Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಇಬ್ಬರನ್ನು ಕೊನೆಗೆ ವಿಚ್ಛೇದನಕ್ಕೆ ತಂದು ನಿಲ್ಲಿಸುವ ಸೈಲೆಂಟ್ ಕಿಲ್ಲರ್‌ಗಳಿವು
ಇತ್ತೀಚಿಗೆ ಡಿವೋರ್ಸ್ ಹೆಚ್ಚಾಗಿ ಕೇಳಿ ಬರುತ್ತಿದೆ, ಕೆಲವೊಂದು ಡಿವೋರ್ಸ್ ಪ್ರಕರಣಕ್ಕೆ ಕಾರಣಗಳನ್ನು ಕೇಳಿದಾಗ ತುಂಬಾನೇ ಅಚ್ಚರಿ ಉಂಟಾಗುವುದು. ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ಉಂಟಾಗುತ್ತಿದ್ದರೆ ವಿಚ್ಛೇದನ ಉಂಟಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಜಗಳವಾಡುವ ದಂಪತಿಗಳಿಗಿಂತ ಜಗಳ ಆಡದೇ ಇರುವ ದಂಪತಿಗಳು ವಿಚ್ಛೇದನದ ಹಾದಿ ಹಿಡಿಯುತ್ತಿದ್ದಾರೆ.
ಹೌದು ಸಂಬಂಧದಲ್ಲಿ ಕೆಲವೊಂದು ವಿಷಯವಿರುತ್ತದೆ, ಅವು ದಾಂಪತ್ಯ ಒಡೆದು ಹಾಕುವ ಸೈಲೆಂಟ್ ಕಿಲ್ಲರ್‌ಗಳು. ಅವುಗಳನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದೆ ದೊಡ್ಡ ಸಮಸ್ಯೆ ಉಂಟಾಗುವುದು. ಆದ್ದರಿಂದ ಸಂಸಾರದಲ್ಲಿ ಈ ಬಗ್ಗೆ ಸೂಚನೆಗಳು ಕಂಡು ಬಂದರೆ ನಿರ್ಲಕ್ಷ್ಯ ಬೇಡ್ವೆ ಬೇಡ, ಜಾಗ್ರತೆವಹಿಸಿ:

ಸಮಸ್ಯೆಗಳನ್ನು ಮಾತನಾಡಿ ಬಗೆಹರಿಸಲು ಯೋಚಿಸದೇ ಇರುವುದು
ಸಂಸಾರದಲ್ಲಿ ತುಂಬಾ ಮುಖ್ಯವಾಗಿ ಬೇಕಾಗಿರುವುದು ಸಂವಹನ, ಅದು ಇಲ್ಲದೆ ಇದ್ದರೆ ಆ ಸಂಬಂಧ ಬಡಕಲು ಆಗುವುದು. ಇಬ್ಬರ ನಡುವೆ ಮಾತಿಕತೆ ಇಲ್ಲ ಎಂದ ಮೇಲೆ ಆ ಸಂಸಾರದಲ್ಲಿ ಏನೇ ಸಮಸ್ಯೆ ಇದ್ದರೂ ಮಾತಿನ ಮೂಲಕ ಬಗೆಹರಿಯುವುದಿಲ್ಲ, ಬೂದಿ ಮುಚ್ಚಿದ ಕೆಂಡದಂತೆ ಇದ್ದು ಒಂದು ದಿನ ಮನೆ ಹೊತ್ತಿ ಉರಿಯುವುದು.
ಇಬ್ಬರ ನಡುವಿನ ಜೀವನ ಶೈಲಿ, ಆಚಾರಗಳು ಎಲ್ಲವೂ ಭಿನ್ನವಾದಾಗ
ಗಂಡ-ಹೆಂಡತಿ ಇಬ್ಬರು ಒಂದೇ ರೀತಿ ಯೋಚಿಸಿದರೆ ಮಾತ್ರ ಸಂಸಾರ ಚೆನ್ನಾಗಿರುತ್ತೆ ಎಂದು ಹೇಳುತ್ತಿಲ್ಲ ಅಂಥ ಸಂಸಾರವೂ ಇರಲ್ಲ. ಇಬ್ಬರ ನಡುವೆ ಯೋಚನೆ ತುಂಬಾನೇ ಭಿನ್ನವಾಗಿರುತ್ತದೆ, ಜೀವನಶೈಲಿ ಭಿನ್ನವಾಗಿರುತ್ತದೆ. ಆದರೆ ಆ ಭಿನ್ನತೆ ನಡುವೆ ಹೊಂದಾಣಿಕೆ ಇರಬೇಕು, ಆವಾಗ ಯಾವ ಸಮಸ್ಯೆಯೂ ಇರಲ್ಲ. ಆ ಹೊಂದಾಣಿಕೆ ಆಗುತ್ತಿಲ್ಲ ಎಂದಾದರೆ ಇಬ್ಬರ ನಡುವಿನ ಭಿನ್ನಾಭಿಪ್ರಾಯ ತುಂಬಾ ಹೆಚ್ಚಾಗುತ್ತಲೇ ಹೋಗುತ್ತದೆ.
