Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
ವಿಚ್ಛೇದನದ ಬಳಿಕ ಕಾಡುವ ಒತ್ತಡ ದೂರಮಾಡಲು ಈ ಸರಳ ಸೂತ್ರಗಳನ್ನು ಫಾಲೋ ಮಾಡಿ
ವಿಚ್ಛೇದನ ಎನ್ನುವುದು ಇಂದಿನ ಕಾಲದಲ್ಲಿ ಟ್ರೆಂಡ್ ಆಗಿ ಬಿಟ್ಟಿದೆ. ಪತ್ನಿಯಿಂದ ವಿಚ್ಛೇದನ ಸಿಕ್ಕಿತು ಎಂದು ಕೆಲ ಪತಿಯರು ಖುಷಿ ಪಟ್ಟರೆ, ಪತಿಯಿಂದ ತನಗೆ ವಿಚ್ಛೇದನ ಸಿಕ್ಕಿತು ಎಂದು ಪತ್ನಿ ಖುಷಿ ಪಡುವುದುಂಟು. ಮದುವೆಯ ಕಾನೂನಾತ್ಮಕ ಕೊಂಡ ಕಳಚಿಕೊಳ್ಳುವುದೇ ವಿಚ್ಛೇದನ. ತನ್ನ ಸ್ನೇಹಕ್ಕೆ ಪೂರ್ಣ ವಿರಾಮ ಇಡುವುದೇ ವಿಚ್ಛೇದನ.

ಆದರೆ ವಿಚ್ಛೇದನದ ಬಳಿಕ ಏನಾಗುತ್ತೆ? ಪುರುಷರಿಗೆ ಈ ಬಗ್ಗೆ ಹೆಚ್ಚು ಸಮಸ್ಯೆ ಇರುವುದಿಲ್ಲ. ಇದ್ದರೂ ಅವರು ಅದನ್ನು ತೋರಿಸಲು ಹೋಗುವುದಿಲ್ಲ. ಆದರೆ, ವಿಚ್ಛೇದಿತ ಮಹಿಳೆಯರ ನಂತರದ ಜೀವನ ತೀರಾ ಭಿನ್ನ. ಸಮಾಜ ನಾನಾ ಪ್ರಶ್ನೆಗಳನ್ನು ಎಸೆಯುತ್ತದೆ. ಆ ಪ್ರಶ್ನೆಗಳನ್ನು ನಿರ್ಭೀತರಾಗಿ ಎದುರಿಸುವ ಛಾತಿ ಕೆಲವರಲ್ಲಿರುತ್ತದೆ, ಅನೇಕರು ನಮ್ಮ ಹಣೆಬರಹವೇ ಇಷ್ಟು ಅಂತ ಚಿಪ್ಪಿನೊಳಗೆ ಹುದುಗಿಕೊಂಡೇ ಕಾಲ ದೂಡುತ್ತಾರೆ. ಹಾಗಾದರೆ ವಿಚ್ಛೇದನದ ಬಳಿಕ ಪುರುಷ ಅಥವಾ ಮಹಿಳೆ ಏನು ಮಾಡಬೇಕು? ಯಾವ ರೀತಿ ತಮ್ಮ ಎಮೋಷನ್ ಕಂಟ್ರೋಲ್ ಮಾಡಬೇಕು? ಡಿವೋರ್ಸ್ ಅನ್ನುವ ಸವಾಲನನ್ನು ಮೆಟ್ಟಿ ನಿಲ್ಲುವುದು ಹೇಗೆ? ಅಂತವರಿಗೆ ಇಲ್ಲಿದೆ ಟಿಪ್ಸ್:

1. ಚಿಂತೆಯಿಂದ ಹೊರಬನ್ನಿ
ಚಿಂತೆ ಹಾಗೂ ಚಿತೆಗೆ ಇರುವುದು ಒಂದು ಸೊನ್ನೆ ವ್ಯತ್ಯಾಸ ಮಾತ್ರ. ಹೀಗಾಗಿ ನನ್ನದು ಡಿವೋರ್ಸ್ ಆಗಿದೆ ಎಂದು ಚಿಂತೆಯಿಂದ ಇರಬೇಡಿ. ಇದು ನಿಮ್ಮಲ್ಲಿ ಒತ್ತಡ, ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ವಾಸ್ತವ ಅಂಶವನ್ನು ಅರಿತು ಇದರಿಂದ ಹೊರಬರಬೇಕಿದೆ. ಆಘಾತಕಾರಿ ಘಟನೆಗಳನ್ನೆಲ್ಲ ಮರೆತು ಧ್ಯಾನ, ಯೋಗ, ಓದಿನ ಮುಖಾಂತರ ಮನಸ್ಸನ್ನು ಸಾಧ್ಯವಾದಮಟ್ಟಿಗೆ ತಹಬದಿಗೆ ತರಲು ಪ್ರಯತ್ನಿಸಬೇಕು. ಎಂಥದೇ ಪರಿಸ್ಥಿತಿ ಬಂದರೂ ಧೈರ್ಯವಾಗಿ ಎದುರಿಸಲು ಮನಸ್ಸನ್ನು ಹುರಿಗೊಳಿಸಬೇಕು. ಡಿವೋರ್ಸ್ ಆಗಿದೆ ಎಂದು ಕೊರಗುವ ಬದಲು ಮನಸ್ಸಿಗೆ ಅರ್ಥಮಾಡಿಸಿ ಬದಲಿಸಬೇಕು. ಮನಸ್ಸನ್ನು ನಿಮ್ಮ ಕಂಟ್ರೋಲ್ ಗೆ ತರಬೇಕು.

