Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮದುವೆಯಾದ ಬಳಿಕ ಈ 5 ವಿಷಯಗಳತ್ತ ಗಮನ ಹರಿಸಿ, ಲೈಫ್ ಆಗುವುದು ಬೊಂಬಾಟ್
ಮದುವೆ ಜೀವನದ ಮೇಲೆ ಅನಧೇಕ ಕನಸುಗಳಿರುತ್ತದೆ, ಅದು ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ ಮ್ಯಾರೇಜ್ ಆಗಿರಲಿ, ನಾವಿಬ್ಬರು ಹಾಗಿರಬೇಕು, ಹೀಗಿರಬೇಕು ಎಂದು ಸಾಕಷ್ಟು ಕನಸುಗಳಿರುತ್ತದೆ.

ಆದರೆ ಮದುವೆಯಾದ ಮೇಲೆ ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಾಗುತ್ತೆ, ಕೆಲವೊಮ್ಮೆ ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಕೆಲವೊಂದು ಬದಲಾವಣೆಗಳನ್ನು ಅವಶ್ಯಕವಾಗಿ ಮಾಡಬೇಕು, ಹಾಗೆ ಮಾಡಿದರೆ ವೈವಾಹಿಕ ಜೀವನದಲ್ಲಿ ದೊಡ್ಡ ಸಮಸ್ಯೆಗಳಿಲ್ಲದೆ ಸಾಗಬಹುದು.
ಅದರಲ್ಲೂ ಹೆಣ್ಮಕ್ಕಳೇ ಈ ಸೂತ್ರ ಕಲಿತರೆ ಬದುಕು ತುಂಬಾನೇ ಸುಂದರವಾಗಿರುತ್ತೆ:

1. ಬದಲಾವಣೆಯನ್ನು ಒಪ್ಪಿಕೊಳ್ಳಿ
ಮದುವೆಯಾದ ಮೇಲೆ ಪುರುಷನ ಬದುಕಿನಲ್ಲಾಗುವ ಬದಲಾವಣೆಗಿಂತ ಮಹಿಳೆಯರಲ್ಲಿ ಹೆಚ್ಚಿನ ಬದಲಾವಣೆಯಾಗುತ್ತದೆ. ತನ್ನ ಮನೆಯನ್ನು ಬಿಟ್ಟು ಹೊಸ ಮನೆ, ಹೊಸ ಜನರೊಂದಿಗೆ ಹೊಂದಿಕೊಳ್ಳಬೇಕಾಗುತ್ತದೆ. ತನ್ನ ಮನೆಯಲ್ಲಿ ಮುದ್ದಿನ ಮಗಳಾಗಿರಬಹುದು, ಆದರೆ ಬಂದ ಮನೆಯಲ್ಲಿ ನಮ್ಮ ಮನೆಗೆ ತಕ್ಕ ಸೊಸೆ ಎಂದು ಅನಿಸಿಕೊಳ್ಳುವುದು ಮಾತ್ರ ಅಷ್ಟು ಸುಲಭವಲ್ಲ.
ಗಂಡನ ಮನೆಯಲ್ಲಿ ಮನೆಯಲ್ಲಿ ಇದ್ದಂತೆ ಆರಾಮವಾಗಿ ಅಮ್ಮ ಮಾಡಿಕೊಟ್ಟರೆ ನಾವು ತಿನ್ನುತ್ತೇವೆ ಎಂಬ ಪರಿಸ್ಥಿತಿ ಇರಲ್ಲ, ನಾವು ಅಡುಗೆ ಮಾಡಬೇಕೆಂದು ನಿರೀಕ್ಷೆ ಮಾಡುತ್ತಾರೆ. ಇನ್ನು ಮನೆಯಲ್ಲಿ ಅಡುಗೆ ಮಾಡಲು ಜನ ಇದ್ದರು ಮನೆಯ ಇತರ ಜವಾಬ್ದಾರಿಗಳನ್ನು ಸೊಸೆಯಾದವಳು ನಿಭಾಯಿಸಿಕೊಂಡು ಸಾಗಬೇಕು ಎಂದು ಬಯಸುತ್ತಾರೆ.

2. ವ್ಯತ್ಯಾಸಗಳನ್ನು ಗೌರವಿಸಿ
ನಾನು ಬಯಸಿದಂತೆ ನನ್ನ ಸಂಗಾತಿ ಇರಬೇಕೆಂದು ಬಯಸುವುದು ತಪ್ಪು, ಆ ರೀತಿ ಸಿಗಲ್ಲ. ನಾವು ತುಂಬಾನೇ ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿರುತ್ತೇವೆ, ಅದರೆ ಕೆಲವೊಂದು ವಿಚಾರಗಳಲ್ಲಿ ಚಿಕ್ಕದಾದ ಅಭಿಪ್ರಾಯ ವ್ಯತ್ಯಾಸ ಎಂಬುವುದು ಇದ್ದೇ ಇರುತ್ತದೆ. ಆ ಅಭಿಪ್ರಾಯ ವ್ಯತ್ಯಾಸಗಳನ್ನು ಗೌರವಿಸುವುದು ಕಲಿಯಬೇಕು.
ಉದಾಹರಣೆಗೆ ನಿನಗೆ ಟ್ರಿಪ್ ಎಂದರೆ ತುಂಬಾನೇ ಇಷ್ಟ, ಅಷೇ ಅವರೊಗೆ ಮನೆಯಲ್ಲಿ ಇರುವುದು ಎಂದರೆ ತುಂಬಾನೇ ಇಷ್ಟ, ಈ ರೀತಿಯಿದ್ದಾಗ ನೀವು ಅವರ ಭಾವನೆಯನ್ನು ಗೌರವಿಸಬೇಕು, ಅವರು ನಿಮ್ಮ ಭಾವನೆಯನ್ನು ಗೌರವಿಸಬೇಕು.

