Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭಾವನೆಗಳ ಅಪ್ರೌಢಿಮೆ ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಭಾವನೆಗಳೆನ್ನುವುದು ಇರುವುದು. ಭಾವನೆಗಳಿಲ್ಲದ ಮನುಷ್ಯನನ್ನು ಕಲ್ಲುಬಂಡೆ ಎನ್ನಬಹುದು. ನಾವು ಸಣ್ಣ ವಯಸ್ಸಿನಲ್ಲಿ ಭಾವನೆಗಳನ್ನು ನಮ್ಮ ತಂದೆ, ತಾಯಿ, ಸೋದರ, ಸೋದರಿಯಲ್ಲಿ ಹೇಳಿಕೊಂಡರೆ, ಮುಂದೆ ಬೆಳೆಯುತ್ತಿದ್ದಂತೆ ಆಪ್ತ ಗೆಳೆಯ ಅಥವಾ ಗೆಳತಿ, ವಿವಾಹವಾದ ಬಳಿಕ ಸಂಗಾತಿ ಜತೆಗೆ ಹಂಚಿಕೊಳ್ಳುತ್ತೇವೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸಲು ಕೆಲವೊಂದು ಸಮಯ, ಸಂದರ್ಭಗಳು ಇರುವುದು. ಸಣ್ಣ ಮಕ್ಕಳಿಗಾದರೆ, ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆನ್ನುವುದು ತಿಳಿದಿರಲ್ಲ, ಆದರೆ ಹದಿಹರೆಯ ದಾಟಿದ ಬಳಿಕ ನಾವು ಭಾವನೆಗಳನ್ನು ವ್ಯಕ್ತಪಡಿಸುವ ಬಗ್ಗೆ ಪ್ರೌಢತೆ ತೋರಿಸಬೇಕು.

ಹೌದು, ನಾವು ಬೆಳೆಯುತ್ತಿರುವಂತಹ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯು ಬದಲಾಗಬೇಕು. ಎಲ್ಲರ ಎದುರಿಗೆ ಮಕ್ಕಳಂತೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಬಾರದು. ಆಗ ಅವರನ್ನು ಭಾವನಾತ್ಮಕ ಅಪ್ರೌಢತೆ ಹೊಂದಿರುವವರು ಎಂದು ಕರೆಯುವರು. ಈ ಲೇಖನದಲ್ಲಿ ಭಾವನಾತ್ಮಕವಾಗಿ ಅಪ್ರೌಢರಾಗುವ ಚಿಹ್ನೆಗಳು ಹಾಗೂ ಅದನ್ನು ನಿಲ್ಲಿಸುವ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಭಾವನೆಗಳನ್ನು ಆಯುಧವಾಗಿ ಬಳಸಬೇಡಿ
ಯಾವುದೇ ರೀತಿಯ ಜಗಳದ ವೇಳೆ ಭಾವನೆಗಳನ್ನು ಆಯುಧವಾಗಿ ಬಳಕೆ ಮಾಡುವುದು ಸರಿಯಾದ ಕ್ರಮವಲ್ಲ. ಭಾವನೆಗಳನ್ನು ಬಳಸುವುದು ಮೋಸ ಮಾಡಿದಂತೆ ಮತ್ತು ಇದು ವಾದದಲ್ಲಿ ನೀವು ವಿಜೇತರಾಗಿ ಎದುರಿನ ವ್ಯಕ್ತಿಯು ನಿಮ್ಮ ಮುಂದೆ ಶರಣಾಗುವಂತೆ ಮಾಡುವುದು. ಸಂಗಾತಿ ಜತೆಗೆ ವಾಗ್ವಾದ ನಡೆಸುತ್ತಲಿದ್ದರೆ, ಆಗ ನೀವೇ ಗೆಲ್ಲಬೇಕು ಎಂದು ಕಣ್ಣೀರು ಸುರಿಸಬೇಡಿ.
ಭಾವನೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಜಗಳವಾಡಿದ ವೇಳೆ ನೀವು ಭಾವನೆಗಳೊಂದಿಗೆ ಆಟವಾಡಿದರೆ, ಆಗ ಪ್ರತೀ ಸಲವು ನಿಮ್ಮ ವಾದವೇ ಗೆಲ್ಲಬಹುದು. ಜಗಳದ ವೇಳೆ ಭಾವನೆಗಳನ್ನು ನಿಗ್ರಹಿಸಲು ನೀವು ಹತ್ತರ ತನಕ ಮನಸ್ಸಿನಲ್ಲೇ ಲೆಕ್ಕ ಹಾಕಿ.