2.ಭಾವನೆಗೊಳಗಾಗಬೇಡಿ!
ಕೆಜಿಎಫ್ ಸಿನಿಮಾದಲ್ಲಿ ಭಾವನೆಗೊಳಗಾಗಬೇಡಿ ಎನ್ನುವ ಡೈಲಾಗ್ ಒಂದಿದೆ. ನಿಜಕ್ಕೂ ಡಿವೋರ್ಸ್ ಬಳಿಕ ಈ ವಿಚಾರವನ್ನು ನೀವು ಪಾಲಿಸುವುದು ಒಳ್ಳೆಯದು. ಡಿವೋರ್ಸ್ ಬಳಿಕ ಸಾಮಾನ್ಯವಾಗಿ ಮನುಷ್ಯರು ಭಾವನೆಗೊಳಗಾಗುತ್ತಾರೆ. ಕುಟುಂಬ, ಮಕ್ಕಳ ಬಗ್ಗೆ ಪದೇ ಪದೇ ಕಾಡುತ್ತೆ. ಈ ಸಮಯದಲ್ಲಿ ಭಾವನೆಯನ್ನು ಅರ್ಥಮಾಡಿಕೊಂಡು. ಮಕ್ಕಳು, ಕುಟುಂಬಕ್ಕೆ ವಿಚ್ಛೇದನದ ಬಗ್ಗೆ ವಿವರಿಸಿ ಅರ್ಥ ಮಾಡಿಸಿ. ನಿಮ್ಮ ಸಂಗಾತಿ ಜೊತೆಗೆ ಕೋಪ ಮಾಡಿಕೊಂಡು ಗಲಾಟೆಗೆ ತೆರಳಬೇಡಿ. ಆಗಿದ್ದು ಆಯ್ತು ಎಂದು ಅದರಿಂದ ದೂರ ಇರಬೇಕು. ಈ ಸಮಯದಲ್ಲಿ ಭಾವನೆಗಳು ತೀವ್ರವಾಗಿ ನಮ್ಮನ್ನು ಬೆಂಬಿಡದ ಬೇತಾಳನಂತೆ ಕಾಡಲು ಆರಂಭಿಸುತ್ತದೆ. ಈ ವೇಳೆ ಅದನ್ನು ಹತೋಟಿಯಲ್ಲಿಡಬೇಕು. ನೈಜ ಭಾವನೆಯನ್ನು ನಾವು ಒಪ್ಪಿಕೊಳ್ಳಲು ಕಲಿಯಬೇಕು. ಮತ್ತು ಬದುಕಲು ಕಲಿಯಬೇಕು.

3.ಕೆಲಸದಲ್ಲಿ ತೊಡಗಿಸಿಕೊಳ್ಳಿ
ಡಿವೋರ್ಸ್ ಬಳಿಕ ಆ ಕಹಿ ನೆನಪನ್ನು ಮರೆಯಲು ನೀವು ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವುದು ಉತ್ತಮ ಈ ಮೂಲಕ ಹೊಸ ಜೀವನವನ್ನು ಆರಂಭಿಸಿಕೊಳ್ಳಬೇಕು. ಅಥವಾ ಅದನ್ನೇ ನೆನೆದು ಜೀವನ ಸಾಗಿಸಿದರೆ ಮತ್ತೆ ಖಿನ್ನತೆ, ಒತ್ತಡಕ್ಕೆ ಸಿಲುಕುತ್ತೀರಿ. ವೃತ್ತಿ ಅಥವಾ ಅಧ್ಯಯನದಲ್ಲಿ ತೊಡಗಿಕೊಳ್ಳುವ ಮುಖಾಂತರ ಕಹಿ ನೆನಪುಗಳು ಹತ್ತಿರವೂ ಸುಳಿಯದಂತೆ ನೋಡಿಕೊಳ್ಳಿ. ಮಕ್ಕಳಿದ್ದರಂತೂ ಅವರನ್ನು ಸಾಕುವ ಜವಾಬ್ದಾರಿಯೂ ನಿಮ್ಮ ಮೇಲೆ ಇರುತ್ತದೆ. ಆದಿದ್ದಾಯಿತು ಅಂತ ಸೋಲನ್ನೊಪ್ಪಿಕೊಳ್ಳುವುದು ಸುಲಭ, ಆದರೆ ದುಡಿಮೆಯ ಮುಖಾಂತರ ಹೊಸ ಜೀವನವನ್ನು ಮತ್ತೆ ರೂಪಿಸಿಕೊಳ್ಳುವುದು ಬಲು ಕಷ್ಟ.

