Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
20 ವರ್ಷಗಳ ದಾಂಪತ್ಯ ಏಕಾಏಕಿ ಮುರಿದು ಬೀಳೋದಕ್ಕೆ ಕಾರಣವೇನು?
ನಮಗೆ ಒರ್ವ ವ್ಯಕ್ತಿಯ ಜೊತೆಗೆ ಬದುಕೋದಿಕ್ಕೆ ಸಾಧ್ಯವೇ ಇಲ್ಲ ಅಂತಾದಾಗ ದಂಪತಿಗಳಿಬ್ಬರೂ ಸೇರಿ ವಿಚ್ಛೇದನ ಪಡೆದುಕೊಳ್ಳೋದಕ್ಕೆ ಮುಂದಾಗುತ್ತಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಳ್ಳುವುದು ಬಹು ದೊಡ್ಡ ವಿಚಾರ ಅನ್ನಿಸೋದಿಲ್ಲ. ಆದರೆ 20 ವರ್ಷ ಸಂಸಾರ ನಡೆಸಿದ ಮೇಲೆ ಯಾಕೆ ಒರ್ವ ವ್ಯಕ್ತಿ ವಿಚ್ಛೇದ ಪಡೆಯೋದಕ್ಕೆ ನಿರ್ಧರಿಸೋದು ಯಾಕೆ? ಅಷ್ಟಕ್ಕು ಎರಡು ದಶಕಗಳ ಕಾಲ ದಾಂಪತ್ಯ ನಡೆಸಿದ ಮೇಲೂ ಈ ಸಂಬಂಧಕ್ಕೆ ಎಳ್ಳು-ನೀರು ಬಿಡೋದಕ್ಕೆ ನಿರ್ಧರಿಸೋದಕ್ಕೆ ಕಾರಣವೇನು ಅನ್ನೋದನ್ನು ತಿಳಿಯೋಣ.
1. ದಾಂಪತ್ಯದಲ್ಲಿ ಪ್ರೀತಿಯನ್ನು ಕಳೆದುಕೊಂಡಾಗ
ಕೆಲ ದಂಪತಿಗಳು ಒಟ್ಟಾಗಿ ಜೀವನ ನಡೆಸುತ್ತಿರುತ್ತಾರೆ. ಹಾಗೂ ಅವರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿಭಾಯಿಸುತ್ತಾ ಇರುತ್ತಾರೆ. ದಂಪತಿಗಳಿಬ್ಬರೂ ತಮ್ಮ ಕುಟುಂಬದ ಏಳಿಗೆಗಾಗಿ ದುಡಿಯುತ್ತಿರುತ್ತಾರೆ. ಮಕ್ಕಳ ಪೋಷಣೆ ಮಾಡುತ್ತಾರೆ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಆದರೆ ಅವರಿಬ್ಬರ ಮಧ್ಯೆ ಹೇಳಿಕೊಳ್ಳುವಂತಹ ಪ್ರೀತಿ ಇರೋದಿಲ್ಲ.

ಹದಿನೈದರಿಂದ ಇಪ್ಪತ್ತು ವರ್ಷಗಳಲ್ಲಿ ಅವರು ಜವಾಬ್ದಾರಿಯನ್ನು ನಿಭಾಯಿಸೋದಕ್ಕಾಗಿಯೇ ಬದುಕುತ್ತಿರುತ್ತಾರೆ ಹೊರತು ಇಬ್ಬರ ಮಧ್ಯೆ ಆರಂಭದಲ್ಲಿದ್ದ ಆ ಪ್ರೀತಿ ಇರೋದಿಲ್ಲ. ಯಾವಾಗ ಅವರಿಗೆ ಈ ವಿಚಾರ ಗೊತ್ತಾಗುತ್ತೋ ಆಗ ನಾವಿಬ್ಬರು ಒಟ್ಟಾಗಿ ಬದುಕುತ್ತಿರೋದೇ ವ್ಯರ್ಥ ಅನ್ನಿಸೋದಕ್ಕೆ ಶುರುವಾಗುತ್ತದೆ. ಇಬ್ಬರು ಬೇರೆಯಾಗಲು ನಿರ್ಧರಿಸುತ್ತಾರೆ.
