Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಪ್ರೀತಿಯಲ್ಲಿ ಬಿದ್ದವರು ಯಾಕೆ ಪದೇ ಪದೇ ನೋವು ಅನುಭವಿಸುತ್ತಾರೆ?
ಪ್ರೀತಿ ಎಂದ ಮೇಲೆ ಅದ್ರಲ್ಲಿ ಖುಷಿಯೇ ತುಂಬಿಕೊಂಡಿರಬೇಕೆಂದೇನಿಲ್ಲ. ಜಗಳ, ಮನಸ್ಥಾಪಗಳು ನಡೆಯುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಆದರೆ ಅದನ್ನೇ ಚಿಂತಿಸುತ್ತಾ ಕೂರಬಾರದು. ಜೋಡಿಗಳಿಬ್ಬರೂ ಮಾತನಾಡಿ ಮನಸ್ಥಾಪವನ್ನು ಸರಿಪಡಿಸಿಕೊಳ್ಳಬೇಕು. ಆದರೆ ಕೆಲವೊಂದು ಸಲ ಪ್ರೀತಿಯಿಂದ ನಾವು ಶಾಶ್ವತವಾಗಿ ನೋವು ಅನುಭವಿಸೋ ಪರಿಸ್ಥಿತಿ ಎದುರಾಗುತ್ತದೆ. ಅಷ್ಟಕ್ಕು ಪ್ರೀತಿ ಯಾಕೆ ನಮಗೆ ಇಷ್ಟೊಂದು ನೋವು ನೀಡುತ್ತೆ ಅನ್ನೋದನ್ನು ತಿಳಿಯೋಣ.
1. ನಿಮ್ಮ ಸಂಗಾತಿಗೆ ಆಸಕ್ತಿ ಇಲ್ಲದಿದ್ದಾಗ
ಪ್ರೀತಿಯಲ್ಲಿ ಎಲ್ಲರೂ ಪ್ರಾಮಾಣಿಕರಾಗಿ ಇರುತ್ತಾರೆ ಅಂತ ಹೇಳೋದಿಕ್ಕಾಗೋದಿಲ್ಲ. ಕೆಲವು ಜನ ಟೈಂ ಪಾಸ್ ಲವ್ ಮಾಡ್ತಾರೆ. ಅಂತಹ ಪ್ರೀತಿಯಲ್ಲಿ ನೀವೇನಾದರೂ ಬಿದ್ದದ್ದರೆ ನಿಮಗೆ ನೋವಾಗೋದು ಖಂಡಿತ. ಯಾಕಂದ್ರೆ ಈ ಪ್ರೀತಿಯಲ್ಲಿ ಮೊದಲ ಮೊದಲು ಮಾತ್ರ ನೀವು ಖುಷಿಯಾಗಿರುತ್ತೀರಿ. ಸಮಯ ಕಳೆದಂತೆ ನಿಮ್ಮ ಸಂಗಾತಿಯು ನಿಮ್ಮ ಮೇಲೆ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ನಿಮ್ಮನ್ನು ಪ್ರೀತಿ ಮಾಡೋದಿಲ್ಲ, ಕಾಳಜಿ ಮಾಡೋದಿಲ್ಲ. ಬೇರೊಂದು ಪ್ರೀತಿಗಾಗಿ ಹುಡುಕಾಡುತ್ತಾರೆ.

2. ಸಂಗಾತಿಯು ನಿಮ್ಮನ್ನು ಸಿಕ್ಕಾಪಟ್ಟೆ ನಿಯಂತ್ರಿಸಿದಾಗ
ನಮ್ಮ ಸಂಗಾತಿ ನಮ್ಮನ್ನು ತುಂಬಾನೇ ಪ್ರೀತಿಸುತ್ತಿರುತ್ತಾರೆ. ಆದರೆ ಆ ಪ್ರೀತಿ ನಮಗೆ ಉಸಿರುಗಟ್ಟಿಸುತ್ತದೆ. ಯಾಕಂದ್ರೆ ಪ್ರತಿಯೊಂದು ವಿಚಾರಕ್ಕೂ ಅವರು ನಮ್ಮ ಮೇಲೆ ಒತ್ತಡ ಹೇರೋದಕ್ಕೆ ಶುರು ಮಾಡುತ್ತಾರೆ. ನಮ್ಮನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಹೇಳಿದ್ದನ್ನೇ ಮಾಡಬೇಕು, ಅವರು ಹೇಳಿದ ಹಾಗೆ ಕೇಳಬೇಕು ಎಂದು ಹಿಂಸೆ ನೀಡುತ್ತಾರೆ. ನಾವು ನಮ್ಮ ಸ್ವಾತಂತ್ರ ಕಳೆದುಕೊಳ್ಳುತ್ತೌಎ. ಆಗ ನಮಗೆ ಪ್ರೀತಿಯಲ್ಲಿ ನೋವುಂಟಾಗೋದಕ್ಕೆ ಶುರುವಾಗುತ್ತದೆ.
