಾರೆ. ನಿಮ್ಮ ಮೇಲೆ ಅಸಮಾಧಾನ ತೋರುತ್ತಾರೆ. ಅಷ್ಟಕ್ಕು ಪತಿ ನಿಮ್ಮ ಮೇಲೆ ಅಸಮಾಧಾನ ಪಟ್ಟುಕೊಂಡಿದ್ದಾರೆಂದು ಗೊತ್ತಾಗೋದು ಹೇಗೆ? ಅದರ ಲಕ್ಷಣಗಳು ಏನು ಅನ್ನೋದನ್ನು ತಿಳಿಯೋಣ.
1. ಪ್ರತಿ ವಿಚಾರಕ್ಕೂ ನಿಮ್ಮೊಂದಿಗೆ ಜಗಳವಾಡುತ್ತಾರೆ
ಸಂಗಾತಿಯನ್ನು ಕಂಡರೆ ಇಷ್ಟವಿಲ್ಲ ಎಂದಾಗ ಮಾತು ಮಾತಿಗೂ ಸಿಡುಕೋದು ಸಹಜ. ನಿಮ್ಮ ಪತಿ ಕೂಡ ಹೀಗೆ ಮಾಡುತ್ತಿದ್ದಾರಾ? ನೀವು ನಿಂತರೂ, ಕೂತರೂ ತಪ್ಪು ಎಂದು ಹೇಳುತ್ತಾರಾ? ಸಣ್ಣ- ಪುಟ್ಟ ವಿಚಾರಕ್ಕೂ ಜಗಳವಾಡುತ್ತಾರಾ? ಅಷ್ಟೇ ಯಾಕೆ ನೀವು ಸಮಾಧಾನದಲ್ಲಿ ಮಾತನಾಡಿದರೂ ಕೂಡ ಅವರ ಜಗಳ ತೆಗೆಯುತ್ತಿದ್ದಾರಾ? ಹಾಗಾದ್ರೆ ಖಂಡಿತ ಅವರು ನಿಮ್ಮ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದರ್ಥ.

2. ಅವರು ನಿಮ್ಮ ಜೊತೆಗೆ ಸಮಯ ಕಳೆಯೋದಿಲ್ಲ
ನಿಮ್ಮ ಪತಿ ಆದಷ್ಟು ನಿಮ್ಮನ್ನು ನಿರ್ಲಕ್ಷಿಸುತ್ತಾರೆ. ಒಂದು ಪಕ್ಷ ಕೆಲಸದ ಬಿಡುವಿನಲ್ಲಿ ಸಮಯ ಸಿಕ್ಕರೂ ಕೂಡ ಅವರಿಗೆ ಆ ಸಮಯವನ್ನು ನಿಮ್ಮೊಂದಿಗೆ ಕಳೆಯೋದಕ್ಕೆ ಇಷ್ಟ ಇರೋದಿಲ್ಲ. ನಿಮ್ಮ ಜೊತೆಗೆ ಖುಷಿಯ ಕ್ಷಣಗಳನ್ನು ಕಳೆಯೋದೇ ಅವರಿಗೆ ಬೇಕಾಗಿರೋದಿಲ್ಲ. ಒಟ್ಟಿನಲ್ಲಿ ನಿಮ್ಮ ಸಂಘ ಬೇಡವೆಂದು ಅವರು ನಿರ್ಧರಿಸಿರುತ್ತಾರೆ.
3. ನಿಮ್ಮೊಂದಿಗೆ ಜೊತೆಗೆ ವಾತ್ಸಲ್ಯ ತೋರುವುದಿಲ್ಲ
ಗಂಡ- ಹೆಂಡತಿ ಎಂದ ಮೇಲೆ ಅವರ ಮಧ್ಯದಲ್ಲಿ ಪ್ರೀತಿ ವಾತ್ಸಲ್ಯ ಇದ್ದೇ ಇರುತ್ತದೆ. ದೈಹಿಕ ಸಂಪರ್ಕದ ಹೊರತಾಗಿ ಒಟ್ಟಿಗೆ ಇದ್ದಾಗ ಅವರ ಮಧ್ಯೆ ಬೇರೆಯದ್ದೇ ರೀತಿಯ ಪ್ರೀತಿ ಇರುತ್ತದೆ. ಆದರೆ ನಿಮ್ಮ ಗಂಡ ಅಂತಹ ಯಾವುದೇ ಪ್ರೀತಿಯನ್ನು ತೋರುವುದಿಲ್ಲ. ನೀವು ಅವರ ಹತ್ತಿರ ಹೋದರೆ ಅವರು ದೂರ ಹೋಗುತ್ತಾರೆ. ನಿಮ್ಮ ಜೊತೆಗೆ ಅಂತಹ ಯಾವುದೇ ಸಂಬಂಧ ಅವರಿಗೆ ಬೇಕಾಗಿರೋದಿಲ್ಲ.