2. ಸ್ವತಂತ್ರವಾಗಿ ಬದುಕಲು ಇಚ್ಛಿಸಿದಾಗ
ದಾಂಪತ್ಯದಲ್ಲಿ ಹಲವು ವರ್ಷಗಳು ಕಳೆದ ನಂತರ ಕೆಲವರಿಗೆ ಸ್ವತಂತ್ರವಾಗಿ ಬದುಕಬೇಕು ಅನ್ನೋ ಆಸೆ ಶುರುವಾಗುತ್ತೆ. ಇಷ್ಟು ವರ್ಷಗಳಲ್ಲಿ ಗಂಡ, ಮಕ್ಕಳು ನೋಡಿಕೊಳ್ಳೋದ್ರಲ್ಲೇ ಆಕೆಯ ಜೀವ ಸವೆಸಿ ಬಿಟ್ಟಿರುತ್ತಾಳೆ. ಮನೆಯಲ್ಲೇ ಇರೋದ್ರಿಂದ ಒಂದೊಂದು ರೂಪಾಯಿಗೂ ಗಂಡನ ಬಳಿ ಕೈ ಚಾಚಬೇಕಾದ ಪರಿಸ್ಥಿತಿ ಇತ್ತು. ಇನ್ನೇನು ಮಕ್ಕಳು ತಮ್ಮ ಕಾಲಲ್ಲಿ ನಿಂತಿದ್ದಾರೆ. ಈಗ ಆಕೆಗೆ ಎಲ್ಲರನ್ನೂ ಬಿಟ್ಟು ಸ್ವತಂತ್ರವಾಗಿ ಬದುಕಬೇಕೆನ್ನುವ ಬಯಕೆ ಶುರುವಾಗಿದೆ.
3. ಬಗೆಹರಿಸಲಾಗದ ಹಳೆಯ ಸಮಸ್ಯೆಗಳು
ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಯಾರಿಗೆ ಇರಲ್ಲ ಹೇಳಿ. ಆದರೆ ಕೆಲವು ಸಂಬಂಧಗಳಲ್ಲಿ ಬಗೆಹರಿಸಲಾಗದೇ ಇರುವ ಸಮಸ್ಯೆಗಳು ಇರುತ್ತವೆ. ನಿತ್ಯ ಗಂಡ-ಹೆಂಡತಿ ಮಧ್ಯೆ ಜಗಳ, ಮನಸ್ಥಾಪ ಇದ್ದೇ ಇರುತ್ತದೆ. ಆದರೆ ಸಮಾಜಕ್ಕಾಗಿ, ಮಕ್ಕಳಿಗಾಗಿ ಒಟ್ಟಾಗಿ ಬದುಕುತ್ತಿರುತ್ತಾರೆ. ಆದ್ರೆ ಇನ್ನು ಸಂಗಾತಿಯ ಜೊತೆಗೆ ಬದುಕೋದಕ್ಕೆ ಸಾಧ್ಯವೇ ಇಲ್ಲ ಅಂತಾದಾಗ ದಶಕಗಳ ದಾಂಪತ್ಯಕ್ಕೆ ತೆರೆ ಎಳೆಯಲಾಗುತ್ತದೆ.
4. ಸಮಾನತೆ ಇಲ್ಲದಿದ್ದಾಗ
ಎಲ್ಲಾ ಸಂಬಂಧಗಳಲ್ಲೂ ಒಬ್ಬರಿಗೊಬ್ಬರು ಗೌರವ ಕೊಡುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಯಾವಾಗ ಮನೆಯಲ್ಲಿ ಒಬ್ಬರೇ ದುಡಿಯುತ್ತಾರೋ ಆಗ ಹೆಚ್ಚಿನ ಸಂದರ್ಭಗಳಲ್ಲಿ ಅವರು ತಮ್ಮ ಸಂಗಾತಿಯ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಸಂಗಾತಿಗೆ ಮರ್ಯಾದೆ, ಗೌರವ ನೀಡೋದಿಲ್ಲ ಅವರನ್ನು ತುಂಬಾನೇ ಕೀಳಾಗಿ ನಡೆಸಿಕೊಳ್ಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಆಕೆ ಇದನ್ನು ಸಹಿಸಿಕೊಂಡು ಕೂರಬೇಕಾಗುತ್ತದೆ.
ಹೌದು, ಮಕ್ಕಳಿಗಾಗಿ ಆಕೆ ತನ್ನ ಖುಷಿ, ಸಂತೋಷವನ್ನು ತ್ಯಾಗ ಮಾಡಿ ಜೀತದಾಳಿನಂತೆ ಕುಟುಂಬಕ್ಕಾಗಿ ದುಡಿಯುತ್ತಾಳೆ. ಆದರೆ ಇನ್ನೇನು ಮಕ್ಕಳು ಬೆಳೆದು ದೊಡ್ಡವರಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಂತಕ್ಕೆ ಬಂದಾಗ ಗಂಡನ ಜೊತೆಗೆ ಆಕೆ ದಾಂಪತ್ಯವನ್ನು ಮುರಿದುಕೊಳ್ಳಲು ಇಚ್ಛಿಸುತ್ತಾಳೆ.