ಭಾವನೆಗಳ ಬಗ್ಗೆ ಭೀತಿ ಬೇಡ
ನಿಮ್ಮ ಭಾವನೆಗಳನ್ನು ನಿಗ್ರಹಿಸಿಕೊಂಡು, ಪ್ರಾಮಾಣಿಕವಾಗಿ ಇದ್ದ ಸಂದರ್ಭದಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗದು. ನೀವು ಏನು ಬೇಕು ಎಂದು ಸರಿಯಾಗಿ ತಿಳಿಯಿರಿ. ಕೆಲವೊಂದು ಸಲ ಮನಸ್ಸು ನಮ್ಮನ್ನು ಗೊಂದಲ ಗೂಡಿಗೆ ತಳ್ಳಿ ಬಿಡುವುದು. ಇಂತಹ ಸಂದರ್ಭದಲ್ಲಿ ನೀವು ಮನಸ್ಸನ್ನು ಅರ್ಥ ಮಾಡಿಕೊಂಡು, ಯಾವುದು ಸರಿಯಾಗಿರುವುದು ಎಂದು ತಿಳಿಯಿರಿ.
ನೀವು ಭಾವನೆಗಳನ್ನು ಹಾಗೆ ಗಂಟು ಕಟ್ಟಿಕೊಂಡು ಇರಬಹುದು. ಆದರೆ ಇದು ಅಲ್ಪ ಸಮಯದಲ್ಲಿ ನಿಮಗೆ ಸಮಸ್ಯೆಯಾಗದಿದ್ದರೂ ದೀರ್ಘಾವಧಿಗೆ ಸಮಸ್ಯೆಯಾಗಬಹುದು. ಯಾಕೆಂದರೆ ಭಾವನೆಗಳನ್ನು ಕಟ್ಟಿಕೊಳ್ಳುವುದು ಜ್ವಾಲಾಮುಖಿ ಇದ್ದಂತೆ.

ನಿಮ್ಮ ಮನಸ್ಸಿನಲ್ಲಿರುವುದನ್ನು ಮಾತನಾಡಿ
ಮನುಷ್ಯನಿಗೆ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವುದನ್ನು ಅರಿತುಕೊಳ್ಳುವುದು ಮುಖ್ಯ. ಹೀಗಾಗಿ ನೀವು ಭಾವನೆಗಳನ್ನು ಹದ್ದುಬಸ್ತಿನಲ್ಲಿಕೊಂಡ ಬಳಿಕ ಮನಸ್ಸಿನಲ್ಲಿ ಇರುವುದನ್ನು ಹೇಳಲು ಹೆದರಬೇಕಾಗಿಲ್ಲ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ವೇಳೆ ಎದುರಿನ ವ್ಯಕ್ತಿಯ ಪ್ರತಿಕ್ರಿಯೆ, ಮಾತು ಅಥವಾ ಭಾವನೆಗಳು ಹೇಗೆ ಇರುವುದು ಎಂದು ತಿಳಿಯಬಹುದು. ನಾಚಿಕೆ ಎನ್ನುವುದು ಮೂಲತಃ ಪ್ರತಿಯೊಬ್ಬರಲ್ಲೂ ಇರುವುದು. ಆದರೆ ಇದರಿಂದ ಹೊರಬನ್ನಿ.
ಮನಸ್ಸು ಬಿಚ್ಚಿ ಮಾತನಾಡುವುದು ಅಗತ್ಯ. ಯಾಕೆಂದರೆ ಭಾವನೆಗಳನ್ನು ಕಟ್ಟಿಕೊಂಡರೆ ಆಗ ಮುಂದೆ ಅದು ಮನಸ್ಸಿನೊಳಗೆ ಹಾಗೆ ಉರಿಯುತ್ತಿರುವುದು. ಹೀಗಾಗಿ ನೀವು ಮುಕ್ತವಾಗಿ ಭಾವನೆಗಳನ್ನು ವ್ಯಕ್ತಪಡಿಸಿ, ಆದರೆ ದುರ್ಬಲರಾಗಬೇಡಿ.

