Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅವಳನ್ನೊಮ್ಮೆ ಅಪ್ಪಿಕೊಳ್ಳಿ, ಆಕೆ ಅದೇ ನಿರೀಕ್ಷೆಯಲ್ಲಿರುತ್ತಾಳೆ!
ಪತಿ ಮತ್ತು ಪತ್ನಿ ರಾತ್ರಿ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ಇಬ್ಬರು ಆಯಾಸಗೊಂಡು ನಿದ್ರೆಗೆ ಶರಣಾಗಬಹುದೆಂಬುವುದು ಸಹಜ ನಂಬಿಕೆ. ಆದರೆ ಕೆಲವೊಂದು ಸಮೀಕ್ಷೆಯ ಪ್ರಕಾರ ಮಹಿಳೆಯು ಈ ಕ್ರಿಯೆಯ ಬಳಿಕ ಮುದ್ದಾಡುವುದನ್ನು ಬಯಸುತ್ತಾಳಂತೆ. ಪುರುಷರು ಹೆಚ್ಚಾಗಿ ನಿದ್ರೆ, ಸಿಗರೇಟ್ ಅಥವಾ ಒಂದು ಕಪ್ ಕಾಫಿ ಕುಡಿಯುವುದನ್ನು ಬಯಸುತ್ತಾರಂತೆ.

ಅದರಲ್ಲೂ ಕೆಲವು ಪುರುಷರಂತೂ ಈ ಕ್ರಿಯೆಯ ಬಳಿಕ ತಮಗೂ ಮಹಿಳೆಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ಆ ಸ್ಥಳದಿಂದ ಹೊರಟು ಹೋಗುತ್ತಾರೆಂದು ಸಮೀಕ್ಷೆ ಹೇಳಿದೆ. ಮಹಿಳೆಯರು ಎಷ್ಟು ಆಯಾಸಗೊಂಡಿದ್ದರೂ ಪುರುಷರು ತಮ್ಮನ್ನು ಮುದ್ದಾಡಬೇಕು, ತಬ್ಬಿಕೊಂಡು ಮಾತನಾಡಬೇಕೆಂದು ಬಯಸುತ್ತಾರಂತೆ. ಒಂದು ರಾತ್ರಿಯ ಸಂಬಂಧವಾಗಿದ್ದರೂ ಮಹಿಳೆಯರು ಮಾತ್ರ ತಮ್ಮನ್ನು ಪುರುಷರು ಮುದ್ದಾಡಬೇಕೆಂದು ಬಯಸುವುದು ಸಹಜವಂತೆ. ಆದರೆ ಪುರುಷರು ತಮ್ಮನ್ನು ಮುದ್ದಾಡಬೇಕೆಂದು ಮಹಿಳೆಯರು ಬಯಸಲು ಕಾರಣವೇನೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ. ಮಹಿಳೆಯರೇಕೆ ಮುದ್ದಾಟವನ್ನು ಹೆಚ್ಚು ಬಯಸುತ್ತಾರೆ?
*ಮುದ್ದಾಡುವುದರಿಂದ ಸಂಬಂಧ ಇನ್ನಷ್ಟು ಗಟ್ಟಿ
ಇದು ಸಂಬಂಧವನ್ನು ಉತ್ತಮಪಡಸುವ ಒಂದು ಲಕ್ಷಣ. ಈ ಕ್ರಿಯೆಯ ಬಳಿಕ ನೀವು ನಿದ್ರೆಗೆ ಜಾರಿದರೆ ಆಕೆ ಖಂಡಿತವಾಗಿಯೂ ನಿರಾಶೆಗೊಳಗಾಗುತ್ತಾಳೆ.
ಭಾಂದವ್ಯ ವೃದ್ಧಿ
ಹೆಚ್ಚಾಗಿ ತಬ್ಬಿಕೊಳ್ಳುವ ವೇಳೆ ಭಾಂದವ್ಯ ಬಲಗೊಳ್ಳುತ್ತದೆ. ಈ ಕ್ರಿಯೆಯ ವೇಳೆಗಲ್ಲ. ಲೈಂಗಿಕ ಕ್ರಿಯೆಯ ವೇಳೆ ನೀವು ಹೆಚ್ಚಾಗಿ ಖುಷಿಯತ್ತ ಗಮನಹರಿಸಿರುತ್ತೀರಿ. ಭಾಂದವ್ಯದ ಮೇಲಲ್ಲ.
*ಅಪ್ಪಿಕೊಳ್ಳುವುದರಿಂದ ನೀವು ಕೇವಲ ಲೈಂಗಿಕ ಕ್ರಿಯೆಗೆ ಮಾತ್ರವಲ್ಲ ಎಂದು ತೋರಿಸಿಕೊಡುತ್ತದೆ
ಕೇವಲ ಲೈಂಗಿಕ ಕ್ರಿಯೆಗೆ ಮಾತ್ರ ಬೆಡ್ ರೂಮ್ ಗೆ ಹೋಗುವುದನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಆಕೆಯನ್ನು ತುಂಬಾ ಪ್ರೀತಿಸುತ್ತೇನೆಂದು ಪುರುಷರು ಸಾಬೀತುಮಾಡಬೇಕಾಗಿದೆ. ಸಂಬಂಧವನ್ನು ಸುಧಾರಿಸಿಕೊಳ್ಳಬೇಕೆ? ಅಪ್ಪಿಕೊಳ್ಳುವುದನ್ನು ರೂಢಿಸಿಕೊಳ್ಳಿ!
*ಆಕೆಯಲ್ಲಿ ಸುರಕ್ಷಿತ ಭಾವನೆ
ಮಹಿಳೆಯರಿಗೆ ಅಪ್ಪುಗೆಯಿಂದ ಸುರಕ್ಷಿತ ಭಾವನೆ ಉಂಟಾಗುತ್ತದೆ. ಅಪ್ಪಿಕೊಳ್ಳುವುದು, ಆಕೆಯ ಹಣೆಗೆ ಮುತ್ತಿಕ್ಕುವುದು ಮತ್ತು ಮುದ್ದಾಡುವುದರಿಂದ ಮಹಿಳೆಗೆ ಸುರಕ್ಷಿತ ಭಾವನೆ ಉಂಟು ಮಾಡಬಹುದು.
*ನೆನಪಿನಲ್ಲಿಯೇ ಉಳಿಯುವ ಮಧುರ ಕ್ಷಣ
ಅಪ್ಪುಗೆಯಿಂದ ಸುಂದರ ನೆನಪುಗಳು ಉಳಿಯುತ್ತದೆ. ನಿಮ್ಮ ಸುಪ್ತ ಮನಸ್ಸು ಲೈಂಗಿಕ ಕ್ರಿಯೆಯ ನೆನಪಿನ ಬದಲು ಅಪ್ಪುಗೆ ನೆನಪನ್ನು ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.



Click it and Unblock the Notifications