5. ಇಬ್ಬರ ಮಧ್ಯೆ ವಯಸ್ಸಿನ ಅಂತ ಹೆಚ್ಚಿದ್ದಾಗ
ಜನರೇಷನ್ ಗ್ಯಾಪ್ ಸಂಬಂಧ ಮುರಿಯೋದಕ್ಕೆ ಮುಖ್ಯ ಕಾರಣವಾಗುತ್ತದೆ. ಸಾಮಾನ್ಯವಾಗಿ ಗಂಡ-ಹೆಂಡತಿಯ ಮಧ್ಯೆ ಹತ್ತು ವರ್ಷ ಅಂತವಿದ್ದಾಗ ಅವರಿಬ್ಬರ ಆಲೋಚನೆಗಳು, ನಿರ್ಧಾರಗಳು ಹೋಲಿಕೆ ಆಗೋದಿಲ್ಲ. ಇಲ್ಲಿ ಮನಸ್ಥಾಪ ಹೆಚ್ಚಾಗುತ್ತದೆ. ಆದರೆ ಸಮಾಜಕ್ಕೆ ಹೆದರಿ ಅವರು ಸಂಸಾರ ನಡೆಸುತ್ತಾರೆ. ಆದ್ರೆ ಯಾವಾಗ ಏನು ಮಾಡಿದರೂ ಹೊಂದಾಣಿಕೆ ಆಗೋದಿಲ್ಲ ಅಂತ ಗೊತ್ತಾಗುತ್ತೋ ಆಗ ವಿಚ್ಛೇದನ ನೀಡುತ್ತಾರೆ.
6. ಕಿರುಕುಳ ಹೆಚ್ಚಾದಾಗ
ಕೆಲವು ಸಂಬಂಧಗಳಲ್ಲಿ ಗಂಡನು ತನ್ನ ಪತ್ನಿಗೆ ಕಿರುಕುಳ ನೀಡುತ್ತಾನೆ. ಸಣ್ಣ-ಸಣ್ಣ ಕಾರಣಕ್ಕೆ ಆಕೆಗೆ ಹೊಡೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದನ್ನು ಮಾಡುತ್ತಾನೆ. ಯಾರದ್ದೋ ಮೇಲಿನ ಕೋಪವನ್ನು ಮನೆಯಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ತೋರಿಸುತ್ತಾನೆ. ಇಷ್ಟಾದರೂ ಆಕೆ ಆತನ ಜೊತೆಗೆ ಬದುಕುತ್ತಾಳೆ. ಯಾವಾಗ ಆಕೆಗೆ ಮಾನಸಿಕ ಕಿರಿಕಿರಿ ಹೆಚ್ಚಾಗುತ್ತೋ ಹಾಗೂ ಇದಕ್ಕೆಲ್ಲಾ ಕೊನೆಯಿಲ್ಲ ಅನ್ನೋ ವಿಚಾರ ಗೊತ್ತಾದಾಗ ಆ ಸಂಬಂಧಕ್ಕೆ ತಿಲಾಂಜಲಿ ಇಡೋದಕ್ಕೆ ನಿರ್ಧರಿಸುತ್ತಾಳೆ.
ನಮ್ಮ ಭಾವನೆಗಳಿಗೆ, ನಮ್ಮ ಪ್ರೀತಿಗೆ ಬೆಲೆ ಸಿಗದಿರೋ ಕಡೆ ಬದುಕುವುದು ವ್ಯರ್ಥ. ಎಷ್ಟು ವರ್ಷ ಜೀವನ ನಡೆಸಿದ್ದೇವೆ ಅನ್ನೋದಕ್ಕಿಂತ ಹೇಗೆ ಜೀವನ ನಡೆಸುತ್ತಿದ್ದೇವೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಒಬ್ಬರ ಜೊತೆಗೆ ಒತ್ತಾಯದ ಜೀವನ ನಡೆಸೋದಕ್ಕಿಂತ ಆ ವ್ಯಕ್ತಿಯ ಜೊತೆಗೆ ಸಂಬಂಧ ಕಡಿದುಕೊಳ್ಳುವುದೇ ಒಳ್ಳೆಯದು.



Click it and Unblock the Notifications