4. ನಿಮ್ಮ ಹುಟ್ಟು ಹಬ್ಬವನ್ನು ಆಚರಿಸುವ ಆಸಕ್ತಿ ತೋರುವುದಿಲ್ಲ
ನಿಮ್ಮ ಗಂಡನಿಗೆ ನಿಮ್ಮಲ್ಲಿ ಆಸಕ್ತಿ ಇಲ್ಲ ಅಂತಾದರೆ ಅವರು ನಿಮ್ಮ ಹುಟ್ಟು ಹಬ್ಬವಾಗಲಿ, ಮದುವೆಯ ವಾರ್ಷಿಕೋತ್ಸದ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳೋದಿಲ್ಲ. ಕೆಲವೊಂದು ಸಲ ನಮಗೆ ಈ ರೀತಿಯ ಮುಖ್ಯವಾದ ದಿನಗಳು ಮರೆತು ಹೋಗುವುದು ಸಹಜ. ಆದರೆ ನಿಮ್ಮ ಪತಿ ಯಾವಾಗಲೂ ಈ ಬಗ್ಗೆ ಕಾಳಜಿ ವಹಿಸೋದಿಲ್ಲ. ಅವರಷ್ಟಕ್ಕೆ ಅವರು ಇದ್ದು ಬಿಡುತ್ತಾರೆ.
5. ಸಂಬಂಧ ಉಳಿಸಿಕೊಳ್ಳೋದಕ್ಕೆ ಅವರ ಪ್ರಯತ್ನ ಶೂನ್ಯ
ಗಂಡ- ಹೆಂತಿ ಎಂದ ಮೇಲೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸಹಜ. ಆದರೆ ಸಣ್ಣ-ಪುಟ್ಟ ವಿಚಾರಗಳಿಗಾಗಿ ದೂರಾಗೋದು ಸರಿಯಲ್ಲ. ಸಂಬಂಧವನ್ನು ಹೇಗಾದರೂ ಸರಿ ಮಾಡಲೇಬೇಕೆಂದು ನೀವು ಸಾಕಷ್ಟ ಶ್ರಮ ಹಾಕುತ್ತಿರುತ್ತೀರಿ. ಆದರೆ ನಿಮ್ಮ ಪತಿ ಈ ಬಗ್ಗೆ ಕಾಳಜಿ ವಹಿಸೋದೇ ಇಲ್ಲ. ಅವರಷ್ಟಕ್ಕೆ ಅವರು ಇದ್ದು ಬಿಡುತ್ತಾರೆ. ಸಂಬಂಧ ಮುರಿದರೆ ಮುರಿದು ಬೀಳಲಿ ಅನ್ನೋ ಅಸಡ್ಡೆಯನ್ನು ಅವರು ತೋರುತ್ತಾರೆ.
6. ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಾರೆ
ನಿಮ್ಮ ಪತಿ ನಿಮ್ಮ ದುಃಖ, ನೋವು ಹೀಗೆ ಯಾವುದೇ ಭಾವನೆಗಳಿಗೆ ಗೌರವ ನೀಡುವುದಿಲ್ಲ. ಬದಲಾಗಿ ನಿಮ್ಮ ಮನಸ್ಸಿಗೆ ಮತ್ತಷ್ಟು ನೋವು ಮಾಡುತ್ತಾರೆ. ಅಷ್ಟೇ ಅಲ್ಲ, ನಿಮ್ಮ ಸ್ವಲ್ಪ ತಪ್ಪಾದರೂ ಕೂಡ ಅವಾಚ್ಯ ಪದಗಳಿಂದ ನಿಮ್ಮನ್ನು ನಿಂದಿಸಿ ನಿಮಗೆ ಹೊಡೆಯೋದಕ್ಕೆ ಮುಂದಾಗುತ್ತಾರೆ. ಇನ್ನೂ ಕೆಲವು ಪತಿಯರು ಪತ್ನಿಯನ್ನು ತಳಿಸುತ್ತಾರೆ.
7. ನಿಮಗೆ ಗೌರವ ನೀಡುವುದಿಲ್ಲ
ಪ್ರೀತಿ ಮತ್ತು ನಂಬಿಕೆಯ ಹೊರತಾಗಿ ಸಂಬಂಧದಲ್ಲಿ ಪರಸ್ಪರ ಗೌರವ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಪತಿ ನಿಮಗೆ ಗೌರವ ಕೊಟ್ಟು ಮಾತನಾಡದಿದ್ದರೆ ಅಥವಾ ಇತರರ ಮುಂದೆ ನಿಮ್ಮನ್ನು ನಿಂದಿಸುತ್ತಿದ್ದರೆ ಖಂಡಿತ ನಿಮ್ಮ ಸಂಬಂಧದಲ್ಲಿ ಏನೋ ಸರಿಯಿಲ್ಲ ಎಂದರ್ಥ.
ನಿಮ್ಮ ಸಂಬಂಧದಲ್ಲಿ ಈ ರೀತಿಯ ನ್ಯೂನ್ಯತೆಗಳು ಇದ್ದರೆ ಖಂಡಿತ ನಿಮ್ಮ ಪತಿ ನಿಮ್ಮ ಮೇಲೆ ಆಸಕ್ತಿ ತೋರುತ್ತಿಲ್ಲ ಎಂದರ್ಥ. ಈಗಲೇ ಮಾತನಾಡಿ ಎಲ್ಲವನ್ನೂ ಸರಿ ಮಾಡೋದಕ್ಕೆ ಪ್ರಯತ್ನಿಸಿ.



Click it and Unblock the Notifications

