Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಮದುವೆಯಾಗಿ ಹದಿನೈದು ವರ್ಷದ ಬಳಿಕ ನಮ್ಮಲ್ಲಿ ಚಿಗುರೊಡೆಯಿತು ಪ್ರೀತಿ ಇದೀಗ ಹೆಮ್ಮರವಾಗಿದೆ!
ನಾನು ರಶ್ಮಿ, ನನ್ನವರ ಹೆಸರು ಆನಂದ. ಅವರನ್ನು ಮದುವೆಗೆ ಮೊದಲೇ ಗೊತ್ತಿತ್ತು, ಆದರೆ ಅವರ ಜೊತೆ ಮಾತನಾಡಿರಲಿಲ್ಲ, ಮನೆಯವರು ಆ ಹುಡುಗನ ಜೊತೆ ನಿನ್ನ ಮದುವೆ ಮಾಡುತ್ತಿದ್ದೇನೆ ಎಂದಾಗ ಒಂಥರಾ ಭಯ, ಒಂದು ಕಡೆ ಮದುವೆಯ ಖುಷಿ.
ಮದುವೆಯಾಗುವಾಗ ತುಂಬಾ ಕನಸುಗಳಿದ್ದೆವು ಆದರೆ ಆ ಕನಸುಗಳನ್ನು ಅವರ ಬಳಿ ಹೇಳಿಕೊಳ್ಳುವ ಧೈರ್ಯ ಮಾಡಲಿಲ್ಲ, ತಿಂಗಳುಗಳು ಉರುಳಿತು, ಮದುವೆ ಬದುಕು ಎಂಬುವುದು ತುಂಬಾನೇ ಯಾಂತ್ರಿಕ ಅನಿಸಲಾರಂಭಿಸಿತು, ಗಂಡ-ಹೆಂಡತಿ ಸಂಬಂಧ ಬೆಡ್‌ರೂಂನಲ್ಲಿ ಮಾತ್ರ, ದಿನವಿಡೀ ನಾವು ಪರಸ್ಪರ ಮಾತನಾಡುತ್ತಿರಲಿಲ್ಲ, ಮುಖದಲ್ಲಿ ಒಂದು ನಗು ಇರುತ್ತಿರಲಿಲ್ಲ, ಎರಡು ಮಕ್ಕಳಾಯ್ತು...

ಅವರು ಕೆಲಸ ಅಂತ ಬ್ಯುಸಿಯಾದರು, ನಾನು ಮನೆ-ಕೆಲಸ, ಮಕ್ಕಳು ಅಂತ ಬ್ಯುಸಿಯಾದೆ, ಎಷ್ಟೋ ಬಾರಿ ಇಂಥದ್ದೊಂದು ಮದುವೆ ಬದುಕು ಬೇಕಾ ಎಂದು ಅನಿಸುತ್ತಿತ್ತು.... ಈ ಬಂಧವನ್ನು ಕಿತ್ತೆಸೆದು ದೂರ ಓಡಿ ಬಿಡಬೇಕು ಅನಿಸುತ್ತಿತ್ತು. ಒಂದು ಒಳ್ಳೆಯ ಮಾತಿಲ್ಲ, ನಮ್ಮಿಬ್ಬರ ನಡುವೆ ಇದ್ದದ್ದು ದಡ್ಡ ಮೌನ, ಮಾತೆಂದರೆ ಅದು ಜಗಳ ಅಷ್ಟೇ...
ನನ್ನ ಬದುಕು ಇಷ್ಟೇ... aಎಂದು ಎಷ್ಟೋ ಬಾರಿ ಕಣ್ಣೀರು ಹಾಕಿದ್ದೆ
ದಿನಾ ಸಾಯುವವರೆಗೆ ಅಳುವವರು ಯಾರು ಎಂಭಂತಾಯ್ತು ನನ್ನ ಸ್ಥಿತಿ, ದಿನಾ ಒಂದೇ ಗೋಳಿನ ಬದುಕು, ದಾಂಪತ್ಯ ಎಂದರೆ ಹೀಗೆನಾ ಅಥವಾ ನನ್ನ ಸಂಸಾರ ಮಾತ್ರ ಹೀಗೆನಾ ಎಂದು ಎಷ್ಟೋ ಬಾರಿ ಅನಿಸಿದ್ದು ಇದೆ...
