Latest Updates
-
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ!
ಶಿಖರ್ ಧವನ್ ವಿಚ್ಛೇದನ: ವಿಚ್ಛೇದಿತ ಜೋಡಿ ನೀಡಿದ ಅದ್ಭುತ ರಿಲೇಷನ್‌ಶಿಪ್ ಟಿಪ್ಸ್
ಶಿಖರ್ ಧವನ್ ಹಾಗೂ ಆಯೇಷಾ ಅವರ ವಿಚ್ಛೇದನಕ್ಕೆ ಕೊನೆಗೂ ಕಾನೂನೂ ಒಪ್ಪಿಗೆ ಸಿಕ್ಕಿದೆ. ಕಳೆದ ಮೂರು ವರ್ಷಗಳಿಂದ ಈ ಜೋಡಿ ಬೇರೆ-ಬೇರೆಯಾಗಲು ತೀರ್ಮಾನಿಸಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಇದೀಗ ದೆಹಲಿ ಹೈ ಕೋರ್ಟ್ ಇವರಿಬ್ಬರ ವಿಚ್ಛೇದನ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ. ಸೆಲೆಬ್ರಿಟಿಗಳು ಎಂದ ಮೇಲೆ ಇದೆಲ್ಲಾ ಕಾಮನ್ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ವಿಚ್ಛೇದನಕ್ಕೆ ಈ ದಂಪತಿ ಮುಂದಾದಾಗ ತಮ್ಮ ಬದುಕಿನ ಬಗ್ಗೆ ಕೆಲವೊಂದು ವಿಷಯಗಳನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆಯೇಷಾ ವಿಚ್ಛೇದನ ಎಂಬುವುದು ಒಂದು ಹೆಣ್ಣನ್ನು ಹೇಗೆ ಕುಗ್ಗಿಸುತ್ತದೆ, ಆದರೂ ಅವಳಿಗೆ ಅದು ಅನಿವಾರ್ಯವಾದಾಗ ಅವಳು ಹೇಗೆ ಬದುಕಬೇಕೆಂದು ಹೇಳುವ ಮೂಲಕ ಅನೇಕ ವಿಚ್ಛೇದಿತ ಹೆಣ್ಮಕ್ಕಳಿಗೆ ಧೈರ್ಯ ತುಂಬಿದ್ದಾರೆ, ಶಿಖರ್ ಧವನ್ ಪ್ರೀತಿಯ ಬಗ್ಗೆ ದೊಡ್ಡ ಪಾಠವನ್ನೇ ಹೇಳಿದ್ದಾರೆ.
ವಿಚ್ಛೇದನ ಎಂದರೆ ನನ್ನ ಬದುಕನ್ನು ನಾನು ಆಯ್ಕೆ ಮಾಡುವುದಾಗಿದೆ. ಮದುವೆಯೆಂಬ ಹೆಸರಿನಲ್ಲಿ ಒಂದು ಭದ್ರತೆಯಿಲ್ಲದ ಸಂಬಂಧದಲ್ಲಿ ಇರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬುವುದರ ಬಗ್ಗೆ ಹೇಳಿದ್ದಾರೆ.
ಎಷ್ಟೋ ಸಂಬಂಧಗಳು ಮೇಲ್ನೋಟಕ್ಕೆ ಕಾಣಲು ತುಂಬಾನೇ ಸುಂದರವಾಗಿರುತ್ತದೆ, ಹಣವಿರುತ್ತದೆ, ಪದವಿ ಇರುತ್ತದೆ, ಎಲ್ಲಾ ಐಶ್ವರ್ಯಗಳು ಇರುತ್ತದೆ. ಆದರೆ ಅವರಿಬ್ಬರ ಮನಸ್ಸಿನಲ್ಲಿ ಪ್ರೀತಿಯೆಂಬುವುದು ಅಳಿಸಿ ಹೋಗಿರುತ್ತದೆ. ಅಂಥ ಸಂಬಂಧದಲ್ಲಿ ಉಳಿದು ಕೂಡ ಏನೂ ಪ್ರಯೊಜನವಿಲ್ಲ, ಅದರಿಂದ ಹೊರಬರುವುದೇ ಒಳ್ಳೆಯದು ಎಂದು ಹೇಳಿದ್ದಾರೆ.