ಸಂಗಾತಿಯ ಭಾವನೆಗಳನ್ನು ಗಮನಿಸುವುದೇ ಇಲ್ಲ
ಬಹುತೇಕ ಸಂಸಾರದಲ್ಲಿ ಈ ರೀತಿ ಇರುತ್ತದೆ. ನನ್ನ ಸಂಗಾತಿ ಮೊದಲಿದ್ದ ರೀತಿಯಲ್ಲಿ ಈಗ ನನ್ನ ಜೊತೆ ಇಲ್ಲ ಎಂಬ ಭಾವನೆ ಮೂಡುತ್ತದೆ, ಅವರಲ್ಲಿ ತುಂಬಾನೇ ಬದಲಾವಣೆ ಕಂಡು ಬರುವುದು. ಮೊದಲೆಲ್ಲಾ ಅಷ್ಟೊಂದು ಕಾಳಜಿ ವಹಿಸುತ್ತಿದ್ದ, ನನ್ನ ಜೊತೆ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿ ಬದಲಾದಂತೆ ಕಂಡು ಬರುವುದು. ಈ ರೀತಿ ಅನಿಸಿದಾಗ ಆ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದು, ಇಬ್ಬರ ನಡುವಿನ ಅಂತರ ಹೆಚ್ಚಾಗುವುದು.
ಬಂದು ಹೋಗುವ ಸಂಬಂಧ
ಅದು ಪ್ರೀತಿಯಲ್ಲಿ ಆದರೂ ಆಗಬಹುದು, ದಾಂಪತ್ಯದಲ್ಲಿ ಆಗಬಹುದು. ಕೆಲವು ಸಮಯ ಇಬ್ಬರು ಚೆನ್ನಾಗಿ ಇರುತ್ತಾರೆ ನಂತರ ಬ್ರೇಕಪ್ ಮಾಡಿ ಹೋಗುವುದು ಅಥವಾ ಸಂಗಾತಿ ಜೊತೆ ಜಗಳವಾಡಿ ಹೋಗುವುದು, ಮತ್ತೆ ಪ್ಯಾಚ್ ಆಗುವುದು, ಅದಾಗಿ ಮತ್ತೆ ಆ ರೀತಿ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುವುದು ಮಾಡುತ್ತಿದ್ದರೆ ಆ ಸಂಬಂಧದ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು. ಏಕೆಂದರೆ ಅವರು ಅವರಿಗೆ ಬೇಕಾದಾಗ ನಮ್ಮನ್ನು ಬಳಸಿ ನಂತರ ನಮ್ಮ ಬಗ್ಗೆ ಒಂದಿಷ್ಟೂ ಕಾಳಜಿವಹಿಸದೆ ಬಿಟ್ಟು ಹೋಗುತ್ತಾರೆ.
ನಿಮ್ಮ ಸಂಬಂಧದಲ್ಲಿ ಅಹಂ ಪ್ರಾಬಲ್ಯ ಬೀರಿದಾಗ
ಸಂಬಂಧದಲ್ಲಿ ಅಹಂ ಹೆಚ್ಚಾಗುತ್ತಿದ್ದಂತೆ ಸಮಸ್ಯೆಯೂ ಹೆಚ್ಚಾಗುವುದು. ನಾನು ಹೇಳಿದಂತೆ ನಡೆಯಬೇಕೆಂದು ಇವನು ಬಯಸಿದರೆ ಅವಳು ಹೇಳಿದಂತೆ ನಡೆಯಬೇಕೆಂಬ ಹಠ ಅವಳಾದರೆ, ಇಬ್ಬರಿಗೂ ಅವರವರದ್ದೇ ಸರಿ ಅಂತಾದರೆ ಸಂಬಂಧವನ್ನೇ ಕೊಂದು ಹಾಕುವುದು.
ಸಂಗಾತಿ ಎಂದರೆ ಒಂದಿಷ್ಟೂ ಗೌರವ ಇಲ್ಲದಿರುವುದು
ಏಕೆ ಅವಳ ಅಥವಾ ಅವನ ಅಭಿಪ್ರಾಯ ಕೇಳಬೇಕು? ಇದರಿಂದ ಆಗಬೇಕಾಗಿರುವುದೇನು? ಅವಳಿಗೇನು ಗೊತ್ತು ಇಂಥ ನಿರ್ಲಕ್ಷ್ಯ ಭಾವನೆ ಸಂಬಂಧದ ಮೇಲೆ ತುಂಬಾನೇ ಪ್ರಭಾವ ಬೀರುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications
