Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಚ್ಛೇದನದ ಬಳಿಕ ರಿಲೇಷನ್‌ಶಿಪ್‌ನಲ್ಲಿ ಈ ತಪ್ಪು ಮಾಡಲೇಬಾರದೆಂದ ಶಿಖರ್‌ಧವನ್
ಶಿಖರ್ ಧವನ್ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದೆ, ಸುಂದರವಾಗಿದ್ದ ವೈವಾಹಿಕ ಜೀವನ ವಿಚ್ಛೇದನದ ಹಂತಕ್ಕೆ ತಲುಪಲು ಏನು ಕಾರಣ ಎಂಬುವುದನ್ನು ಬಹಿರಂಗಗೊಳಿಸಿದ್ದಾರೆ.
ವಿಚ್ಛೇದನಕ್ಕೆ ತನ್ನಿಂದಾದ ತಪ್ಪೇನು ಎಂಬುವುದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಕೆಲವೊಂದು ಅದ್ಭುತ ರಿಲೇಷನ್‌ಶಿಪ್ ಟಿಪ್ಸ್ ನೀಡಿದ್ದಾರೆ. ಯಾರು ಚೆಂದದ ಸಂಸಾರ ನಡೆಸಬೇಕೆಂದು ಬಯಸುತ್ತೀರೋ ಅವರು ಶಿಖರ್ ಧವನ್ ಹೇಳಿರುವ ಈ ಮಾತುಗಳನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.

ಶಿಖರ್ ಧವನ್ ಆಯೇಷಾ ಮುಖರ್ಜಿಯನ್ನು ಪ್ರೀತಿಸಿ ಮದುವೆಯಾದವರು, ಆಯೇಷಾರವರಿಗೆ ಇದು ಎರಡನೇ ಮದುವೆಯಾಗಿತ್ತು. ಅವರೇ ಹೇಳುವಂತೆ ಮೊದಲ ಜೀವನ ಮುರಿದು ಬಿದ್ದಂತೆ ಇದು ಬೀಳಬಾರದು ಎಂದು ಎಚ್ಚರಿಕೆವಹಿಸಿದ್ದರು, ಆದರೂ ಬೇರೆ-ಬೇರೆಯಾದರು.
ಶಿಖರ್ ಧವನ್ ಹಾಗೂ ಆಯೇಷಾ ಪ್ರತ್ಯೇಕವಾಗಿ ಎರಡು ವರ್ಷಗಳಾಗಿವೆ, ಆ ಸಂದರ್ಭದಲ್ಲಿ ಆಯೇಷಾ ವಿಚ್ಛೇದನ ಬದುಕಿನ ಬಗ್ಗೆ ಬರೆದುಕೊಂಡಿದ್ದರು, ಆದರೆ ಶಿಖರ್ ಧವನ್ ಈ ಬಗ್ಗೆ ಏನೂ ಹೇಳಿರಲಿಲ್ಲ.
ಇದೀಗ ತಮ್ಮ ವೈವಾಹಿಕ ಜೀವನ ಮುರಿದು ಬೀಳಲು ಕಾರಣವೇನು ಎಂದು ಹೇಳುವುದರ ಜೊತೆಗೆ ಕೆಲವೊಂದು ಟಿಪ್ಸ್ ಕೂಡ ಹೇಳಿದ್ದಾರೆ.
"ವ್ಯಕ್ತಿಯ ಕೊನೆಯ ನಿರ್ಧಾರ ಗೆದ್ದ ಕಾರಣ ನಾನು ಸೋತೆ, ಇದಕ್ಕೆ ನಾನು ಯಾರನ್ನೂ ದೂರುವುದಿಲ್ಲ" ಎಂದು ಹೇಳುತ್ತಾ ವೈವಾಹಿಕ ಜೀವನವನ್ನು ಕೂಡ ಕ್ರಿಕೆಟಿಗೆ ಹೋಲಿಸುತ್ತಾ ಆವಾಗ ನನಗೆ ಆ ಫೀಲ್ಡ್‌ನಲ್ಲಿ ಅನುಭವ ಇರಲಿಲ್ಲ, ಕ್ರಿಕೆಟ್ ಬಗ್ಗೆ ಹೇಳುವುದಾರೆ ಈಗ ಇರುವಷ್ಟು ಅನುಭವ 20 ವರ್ಷದ ಹಿಂದೆ ನನಗಿರಲಿಲ್ಲ, ಎಲ್ಲವೂ ಅನುಭವದಿಂದ ಬರಬೇಕು' ಎಂದು ಹೇಳಿದ್ದಾರೆ
ಶಿಖರ್ ಮರು ಮದುವೆಯ ವಿಚಾರ ಹೇಳುತ್ತಾ "ಸದ್ಯಕ್ಕೆ ಮರುಮದುವೆ ಬಗ್ಗೆ ಯೋಚನೆ ಮಾಡಿಲ್ಲ,ಇನ್ನೂ ವಿಚ್ಛೇದನ ಪ್ರಕ್ರಿಯೆ ಕೋರ್ಟ್‌ನಲ್ಲಿದೆ. ನಾಳೆ ನಾನು ಮದುವೆಯಾಗುವುದಾದರೆ ನಾನು ತುಂಬಾ ಬುದ್ಧಿವಂತಿಕೆಯಿಂದ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತೇನೆ. ಆವಾಗ ನನಗೆ 26-27 ವರ್ಷ ಸಂಬಂಧದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ, ಆದ್ದರಿಂದ ರೆಡ್‌ಫ್ಲ್ಯಾಗ್ ಗುರುತಿಸಲು ಸಾಧ್ಯವಾಗಿಲ್ಲ.
