Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಯನಾಡ್ ದುರಂತದಲ್ಲಿ ತನ್ನವರೆಲ್ಲಾ ಹೋದರೂ ಶ್ರುತಿಗೆ ಜಾನ್ಸನ್ ಇದ್ದ, ಈಗ ಆತನೂ ಇಲ್ಲ: ಹೇ ವಿಧಿಯೇ ನೀನೆಷ್ಟು ಕ್ರೂರಿ
ವಿಧಿ ಕೆಲವರ ಬದುಕಿನಲ್ಲಿ ಕ್ರೂರಿಯಲ್ಲ, ಅತಿ ಕ್ರೂರಿಯಾಗಿ ವರ್ತಿಸುತ್ತದೆ,ವಯನಾಡ್‌ನ ಶ್ರುತಿ ಎಂಬ ಹೆಣ್ಮಗಳ ಬದುಕಿನಲ್ಲಿ ಕೂಡ ವಿಧಿಯ ಆಟ ನೋಡಿ ಆಕೆಯನ್ನು ಹೇಗೆ ಸಮಧಾನ ಪಡಿಸಬೇಕೆಂದು ತಿಳಿಯದಾಗಿದ್ದಾರೆ. ಪಾಪ ಆ ಹೆಣ್ಮಗಳ ಕತೆ ಕೇಳಿದರೆ ಆ ಹುಡುಗಿ ಯಾರು ಅಂತ ನಮಗೆ ಗೊತ್ತಿಲ್ಲ, ಅದರೂ ನಮ್ಮ ಕಣ್ಣಂಚಿನಲ್ಲಿ ನೀರು ತುಂಬುವುದು, ಮನಸ್ಸು ಭಾರವಾಗುವುದು.

ಅನಾಥಳಾಗಿ ನಿಂತಿದ್ದ ಶ್ರುತಿ ಬಾಳಿಗೆ ಬಂದ ಜಾನ್ಸನ್ ಇನ್ನಿಲ್ಲ
ವಯನಾಡ್ ದುರಂತ ನೋಡಿ ಇಡೀ ದೇಶವೇ ಬೆಚ್ಚಿ ಬಿತ್ತು, ಪ್ರಕೃತಿ ಮುನಿದರೆ ಎಷ್ಟೊಂದು ಭಯಾನಕವಾಗಿರುತ್ತದೆ ಎಂಬುವುದಕ್ಕೆ ವಯನಾಡ್ ಸಾಕ್ಷಿಯಾಗಿದೆ. ತಮ್ಮವರನ್ನೆಲ್ಲಾ ಕಳೆದು ಅನಾಥರಾಗಿ ನಿಂತಿದ್ದಾರೆ ಅಲ್ಲಿನ ನಿವಾಸಿಗಳು. ಓದಲು ಅಥವಾ ಕೆಲಸದ ಕಾರಣದಿಂದ ದೂರವಿದ್ದವರು ಬದುಕಿದ್ದಾರೆ, ವಯನಾಡ್‌ನ ತಮ್ಮ ಮನೆಯಲ್ಲಿದ್ದವರನ್ನೆಲ್ಲಾ ಕಳೆದುಕೊಂಡಿದ್ದಾರೆ ಅನೇಕರು,ಶ್ರುತಿ ಕೂಡ ಅಷ್ಟೇ ತನ್ನವರನ್ನೆಲ್ಲಾ ಕಳೆದುಕೊಂಡು ಅನಾಥಳಾದಳು.
ಶ್ರುತಿ ಕುಟುಂಬದ 9 ಜನ ವಯನಾಡ್ ದುರಂತದಲ್ಲಿ ಮರಣವನ್ನಪ್ಪಿದರು
ಶ್ರುತಿ ಕೋಝಿಕೋಡ್‌ನಲ್ಲಿ ಕೆಲಸ ಮಾಡುತ್ತಿದ್ದರು ಹಾಗಾಗಿ ವಯನಾಡ್ ದುರಂತದಲ್ಲಿ ಅಮ್ಮ-ಅಪ್ಪ, ತಂಗಿ, ದೊಡ್ಡಮ್ಮ-ದೊಡಪ್ಪ ಸೇರಿದಂತೆ ಕುಟುಂಬದ 9 ಜನರನ್ನು ಕಳೆದುಕೊಂಡರು, ಆವಾಗ ನೀನು ಒಂಟಿಯಲ್ಲಿ ಸದಾ ನಿನ್ನ ಜೊತೆ ಇರುತ್ತೇನೆ ಎಂದು ಬಂದವರೇ ಜಾನ್ಸನ್.
