Latest Updates
-
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ!
ವೈವಾಹಿಕ ಸಂಬಂಧದಲ್ಲಿ ಇಂಥಾ ಲಕ್ಷಣಗಳಿದ್ದರೆ ಕೂಡಲೇ ದಾಂಪತ್ಯ ತಜ್ಞರನ್ನು ಭೇಟಿ ಮಾಡಿ
ದಂಪತಿ, ದಾಂಪತ್ಯ ಎಂದ ಮೇಲೆ ಕಷ್ಟ-ಸುಖ, ನೋವು-ನಲಿವು, ಮೌನ-ಮಾತು ಇದ್ದೇ ಇರುತ್ತದೆ. ಹಿರಿಯರು ಹೇಳುವಂತೆ ಸರಸ-ವಿರಸವೇ ದಾಂಪತ್ಯ. ಅದರೆ ಮದುವೆಯ ಜೀವನದಲ್ಲಿ ದಂಪತಿಗಳ ನಡುವೆ ವಿರಸವೇ ಹೆಚ್ಚಾದರೆ, ಮಾತಿಗಿಂತ ಮೌನವೇ ಅಧಿಕವಾದರೆ, ಕಷ್ಟಗಳೇ ಬದುಕಾದರೆ ಯಾರೂ ಸಹಿಸುವುದಿಲ್ಲ.

ಕೆಲವು ಸಂಸಾರದಲ್ಲಿ ಇಂಥಾ ಕಷ್ಟವೇ ದಾಂಪತ್ಯ ಎಂದು ಸಹಿಸಿಕೊಂಡು ಬದಕುವವರೂ ಇದ್ದಾರೆ. ಆದರೆ ಇದಕ್ಕೆ ಇರುವ ಸರಳ ಪರಿಹಾರ ವೈವಾಹಿಕ ತಜ್ಞರನ್ನು ಭೇಟಿ ಮಾಡುವುದು.
ಹೌದು ಸಂಸಾರದಲ್ಲಿ ಹಲವು ಸಮಸ್ಯೆಗಳಿಗೆ ದಾಂಪತ್ಯ ತಜ್ಞರು ಉತ್ತಮ ಸಲಹ ನೀಡಿ ಬದುಕಿನ ಸಿಹಿಯನ್ನು ಹೆಚ್ಚಿಸುತ್ತಾರೆ. ನಾವು ದಾಂಪತ್ಯ ತಜ್ಞರನ್ನು ಯಾವಾಗ ಭೇಟಿ ಮಾಡಬೇಕು, ದಾಂಪತ್ಯದಲ್ಲಿನ ಯಾವೆಲ್ಲಾ ಬಿರುಕು ಸಂಬಂಧವನ್ನು ಹಾಳು ಮಾಡುತ್ತದೆ ಮುಂದೆ ನೋಡೊಣ:

ಮೌನ ಬಂಗಾರವಾಗದಿದ್ದಾಗ
ಸಂವಹನವು ಯಾವುದೇ ಸಂಬಂಧದ ಮೂಲಾಧಾರವಾಗಿದೆ. ಇದು ಸಂಬಂಧ ಗಟ್ಟಿಯಾಗಲು, ಸಂಬಂಧದಲ್ಲಿ ಮದುರತೆ ಬರಲು ಇರುವ ಏಕೈಕ ಅಸ್ತ್ರವಾಗಿದೆ. ಅದರೆ ಹೆಚ್ಚಿನ ವೈವಾಹಿಕ ಅಪಶ್ರುತಿಗಳು ಸಂವಹನದಲ್ಲಿನ ಸ್ಥಗಿತದಿಂದ ಉಂಟಾಗುತ್ತದೆ. ಮೌನ ಮಲ್ಲಿಗೆ ಸತ್ಯ, ಆದರೆ ಅತಿಯಾದ ಮೌನ ಸಹ ಅಪಾಯಕಾರಿ. ಇಂಥಾ ದಂಪತಿಗಳಿಗೆ ಖಂಡಿತವಾಗಿ ವಿವಾಹ ಸಲಹೆಗಾರರ ಅಗತ್ಯವಿದೆ ಎಂದರ್ಥ.