ಮರುಭೂಮಿಯಲ್ಲಿ ಓಯಸಿಸ್‌ನಂತೆ ಚಿಗುರಿದ ಪ್ರೇಮ
ವರ್ಷಗಳು ಉರುಳುತ್ತಿತ್ತು, ಮಕ್ಕಳಿಗೋಸ್ಕರ ಆ ಬದುಕನ್ನು ಸಹಿಸಿಕೊಂಡಿದ್ದೆ, ಆದರೆ ನಾಮ್ಮಿಬ್ಬರಲ್ಲಿ ಪ್ರೀತಿ ಮೂಡುತ್ತೆ ಎಂದನಿಸಿರಲಿಲ್ಲ ಅಥವಾ ಪ್ರೀತಿ ವ್ಯಕ್ತಪಡಿಸಲು ಗೊತ್ತಿಲ್ಲದೆ ಇಷ್ಟು ವರ್ಷ ಕಳೆದೆವೋ ಗೊತ್ತಿಲ್ಲ, ಒಟ್ಟಿನಲ್ಲಿ ಮರುಭೂಮಿಯಂತೆಯಿದ್ದ ನನ್ನ ಬದುಕಿನಲ್ಲಿ ಮತ್ತೆ ಪ್ರೀತಿ ಚಿಗುರೊಡೆಯಿತು, ಮದುವೆಯಾಗಿ ವರ್ಷಗಳೇ ಕಳೆದ ಮೇಲೆ ಒಬ್ಬರನ್ನೊಬ್ಬರು ತುಂಬಾನೇ ಇಷ್ಟಪಡಲಾರಂಭಿಸಿದೆವು...
ಪ್ರೀತಿ ಇತ್ತು, ಆದರೆ ಅದನ್ನು ನಾವಿಬ್ಬರೂ ಹೇಳಿರಲಿಲ್ಲ
ಇಷ್ಟು ವರ್ಷಗಳಲ್ಲಿ ಕಂಡುಕೊಂಡ ಸತ್ಯ ಅಂದರೆ ಅವರಿಗೂ ನಾನು ಅಂದರೆ ಇಷ್ಟವಿತ್ತು, ಅವರು ಪ್ರೀತಿಯನ್ನು ವ್ಯಕ್ತಪಡಿಸುತ್ತಿರಲಿಲ್ಲ, ಅವರ ವರ್ತನೆ ನೋಡಿ ನಾನೂ ಪ್ರೀತಿ ಹೇಳುತ್ತಿರಲಿಲ್ಲ, ಹೀಗಾಗಿ ಇಷ್ಟು ವರ್ಷಗಳು ನಮ್ಮ ಬದುಕಿನ ಸವಿಯನ್ನು ನಾವೇ ಕಳೆದುಕೊಂಡೆವು.... ಅವರ ಕೆಲಸ--- ಕೆಲಸ ಅಮತ ಓಡುವಾಗ ಅವರು ಓಡುತ್ತಿರುವುದು ನನಗೆ ನನ್ನ ಮಕ್ಕಳಿಗಾಗಿ ಎಂದು ಯೋಚಿಸಲೇ ಇಲ್ಲ, ಅವರು ಅಷ್ಟೇ ನಾನು ಇಷ್ಟೆಲ್ಲಾ ಕಷ್ಟಪಟ್ಟು ಮನೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದರೆ ಅವರ ಮೇಲಿರುವ ಪ್ರೀತಿ ಎಂದು ತಿಳಿಯಲೇ ಇಲ್ಲ... ಏನೋ ಒಂದು ದಾಂಪತ್ಯ ಎಂಬಂತೆ ಕಳೆದೆವು...
