Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 5 ವಿಚಾರಗಳು ಗಂಡನ ಕಿವಿಗೆ ಬೀಳದಂತೆ ನೋಡಿಕೊಳ್ಳಿ!
ಗಂಡ-ಹೆಂಡತಿ ಎಂದ ಮೇಲೆ ಅವರ ನಡುವೆ ಸಂವಹನಗಳು ನಡೆಯುವುದು ಸಾಮಾನ್ಯ. ಉತ್ತಮ ರೀತಿಯ ಸಂವಹನಗಳನ್ನು ನಡೆಯುತ್ತದೆ. ಇನ್ನೂ ಜಗಳವಾದಾಗ ಬೇರೆ ರೀತಿ ಸಂವಹನ ನಡೆಯಬಹುದು. ಇನ್ನೂ ನಿಮ್ಮ ಪತಿಯು ನಿಮ್ಮನ್ನು ಸಾಂತ್ವಾನ ಮಾಡುವಾಗ ಆಡುವ ಮಾತುಗಳೇ ಬೇರೆ ಇರಬಹುದು.

ಈ ರೀತಿ ದಂಪತಿಗಳು ಎಂದ ಮೇಲೆ ಅವರ ಮಧ್ಯೆ ನಡೆಯುವ ಸಂವಹನಕ್ಕೆ ಕೊನೆ ಅನ್ನೋದೇ ಇರೋದಿಲ್ಲ. ಕೆಲವೊಂದು ಸಲ ತಮಾಷೆಗೆ ನಾವು ಕೆಲವು ಮಾತುಗಳನ್ನು ಆಡುತ್ತೇವೆ. ಎಷ್ಟೋ ಸಲ ಅದು ಗಂಭೀರ ರೂಪಕ್ಕೆ ತಿರುಗಿದ ಉದಾಹರಣೆಗಳು ಇದೆ. ಆದರೆ ತಮಾಷೆಗೂ ಗಂಡನ ಬಳಿ ಈ ಮಾತುಗಳನ್ನು ಹೇಳದಿರಿ. ಅಷ್ಟಕ್ಕೂ ಆ ಮಾತುಗಳು ಯಾವುದು ಅನ್ನೋದನ್ನು ತಿಳಿಯೋಣ.
1. ವಿಚ್ಚೇದನ
ಸಾಮಾನ್ಯವಾಗಿ ಜಗಳವಾದ ಸಂದರ್ಭದಲ್ಲಿ ದಂಪತಿಗಳ ಮಧ್ಯೆ ಮೊದಲು ಬರೋ ಮಾತೆಂದರೆ ವಿಚ್ಛೇದನ. ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ವಿಚ್ಛೇದನ ನೀಡೋದಾಗಿ ಹೇಳುತ್ತಾರೆ. ಪತ್ನಿಯರೇ ನಿಮ್ಮಿಬ್ಬರ ಮಧ್ಯೆ ಜಗಳವಾದ ಸಂದರ್ಭದಲ್ಲಿ ಅಪ್ಪಿ-ತಪ್ಪಿಯೂ ತಮಾಷೆಗೂ ಈ ಮಾತುಗಳನ್ನು ಆಡೋದಕ್ಕೆ ಹೋಗಲೇಬೇಡಿ. ನೀವು ತಮಾಷೆಗಾದರೂ ಆಗಾಗ್ಗೆ ಈ ಮಾತುಗಳನ್ನು ಹೇಳುತ್ತಿದ್ದರೆ ನಿಮ್ಮ ಗಂಡ ನೊಂದುಕೊಳ್ಳಬಹುದು. ಅಥವಾ ಭವಿಷ್ಯದಲ್ಲಿ ನೀವು ತಮಾಷೆಗೆ ಹೇಳಿದ ಮಾತು ನಿಜವಾಗಬಹುದು.
2. ಬಾಯಿಮುಚ್ಚು ಎಂದು ಹೇಳಬೇಡಿ!
ಕೆಲವೊಂದು ಸಲ ಗಂಡ- ಹೆಂಡತಿಯ ಮಧ್ಯೆ ಜಗಳಗಳು ಆಗುತ್ತವೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆಯುವ ಸಾಧ್ಯತೆಗಳಿದೆ. ಈ ಸಂದರ್ಭದಲ್ಲಿ ಪತ್ನಿಯಾದವಳು ಕೆಲವೊಂದು ಮಾತುಗಳನ್ನು ಹೇಳಬಾರದು. ಇದರಿಂದ ನಿಮ್ಮ ಸಂಸಾರ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅದ್ರಲ್ಲೂ ಮುಖ್ಯವಾಗಿ ಶಟ್ ಅಪ್ ಅಥವಾ ಬಾಯಿಮುಚ್ಚು ಎನ್ನುವ ಮಾತನ್ನು ಆಡಲೇಬೇಡಿ. ಇದು ನಿಮ್ಮ ಪತಿಯ ಮೇಲೆ ದೊಡ್ಡ ಪರಿಣಾಮವನ್ನು ಬೀರಬಹುದು. ಅಷ್ಟೇ ಅಲ್ಲದೇ, ಇದುವೇ ಮುಂದುವರೆದು ಸಂಬಂಧದಲ್ಲಿ ದೊಡ್ಡ ಬಿರುಕು ಕಾಣಿಸಿಕೊಳ್ಳೋದಕ್ಕೆ ಕಾರಣವಾದ್ರು ತಪ್ಪಾಗೋದಿಲ್ಲ.
