Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಪ್ರೀತಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಬಾರದು ಯಾಕೆ ಗೊತ್ತಾ?
ನಮಗೆ ಒಬ್ಬರ ಮೇಲೆ ಪ್ರೀತಿ ಆಗಬೇಕಾದರೆ ಕಾರಣ ಬೇಕಾಗಿಲ್ಲ. ಬಹಳ ಬೇಗನೇ ಪ್ರೀತಿಯಲ್ಲಿ ಬಿದ್ದು ಬಿಡುತ್ತೇವೆ. ಅದೇ ರೀತಿ ಆ ಪ್ರೀತಿಯಿಂದ ದೂರ ಹೋಗಬೇಕಾದ ಸಂದರ್ಭದಲ್ಲೂ ನಾವು ಒಂದೂ ಚೂರು ಯೋಚಿಸೋದಿಲ್ಲ. ಭವಿಷ್ಯದ ಬಗ್ಗೆ ಚಿಂತೆನೇ ಮಾಡೋದಿಲ್ಲ. ಏಕಾಏಕಿ ಪ್ರೀತಿಗೆ ಗುಡ್ ಬಾಯ್ ಹೇಳುತ್ತೇವೆ. ಪ್ರೀತಿ ಅನ್ನೋದು ಪವಿತ್ರವಾದ ಸಂಬಂಧ ಇದರಿಂದ ಹೊರ ಬರಬೇಕು ಅಂತ ಅಂದುಕೊಳ್ಳುವ ಮೊದಲು ನೂರು ಸಲ ಆಲೋಚಿಸೋದು ಒಳ್ಳೆಯದು. ಅಷ್ಟಕ್ಕು ಪ್ರೀತಿಯನ್ನು ಎಂದಿಗೂ ಬಿಟ್ಟು ಕೊಡಬಾರದು ಯಾಕೆ ಅನ್ನೋದನ್ನು ತಿಳಿಯೋಣ.
1. ಇದಕ್ಕಿಂತ ಒಳ್ಳೆಯ ಪ್ರೀತಿ ಮುಂದೆ ಸಿಗದಿರಬಹುದು
ಕೆಲವೊಂದು ಸಲ ನಾವು ಸಣ್ಣ-ಪುಟ್ಟ ಕಾರಣಗಳಿಗಾಗಿ ನಾವು ಪ್ರೀತಿಸುತ್ತಿರುವವರನ್ನು ಬಿಡೋದಕ್ಕೆ ನಿರ್ಧಾರ ಮಾಡುತ್ತೇವೆ. ನಮ್ಮ ಮನಸ್ಸಿನಲ್ಲಿ ಏನಿರುತ್ತೆ ಅಂದ್ರೆ ಭವಿಷ್ಯದಲ್ಲಿ ನನಗೆ ಇದಕ್ಕಿಂತ ಉತ್ತಮ ಪ್ರೀತಿ ಸಿಗಬಹುದು ಅನ್ನೋ ದೃಢವಾದ ನಂಬಿಕೆ ಇರುತ್ತೆ. ಆದ್ರೆ ಮುಂದೆ ಸಿಗುವವರು ಇವರಿಗಿಂತ ಒಳ್ಳೆಯವರು ಆಗಿರದಿದ್ದರೆ ಖಂಡಿತ ನೀವು ಪಶ್ಚಾತಾಪ ಪಡಬೇಕಾಗುತ್ತದೆ. ಹೀಗಾಗಿ ಯಾವತ್ತೂ ದುಡಿಕಿ ನಿರ್ಧಾರ ತೆಗೆದುಕೊಳ್ಳೋದಕ್ಕೆ ಹೋಗಲೇಬೇಡಿ.