3. ಕಳೆದುಕೊಂಡಾಗ ಆಗುವ ನೋವು
ನಾವು ಪ್ರೀತಿಸಿದವರು ನಮ್ಮ ಜೊತೆಗೆ ಕೊನೆಯವರೆಗೂ ಇರಬೇಕೆಂದೇನಿಲ್ಲ. ಹೆಚ್ಚಿನ ಪ್ರೀತಿಯು ಮದುವೆಯ ಸಂದರ್ಭದಲ್ಲಿ ಮುರಿದು ಬೀಳುತ್ತದೆ. ಇನ್ನೂ ಕೆಲವು ಪ್ರೀತಿಯಲ್ಲಿ ಹುಡುಗ/ಹುಡುಗಿ ಕೊನೆಯವರೆಗೂ ಪ್ರೀತಿ ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗದೇ ಅರ್ಧದಲ್ಲೇ ಬಿಟ್ಟು ಹೋಗುತ್ತಾರೆ. ಸರಿಯಾದ ಕಾರಣವನ್ನೂ ನೀಡೋದಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ಸಹಿಸಿಕೊಳ್ಳಲಾಗದಷ್ಟು ನೋವಾಗುತ್ತದೆ.
4. ಕನಸುಗಳು ನುಚ್ಚು ನೂರಾದಾಗ
ಪ್ರೀತಿಯ ಮೇಲೆ ನಮಗೆ ಬೆಟ್ಟದಷ್ಟು ಆಸೆ, ಕನಸುಗಳಿರುತ್ತವೆ. ಪ್ರೀತಿಸಿದವರ ಜೊತೆಗೆ ಕೊನೆಯವರೆಗೂ ಬಾಳಬೇಕು ಅನ್ನೋ ಆಸೆಯೂ ನಮಗಿರುತ್ತದೆ. ಅವರ ಜೊತೆಗೆ ನಾವು ಭವಿಷ್ಯದ ಕನಸುಗಳನ್ನು ಕಂಡಿರುತ್ತೇವೆ. ಆದರೆ ಏಕಾಏಕಿ ಅವರು ನಮ್ಮನ್ನು ಬಿಟ್ಟು ಹೋದರೆ ದಿಕ್ಕೇ ತೋಚದಾಗುತ್ತದೆ. ಕಟ್ಟಿದ್ದ ಕನಸಿನ ಗೋಪುರವೇ ಒಡೆದು ಹೋಗುತ್ತದೆ.
5. ಪ್ರೀತಿ ನಿರಾಕರಣೆಗೊಳಗಾದಾಗ
ಕೆಲವೊಂದು ಸಲ ನಾವು ಒಬ್ಬರನ್ನು ತುಂಬಾನೇ ಪ್ರೀತಿ ಮಾಡುತ್ತಿರುತ್ತೀವಿ. ಆದರೆ ನಾವು ಪ್ರೀತಿ ಮಾಡುತ್ತಿರುವ ವಿಚಾರ ಅವರಿಗೆ ಗೊತ್ತಿರೋದಿಲ್ಲ. ಆದರೆ ನಮ್ಮ ಪ್ರೀತಿ ಮಾತ್ರ ತುಂಬಾನೇ ಪವಿತ್ರವಾಗಿ ಇರುತ್ತದೆ. ಆದರೆ ಪ್ರೀತಿಯನ್ನು ಅವರಲ್ಲಿ ಹೇಳಿಕೊಳ್ಳೋದಕ್ಕೆ ನಮಗೆ ಒಂದು ರೀತಿಯ ಭಯ ಕಾಡುತ್ತಿರುತ್ತೆ. ಹಾಗೋ ಹೀಗೋ ಒಂದು ದಿನ ದೈರ್ಯ ಮಾಡಿ ಅವರಲ್ಲಿ ನಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತೇವೆ. ಆದರೆ ಅವರು ನಮ್ಮನನು ನಿರಾಕರಿಸಿ ಬಿಟ್ಟರೆ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.
