ಈ 4 ಜನರನ್ನು ಮದುವೆಯಾದರೆ ಬದುಕು ನರಕವಾಗುತ್ತೆ, ಆದ್ದರಿಂದ ಇವರಿಗೆ ಮದುವೆ ಮಾಡಲೇಬೇಡಿ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ, ಆದರೆ ಮಾತ್ರ ಈ ನಾಲ್ಕು ಜನರಿಗೆ ಮದುವೆ ಮಾಡದೇ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ಇವರ ಬಾಳು ಕಷ್ಟ, ಇವರನ್ನು ಕಟ್ಟಿಕೊಂಡವರ ಬಾಳು ಕೂಡ ಕಷ್ಟ.

marriage tips

ಮದುವೆಯ ನಂತರದ ಬಾಳು ಹೇಗಿರುತ್ತದೆ ಯಾರಿಗೂ ಹೇಳಲು ಸಾಧ್ಯವಿಲ್ಲ, ಆದರೆ ಮದುವೆಯಾಗುವಾಗ ಈ ನಾಲ್ಕು ಬಗೆಯ ಜನರನ್ನು ಕಟ್ಟಿಕೊಂಡರೆ ಮಾತ್ರ ಅವರ ವೈವಾಹಿಕ ಬದುಕು ಕಷ್ಟವಾಗಿರುತ್ತದೆ ಎಂದು ದೃಢವಾಗಿ ಹೇಳಬಹುದು, ಹಾಗಾಗಿ ಯಾವ ನಾಲ್ಕು ಜನರಿಗೆ ಮದುವೆ ಮಾಡದೆ ಇದ್ದರೆ ಒಳ್ಳೆಯದು:

ವೈರಾಗ್ಯ ಬಂದಿರುವವರಿಗೆ ಮದುವೆ ಮಾಡಬಾರದು

ಅವನಿಗೆ ಅಥವಾ ಅವಳಿಗೆ ಈಗಾಗಲೇ ಬದುಕಿನಲ್ಲಿ ವೈರಾಗ್ಯ ಬಂದಿರುತ್ತದೆ ಅಂಥವರು ಆಧ್ಯಾತ್ಮ ಜೀವನದ ಕಡೆಗೆ ಒಲವು ತೋರಿಸುತ್ತಾರೆ, ವೈವಾಹಿಕ ಜೀವನದ ಕಡೆಗೆ ಒಲವು ಇರುವುದಿಲ್ಲ, ಇಂಥವರಿಗೆ ಮದುವೆ ಮಾಡಬೇಡಿ. ಇವರನ್ನು ಒತ್ತಾಯ ಪೂರ್ವವಾಗಿ ಮದುವೆ ಮಾಡಿದರೆ ಇವರೂ ನೆಮ್ಮದಿ ಆಗಿರಲ್ಲ, ಇವರನ್ನು ಕಟ್ಟಿಕೊಂಡವರೂ ನೆಮ್ಮದಿಯಾಗಿರಲ್ಲ, ಆಕೆಯ ಅಥವಾ ಆತನ ಬಾಳು ಇವರಿಂದಾಗಿ ಹಾಳಾಗುವುದು, ಹಾಗಾಗಿ ನನಗೆ ಮದುವೆ ಬಗ್ಗೆ ಆಸಕ್ತಿಯಿಲ್ಲ ಎಂದು ಹೇಳುವವರಿಗೆ ಮದುವೆಯಾಗು ಎಲ್ಲವೂ ಸರಿಹೋಗುವುದು ಎಂದು ಒತ್ತಾಯ ಪೂರ್ವವಾಗಿ ಮದುವೆ ಮಾಡಲು ಹೋಗಬೇಡಿ.

ನನಗೆ ಮದುವೆಗೆ ಅಸಕ್ತಿಯಿಲ್ಲ ಎಂದು ಯಾರಾದರು ಹೇಳುತ್ತಿದ್ದರೆ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ, ಕೆಲವರು ಸುಮ್ಮನೆ ಹೀಗೆ ಹೇಳುತ್ತಾರೆ ಅಂಥವರು ಕೆಲ ಸಮಯದ ಬಳಿಕ ನನಗೆ ಮದುವೆ ಮಾಡಿ, ನನಗೊಂದು ಜೋಡಿ ಹುಡುಕಿಕೊಡಿ ಎಂದು ಹೇಳುತ್ತಾರೆ, ಅದರೆ ನನಗೆ ಮದುವೆ ಬೇಡ್ವೆ ಬೇಡ ಎಂದು ಹೇಳುವವರಿಗೆ ಮಾತ್ರ ಮದುವೆ ಮಾಡಿಕೊಡಬೇಡಿ.


ಆರೋಗ್ಯ ಸರಿಯಿಲ್ಲದಿದ್ದರೆ ಮದುವೆ ಮಾಡಬೇಡಿ, ಮಾಡುವುದಾದರೂ ಅವರ ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆ ಮಾಡಬೇಡಿ