ಆಯೇಷ ಶಿಖರ್ ಧವನ್ ಅವರನ್ನು ಮದುವೆಯಾಗುವ ಮೊದಲು ಒಂದು ಮದುವೆಯಾಗಿ ವಿಚ್ಛೇದನ ಆಗಿತ್ತು, ಆ ಸಂಬಂಧದಿಂದ ಮಕ್ಕಳೂ ಇದ್ದರು. ಆದರೆ ಆ ವ್ಯಕ್ತಿಯಿಂದ ದೂರಾದ ಬಳಿಕ ಶಿಖರ್ ಧವನ್ ಅವರ ಬಾಳಿಗೆ ಬೆಳಕಾಗಿ ಬಂದಿದ್ದರು. ಈ ಜೋಡಿ ತುಂಬಾನೇ ಖುಷಿಯಾಗಿದ್ದರು, ಇವರಿಬ್ಬರ ಪ್ರೀತಿಗೆ ಸಾಕ್ಷಿಯೆಂಬಂತೆ ಒಬ್ಬ ಮಗನೂ ಇದ್ದಾನೆ, ಆದರೆ ಈ ಸಂಬಂಧ ಕೂಡ ಉಳಿಯಲಿಲ್ಲ, ಇಬ್ಬರ ನಡುವೆ ಪ್ರೀತಿ ಬತ್ತಿ ಹೋಯ್ತು. ಈ ಸಂಬಂಧ ಕೂಡ ಮುರಿದು ಬಿತ್ತು.
ಮೊದಲ ವಿಚ್ಛೇದನದ ನೋವಿನಿಂದ ಹೊರ ಬಂದು ಎರಡನೇ ಮದುವೆಯಾದಾಗ ಆ ಮದುವೆಯೂ ವಿಚ್ಛೇದನಲ್ಲಿಯೂ ಮುಕ್ತಾಯವಾಯ್ತು. ಇವರ ಬದುಕಿನಲ್ಲಿ ನಡೆದಂತೆ ಹಲವರ ಬದುಕಿನಲ್ಲಿ ನಡೆದಿರುತ್ತದೆ, ಮದುವೆ ಮುರಿದು ಬಿದ್ದಾಗ ತುಂಬಾನೇ ನೋವಾಗುತ್ತೆ, ನಂತರ ಸಿಗುವ ಮತ್ತೊಂದು ಬದುಕಿನ ಬಗ್ಗೆ ತುಂಬಾನೇ ಕನಸುಗಳಿರುತ್ತದೆ, ಆದರೆ ಆ ಕನಸುಗಳು ಕಮರಿದಾಗ ಹೇಗಾಗಬೇಡ, ಆದರೆ ಸಂಬಂಧ ಗಟ್ಟಿಯಾಗಿರದಿದ್ದರೆ ಆ ಸಂಬಂಧದಲ್ಲಿ ಇರುವುದರಲ್ಲಿ ಅರ್ಥವಿಲ್ಲ ಅಲ್ವೇ?
ಶಿಖರ್ ಧವನ್ ಕೂಡ ಪ್ರೀತಿ ಪಾಠ ಮಾಡಿದ್ದಾರೆ, ಪ್ರೀತಿಯಲ್ಲಿ ಬಿದ್ದಾಗ ಎಮೋಷನಲ್ ಆಗಿ ಮದುವೆಯಾಗಬಾರದು, ಪ್ರೀತಿಯನ್ನು ಅನುಭವಿಸಬೇಕು, ತುಂಬಾ ವರ್ಷಗಳು ಪ್ರೀತಿಯಲ್ಲಿ ಕಳೆಯಬೇಕು, ಆವಾಗ ಮಾತ್ರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಸಂಬಂಧದಲ್ಲಿ ಪ್ರಾರಂಭದಲ್ಲಿಯೇ ರೆಡ್ ಫ್ಲ್ಯಾಗ್ ಕಂಡರೆ ಮದುವೆಯಾಗಲು ಹೋಗಬಾರದು ಎಂದು ಹೇಳಿದ್ದಾರೆ.
ಸಂಬಂಧದಲ್ಲಿ ಪ್ರೀತಿ ಮುಖ್ಯ
ಇಬ್ಬರು ಜೊತೆಯಾಗಿ ಬಾಳುವಾಗ ಅಲ್ಲಿ ಪ್ರೀತಿ ಇರಬೇಕು, ಆದರೆ ಮಾತ್ರ ಆ ಬದುಕಿಗೆ ಒಂದರ್ಥ.



Click it and Unblock the Notifications