Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
7 ಕೋಟಿ ಮಗನ ಹೆಸರಿಗೆ ಬರೆದ ತಾಯಿಗೆ ಈಗ ವೃದ್ಧಾಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲ!
ನಾವು ದುಡಿದಿರುವ ಆಸ್ತಿಯೆಲ್ಲಾ ಇನ್ಯಾರಿಗೆ ನಮ್ಮ ಮಕ್ಕಳಿಗೆ ತಾನೆ? ಎಂಬ ಭಾವನೆ ಪ್ರತಿಯೊಬ್ಬ ತಂದೆ ತಾಯಿಯಲ್ಲಿ ಇರುತ್ತದೆ. ಒಂದು ಮಗು ಜನಿಸಿದಲ್ಲಿಂದ ತಂದೆ ತಾಯಿ ಒಂದೊಂದು ರುಪಾಯಿ ಕೂಡಿಡುವುದು ಮಕ್ಕಳಿಗಾಗಿ, ಮಕ್ಕಳು ಬೆಳೆಯುತ್ತಿದ್ದಂತೆ ಅವರಿಗೆ ಆ ಮಕ್ಕಳ ಮೇಲೆ ಬೆಟ್ಟದಷ್ಟು ಭರವಸೆ.

ಅವರು ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ವಯಸ್ಸಾದಾಗ ಯಾವುದೇ ಆತಂಕವಿಲ್ಲದೆ ಮಕ್ಕಳು-ಮೊಮ್ಮಕ್ಕಳ ಜೊತೆ ಅರಾಮವಾಗಿ ಕಳೆಯಬಹುದೆಂಬ ಆಲೋಚನೆ, ಅಲ್ಲದೆ ನಮ್ಮ ಮಕ್ಕಳು ಅದರಲ್ಲಿಯೂ ಮಗನ ಬಗ್ಗೆ ಅಷ್ಟೊಂದು ನಂಬಿಕೆ... ಇದೆಲ್ಲಾ ಬೇಡ ಎಂದು ಹೇಳುತ್ತಿಲ್ಲ, ಆದರೆ ನೀವು ನೀವು ಮಾಡಿಟ್ಟ ಆಸ್ತಿಯನ್ನೆಲ್ಲಾ ಮಕ್ಕಳ ಹೆಸರಿನಲ್ಲಿ ಬರೆದಿಡುವ ಬಗ್ಗೆ ಆಲೋಚನೆ ಬೇಡ, ನಿಮ್ಮ ಕಾಲ ನಂತರ ಅವರಿಗೆ ತಾನೆ ಅದು ಸೇರುವುದು, ಹಾಗಾಗಿ ನೀವು ಇರುವಾಗಲೇ ನೀವು ಮಾಡಿಟ್ಟ ಆಸ್ತಿ ಅವರಿಗೆ ನೀಡುವ ಆಲೋಚನೆ ಮಾಡಲೇಬೇಡಿ. ಏಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ ಈ ಆಡಿಯೋ ಕೇಳಿ, ಈ ತಾಯಿಯ ಮಾತು ಕೇಳುತ್ತಿದ್ದರೆ ನಮ್ಮ ಕರುಳು ಚುರ್ ಅನ್ನುತ್ತೆ, ಅಯ್ಯೋ ಇಂಥ ಸ್ಥಿತಿ ಯಾರಿಗೂ ಬರಬಾರದು ಎಂದನಿಸುವುದು.
ಜಯರಾಜ್ ನಾಯ್ಡು ದಂಪತಿ ಆಸರೆ ಎಂಬ ಅನಾಥ ಆಶ್ರಮ ನಡೆಸುತ್ತಿದ್ದಾರೆ. ನೂರಾರು ಅನಾಥ ಜೀವಗಳಿಗೆ ಯಾರು ಇಲ್ಲದಿದ್ದರೆ ಏನಂತೆ, ನಾವು ನಿಮ್ಮ ಜೊತೆ ಇದ್ದೀವಿ ಎಂದು ಭರವಸೆ ಬೆಳಕಾಗಿದ್ದಾರೆ, ಅವರಿಗೆ ಅಮೆರಿಕದಿಂದ ಬಂದ ಫೋನ್ ಕಾಲ್ ಅನ್ನು ಅವರು ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ.