ಹುಡುಗಯಾಗಲಿ, ಹುಡುಗಿಯಾಗಲಿ ಆರೋಗ್ಯ ಸರಿಯಿಲ್ಲದಿದ್ದರೆ ಮದುವೆ ಮಾಡಲು ಹೋಗಬೇಡಿ, ಇದರಿಂದ ಇಬ್ಬರ ಬದುಕು ಹಾಳಾಗುವುದು, ಇವರ ದಾಂಪತ್ಯದಲ್ಲಿ ಜಗಳ, ಭಿನ್ನಾಭಿಪ್ರಾಯಕ್ಕೆ ಅವರ ಆರೋಗ್ಯ ಸಮಸ್ಯೆ ಕಾರಣವಾಗಬಹುದು, ದೈಹಿಕವಾದ ತೃಪ್ತಿ ಇಲ್ಲದಾಗಬಹುದು. ಇನ್ನು ಕೆಲವರು ಮದುವೆಗೆ ಅವರ ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆ ಮಾಡುತ್ತಾರೆ, ಆದರೆ ನಂತರ ಅದು ಗೊತ್ತಾಗಿ ಮದುವೆ ಜೀವನ ಕಷ್ಟವಾಗಬಹುದು, ಈ ಕಾರಣಕ್ಕೆ ಅವರ ಸಂಗಾತಿ ಅವರನ್ನು ಬಿಡಬಹುದು, ಹೋಗಿದ್ದ ಮೇಲೆ ಮದುವೆಯಾಗಿ ಏನು ಪ್ರಯೋಜನ ಅದರ ನೋವು ಕೂಡ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬಿರುವುದು.

ಆರೋಗ್ಯ ಸಮಸ್ಯೆಯಿದ್ದರೆ ಮದುವೆಯಾಗುವಾಗ ಮುಚ್ಚಿಡಲೇಬೇಡಿ, ಇನ್ನು ಅವರಿಗೆ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆ ಗೊತ್ತಿದ್ದು ಮದುವೆಯಾಗುತ್ತೇನೆ ಎಂದಾದರೆ , ನಿಮ್ಮ ಆಸ್ತಿ, ಉದ್ಯೋಗ ಏನೂ ಲೆಕ್ಕಕ್ಕೆ ತಗೊಂಡಿಲ್ಲ, ನಿಮ್ಮನ್ನು ಮಾತ್ರ ಇಷ್ಟಪಟ್ಟು ಮದುವೆಯಾಗುತ್ತೇನೆ ಎಂದು ಹೇಳುವವರಾದರೆ ಮದುವೆಯಾಗಬಹುದು.


ಚಟಗಳಿಗೆ ದಾಸರಾದವರಿಗೆ ಮದುವೆ ಮಾಡಬೇಡಿ

ಯಾವುದಾದರು ಹುಡುಗನಿಗೆ ಚಟವಿದ್ದರೆ ಅವನಿಗೆ ಒಂದು ಹೆಣ್ಣು ತಂದು ಗಂಟು ಹಾಕಿದರೆ ಅವನು ಸರಿ ಹೋಗುತ್ತಾನೆ ಎಂದು ತುಂಬಾ ಪೋಷಕರು ತಮ್ಮ ಚಟವಿರುವ ಮಗನಿಗೆ ಹೆಣ್ಣು ತರುತ್ತಾರೆ, ಚಟವಿರುವವನಿಗೆ ಮದುವೆ ಮಾಡಿದರೆ ಸರಿ ಹೋಗುತ್ತಾನೆ ಎಂಬುವುದು ತಪ್ಪು ಕಲ್ಪನೆ, ಆತ ಕೆಲ ಸಮಯ ಬೇಕಾದರೆ ಆ ಚಟಗಳಿಂದ ದೂರವಿರಬಹುದು, ನಂತರ ಪುನಃ ತನ್ನ ಚಾಳಿ ಮುಂದುವರೆಸುತ್ತಾನೆ, ಇದರಿಂದಾಗಿ ಆಕೆಯ ಬಾಳು ಕೂಡ ಹಾಳಾಗುವುದು, ಹಾಗಾಗಿ ಚಟವಿರುವವನಿಗೆ ಹೆಣ್ಣು ಕೊಡಬೇಡಿ.

ದುಡಿಯದ ಗಂಡಿಗೆ

ಏನೂ ದುಡಿಮೆಯಿಲ್ಲದ ಗಂಡನ್ನು ಮದುವೆಯಾಗುವುದು ಹೆಣ್ಣಿಗೆ ದೊಡ್ಡ ಶಾಪ, ಈತನಿಗೆ ಖರ್ಚಿಗಾಗಿ ಮನೆಯವರ ಬಳಿ ಕೈ ಚಾಲು ಹಿಂದೇಟು ಇರಲ್ಲ, ಅದರೆ ಅವಳಿಗೆ ಆ ರೀತಿ ಈತನ ಮನೆಯವರ ಬಳಿ ಕೇಳಲು ಸಾಧ್ಯವೇ, ದುಡಿಯದೆ ಇರುವ ಗಂಡನ ಜೊತೆಗಿನ ಬಾಳು ನರಕವಾಗಿರುತ್ತದೆ, ಅವನ ಪೋಷಕರು ಎಷ್ಟೇ ಆಸ್ತಿ ಮಾಡಿರಲಿ, ಆದರೆ ಇವನಿಗೆ ಅದನ್ನು ನೋಡಿಕೊಂಡು ಹೋಗುವ ಸಾಮರ್ಥ್ಯ ಇರಬೇಕು, ಆದರೆ ಏನೂ ಕೆಲಸ ಮಾಡದೆ ಸೋಮಾರಿಯಾದ ಗಂಡನ ಜೊತೆ ಇರಲು ಯಾವ ಹೆಣ್ಣು ಇಷ್ಟಪಡಲ್ಲ, ಹಾಗಾಗಿ ಅಂಥವರಿಗೂ ಮದುವೆ ಮಾಡಬೇಡಿ.

English summary

Never Do Marriage for These 4 Type People

Relationship Tips: Never Do Marriage For These 4 types Of People,
Story first published: Thursday, September 19, 2024, 17:20 [IST]
X
Desktop Bottom Promotion