2. ನೀವು ಯಶಸ್ವಿ ಸಂಬಂಧವನ್ನು ಕಳೆದುಕೊಳ್ಳುತ್ತೀರಿ
ಇಷ್ಟ ದಿನ ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದವರು ಏಕಾಏಕಿ ನಿಮಗೆ ಬೇಡ ಅಂತ ಅನ್ನಿಸಿ ಬಿಡಬಹುದು. ಯಾವುದೋ ಒಂದು ಸಣ್ಣ ಕಾರಣಕ್ಕೆ ಕ್ಯಾತೆ ತೆಗೆದು ನೀವು ಸಂಬಂಧದಿಂದ ಹೊರ ಬರೋದಕ್ಕೆ ನಿರ್ಧಾರ ಮಾಡಿದ್ದೀರಿ. ಒಂದು ಕ್ಷಣ ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ನೀವು ಮಾಡುತ್ತಿರೋದು ಸರಿನಾ ಎಂದು? ಯಾಕಂದ್ರೆ ನಿಮ್ಮನ್ನು ಇಷ್ಟ ಪಡುತ್ತಾ, ಕಾಳಜಿ ಮಾಡುವ ಪ್ರಾಮಾಣಿಕ ಪ್ರೀತಿಯನ್ನು ಬಿಟ್ಟು ನೀವು ಹೊರ ನಡೆದರೆ ಮತ್ತೊಂದು ಬಾರಿ ನಿಮಗೆ ಇಂತಹ ಯಶಸ್ವಿ ಪ್ರೀತಿ ಸಿಗುತ್ತೆ ಅಂತ ಹೇಳೋದಿಕ್ಕೆ ಆಗೋದಿಲ್ಲ.
3. ಸಂಬಂಧದಲ್ಲಿ ನಂಬಿಕೆ ಕಳೆದುಕೊಳ್ಳುತ್ತೀರಿ
ಯಾರೋ ಒಬ್ಬರು ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿರುತ್ತಾರೆ. ನಿಮಗಾಗಿ ಪ್ರಾಣ ಕೊಡೋದಕ್ಕೂ ಸಿದ್ಧರಿರುತ್ತಾರೆ. ಬಹುಶಃ ನಿಮ್ಮ ಅಪ್ಪ- ಅಮ್ಮಾ ಬಿಟ್ಟರೆ ನಿಮ್ಮನ್ನು ಹೆಚ್ಚು ಕಾಳಜಿ ಮಾಡುವ ಜೀವ ಅದು. ಅಂತವರನ್ನೇ ನೀವು ಸಣ್ಣ ಪುಟ್ಟ ಕಾರಣಕ್ಕೆ ಬಿಟ್ಟು ಬಂದಿದ್ದೀರಿ. ಇದರ ಅರ್ಥ ನೀವು ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದೀರಿ ಎಂದು. ಹೀಗಿರುವಾಗ ಮುಂದಿನ ಸಂಬಂಧದಲ್ಲಿ ನಿಮಗೆ ನಂಬಿಕೆ ಹುಟ್ಟೋದಕ್ಕೆ ಸಾಧ್ಯಾನಾ ಖಂಡಿತ ಇಲ್ಲ. ಅದನ್ನೂ ಕೂಡ ನೀವು ಸಣ್ಣ- ಪುಟ್ಟ ಕಾರಣಕ್ಕೆ ದೂರ ಮಾಡೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ.
4. ತಪ್ಪಿತಸ್ಥ ಭಾವನೆ ನಿಮ್ಮನ್ನು ಕಾಡಬಹುದು
ಕೆಲವೊಂದು ಸಾರಿ ಏನಾಗುತ್ತೆ ಎಂದರೆ ನಾವು ತುಂಬಾ ಸುಲಭವಾಗಿ ಸಂಬಂಧದಿಂದ ಆಚೆ ಬಂದು ಬಿಡುತ್ತೇವೆ. ಆದರೆ ನಮ್ಮನ್ನು ಪ್ರಾಣಕ್ಕಿಂತ ಪ್ರೀತಿಸುತ್ತಿದ್ದವರ ಮೌಲ್ಯ ಏನು ಅಂತ ಗೊತ್ತಾದಾಗ ನಾವು ನೊಂದುಕೊಳ್ಳೋದಕ್ಕೆ ಶುರು ಮಾಡುತ್ತೇವೆ. ನಾವು ಪ್ರೀತಿಸುತ್ತಿದ್ದವರು ಈಗ ಬೇರೆಯವರ ಜೊತೆಗೆ ಇದ್ದು, ಅವರಿಬ್ಬರು ಸುಂದರವಾಗಿ ಸಂಸಾರ ನಡೆಸುತ್ತಿದ್ದರೆ ನಮಗೆ ಆಗ ನೋವು ಕಾಡೋದಕ್ಕೆ ಶುರು ಆಗುತ್ತದೆ. ತಪ್ಪಿತಸ್ಥ ಭಾವನೆ ಮೂಡಿದ. ಮಾಡಿದ ತಪ್ಪಿನ ಅರಿವು ನಮಗೆ ಖಂಡಿತ ಆಗುತ್ತದೆ.