ಮಾತುಕತೆ ನಕಾರಾತ್ಮಕವಾಗಿದ್ದರೆ
ಮಿತಿ ಮೀರಿದ ಪದಗಳು ಸಂಬಂಧದಲ್ಲಿ ಬಹಳಷ್ಟು ಹಾನಿ ಮಾಡಿಬಿಡುತ್ತದೆ. ದಾಂಪತ್ಯದಲ್ಲಿ ಟೀಕೆ, ತಿರಸ್ಕಾರ, ನಿತ್ಯವೂ ಉದ್ವೆಗದ ಮಾತುಗಳೇ ಇದ್ದರೆ ಇದು ಉತ್ತಮ ಸಂಬಂಧದ ಮುನ್ಸೂಚನೆಯಲ್ಲ, ಇವರಿಗೆ ವಿವಾಹ ಸಲಹೆಗಾರರ ಅಗತ್ಯವಿದೆ. ಮತ್ತೊಂದು ವಿಚಾರದಲ್ಲಿ ಹೇಳುವುದಾದರೆ, ನೀವು ಏನು ಹೇಳುತ್ತೀರಿ ಎಂಬುದು ಮಾತ್ರವಲ್ಲ, ನೀವು ಅದನ್ನು ಹೇಗೆ ಹೇಳುತ್ತೀರಿ ಎಂಬುದು ಮುಖ್ಯವಾಗುತ್ತದೆ ಎಂಬುದು ಮುಖ್ಯ ಎನ್ನುತ್ತಾರೆ ಸಂಬಂಧ ಸಲಹೆಗಾರರು.

ಒಂದೇ ಮನೆಯಲ್ಲಿ ಪ್ರತ್ಯೇಕ ಜೀವನ ನಡೆಸುತ್ತಿದ್ದರೆ
ದಂಪತಿಗಳಿಬ್ಬರು ಒಂದೇ ಮನೆಯೊಳಗೆ ಜೀವನ ನಡೆಸುತ್ತಿದ್ದರೂ, ಮದುವೆಯು ಅನ್ಯೋನ್ಯತೆ ಮತ್ತು ಮದುರ ಮಾತು, ಸಂಪರ್ಕದ ಲಕ್ಷಣಗಳನ್ನು ಕಳೆದುಕೊಂಡಿದ್ದರೆ ಅವರಿಗೆ ವಿವಾಹ ಸಲಹೆಗಾರರ ಅಗತ್ಯವಿದೆ ಎಂದರ್ಥ. ಕೆಲವು ದಂಪತಿಗಳು ಹೀಗೆಯೇ ಉತ್ತಮವಾಗಿದೆ ಎಂದುಕೊಂಡಿದ್ದರೂ, ಇದು ಮುಂದಿನ ಬದುಕು, ಮಕ್ಕಳ ಭವಿಷ್ಯದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರಲಿದೆ.

ರಹಸ್ಯಗಳನ್ನು ಇಟ್ಟುಕೊಳ್ಳಬಾರದು
ಪ್ರತಿಯೊಬ್ಬರಿಗೂ ಖಾಸಗಿತನದ ಹಕ್ಕಿದೆ, ಸಂಬಂಧದಲ್ಲಿ ದೊಡ್ಡ ಸಮಸ್ಯೆಗಳನ್ನು ಪರಸ್ಪರ ಮರೆಮಾಡುವುದು ಆರೋಗ್ಯಕರವಲ್ಲ. ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಬಹುದಾದ ಹಣದ ವಿಷಯಗಳು, ಪೋಷಕರ ನಿರ್ಧಾರಗಳು ಅಥವಾ ಕೆಲಸದ ಬದ್ಧತೆಗಳನ್ನು ಮುಚ್ಚಿಡಬಾರದು ಬಹಿರಂಗವಾಗಿ ಚರ್ಚಿಸಬೇಕು. ಸಂಬಂಧದಲ್ಲಿ ಇಂಥಾ ವಿಚಾರಗಳು ಅನುಮಾನಕ್ಕೆ ಕಾರಣವಾಗುತ್ತದೆ.



Click it and Unblock the Notifications