Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಇದೆಲ್ಲಾ ಮಾಮೂಲು! ಇದನ್ನೇ ದೊಡ್ಡದು ಮಾಡುವುದು ಸರಿಯೇ?
ಸಣ್ಣಪುಟ್ಟ ಜಗಳಗಳು ಗಂಡ ಹೆಂಡತಿಯರ ನಡುವೆ ಇದ್ದೇ ಇರುತ್ತದೆ. ಆದರೆ ಇದೇ ಜಗಳವನ್ನು ದೊಡ್ಡದಾಗಿ ಮಾಡಿದರೆ ಅದು ಮುಂದೆ ಜೀವನದ ಮೇಲೆ ಪರಿಣಾಮ ಬೀರಬಹುದು....
ಆಧುನಿಕತೆಯನ್ನು ಮೇಲೈಸಿಕೊಂಡಿರುವ ಇಂದಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಾ ಇದೆ. ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ನೀಡುವಂತಹ ಸಂಪ್ರದಾಯವು ಭಾರತದಲ್ಲಿ ಬೆಳೆದು ಬಂದಿದೆ. ಪರಸ್ಪರ ಹೊಂದಾಣಿಕೆ ಇರದೆ ಸಂಬಂಧದ ಬಗ್ಗೆ ತಪ್ಪು ಕಲ್ಪನೆಯನ್ನು ಮಾಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರತಿಯೊಂದು ಸಂಬಂಧದಲ್ಲೂ ಸಣ್ಣಪುಟ್ಟ ಜಗಳಗಳು ನಡೆದೇ ನಡೆಯುತ್ತದೆ. ಇಂತಹ ಜಗಳಗಳು ಇಲ್ಲದೆ ಇದ್ದರೆ ಆ ಸಂಬಂಧದಲ್ಲಿ ನಿರಾಸಕ್ತಿ ಮೂಡುತ್ತದೆ. ಆದರೆ ಇಂದಿನ ಯುವ ಸಂಗಾತಿಗಳು ಸಂಬಂಧವೆನ್ನುವುದು ರಾತ್ರಿಯ ಸಂತೋಷವೆಂದು ಭಾವಿಸುತ್ತಾರೆ. ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಜೀವನ ಒಳ್ಳೆಯ ರೀತಿಯಿಂದ ಸಾಗಿಸಲು ಸಾಧ್ಯ. ನಿಮ್ಮ ಸಂಬಂಧದ ಗುಣಮಟ್ಟದ ಬಗ್ಗೆ ಯಾವತ್ತೂ ಸಂಶಯಪಡಬೇಡಿ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗಿಲ್ಲಿ ಹೇಳಿಕೊಡಲಿದೆ....

ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ
ಮದುವೆಯಾದ ಆರಂಭದಲ್ಲಿ ಇದ್ದ ಆಕರ್ಷಣೆ ಮತ್ತು ಕುತೂಹಲವು ಜೀವಮಾನವಿಡಿ ಇರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಕೆಲವು ಸಮಯದ ಬಳಿಕ ಅದು ಖಂಡಿತವಾಗಿಯೂ ಕಡಿಮೆಯಾಗುತ್ತದೆ. ನೀವು ಉತ್ತಮ ಸಂಗಾತಿಯಾಗಿದ್ದರೆ ಪ್ರೀತಿ ಮತ್ತು ಮಮತೆ ಖಂಡಿತವಾಗಿಯೂ ಇರುತ್ತದೆ. ಕುತೂಹಲದ ಹಂತವನ್ನು ಜತೆಯಾಗಿ ಅನುಭವಿಸುವುದರಿಂದ ಮುಂದಿನ ದಿನಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದನ್ನು ತಡೆಯಬಹುದು. ಆಕರ್ಷಣೆ ತಾತ್ಕಾಲಿಕ ಮತ್ತು ಪ್ರೀತಿ ಶಾಶ್ವತ ಎನ್ನುವುದನ್ನು ತಿಳಿಯಬೇಕು.

ಕಿರಿಕಿರಿಯಂತಹ ಸಮಸ್ಯೆ ಮಾಮೂಲಿ!
ಯಾವುದೇ ಸಂಗಾತಿಯ ಜೀವನದಲ್ಲಿ ಈ ಹಂತವು ಸಾಮಾನ್ಯವಾಗಿರುತ್ತದೆ. ಎಲ್ಲಾ ದಿನಗಳು ಒಂದೇ ರೀತಿಯಾಗಿ ಇರುವುದಿಲ್ಲ. ಸಂಗಾತಿಯು ಪ್ರತೀ ಸಲ ಸಿಹಿಯಾದ ಮಾತುಗಳನ್ನೇ ಆಡಬೇಕೆಂದಿಲ್ಲ. ಕೆಲವೊಂದು ಸಲ ಭಾವನೆಗಳು ಬದಲಾಗಬಹುದು ಮತ್ತು ಕಿರಿಕಿರಿಯಾಗಬಹುದು.

ಸಂಗಾತಿಯಿಂದ ಕಡೆಗಣನೆ
ಜೀವನದ ಪ್ರತಿಯೊಂದು ಕ್ಷಣವು ನಿಮಗೆ ಆದ್ಯತೆಯನ್ನು ನೀಡಲು ಅಸಾಧ್ಯವಾಗಿರುತ್ತದೆ. ವೃತ್ತಿ ಅಥವಾ ಮಕ್ಕಳಿಂದಾಗಿ ಸಂಗಾತಿಯು ನಿಮಗೆ ಸಂಪೂರ್ಣ ಸಮಯವನ್ನು ನೀಡಲು ಸಾಧ್ಯವಾಗದೆ ಇರಬಹುದು. ಇದು ಸಾಮಾನ್ಯ ಮತ್ತು ಇದನ್ನು ಪರಿಹರಿಸಿಕೊಳ್ಳಿ.

ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ...
ಜೀವನದ ಪ್ರತೀ ದಿನವೂ ಸಂಗಾತಿಯು ಆಸಕ್ತಿಯಿಂದ ಹಾಸಿಗೆಯಲ್ಲಿ ವರ್ತಿಸಬೇಕೆಂದಿಲ್ಲ. ಕೆಲವು ಕಾರಣಗಳಿಂದ ಆಸಕ್ತಿ ಕಡಿಮೆ ಇರಬಹುದು. ಪ್ರೀತಿ ವ್ಯಕ್ತಪಡಿಸುವುದರಲ್ಲಿ ಏಳುಬೀಳುಗಳು ಇರಬಹುದು. ಇದು ಸಾಮಾನ್ಯ. ಇಂತಹ ಸಮಸ್ಯೆಗೆ ಸಂಗಾತಿಯಿಂದ ದೂರವಾಗಬೇಕಿಲ್ಲ. ಮಾತಿನ ಮೂಲಕ ಇದನ್ನು ಬಗೆಹರಿಸಿ.

ಲಘುವಾಗಿ ಪರಿಗಣಿಸುವುದು
ಕೆಲವು ಸಮಯ ಜತೆಯಾಗಿ ಕಳೆದ ಬಳಿಕ ಸಂಗಾತಿಗಳು ಪರಸ್ಪರರನ್ನು ಲಘುವಾಗಿ ಪರಿಗಣಿಸುವುದು ಸಾಮಾನ್ಯ. ಪರಸ್ಪರ ಮಾತನಾಡಿಕೊಂಡು ಈ ಸಮಸ್ಯೆ ನಿವಾರಿಸಬಹುದು.



Click it and Unblock the Notifications