5. ಪ್ರೀತಿ ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿರಬಹುದು
ನಾವು ಪ್ರೀತಿಯಲ್ಲಿ ಬಿದ್ದ ಮೇಲೆ ಖಂಡಿತ ನಮ್ಮ ಅನೇಕ ಗುಣ-ನಡೆತೆಗಳು ಬದಲಾಗಿರುತ್ತದೆ. ನಾವು ಪ್ರೀತಿಸಿದವರು ನಮ್ಮ ಗುಣ ನಡತೆ ಸರಿ ಇಲ್ಲದಿದ್ದರೆ ಅದನ್ನು ಸರಿಪಡಿಸೋದಕ್ಕೆ ಹೇಳುತ್ತಾರೆ. ನಮಗಾಗಿ ಅಲ್ಲದಿದ್ದರೂ ಕೂಡ ಪ್ರೀತಿಸಿದವರಿಗಾಗಿ ನಾವು ಬದಲಾಗಿ ಇರುತ್ತೇವೆ. ಈ ಬದಲಾವಣೆ ನಮ್ಮನ್ನು ಒರ್ವ ಉತ್ತಮ ವ್ಯಕ್ತಿಯನ್ನಾಗಿ ಮಾಡಿರಬಹುದು. ಇಂತಹ ವ್ಯಕ್ತಿಯನ್ನು ನೀವು ಬಿಟ್ಟು ಹೋಗೋದಕ್ಕೆ ತಯಾರಿದ್ದೀರಾ? ಹೇಳಿ.
6. ಒಂಟಿತನ ಕಾಡುತ್ತದೆ
ಪ್ರೀತಿಸಿದವರು ನಮ್ಮ ಜೊತೆಗಿದ್ದಾಗ ನಮಗೆ ಎಲ್ಲವೂ ಚೆಂದ ಅನ್ನೋ ಭಾವನೆ ಕಾಡೋದಕ್ಕೆ ಶುರುವಾಗುತ್ತದೆ. ಪ್ರತಿ ಸಾರಿ ನಾವು ನೋವಿನಲ್ಲಿ ಇದ್ದಾಗ ಅವರು ನಮ್ಮ ಜೊತೆಯಲ್ಲಿಯೇ ಇದ್ದರು. ನಾವು ಅವರ ಜೊತೆಗೆ ಎಷ್ಟೋ ಖುಷಿಯ ಕ್ಷಣಗಳನ್ನು ಕಳೆದಿದ್ದೇವೆ. ಇಂತಹ ಪ್ರೀತಿಯನ್ನು ನೀವು ಏಕಾಏಕಿ ಬಿಟ್ಟು ನಡೆದರೆ ಖಂಡಿತ ನಿಮಗೆ ಒಂಟಿ ಎಂಬ ಭಾವನೆ ಕಾಡದೇ ಇರೋದಿಲ್ಲ.
ಈ ಎಲ್ಲಾ ಕಾರಣಗಳಿಗಾದ್ರೂ ನೀವು ಅಷ್ಟು ಸುಲಭವಾಗಿ ನಿಮ್ಮ ಪ್ರೀತಿಯನ್ನು ಬಿಟ್ಟು ಹೊರನಡೆಯಬಾರದು. ಕೊಂಚ ತಾಳ್ಮೆಯಿಂದ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.



Click it and Unblock the Notifications