4.ಖುಷಿಯಿಂದಿರಿ!
ಒಂದು ವೇಳೆ ನಿಮಗೆ ನಿಮ್ಮ ಸಂಗಾತಿ ಡಿವೋರ್ಸ್ ಕೊಟ್ಟಿದ್ದಾಳೆ ಎಂದು ಅಂದುಕೊಂಡು ಖಿನ್ನತೆಗೊಳಗಾಗಬೇಡಿ. ಆಕೆ/ಅಥವಾ ಆತನಿಗೆ ನೀವು ಬೇಡದಿದ್ದರೆ ನಿಮಗೂ ಬೇಡ ಎನ್ನುವ ಮನೋಭಾವವನ್ನು ತಾಳಿ. ಜೀವನವನ್ನು ಬೇರೊಂದು ದೃಷ್ಟಿಕೋನದಿಂದ ನೋಡಲು ಪ್ರಾಂಭಿಸಿ. ಹೊಸ ಸ್ನೇಹಿತರನ್ನು ಸಂಪಾದಿಸಿ. ಸಂತೋಷ ಮತ್ತು ದುಃಖಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಸಣ್ಣಪುಟ್ಟ ಸಂಗತಿಗಳಿಗೂ ಸಂತೋಷಪಡುವುದನ್ನು ರೂಢಿಸಿಕೊಳ್ಳಿ. ಆಗ, ಆನಂದವೇ ನಿಮ್ಮನ್ನು ಆವರಿಸಿಕೊಳ್ಳಲು ಆರಂಭಿಸುತ್ತದೆ. ಅಥವಾ ಸಂತೋಷದ ದಾರಿಯನ್ನು ಹುಡುಕಿ. ಇನ್ನು ಈ ಹಿಂದೆ ಇದ್ದ ಜೀವನ ಶೈಲಿಯನ್ನು ಬದಲಿಸಿ ಹೊಸ ಜೀವನ ಶೈಲಿಯನ್ನು ಜೀವನದಲ್ಲಿ ಅಳವಡಿಸಿ.

5.ಋಣಾತ್ಮಕ ಚಿಂತನೆಯಿಂದ ಹೊರಬನ್ನಿ!
ಡಿವೋರ್ಸ್ ಅನ್ನುವುದು ಅತ್ಯಂತ ಕಠಿಣ ನಿರ್ಧಾರದಲ್ಲೊಂದು ಈ ವೇಳೆ ಸಾಮಾನ್ಯವಾಗಿ ಉದ್ವೇಗ, ಕೋಪ, ನಕರಾತ್ಮಕ ಚಿಂತನೆ ಮೂಡುವುದು ಸಹಜ. ಹೀಗಾಗಿ ನೀವು ಮೊದಲು ಮಾಡಬೇಕಾದ ಕೆಲಸ ನಕರಾತ್ಮಕ ಚಿಂತನೆಯನ್ನು ಬಿಟ್ಟುಬಿಡುವುದು. ನಕರಾತ್ಮಕ ಚಿಂತನೆ ನಿಮ್ಮ ಸಂಗಾತಿಯ ಮೇಲೆ ನಿಮಗೆ ಇನ್ನಷ್ಟು ಕೋಪವನ್ನು ಮೂಡಿಸುತ್ತದೆ. ಇದು ನಿಮ್ಮ ಅಸಂತೋಷಕ್ಕೂ ಕಾರಣವಾಗುತ್ತದೆ. ಅಲ್ಲದೇ, ಇದರಿಂದ ಸಂಗಾತಿ ಮೇಲೆ ಹಲ್ಲೆ ನಡೆಸಲು ನೀವು ಮುಂದಾಗಬಹುದು. ಇಂತಹ ಅನಾಹುತಗಳನ್ನು ತಪ್ಪಿಸಿಕೊಳ್ಳಲು ನೀವು ನಕರಾತ್ಮಕ ಚಿಂತನೆಯಿಂದ ಹೊರಬಂದು ಉತ್ತಮ ಜೀವನ ಆರಂಭಿಸಿ. ಏನು ನಡೆದಿದೆ ಅದನ್ನು ಸ್ವೀಕರಿಸಿ ಜೀವನ ಮುಂದುವರೆಸಿ, ಇನ್ನು ಉತ್ತಮದ್ದು ನಡೆಯಲಿದೆ ಎಂದು ಅಂದುಕೊಳ್ಳಿ. ಕೆಲವರು ಈ ನಕರಾತ್ಮಕ ಚಿಂತನೆಗೆ ಒಳಪಟ್ಟು ಜೀವನವನ್ನೇ ಅಂತ್ಯ ಮಾಡಲು ಮುಂದಾಗುವುದು ಸಹಜವಾಗಿದೆ. ಈ ವೇಳೆ ಒಂದು ತಿಳಿದುಕೊಂಡರೆ ಸಾಕು. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವುದನ್ನು.