ಜಾನ್ಸನ್-ಶ್ರುತಿ ಮದುವೆ ಮಾತುಕತೆ ನಡೆದಿತ್ತು
ಪರಸ್ಪರ ಪ್ರೀತಿಸುತ್ತಿದ್ದ ಜಾನ್ಸನ್- ಶ್ರುತಿ ಮದುವೆಯಾಗಬೇಕೆಂದಿದ್ದರು, ಗ್ರ್ಯಾಂಡ್ ಆಗಿ ಮದುವೆಯಾಗುವ ಪ್ಲ್ಯಾನ್ ಮಾಡಿದ್ದರು, ಅಷ್ಟರಲ್ಲಿಯೇ ವಯನಾಡ್ ದುರಂತ ನಡೆದಿದ್ದು, ಎಲ್ಲಾವನ್ನು ಕಳೆದುಕೊಂಡು ಮುಂದೇನು ಎಂದು ದಿಕ್ಕು ತೋಚದೆ ನಿಂತಿದ್ದ ಶ್ರುತಿಗೆ ಜಾನ್ಸನ್ ನೀನು ಭಯ ಪಡಬೇಡ, ನಾನಿದ್ದೇನೆ ಎಂಬ ಭರವಸೆ ಕೊಟ್ಟಿದ್ದ. ಅಲ್ಲಿಯ ಮಾಧ್ಯಮದವರು ಇವರ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡಿದ್ದರು, ಆವಾಗ ಶ್ರುತಿ ನನಗೆ ವಯನಾಡ್‌ಗೆ ಬರುವುದಕ್ಕೆ ಇಷ್ಟವಿಲ್ಲ, ಇಲ್ಲಿ ಪ್ರತಿಯೊಂದು ಸ್ಥಳದಲ್ಲಿ ಓಡಾಡಿದಾಗಲೂ ನಾನು ನನ್ನ ತಂಗಿ ಜೊತೆ ಕಳೆದ ಕ್ಷಣಗಳು ನೆನಪಿಗೆ ಬರುತ್ತದೆ, ಅಮ್ಮ-ಅಪ್ಪ, ಕುಟುಂಬದವರು ನೆನಪಿಗೆ ಬರುತ್ತಾರೆ ಎಂದಾಗ ಜಾನ್ಸನ್ 41 ದಿನದ ಬಳಿಕ ನಾನು ಇವಳನ್ನು ಸರಳವಾಗಿ ಮದುವೆಯಾಗುತ್ತೇನೆ, ಗ್ರ್ಯಾಂಡ್ ಆಗಿ ಮದುವೆಯಾಗಬೇಕೆಂದು ಇತ್ತು, ಆದರೆ ಈ ಪರಿಸ್ಥಿತಿಯಲ್ಲಿ ಸರಳವಾಗಿ ಆಗುತ್ತೇವೆ ಎಂದಿದ್ದರು.
ಇದನ್ನು ಕೇಳಿದಾಗ ಇಷ್ಟು ಒಳ್ಳೆಯ ಗುಣದವ ಅವಳ ಜೊತೆ ಇರುವಾಗ ಅವಳ ಬದುಕು ಚೆನ್ನಾಗಿರುತ್ತದೆ, ಪಾಪ ಆ ಹೆಣ್ಮಗಳಿಂದ ಎಲ್ಲರನ್ನೂ ಕಿತ್ತುಕೊಂಡರೂ ಈತ ಆಕೆಯ ಬಾಳಿನಲ್ಲಿ ಇದ್ದಾನಲ್ಲ, ಅವಳು ಚೆನ್ನಾಗಿರುತ್ತಾಳೆ ಎಂದು ಭಾವಿಸಿದ್ದರು, ಆದರೆ ಆಕೆ ಖುಷಿಯಾಗಿರುವುದು ಆ ವಿಧಿಗೆ ಇಷ್ಟವಿರಲಿಲ್ಲವೇನೋ?
ಪೋಷಕರು , ತಂಗಿ, ಕುಟುಂಬದವರು ತೀರಿ ಹೋದಾಗ 41 ದಿನದ ಸೂತಕವಿರುತ್ತದೆ, ಹಾಗಾಗಿ 41 ದಿನದ ಬಳಿಕ ಮದುವೆಯಾಗುತ್ತೇನೆ ಎಂದಿದ್ದ, ಅದರಂತೆ ಇವರ ಮದುವೆ ಕೂಡ ನಡೆಯಿತು, ಕೇರಳ ಮಾಧ್ಯಮದಲ್ಲಿ ಈ ಸುದ್ದಿಯೂ ಬಂತು, ಜನರು ಕೂಡ ಈ ಜೋಡಿಗೆ ಶುಭ ಹಾರೈಸಿದರು.
ಆದರೆ ಶ್ರುತಿ ಬಾಳಲ್ಲಿ ವಿಧಿಯ ಆಟ ಅಲ್ಲಿಗೆ ನಿಲ್ಲಲಿಲ್ಲ, ಸೆಪ್ಟೆಂಬರ್ 11ಕ್ಕೆ ನಡೆದ ಕಾರು ಅಪಘಾತದಲ್ಲಿ ಜಾನ್ಸನ್ ತಲೆಗೆ ತೀವ್ರ ಪೆಟ್ಟಾಗಿತ್ತು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಗಂಭೀರ ಗಾಯಗೊಂಡಿದ್ದ ಜಾನ್ಸನ್ ಶ್ರುತಿಯನ್ನು ಬಿಟ್ಟು ಹೋದರು. ಶ್ರುತಿ ಪಾಲಿಗೆ ಎಲ್ಲವೂ ಆಗಿದ್ದ ಅವಳ ಪ್ರೀತಿಯ ಜಾನ್ಸನ್ ಕೂಡ ಇನ್ನಿಲ್ಲ, ಹೇ ವಿಧಿ ನೀನೆಷ್ಟು ಕ್ರೂರಿ?



Click it and Unblock the Notifications