ಈಗ ಪ್ರೀತಿಯಲ್ಲಿ ಬಿದ್ದರೆ ರೆಡ್‌ಫ್ಲ್ಯಾಗ್ ಸುಲಭವಾಗಿ ಗುರುತಿಸಬಲ್ಲೆ, ಆ ರೀತಿ ಕಂಡು ಬಂದರೆ ಆ ಸಂಬಂಧದಿಂದ ಹೊರ ನಡೆಯುತ್ತೇನೆ, ಇಲ್ಲದಿದ್ದರೆ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಯುವಕರಿಗೂ ಕಿವಿಮಾತು
ಯವಕರು ಪ್ರೀತಿಯಲ್ಲಿ ಬಿದ್ದಾಗ ಪ್ರೀತಿಯನ್ನು ಅನುಭವಿಸಬೇಕು, ಅದು ತುಂಬಾ ಮುಖ್ಯವಾಗುತ್ತದೆ. ಎಮೋಷನಲ್ ಆಗಿ ಮದುವೆಯಾಗಬಾರದು. ಕೆಲವು ವರ್ಷಗಳು ಪ್ರೀತಿಸುತ್ತಾ ಕಳೆಯಿರಿ, ಆಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಆವಾಗ ನಿಮ್ಮಿಬ್ಬರಿಗೆ ಮ್ಯಾಚ್ ಆಗುತ್ತಿದೆಯೇ ಅಥವಾ ಬೇರೆಯವರ ಕಂಪನಿಯಲ್ಲಿ ಖುಷಿಯಾಗಿರುತ್ತೀರಾ ಎಂಬುವುದು ತಿಳಿಯುತ್ತದೆ.
ಸಂಬಂಧವೆಂಬುವುದು ಕೂಡ ಒಂದು ಮ್ಯಾಚ್‌ನಂತೆ, ಕೆಲವರಿಗೆ 4-5 ಸಂಬಂಧಗಳು ಬೇಕಾಗುವುದು, ಕೆಲವರಿಗೆ 8-9 ರಿಲೇಷನ್‌ಶಿಪ್ ಬೇಕಾಗಬಹುದು. ಅದರಲ್ಲಿ ತಪ್ಪೇನೂ ಇಲ್ಲ, ಇದರಿಂದ ನೀವು ಕಲಿಯುತ್ತೀರಿ, ಮದುವೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೀರಿ ಎಂದು ಹೇಳಿದ್ದಾರೆ.
ಶಿಖರ್ ಧವನ್ ಪತ್ನಿ ವಿಚ್ಛೇದನದ ಅನುಭವದ ಬಗ್ಗೆ ಈ ರೀತಿ ಬರೆದುಕೊಂಡಿದ್ದರು
ಈಗ ಯೋಚಿಸಿ ನಾನು 2ನೇ ಭಾರಿಯೂ ವಿಚ್ಛೇದನ ಪಡೆಯುವಂತಾಗಿದೆ. Woooahhhhhh.ಇದು ಇನ್ನೂ ಭೀಕರ ಅನಿಸಿದೆ. ಮೊದಲ ಭಾರಿಗೆ ವಿಚ್ಛೇದನ ಆದಾಗ ಎರಡನೇ ಬಾರಿ ನಾನು ಹಾಗೇ ಆಗಲೇ ಬರದು, ಈ ಸಂಬಂಧದಲ್ಲಿ ಚೆನ್ನಾಗಿದ್ದು ಸಾಬೀತು ಮಾಡಬೇಕು ಎಂದು ಬಯಸಿದ್ದೆ, ಆದರೆ ಎರಡನೇ ಮದುವೆಯೂ ಮುರಿದು ಬಿದ್ದಿದೆ, ತುಂಬಾ ಭಯವಾಗುತ್ತಿದೆ. ಮೊದಲನೇ ಬಾರಿ ವಿಚ್ಛೇದನವಾದಾಗ ಅನುಭವಿಸಿದ್ದ ಭಯ, ಹತಾಶೆ, ಸೋಲು ಈ ಬಾರಿ ನೂರು ಪಟ್ಟು ಹೆಚ್ಚಿದೆ. ಈ ವಿಚ್ಛೇದನಗಳು ನನ್ನ ಬಗ್ಗೆ, ನನ್ನ ವೈವಾಹಿಕ ಸಂಬಂಧದ ಬಗ್ಗೆ ಹೇಗೆ ವ್ಯಾಖ್ಯಾನಿಸುತ್ತದೆ? ವೆಲ್, ಸ್ವಲ್ಪ ಹೊತ್ತು ಕೂತು ಯೋಚಿಸಿದಾಗ ನಾನು ಏನು ಅವಶ್ಯಕವಿತ್ತೋ ಅದನ್ನೇ ಮಾಡಿದ್ದೇನೆ ಎಂದು ಅನಿಸಿದೆ" ಎಂದು ಬರೆದುಕೊಂಡಿದ್ದರು.



Click it and Unblock the Notifications