3. ಅತ್ತೆ-ಮಾವನನ್ನು ದೂರಬೇಡಿ!
ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರು ಜಗಳವಾದ ಸಂದರ್ಭದಲ್ಲಿ ಅತ್ತೆ-ಮಾವನನ್ನು ದೂರುತ್ತಾರೆ. ಎಲ್ಲಾ ಹೊಣೆಯನ್ನೂ ಅವರ ಮೇಲೆ ಹೊರಿಸಿ ಬಿಡುತ್ತಾರೆ. ಇದು ಗಂಡಂದಿರಿಗೆ ಖಂಡಿತ ಇಷ್ಟ ಆಗೋದಿಲ್ಲ. ಯಾವುದೇ ಮಕ್ಕಳಾದರೂ ಕೂಡ ಅಪ್ಪ-ಅಮ್ಮನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರ್ತಾರೆ. ಹೀಗಾಗಿ ನೀವೇನಾದರೂ ಅವರ ಪೋಷಕರನ್ನು ದೂರಿದರೆ ಅವರಿಗೆ ಸಹಿಸಿಕೊಳ್ಳುವ ಶಕ್ತಿ ಇರೋದಿಲ್ಲ.
4. ನೀನು ನನಗಾಗಿ ಏನು ಮಾಡಿದ್ದೀಯಾ?
ಮನುಷ್ಯನಿಗೆ ಯಾವುದೇ ವಿಷಯದಲ್ಲಾದರೂ ತೃಪ್ತಿ ಅನ್ನೋದು ಇರೋದಿಲ್ವಂತೆ. ನಮ್ಮ ಬೇಡಿಕೆಗಳು ಪೂರೈಕೆಯಾದಷ್ಟು ಮತ್ತೆ ಮತ್ತೆ ಏನಾದರೂ ಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಅದೇ ರೀತಿ ಹೆಚ್ಚಿನ ಸಂದರ್ಭದಲ್ಲಿ ಗಂಡನು ತನ್ನ ಬಯಕೆಗಳನ್ನು ಈಡೇರಿಸಿಲ್ಲ ಎನ್ನುವ ಕಾರಣಕ್ಕೂ ಕೂಡ ಆತನನೊಂದಿಗೆ ಜಗಳವಾಡುವ ಮಹಿಳೆಯರು ಇದ್ದಾರೆ. ಕೊನೆಗೆ ನನಗಾಗಿ ನೀನು ಏನನ್ನೂ ಮಾಡಿಯೇ ಇಲ್ಲ ಎನ್ನುವ ಆರೋಪವನ್ನು ಹೊರಿಸಿ ಬಿಡುತ್ತಾರೆ.
5. ನೀನೊಬ್ಬ ಸ್ವಾರ್ಥಿ
ಎಲ್ಲರ ಜೊತೆಗೆ ನಮ್ಮ ಸಂಬಂಧ ಚೆನ್ನಾಗಿ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಪತಿಯ ವಿಚಾರದಲ್ಲೂ ಕೂಡ ಅದು ನಿಜ. ದಾಂಪತ್ಯ ಎಂದ ಮೇಲೆ ಅಲ್ಲಿಯೂ ಕೂಡ ಜಗಳ ಬಂದೇ ಬರುತ್ತದೆ. ಹಾಗಂತ ಅಪ್ಪು-ತಪ್ಪಿಯೂ ನಿಮ್ಮ ಗಂಡನನ್ನು ನೀವು ಸ್ವಾರ್ಥಿ ಅಂತ ಹೇಳೋದಕ್ಕೆ ಹೋಗಬೇಡಿ. ಒಂದು ವೇಳೆ ಅವನು ನಿಮ್ಮ ವಿಚಾರದಲ್ಲಿ ಸ್ವಾರ್ಥಿಯಾಗದೇ ಹೋಗಿದ್ದರೆ ಖಂಡಿತ ಅವನಿಗೆ ಈ ಮಾತುಗಳು ಇಷ್ಟ ಆಗೋದಿಲ್ಲ.
ಹೀಗಾಗಿ ನಿಮ್ಮಿಬ್ಬರ ಮಧ್ಯೆ ಎಷ್ಟೇ ದೊಡ್ಡ ಜಗಳಗಳಾದ್ರೂ ಸರಿ. ಈ ಐದು ಮಾತುಗಳನ್ನು ಗಂಡನ ಮುಂದೆ ತಮಾಷೆಗೂ ಹೇಳೋದಕ್ಕೆ ಹೋಗಬೇಡಿ.



Click it and Unblock the Notifications











