Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಆ ಒಂದು ಮಾತು ನಿಮ್ಮ ಸಂಸಾರವನ್ನೇ ಬೆಳಗಿಸಿಬಿಡಬಹುದು !
ಸುಖಿ ದಾಂಪತ್ಯದ ಸೂತ್ರ ಏನು ಎಂದು ಕೇಳಿದರೆ ಅನೇಕರು, ಪ್ರೀತಿ, ಪ್ರಾಮಾಣಿಕತೆ, ನಂಬಿಕೆ ಎಂದೆಲ್ಲಾ ಹೇಳುತ್ತಾರೆ. ಆದರೆ ಅದಕ್ಕಿಂತ ಮುಖ್ಯವಾದುದು ಗಂಡ-ಹೆಂಡತಿ ನಡುವಿನ ಸಂವಹನ. ದಂಪತಿಗಳಿಬ್ಬರ ನಡುವೆ ಪ್ರಬಲವಾದ ಸಂವಹನ ಇದ್ದಾಗ ಮಾತ್ರ ದಾಂಪತ್ಯದಲ್ಲಿ ಸುಖವಾಗಿರೋದಕ್ಕೆ ಸಾಧ್ಯ. ಇಬ್ಬರ ನಡುವಿನ ಕಷ್ಟ-ಸುಖಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ, ಬೇಕು ಬೇಡಗಳ ಬಗ್ಗೆ ವಿಚಾರಿಸಬೇಕಾದರೆ ಸಂವಹನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಸಂವಹನ ಯಾವ ರೀತಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಅನ್ನೋದ್ರ ಬಗ್ಗೆ ತಿಳಿಯೋಣ.

ಸಂಬಂಧದಲ್ಲಿ ಸಂವಹನ ಯಾಕೆ ಮುಖ್ಯ?
1. ಸಂಗಾತಿಯ ಸಮಸ್ಯೆಯ ಬಗ್ಗೆ ಅರಿತುಕೊಳ್ಳಬಹುದು
ಕೆಲವೊಂದು ಸಲ ಮನೆಯಲ್ಲಿ ನೋಡಿದ ಹುಡುಗ/ಹುಡುಗಿಯನ್ನು ಮದುವೆಯಾಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಇಬ್ಬರ ನಡುವಿನ ಸಂವಹನ ಕಡಿಮೆ ಇರುತ್ತದೆ. ಕೆಲವೊಂದು ಜೋಡಿಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ. ಹೀಗಾಗಿ ನಿಮ್ಮ ಸಂಗಾತಿಯ ಜೀವನದಲ್ಲಿ ಏನಾಗುತ್ತಿದೆ. ಅನ್ನೋದ್ರ ಸಣ್ಣ ಸುಳಿವು ಕೂಡ ನಿಮಗೆ ಇರೋದಿಲ್ಲ. ಯಾವಾಗ ಮನಬಿಚ್ಚಿ ಮಾತನಾಡುತ್ತಿರೋ ಆಗ ಮಾತ್ರ ಅವರ ಕಷ್ಟ-ನಷ್ಟ, ನೋವು-ನಲಿವುಗಳ ಬಗ್ಗೆ ನಮಗೆ ತಿಳಿಯುತ್ತದೆ.
2. ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ
ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿಯ ನಡುವೆ ಮಾತುಕತೆಯೇ ಇರೋದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮಾತನಾಡುತ್ತಾರೆ. ಆದರೆ ಇದು ಸರಿಯಾದ ವಿಧಾನವಲ್ಲ. ದಂಪತಿಗಳ ನಡುವೆ ಸಂವಹನ ಮುಖ್ಯ. ಸಂವಹನ ಹೆಚ್ಚಾದಷ್ಟು ಇಬ್ಬರ ನಡುವಿನ ಅನುಬಂಧ ಹೆಚ್ಚಾಗುತ್ತದೆ. ದಿನದಿಂದ ದಿನಕ್ಕೆ ಇಬ್ಬರ ನಡುವಿನ ಪ್ರೀತಿ ಕೂಡ ಹೆಚ್ಚಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಂವಹನ ನೆರವಾಗುತ್ತದೆ.
3. ಸಂಸಾರಿಕ ತೃಪ್ತಿ ಇರಬೇಕು
ಮದುವೆಯಾಗುವ ಉದ್ದೇಶವೇ ಕೊನೆವರೆಗೂ ಸಂತೋಷದಿಂದ ಕೂಡ ಬಾಳಬೇಕು ಎನ್ನವ ಕಾರಣಕ್ಕಾಗಿ. ಆದರೆ ದಂಪತಿಗಳ ನಡುವೆ ಮಾತುಕತೆ ಇಲ್ಲದೇ ಹೋದರೆ ದಾಂಪತ್ಯ ಸುಖವನ್ನು ಅನುಭವಿಸೋದಾದರೂ ಹೇಗೆ? ಲೈಂಗಿಕ ಕ್ರಿಯೆಯು ಹಾಗೆಯೇ ಒತ್ತಾಯ ಪೂರ್ವಕವಾಗಿ ನಡೆಸಬಾರದು. ಇಬ್ಬರು ಒಪ್ಪಿದ ನಂತರವಷ್ಟೇ ಲೈಂಗಿಕ ಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಏನು ಪ್ರಯೋಜನ? ಒಬ್ಬರ ಸಂತೋಷಕ್ಕಾಗಿ ಮತ್ತೊಬ್ಬರ ಸಂತೋಷವನ್ನು ಬಲಿ ಕೊಡಲೇಬಾರದು. ಸಂವಹನ ಪ್ರಬಲವಾಗಿದ್ದಾಗ ಈ ಸಮಸ್ಯೆಗಳು ಬರೋದೇ ಇಲ್ಲ.
4. ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವ ಹೆಚ್ಚಾಗುತ್ತದೆ
ದಾಂಪತ್ಯದಲ್ಲಿ ಸಂವಹನ ಯಾಕೆ ಮುಖ್ಯವೆಂದರೆ ಇದು ನಿಮ್ಮಿಬ್ಬರ ನಡುವಿನ ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವವನ್ನು ಹೆಚ್ಚು ಮಾಡುತ್ತದೆ. ದಂಪತಿಗಳ ನಡುವೆ ಮಾತುಕತೆ ಇರದಿದ್ದರೆ ಒಬ್ಬರ ಬಾಳಲ್ಲಿ ಏನಾಗುತ್ತಿದೆ ಅನ್ನೋದು ಇನ್ನೊಬ್ಬರಿಗೆ ಗೊತ್ತಾಗೋದಿಲ್ಲ. ಇಬ್ಬರೂ ಒಂದೇ ಮನೆಯಲ್ಲಿದ್ದರೂ ಕೂಡ ವೈಯಕ್ತಿಕವಾಗಿ ಬದುಕುತ್ತಿರುತ್ತಾರೆ. ನಮ್ಮವರು ಅನ್ನೋ ಭಾವನೆಯೇ ಬರೋದಿಲ್ಲ. ಸಂವಹನ ಇದ್ದಾಗ ಮಾತ್ರ ಒಬ್ಬರ ಮೇಲೊಬ್ಬರಿಗೆ ನಂಬಿಕೆ, ವಿಶ್ವಾಸ, ಗೌರವ ಹೆಚ್ಚಾಗೋದು.
5. ಬಾಂಧವ್ಯ ಗಟ್ಟಿಯಾಗುತ್ತದೆ
ಸಂವಹನ ಮಾತಿನ ಮೂಲಕ ಇರಬಹುದು. ಅಥವಾ ನಿಮ್ಮ ಭಾವನೆಗಳನ್ನು ನಿಮ್ಮ ಸಂಗಾತಿಗೆ ವ್ಯಕ್ತ ಪಡಿಸುವುದನ್ನು ಕೂಡ ನಾವು ಸಂವಹನ ಎಂದು ಕರೆಯುತ್ತೇವೆ. ದಂಪತಿಗಳ ನಡುವೆ ಯಾವುದೇ ವಿಚಾರದಲ್ಲೂ ಮುಚ್ಚು ಮರೆ ಅನ್ನೋದು ಇರಬಾರದು. ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳಬೇಕು. ಇದಕ್ಕೆ ಸಂವಹನ ತುಂಬಾನೇ ಮುಖ್ಯ. ಆಗ ಮಾತ್ರ ದಂಪತಿಗಳ ನಡುವಿನ ಭಾಂದವ್ಯ ಗಟ್ಟಿಯಾಗೋದಕ್ಕೆ ಸಾಧ್ಯ.
6. ಜಗಳ, ಮನಸ್ಥಾಪ ದೂರವಾಗುತ್ತದೆ
ದಾಂಪತ್ಯ ಅಂದ ಮೇಲೆ ಅಲ್ಲಿ ಸರಸ-ವಿರಸ, ಜಗಳ, ಮನಸ್ಥಾಪ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಹಾಗಂತ ಜಗಳವಾಯಿತು ಎಂದು ಪತಿಯ ಜೊತೆಗೆ ಮಾತನಾಡದೇ ಇರೋದು ಸರಿಯಲ್ಲ. ಇದು ನಿಮ್ಮಿಬ್ಬರನ್ನು ಮತ್ತಷ್ಟು ದೂರವಾಗಿಸುತ್ತದೆ. ಹೀಗಾಗಿ ಸಂಗಾತಿಯ ಜೊತೆಗೆ ಮುಕ್ತವಾಗಿ ಮಾತನಾಡಿ. ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಒಂದೇ ಒಂದು ಮಾತು ನಿಮ್ಮಿಬ್ಬರನ್ನು ಒಂದು ಮಾಡುತ್ತೆ ಎಂದಾದರೆ ಮಾತನಾಡೋದ್ರಲ್ಲಿ ತಪ್ಪಿದ್ಯಾ? ಖಂಡಿತ ಇಲ್ಲ.
ಪ್ರೀತಿಯ ಬಂಧ ಗಟ್ಟಿಯಾಗಬೇಕೆಂದರೆ ಸಂವಹನ ತುಂಬಾನೇ ಮುಖ್ಯ. ಯಾವುದೇ ಕಾರಣಕ್ಕೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡದೇ ಇರಲೇ ಬೇಡಿ. ಏನಿದ್ದರೂ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.



Click it and Unblock the Notifications

