Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಬೃಂದಾ-ವಾಸುಕಿ ವೈಭವ್‌ರ ಪ್ರೀತಿ ಎಷ್ಟು ಸ್ಟ್ರಾಂಗ್ ಇತ್ತು ಎಂಬುವುದಕ್ಕೆ ಈ ಫೋಟೋಗಳೇ ಸಾಕ್ಷಿ
ಸ್ಯಾಂಡಲ್‌ವುಡ್‌ನ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ತನ್ನ ಬಹುಕಾಲದ ಗೆಳತಿ ಜೊತೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ, ಅವರ ಹೊಸ ಬದುಕು ತುಂಬಾ ಸುಂದರವಾಗಿರಲಿ ಎಂಬುವುದೇ ಎಲ್ಲರ ಹಾರೈಕೆ.
ವಾಸುಕಿ ವೈಭವ್ ಮನಗೆದ್ದ ಹುಡುಗಿ ಯಾರು ಎಂಬ ಕುತೂಹಲ ತುಂಬಾ ಜನರಿಗಿತ್ತು, ಅದಕ್ಕೆ ಉತ್ತರ ಸಿಕ್ಕಿದೆ, ಬಿಗ್‌ಬಾಸ್‌ನಲ್ಲಿ ವಾಸುಕಿ ವೈಭವ್ ಅವರ ಆಟದ ಶೈಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು, ವಿನ್ನರ್ ಪಟ್ಟಕ್ಕೆ ಕಠಿಣ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದ್ದರು, ಬಿಗ್‌ಬಾಸ್‌ನಲ್ಲಿರುವಾಗ ಅವರ ರಚಿಸಿದ ಮನಸ್ಸಿಂದ ಯಾರೂ ಕೆಟ್ಟವರಲ್ಲ... ಹಾಡನ್ನು ಸುದೀಪ್ ಅವರು ಹಾಡಿದ ಮೇಲೆ ಆ ಹಾಡು ಮನೆ ಮನೆಗೆ ತಲುಪುವ ಮೂಲಕ ವಾಸುಕಿ ವೈಭವ್ ಎಂಬ ಯುವ ಪ್ರತಿಭೆ ಮತ್ತಷ್ಟು ಗುರುತಿಸಿಕೊಂಡರು.

ಮನಸ್ಸಿಂದ ಯಾರೂ ಕೆಟ್ಟವರಲ್ಲಾ ಹಾಡನ್ನು ಇಂದಿಗೂ ಜನ ಮರೆತಿಲ್ಲ, ಇದೀಗ ಚಿತ್ರ ನಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಇಂಥ ಪ್ರತಿಭೆಯ ಮನಕದ್ದ ಸುಂದರಿ ಯಾರು ಎಂಬ ಕುತೂಹಲ ವಾಸುಕಿ ವೈಭವ್ ಅವರ ಅಭಿಮಾನಿಗಳಿತ್ತು, ಆ ಹುಡುಗಿ ಬೃಂದಾ ವಿಕ್ರಮ್.
ಗಟ್ಟಿ ಗೆಳೆತನದಲ್ಲಿ ಅರಳಿದ ಪ್ರೀತಿಯಿದು
ಬೃಂದಾ ವಿಕ್ರಮ್ ರಂಗಭೂಮಿ ಕಲಾವಿದೆ ಅಲ್ಲದೆ ಶಿಕ್ಷಕಿಯೂ ಹೌದು. ಇವರಿಬ್ಬರದು ಇಂದು ನೆನ್ನೆಯ ಪ್ರೀತಿಯಲ್ಲ, ಗಟ್ಟಿಯಾದ ಸ್ನೇಹ ಬಂಧದಿಂದ ಹುಟ್ಟಿಕೊಂಡ ನವಿರಾದ ಪ್ರೀತಿಯ ಬಂಧವಿದು ಎಂಬುವುದು ಅವರ ಫೋಟೋಗಳನ್ನು ನೋಡಿದಾಗಲೇ ತಿಳಿಯುತ್ತದೆ.