3. ಸಂಬಂಧಕ್ಕೆ ಮೊದಲ ಆದ್ಯತೆ ಕೊಡುವುದು ಕಲಿಯಬೇಕು
ಗಂಡ ಹೆಂಡತಿಗೆ ಮೊದಲ ಆದ್ಯತೆ ಕೊಡಬೇಕು, ಹೆಂಡತಿ ಗಂಡನಿಗೆ ಮೊದಲ ಆದ್ಯತೆ ಕೊಡಬೇಕು. ಕೆಲವೊಮ್ಮೆ ನಮ್ಮಿಷ್ಟಗಳನ್ನು ಬದಿಯಲ್ಲಿಟ್ಟು ಅವರಿಗೆ ಆದ್ಯತೆ ನೀಡಬೇಕು. ಹೆಂಡತಿ ಗಂಡನಿಗೆ ಆದ್ಯತೆ ನೀಡುವುದರಿಂದ ಗುಲಾಮಳಲ್ಲ, ಗಂಡ ಹೆಂಡತಿಗೆ ಆದ್ಯತೆ ಕೊಡುವುದರಿಂದ ಅಮ್ಮವರ ಗಂಡ ಆಗಲ್ಲ. ಬದಲಿಗೆ ಇಬ್ಬರ ಸಂಸಾರ ತುಂಬಾನೇ ಚೆನ್ನಾಗಿರುತ್ತದೆ.

4. ಪ್ರೀತಿಯೇ ಮುಖ್ಯ
ಪ್ರೀತಿಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು. ನಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸಬೇಕು, ಆಗ ಅವರ ಸಣ್ಣ ತಪ್ಪುಗಳು ದೊಡ್ಡದಾಗಿ ಕಾಣುವುದಿಲ್ಲ ಅಲ್ಲದೆ ನಿಮ್ಮ ಪ್ರೀತಿಯ ಶಕ್ತಿ ಅವರ ಜೊತೆಗಿದ್ದರೆ ಜಗತ್ತನ್ನೇ ಗೆಲ್ಲುತ್ತಾರೆ. ಆದ್ದರಿಂದ ಒಬ್ಬರನ್ನೊಬ್ಬರು ಪ್ರೀತಿಸಿ. ಪ್ರೀತಿ ಎಂದರೆ ಸದಾ ಕೈ ಕೈ ಹಿಡಿದು ಸುತ್ತುವುದು ಎಂದಲ್ಲ, ಬದಲಿಗೆ ದೂರವಿದ್ದರೂ ನಿಮ್ಮಿಬ್ಬರ ಹೃದಯ ಒಬ್ಬರಿಗೊಬ್ಬರು ಮಿಡಿಯಬೇಕು.

5. ನಿರೀಕ್ಷೆ ಕಡಿಮೆ ಇರಲಿ, ಸ್ವೀಕರಿಸುವ ಗುಣ ಅಧಿಕವಿರಲಿ
ಎಲ್ಲಿ ತುಂಬಾ ನಿರೀಕ್ಷೆ ಇರುತ್ತದೋ ಅಲ್ಲಿ ದುಃಖ ತುಂಬಾನೇ ಇರುತ್ತದೆ, ಆದ್ದರಿಂದ ನಿರೀಕ್ಷೆ ಕಡಿಮೆ ಇಡಿ. ಉದಾಹರಣೆಗೆ ನನಗೆ ನಾನು ಹೇಳದೆ ಗಿಫ್ಟ್ ನೀಡಬೇಕು ಎಂದೆಲ್ಲಾ ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಿಮಗೆ ಏನು ಬೇಕೋ, ನಿಮಗೆ ಏನು ಅನಿಸುವುದೋ ಅದನ್ನು ನೇರವಾಗಿ ಹೇಳಿ, ಅಲ್ಲದೆ ಬದುಕಿನಲ್ಲಿ ಕೆಲವೊಂದು ವಿಷಯಗಳು ನಿಮಗೆ ಇಷ್ಟವಾಗದೇ ಇರಬಹುದು, ಸ್ವೀಕರಿಸುವ ಗುಣ ಬೆಳೆಸಿಕೊಳ್ಳಿ, ನಿರೀಕ್ಷೆ ಕಡಿಮೆ ಇಡಿ, ಆಗ ದುಃಖ ಎಂಬುವುದು ಇರಲ್ಲ.
ಈ ಎಲ್ಲಾ ಮಾತುಗಳನ್ನು ನೀವು ಕೂಡ ಒಪ್ಪುತ್ತೀರಿ ತಾನೆ?



Click it and Unblock the Notifications