6. ನಂಬಿಕೆ ಕಳೆದುಕೊಂಡಾಗ
ಪ್ರೀತಿಯಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ನಂಬಿಕೆಯ ಮೇಲೆಯೇ ಪ್ರೀತಿ ನಿಂತಿರೋದು. ಆದರೆ ಕೆಲವೊಂದು ಸಲ ಒಬ್ಬರಿಗೆ ಮತ್ತೊಬ್ಬರ ಮೇಲೆ ನಂಬಿಕೆ ಅನ್ನೋದೇ ಇರೋದಿಲ್ಲ. ಪ್ರತಿಹೆಜ್ಜೆಗೂ ಸಂಗಾತಿಯ ಮೇಲೆ ಅನುಮಾನ ಪಡೋದು. ಇದೇ ಕಾರಣಕ್ಕೆ ಅವರನ್ನು ಹೀಯಾಳಿಸೋದು, ನಿಂದಿಸೋದು. ಇಂತಹ ಸಂಗಾತಿಯ ಜೊತೆಗೆ ಹೆಚ್ಚು ಕಾಲ ಬದುಕೋದಕ್ಕೂ ಆಗೋದಿಲ್ಲ. ಇಲ್ಲಿ ನೋವೇ ಹೆಚ್ಚಾಗಿರುತ್ತದೆ.
7. ಪ್ರೀತಿಯಲ್ಲಿ ಮೋಸ ಹೋದಾಗ
ಪ್ರೀತಿಯಲ್ಲಿ ಬೀಳುವಾಗ ತುಂಬಾನೇ ಹುಷಾರಾಗಿ ಇರಬೇಕು. ಎಲ್ಲರೂ ಪ್ರಾಮಾಣಿಕರಾಗಿ ಇರೋದಿಲ್ಲ. ಕೆಲವೊಂದು ಸಲ ನಾವು ಪ್ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ಇತ್ತ ನಿಮ್ಮನ್ನು ಪ್ರೀತಿಸಿ, ಇನ್ನೊಂದು ಕಡೆಯಿಂದ ಬೇರೆಯವರನ್ನೂ ಪ್ರೀತಿಸಿ ನಿಮ್ಮ ಬಾಳಿನಲ್ಲಿ ಚೆಲ್ಲಾಟವಾಡುವವರು ಇದ್ದಾರೆ. ಹೀಗಾದಾಗ ಮನಸ್ಸು ಒಡೆದು ಹೋದಷ್ಟು ನೋವಾಗುತ್ತದೆ. ಅಯ್ಯೋ ನನ್ನ ಬಾಳಿನಲ್ಲಿ ಯಾಕೆ ಹೀಗಾಯ್ತು ಅಂತ ದುಃಖಿಸುತ್ತೇವೆ.
ಒಂದಲ್ಲ ಒಂದು ವಿಚಾರಕ್ಕೆ ಪ್ರೀತಿಯಲ್ಲಿ ನೋವು ಇದ್ದಿದ್ದೆ. ಆದರೆ ನಿಮ್ಮ ಪ್ರೀತಿ ನಿಜವಾಗಿದ್ದರೆ ನೀವು ಕಷ್ಟಗಳನ್ನೆಲ್ಲಾ ಮೆಟ್ಟಿ ನಿಲ್ಲಬೇಕು. ಒಂದು ವೇಳೆ ಪ್ರೀತಿಯಲ್ಲಿ ಮೋಸ ಆಗ್ತಿರೋದು ಗೊತ್ತಾದರೆ ಪ್ರೀತಿಯಿಂದ ಹೊರ ನಡೆಯಿರಿ.



Click it and Unblock the Notifications