ಮೌನ ವ್ರತ ಬೇಡ!
ಜಗಳವಿಲ್ಲದೆ ಇರುವಂತಹ ಸಂಬಂಧವು ಇರುವುದೇ ಇಲ್ಲ. ಪ್ರತಿಯೊಬ್ಬರು ಜಗಳವಾಡುವರು. ಕೆಲವರ ಜಗಳಗಳು ಸಣ್ಣ ಮಟ್ಟದ್ದಾಗಿದ್ದರೆ, ಇನ್ನು ಕೆಲವು ದೊಡ್ಡದಾಗಿರುವುದು. ಆದರೆ ಭಾವನಾತ್ಮಕವಾಗಿ ಪ್ರೌಢರಾಗಿ ಇದನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವುದು ಅತೀ ಅಗತ್ಯ. ನೀವು ಜಗಳವಾಡಿದ ಬಳಿಕ ಹಾಗೆ ಭಾವನೆಗಳನ್ನು ನಿಯಂತ್ರಿಸಿಕೊಂಡು ಮೌನಿಯಾಗಿದ್ದು, ಬೇರೆಯವರು ಬಂದು ಕ್ಷಮೆಯಾಚಿಸಬೇಕೆಂದು ಬಯಸುತ್ತಿದ್ದರೆ ಇದು ಖಂಡಿತವಾಗಿಯೂ ತಪ್ಪು.
ಯಾವಾಗಲೂ ಮೌನಿಯಾಗಿದ್ದುಕೊಂಡು ನೀವು ಗೆಲ್ಲಲು ಸಾಧ್ಯವಿಲ್ಲ. ಮಾತನಾಡದೆ ಇರುವುದು ಸಮಸ್ಯೆಗಳನ್ನು ಬಗೆಹರಿಸದು. ಇದರಿಂದ ಪರಿಸ್ಥಿತಿಯು ಮತ್ತಷ್ಟು ಕೆಡುವುದು. ಸಂಗಾತಿಯು ನಿಮ್ಮ ಮೌನ ವ್ರತದಿಂದ ಬೇಸತ್ತು ಕ್ಷಮೆ ಕೇಳಿದರೂ ಅದು ಮುಂದೆ ಜೀವನದಲ್ಲಿ ಒಳ್ಳೆಯ ಫಲಿತಾಂಶ ತರಲ್ಲ.

ಬೇರೆಯವರಿಗೂ ಭಾವನೆಗಳಿವೆ
ನೀವು ಭಾವನಾತ್ಮಕವಾಗಿ ಪ್ರೌಢತೆ ಹೊಂದುವುದು ಎಂದರೆ, ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೌರವಿಸುವುದು. ನಿಮ್ಮಂತೆ ಬೇರೆಯವರಿಗೂ ಭಾವನೆಗಳಿರುವುದು ಮತ್ತು ಅವರು ಪ್ರತಿಯೊಂದು ಸಲವೂ ನಿಮ್ಮ ವಾದವನ್ನು ಒಪ್ಪಿಕೊಳ್ಳಬೇಕಾಗಿಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.
ವಾಗ್ವಾದವು ಎಷ್ಟೇ ತೀವ್ರವಾದರೂ ನೀವು ಎದುರಿಗಿರುವ ವ್ಯಕ್ತಿಯ ಮೌಲ್ಯಗಳನ್ನು ತಿಳಿದು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ಅದಕ್ಕೆ ಬೆಲೆ ಕೊಡಿ. ಪರಿಸ್ಥಿತಿ ಬಗ್ಗೆ ಅವರ ಅಭಿಪ್ರಾಯ ಮತ್ತು ಪರಿಹಾರವನ್ನು ತಿಳಿಯಿರಿ. ಪರಸ್ಪರರ ಭಾವನೆಗಳನ್ನು ತಿಳಿಯದೆ ಸಂಬಂಧದಲ್ಲಿ ಮುಂದುವರಿಯಲು ಆಗಲ್ಲ.

ತಾತ್ಕಾಲಿಕ ಭಾವನೆಗಳಿಂದ ಶಾಶ್ವತ ನಿರ್ಧಾರಗಳು ಸರಿಯಲ್ಲ
ಭಾವನೆಗಳು ಹಾಗೆ ಬಂದು ಹೋಗುವುದು, ಕೋಪದ ಬರದಲ್ಲಿ ನಮ್ಮ ಭಾವನೆಗಳು ಕೈ ಮೀರಿ ಹೋಗುವುದು ನಿಜ. ಆದರೆ ನೀವು ಇಂತಹ ಭಾವನೆಗಳನ್ನು ಯಾವಾಗಲೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಬಳಸಬೇಡಿ. ತಾತ್ಕಾಲಿಕ ಭಾವನೆಗಳಿಂದ ಬರುವಂತಹ ನಿರ್ಧಾರವು ಮುಂದೆ ಸಂಬಂಧದಲ್ಲಿ ದೊಡ್ಡ ಕೇಡು ಉಂಟು ಮಾಡಬಹುದು.
ಭಾವನೆ ಹಾಗೂ ಕೋಪವು ನಮ್ಮ ನಿಯಂತ್ರಣದಲ್ಲಿ ಇದ್ದರೆ ಆಗ ಯಾವಾಗಲೂ ಆ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಪಡೆಯುತ್ತಾನೆ. ಅದು ಸಂಬಂಧವಾಗಿದ್ದರೂ ಸರಿಯೇ. ನೀವು ಕೋಪದಲ್ಲಿ ನಿರ್ಧಾರ ತೆಗೆದುಕೊಂಡು ಒಬ್ಬ ಅಮೂಲ್ಯವಾದ ವ್ಯಕ್ತಿಯನ್ನು ಕಳೆದುಕೊಳ್ಳುವ ಬದಲು ಇದರ ಬಗ್ಗೆ ಚಿಂತೆ ಮಾಡಿ.



Click it and Unblock the Notifications