ಅವರಿಗೆ ಫೋನ್ ಮಾಡಿದ ಮಹಿಳೆ ನಾನೀಗ ಅಮೆರಿಕದಲ್ಲಿದ್ದೀನಿ ನಾನು ನಿಮ್ಮ ಆಶ್ರಮಕ್ಕೆ ಬಂದರೆ ಸೇರಿಸಿಕೊಳ್ಳುತ್ತೀರಾ ಎಂದು ಕೇಳುವಾಗ ಅಯ್ಯೋ ಅನಿಸುತ್ತೆ, ಇವರು ಅವರ ಬಗ್ಗೆ ವಿಚಾರಿಸಿದಾಗ ಹೇಳುತ್ತಾರೆ, ಅವರು ಬೆಂಗಳೂರಿನಲ್ಲಿ ವಾಸವಿದ್ದರು, ಮಗನನ್ನು ಚೆನ್ನಾಗಿ ಓದಿಸಿದರು ಅವನಿಗೆ ಅಮರಿಕದಲ್ಲಿ ಕೆಲಸ ಸಿಗುತ್ತೆ, ಇರುವುದು ಒಬ್ಬನೆ ಮಗ, ಅವರಿಗೆ ಬರೋಬರಿ ಏಳು ಕೋಟಿ ಆಸ್ತಿ ಇತ್ತಂತೆ ಎಲ್ಲಾ ಆಸ್ತಿ ಮಗನ ಹೆಸರಿನಲ್ಲಿ ಮಗ-ಸೊಸೆ ಇರಲು ಹೋಗುತ್ತಾರೆ, ಅಲ್ಲಿಂದ ಅವರಿಗೆ ಸಮಸ್ಯೆ ಶುರುವಾಗುತ್ತೆ, ಮಗ-ಸೊಸೆ ಜೊತೆ ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತೆ, ಅವರ ಚುಚ್ಚು ಮಾತುಗಳು ಈ ತಾಯಿಗೆ ಹಿಂಸೆ ಆಗುತ್ತೆ, ಇವರ ಕೈಯಲ್ಲಿ ದುಡ್ಡಿಲ್ಲ, ಔಷಧಿಗೂ ಪರದಾಡುವಂತಾಗಿದೆ ಈಗ ನನ್ನನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವುದಾದರೆ ಬರುತ್ತೇನೆ ಅಂತಿದ್ದಾರೆ ಅ ತಾಯಿ.
ಇದು ಆ ತಾಯಿಯೊಬ್ಬರ ಕತೆಯಲ್ಲ, ಮಕ್ಕಳಿಗೆ ತಾವು ಮಾಡಿಟ್ಟ ಆಸ್ತಿಯೆಲ್ಲಾ ಕೊಟ್ಟು ನಂತರ ಮಕ್ಕಲು ನೋಡಿಕೊಳ್ಳದೆ ವೃದ್ಧಾಶ್ರಮ, ಅನಾಥ ಆಶ್ರಮ ಸೇರುವ ಎಷ್ಟೋ ವೃದ್ಧರಿದ್ದಾರೆ. ಮಕ್ಕಳು-ಮಕ್ಕಳು ಎಂಬ ಮಮಕಾರದಲ್ಲಿ ವಯಸ್ಸು ಇರುವಾಗ ಎಲ್ಲವೂ ಮಕ್ಕಳಿಗಾಗಿ ಮಾಡಿ, ಇದೀಗ ಇಳಿ ಪ್ರಾಯದಲ್ಲಿ ಮಕ್ಕಳಿಗೆ ಭಾರವಾಗಿ ಅನಾಥರಾಗುತ್ತಿದ್ದಾರೆ.
ಮಕ್ಕಳಿಗಾಗಿ ಆಸ್ತಿ ಮಾಡಿ ಆದರೆ ನೀವು ಇರುವಾಗಲೇ ಎಲ್ಲವನ್ನು ಅವರಿಗೆ ಕೊಡಬೇಡಿ
ಅಷ್ಟು ಕೋಟಿಗಳ ರೇಮಂಡ್ ಕಂಪನಿಯ ಒಡೆಯನಿಗೆ ಆದ ಕತೆ ನಿವು ಕೇಳಿರುತ್ತೀರಿ, ಅಷ್ಟೆಲ್ಲಾ ಸಾವಿರ ಕೋಟಿ ಆಸಸ್ತಿ ಮಾಡಿದರೂ ಎಲ್ಲಾ ಆಸ್ತಿ ಮಗನಿಗೆ ಬರೆದು ಬೀದಿಗೆ ಬಿದ್ದರು ಇಂಥ ಎಷ್ಟೋ ಕತೆಗಳಿವೆ. ಮಕ್ಕಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ಆಸ್ತಿ ಅವರ ಹೆಸರಿನಲ್ಲಿ ಬರೆಯಬೇಡಿ, ಆಸ್ತಿಯೆಲ್ಲಾ ನಿಮ್ಮ ಹೆಸರಿನಲ್ಲಿಯೇ ಇರಲಿ, ಆವಾಗ ಆಸ್ತಿ ನಿಮ್ಮಲ್ಲಿದೆ ಎಂಬ ಕಾರಣಕ್ಕಾದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು.
ಇದು ಎಲ್ಲಾ ಮಕ್ಕಳಿಗೆ ಅನ್ವಯಿಸಲ್ಲ, ಅಪ್ಪ-ಅಮ್ಮನಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ಕಣ್ರೆಪ್ಪೆ ರೀತಿ ಕಾಪಾಡುವ ಮಕ್ಕಳಿಗೇನು ಕೊರತೆಯಿಲ್ಲ, ಅದೇ ರೀತಿ ಪೋಷಕರಿಗೆ ತುತ್ತು ಆಹಾರ ನೀಡದ ಮಕ್ಕಳು ಕೂಡ ಇದ್ದಾರೆ.



Click it and Unblock the Notifications