ಇವರಿಬ್ಬರ ಪ್ರೀತಿಯ ಬಗ್ಗೆ ವಾಸುಕಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ, ಆದರೆ ಇವರ ಸ್ನೇಹಿತರಿಗಷ್ಟೇ ತಿಳಿದಿತ್ತು
ಇವರು ತುಂಬಾ ವರ್ಷದಿಂದ ಪರಿಚಿತರು ಎಂಬುವುದು ಇವರು ಶೇರ್ ಮಾಡಿರುವ ಫೋಟೋಗಳೇ ಹೇಳುತ್ತಿವೆ, ಇವರ ಸ್ನೇಹಿತರ ಬಳಗವಿತ್ತು ಎಲ್ಲರೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿವರು. ರಂಗಭೂಮಿ ದಿನದಂದು ಬೆಂಗಳೂರಿನ ರೋಡ್‌ಗಳಲ್ಲಿ ನಾಟಕ ಮಾಡಿ ಗಮನ ಸೆಳೆದ ಕೀರ್ತಿ ಇವರ ಟೀಂಗೆ ಸಲ್ಲುತ್ತದೆ, ವಾಸುಕಿ ಸಂಗೀತ ನಿರ್ದೇಶಕನಾಗಿಯೂ ಗುರುತಿಸಿಕೊಳ್ಳಲಾರಂಭಿಸಿದರು, ಆವಾಗ ಅವರಿಗೆ ಬಿಗ್‌ಬಾಸ್ ಅವಕಾಶ ಸಿಕ್ಕಿತ್ತು, ಅದು ಅವರ ಕೆರಿಯರ್‌ಗೆ ಮತ್ತಷ್ಟು ಪ್ಲಸ್ ಆಯ್ತು. ಅಲ್ಲಿಂದ ವಾಸುಕಿ ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ಬೆಳೆಯಲಾರಂಭಿಸಿದರು.
ಚಂದನಾ ಜೊತೆಗೆ ಫ್ರೆಂಡ್‌ಶಿಪ್ ಗಮನ ಸೆಳೆಯಿತು
ಬಿಗ್‌ಬಾಸ್‌ನಿಂದಾಗಿ ವಾಸುಕಿ ವೈಭವ್, ಚಂದನಾ ಒಳ್ಳೆಯ ಸ್ನೇಹಿತರಾದರು. ಕಳೆದ ದೀಪಾವಳಿಗೆ ಇವರಿಬ್ಬರು ಫೋಟೋಶೂಟ್ ಮಾಡಿಸಿದ್ದರು, ಅದನ್ನು ನೋಡಿದವರು ಇವರಿಬ್ಬರು ಪ್ರೀತಿಸುತ್ತಿರಬಹುದು ಎಂದು ಗಾಸಿಪ್ ಹರಡಿದರು, ಆದರೆ ಅವರಿಬ್ಬರು ಒಳ್ಳೆಯ ಸ್ನೇಹಿತರಷ್ಟೇ.
ಬೃಂದಾರನ್ನು ವಾಸುಕಿಯ ಬ್ಯಾಕ್‌ಬೋನ್ ಸ್ಟ್ರೆಂತ್ ಅನ್ನುತ್ತಾರೆ ಅವರ ಸ್ನೇಹಿತರು
ಬೃಂದಾರವರು ವಾಸುಕಿಯ ಬದುಕಿನಲ್ಲಿ ತುಂಬಾನೇ ದೊಡ್ಡ ಪಾತ್ರವಹಿಸಿದವರು. ಒಬ್ಬ ಗೆಳತಿಯಾಗಿ, ಪ್ರೇಮಿಯಾಗಿ ವಾಸುಕಿಗೆ ಶಕ್ತಿ ತುಂಬಿದವರು, ವಾಸುಕಿ ಇಂದು ಏನಾಗಿದ್ದಾರೂ ಅದಕ್ಕೆ ಬೃಂದಾರವರು ಕಾರಣ ಎನ್ನುತ್ತಾರೆ ಅವರ ಸ್ನೇಹಿತರು. ಬೃಂದಾ ತುಂಬಾನೇ ಲವಲವಿಕೆಯ ಹುಡುಗಿ, ಇವರಿಬ್ಬರ ಬದುಕು ಮತ್ತಷ್ಟು ಸುಂದರವಾಗಲಿ ಎಂಬುವುದೇ ನಮ್ಮ ಹಾರೈಕೆ.



Click it and Unblock the Notifications