Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗೃಹಪ್ರವೇಶಕ್ಕೆ ಪತ್ನಿಯ ಪುತ್ಥಳಿ: ಅಮರ ಪ್ರೇಮಕ್ಕೆ ಸಾಕ್ಷಿಯಾಯ್ತು ಕೊಪ್ಪಳದ ಈ ಮನೆ
ಅದೊಂದು ಭವ್ಯ ಮನೆ, ಮನೆ ಹಾಲ್‌ನೊಳಗೆ ಪ್ರವೇಶಿಸುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಸೋಫಾದಲ್ಲಿ ಲಕ್ಷಣವಾಹಗಿ ಕುಳಿತಿರುವ ಮನೆಯ ಯಜಮಾನಿ. ಅರೇ ಅದರಲ್ಲಿ ಏನು ವಿಶೇಷ ಅಂತೀರಾ, ಆ ಯಜಮಾನಿ ಇಂದು ಜೀವಂತವಾಗಿಲ್ಲ. ಆಕೆಯಿಲ್ಲದ ಮನೆ ಪ್ರವೇಶಿಸಲಾರೆ ಆಕೆ ನಮ್ಮೊಂದಿಗೇ ಇರಬೇಕೆಂದು ಆಕೆಯ ಪತಿ ಸ್ಥಾಪಿಸಿರುವ ಪುತ್ಥಳಿಯದು.
ನಮ್ಮ ಕರ್ನಾಟಕದ ಕೊಪ್ಪಳ ಜಿಲ್ಲೆ ಒಂದು ಸುಂದರವಾದ ಪ್ರೇಮ ಕತೆಗೆ ಸಾಕ್ಷಿಯಾಗಿದೆ. ನಾವೆಲ್ಲಾ ಷಹಜಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗೋಸ್ಕರ ತಾಜ್‌ಮಹಲ್ ಕಟ್ಟಿದ ಕತೆ ಕೇಳಿದ್ದೇವೆ. ಕೊಪ್ಪಳ ಭಾಗ್ಯ ನಗರದಲ್ಲಿನ ಉದ್ಯಮಿ ಶ್ತೀನಿವಾಸ್ ಗುಪ್ತಾರವರ ಪ್ರೇಮ ಯಾವ ತಾಜ್‌ಮಹಲ್ ಪ್ರೇಮ ಕತೆಗಿಂತ ಕಡಿಮೆಯಿಲ್ಲ.

ನೂತನ ಮನೆಯಲ್ಲಿ ಪತ್ನಿಯ ಪುತ್ಥಳಿ ನಿರ್ಮಿಸಿದ ಉದ್ಯಮಿ
ತಮ್ಮ ನೂತನ ಮನೆಯಲ್ಲಿ ಪತ್ನಿ ಕೆವಿಎನ್ ಮಾಧವಿ ಇರಬೇಕೆಂದು ಆಕೆಯಂತೆಯೇ ಕಾಣುವ ಸಿಲಿಕಾನ್ ಪ್ರತಿಮೆ ನಿರ್ಮಿಸಿದ್ದಾರೆ. ಇದನ್ನು ನಿರ್ಮಾಣ ಮಾಡಲು ಸಲಹೆ ಕೊಟ್ಟವರು ಆರ್ಕಿಟೆಕ್ಟ್ ರಂಘಣ್ಣನವರ್. ಬೆಂಗಳೂರಿನ ಬೊಂಬೆ ಮನೆ ಈ ಪುತ್ಥಳಿ ನಿರ್ಮಿಸಿದೆ. ಆಗಸ್ಟ್ 8ಕ್ಕೆ ಈ ಮನೆಯ ಗೃಹಪ್ರವೇಶವಾಗಿದ್ದು ಇದೀಗ ಈ ಮನೆ ಎಲ್ಲರ ಗಮನ ಸೆಳೆದಿದೆ. ಉದ್ಯಮಿ ಗುಪ್ತಾರವರು ಪತ್ನಿ ಮೇಲಿಟ್ಟ ಪ್ರೇಮವನ್ನು ನೋಡಿ, ನಿಜವಾದ ಪ್ರೀತಿಯೆಂದರೆ ಹೀಗಿರಬೇಕು ಎಂದು ಹೇಳುತ್ತಿದ್ದಾರೆ.