ಪ್ರೀತಿಯ ಸೆಳೆತ ಅರಿವಾದ ಕ್ಷಣ
ಅವರಿಗೆ ನನ್ನ ಮೇಲೆ ಬೆಟ್ಟದಷ್ಟು ಪ್ರೀತಿಯಿದೆ ಎಂದು ಅರಿತಿದ್ದು ಅಂದು ನನಗೆ ಆರೋಗ್ಯ ಕೈ ಕೊಟ್ಟಾಗ, ಆ ಸಮಸ್ಯೆ ನನ್ನ ಆರೋಗ್ಯ ಹಿಂಡಿ ಹಿಪ್ಪೆ ಮಾಡಿತು, ಆವಾಗ ಅವರ ಒದ್ದಾಟ ನೋಡಿ ಈ ಮನುಷ್ಯನಿಗೆ ನನ್ನ ಮೇಲೆ ಇಷ್ಟೊಂದು ಪ್ರೀತಿ ಇತ್ತೇ ಎಂದನಿಸಿತ್ತು, ಆದರೆ ಅವರಿಗೆ ಪ್ರೀತಿ ಇತ್ತು ವ್ಯಕ್ತಪಡಿಸಲು ಗೊತ್ತಿರಲಿಲ್ಲ ಎಂದು ಅರಿತಿದ್ದು ಅಂದೇ... ಆ ಕ್ಷಣದಿಂದ ಅವರ ಮೇಲಿದ್ದ ದ್ವೇಷವೆಲ್ಲಾ ಕರಗಿ ಪ್ರೀತಿಯಾಗಿ ಬದಲಾಯ್ತು....
ಮಕ್ಕಳು ಓದು, ಉದ್ಯೋಗ ಅಂತ ಅವರ ದಾರಿ ನೋಡಿಕೊಂಡಾದ ನಾವು ಮತ್ತಷ್ಟು ಹತ್ತಿರವಾದೆವು
ಈಗ ಮಕ್ಕಳು ಬೆಳೆದು ಅವರ ಪಾಡು ನೋಡಿಕೊಳ್ಳುತ್ತಿದ್ದಾರೆ, ನಾವಿಬ್ಬರು ಒಬ್ಬರನ್ನೊಬ್ಬರು ಒಂದು ಕ್ಷಣ ಬಿಟ್ಟಿರಲು ಸಾಧ್ಯವಿಲ್ಲ ಎಂಬಷ್ಟು ನಮ್ಮ ಬಂಧ ಗಟ್ಟಿಯಾಗಿದೆ. ಮಕ್ಕಳು ಅಪ್ಪ-ಅಮ್ಮ ಈಗ ರೊಮ್ಯಾಂಟಿಕ್ ಜೋಡಿಗಳಂತೆ ಆಡುತ್ತೀರಿ ಎಂದು ರೇಗಿಸುತ್ತಾರೆ, ನಮ್ಮಿಬ್ಬರ ಪ್ರೀತಿ ನೋಡಿ ಅವರಿಗೂ ತುಂಬಾನೇ ಖುಷಿ... ಮಕ್ಕಳಿಗೆ ಒಂದು ಕಿವಿ ಮಾತು ಹೇಳಿದ್ದೇನೆ ನಮ್ಮಂತೆ ನೀವು ಪ್ರೀತಿ ವ್ಯಕ್ತಪಡಿಸದೆ ಇರಬೇಡಿ.... ಹೌದು ನಾವು ಒಬ್ಬರನ್ನೊಬ್ಬರು ಎಷ್ಟು ಇಷ್ಟಪಡುತ್ತಿದ್ದೇವೆ ಎಂದು ಅಂದೇ ಹೇಳಿದ್ದರೆ ನಮ್ಮ ಬದುಕು ಎಷ್ಟೊಂದು ಸುಂದರವಾಗಿತ್ತು, ನಾವೇ ಆ ದಿನಗಳನ್ನು ನರಕ ಮಾಡಿಕೊಂಡೆವು ಅನಿಸುತ್ತೆ.... ಪ್ರೀತಿ ಇರುವುದು ಮನಸ್ಸಿನಲ್ಲಿ ಬಚ್ಚಿಡುವುದಕ್ಕೆ ಅಲ್ಲ, ವ್ಯಕ್ತಪಡಿಸುವುದಕ್ಕೆ ನೀವೇನು ಅಂತೀರಿ?



Click it and Unblock the Notifications