6.ಹೊಸ ಸಬಂಧದ ಕಡೆ ವಾಲುವುದು!
ಡಿವೋರ್ಸ್ ಎಂದ ತಕ್ಷಣ ನಮ್ಮ ವೈವಾಹಿಕ ಜೀವನ ಅಂತ್ಯವಾಯ್ತು ಎಂದಲ್ಲ. ಇನ್ನು ಒಂದು ಚಾಪ್ಟರ್ ಆರಂಭಿಸಲು ಆಗುತ್ತೆ. ಹೌದು, ವಿಚ್ಛೇದನವಾದರೆ ಜೀವನವೇನೂ ಮುಗಿದು ಹೋಗುವುದಿಲ್ಲ. ಅಸಲಿಗೆ ಅಲ್ಲಿಂದಲೇ ಹೊಸ ಲೋಕಕ್ಕೆ ಬಾಗಿಲು ತೆರೆಯಲುಬಹುದು. ಇಂದಿನ ಆಧುನಿಕ ಸಮಾಜದಲ್ಲಿ ಹಳೆಯ ಕಾಲದವರಂತೆ ಬದುಕಿರಲು ಸಾಧ್ಯವಿಲ್ಲ. ಹೀಗಾಗಿ ಹೊಸ ಸಂಬಂಧಗಳನ್ನು ಚೂಸ್ ಮಾಡಿಕೊಳ್ಳಬಹುದು. ನಮಗೆ ಸೂಟ್ ಆಗುವ, ನಮ್ಮನ್ನು ಅರ್ಥ ಮಾಡಿಕೊಳ್ಳುವ ಮತ್ತೊಂದು ಸಂಗಾತಿಯನ್ನು ನಮ್ಮ ಜೀವನಕ್ಕೆ ಕ್ರೆದುಕೊಂಡು ಬರಬಹುದು. ಆದರೆ ಈ ಬಗ್ಗೆ ಆತುರದ ನಿರ್ಧಾರ ಬೇಡ ಅಷ್ಟೇ.

7. ಹಳೆ ತಪ್ಪುಗಳ ಪುನರಾವರ್ತಿಸಬೇಡಿ!
ಡಿವೋರ್ಸ್ ಆದ ಬಳಿಕ ಹೊಸ ಜೀವನ ಆರಂಭಿಸಿ. ಎಲ್ಲದಕ್ಕೂ ಎಚ್ಚರಿಕೆಯಿಂದ ಹೆಜ್ಜೆಯಿಡಿ, ಹಳೆಯ ತಪ್ಪುಗಳನ್ನು ಎಂದು ಮಾಡಲು ಹೋಗಬೇಡಿ. ಉದಾಹರಣೆಗೆ ಹೊಸ ಸಂಗಾತಿ ಸಿಕ್ಕಾಗ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಜಾಗೃತವಾಗಿರಿ ಮತ್ತು ಯಾವುದನ್ನೂ ಮುಚ್ಚಿಡಬೇಡಿ. ಹಿಂದೆ ನಿಮ್ಮಿಂದಲೇ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಮತ್ತೆ ದೊರೆಯುವುದಿಲ್ಲ. ಇನ್ನು ಕುಟುಂಬದವರ ಜೊತೆಗೂ ಅನ್ಯೋನ್ಯವಾಗಿರಲು ಕೂಡ ತಪ್ಪುಗಳನ್ನು ಅವಾಯ್ಡ್ ಮಾಡಿ.



Click it and Unblock the Notifications