ಮಾಧವಿಯವರ ಕನಸ್ಸಿನ ಮನೆ
ಮಾಧವಿಯವರಿಗೆ ಒಂದು ಭವ್ಯವಾದ ಮನೆಯನ್ನು ಕಟ್ಟಬೇಕೆಂಬ ಕನಸ್ಸಿತ್ತು. ಹಾಗಾಗಿ ಮನೆ ಕಟ್ಟಲು ಸಿದ್ಧತೆ ಕೂಡ ನಡೆಸಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. 2017 ಜುಲೈ 5ರಂದು ತಿರುಪತಿಗೆ ಹೋಗುವಾಗ ಕೋಲಾರದ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದರು. ಪತ್ನಿಯ ಅಗಲಿಕೆಯಿಂದ ದುಃಖಿತರಾದ ಶ್ರೀನಿವಾಸ್ ಮನೆ ನಿರ್ಮಾಣವನ್ನು ನಿಲ್ಲಿಸಿದ್ದರು. ಆದರೆ ಪುತ್ರಿಯರು ಹಾಗೂ ಹಿತೈಷಿಗಳು ಸಮಧಾನ ಹೇಳಿ ಮನೆ ಪೂರ್ಣ ಮಾಡುವಂತೆ ಸಲಹೆ ನೀಡಿದರು. ಆಗ ಪತ್ನಿ ಮನೆಯಲ್ಲಿಯೇ ನಮ್ಮ ಜೊತೆ ಇರಬೇಕೆಂದು ಬಯಸಿದ ಶ್ರೀನಿವಾಸ್ ಪತ್ನಿಯ ಪುತ್ಥಳಿ ನಿರ್ಮಿಸಿದ್ದಾರೆ.

ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿ
ಥೇಟ್ ಮಾಧವಿಯವರಂತೆ ಕಾಣುವ ಪುತ್ಥಳಿಗೆ ಮಾಧವಿಯವರ ಸೀರೆಯನ್ನು ಉಡಿಸಲಾಗಿದೆ. ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ತೊಡಿಸಿದ್ದಾರೆ. ಅವರಂತೆಯೇ ತೋರುವ ರೀತಿಯಲ್ಲಿ ಹೇರ್‌ಸ್ಟೈಲ್ ಹಾಗೂ ಅಲಂಕಾರ ಮಾಡಾಗಿದೆ. ಈ ಪುತ್ಥಳಿಯ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು ಎಲ್ಲಿಗೂ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ತಾಯಿ ನಮ್ಮೊಂದಿಗೆ ಇದ್ದಾರೆ ಎಂಬ ಖುಷಿಯಲ್ಲಿ ಪುತ್ರಿಯರು
ಶ್ರೀನಿವಾಸ್ ಅವರ ಪುತ್ರಿಯರಿಗೂ ಕೂಡ ಮನೆಯಲ್ಲಿ ತಾಯಿ ಇರುವುದು ತುಂಬಾ ಖುಷಿಯ ವಿಚಾರವಾಗಿದೆ. ದೈಹಿಕವಾಗಿ ಅಮ್ಮ ಇಲ್ಲದಿದ್ದರೂ ಈ ರೂಪದಲ್ಲಾದರೂ ಹೊಸ ಮನೆಯಲ್ಲಿ ನಮ್ಮ ಜೊತೆ ಇದ್ದಾರಲ್ಲಾ ಎಂಬ ಸಮಧಾನ, ಖುಷಿ ಇದೆ. ಗೃಹ ಪ್ರವೇಶ ದಿನ ತಾಯಿ ಪ್ರತಿಮೆ ಜೊತೆ ಈ ಕುಟುಂಬ ಫ್ಯಾಮಲಿ ಫೋಟೋ ತೆಗೆಸಿಕೊಂಡಿದ್ದಾರೆ.
ಇದೀಗ ಈ ಪುತ್ಥಳಿ ವಿಚಾರ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಸುದ್ದಿಯಾಗಿದ್ದು ಎಲ್ಲರು ಶ್ರೀನಿವಾಸ್ ಅವರು ಪತ್ನಿಯ ಮೇಲಿಟ್ಟಿರುವ ಪ್ರೀತಿ ಕಂಡು ಆದರ್ಶ ಪ್ರೇಮವೆಂದರೆ ಹೀಗಿರಬೇಕು ಎಂದು ಹೊಗಳುತ್ತಿದ್ದಾರೆ.



Click it and Unblock the Notifications
