Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪತಿಯನ್ನು ಎಷ್ಟೇ ಪ್ರೀತಿಸಿದರೂ, ಕೆಲವೊಂದು ಗುಟ್ಟು ಆಕೆ ಹೇಳಲ್ಲ!
ಹೆಣ್ಣೋರ್ವಳ ಮನಸ್ಸಿನಲ್ಲಿ ಏನು ನಡೆಯುತ್ತದೆಯೋ ಸಾಮಾನ್ಯವಾಗಿ ಅದು ಆಕೆಯ ಹೃದಯದ ಮಿಡಿತದೊ೦ದಿಗೆ ಸ೦ವಾದಿಯಾಗುವಲ್ಲಿ ಸೋಲುತ್ತದೆ ಹಾಗೂ ಇದು ಆಕೆಯು ಕೆಲವೊ೦ದು ಸ೦ಗತಿಗಳನ್ನು ರಹಸ್ಯವಾಗಿಟ್ಟುಕೊಳ್ಳುವ೦ತೆ ಮಾಡುತ್ತದೆ......
ಸ್ನೇಹ ಬೆಳೆಯಲು ಸಮಾನ ಅಭಿರುಚಿ ಒಂದು ಸೇತುವೆಯಾದರೆ ಸ್ನೇಹ ಪ್ರೀತಿಗೆ ತಿರುಗಲು ಇದಕ್ಕೂ ಹೆಚ್ಚಿನದ್ದೇನೋ ಇದೆ. ಇದೇ ಆತ್ಮೀಯತೆ. ತಮ್ಮ ಅತ್ಯಂತ ಖಾಸಗಿ ವಿಷಯಗಳನ್ನು ಆತ್ಮೀಯರೊಂದಿಗೆ ಮಾತ್ರ ಹಂಚಿಕೊಳ್ಳುತ್ತಾರೆ. ಆದರೆ ಮಹಿಳೆಯರು ಹೆಚ್ಚಿನ ಎಲ್ಲಾ ವಿಷಯಗಳನ್ನು ತಮ್ಮ ಪತಿಯೊಂದಿಗೆ ಹಂಚಿಕೊಂಡರೂ ಕೆಲವು ವಿಷಯಗಳನ್ನು ಮಾತ್ರ ಸರ್ವಥಾ ಹಂಚಿಕೊಳ್ಳುವುದಿಲ್ಲ. ಹೆಣ್ಣನ್ನು ಅರ್ಥೈಸಿಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ!
ಪ್ರತಿ ಮಹಿಳೆಯ ಮನದಾಳದಲ್ಲಿ ಕೆಲವು ಗುಟ್ಟುಗಳಿದ್ದು ಇದನ್ನು ಅವರು ತಮ್ಮಲ್ಲೇ ಇಟ್ಟುಕೊಂಡು ಸಾಯುವವರೆಗೂ ಇದರ ನೆನಪಿನಲ್ಲಿಯೇ ಪುಳಕಿತರಾಗುತ್ತಿದ್ದರೂ ತಮ್ಮ ಜೀವನದಾದ್ಯಂತ ಜೊತೆ ನೀಡಿದ ಪತಿಗೂ ತಿಳಿಸದೇ ತಮ್ಮಲ್ಲೇ ಬಂಧಿಸಿಟ್ಟುಕೊಳ್ಳುತ್ತಾರೆ. ನಿಮ್ಮವಳ ಈ ರಹಸ್ಯಗಳು ನಿಮಗೆ ಗೊತ್ತಿದೆಯೇ?
ಈ ಲೇಖನದಲ್ಲಿ ಇಂತಹ ಕೆಲವು ವಿಷಯಗಳನ್ನು ವಿವರಿಸಲಾಗಿದ್ದು ಇವು ಯಾರನ್ನೂ ಗುರಿಯಾಗಿಸದೇ ಮನಃಶಾಸ್ತ್ರಜ್ಞರು ಕಂಡುಕೊಂಡ ಮಾಹಿತಿಗಳನ್ನು ಮಾತ್ರ ಚರ್ಚಿಸಲಾಗಿದೆ....

ಆಕೆಯ ಗುಪ್ತ ಕಲ್ಪನೆ.....
ಪ್ರತಿ ಮಹಿಳೆ ತನ್ನೊಂದಿಗೆ ಚಿಕ್ಕಂದಿನ ನೆನಪುಗಳನ್ನು ಶಾಶ್ವತವಾಗಿರಿಸಿಕೊಂಡಿರುತ್ತಾಳೆ. ಇದರಲ್ಲಿ ಚಿಕ್ಕವರಿದ್ದಾಗ ಕೇಳಿದ ಅಜ್ಜಿ ಕಥೆಗಳಲ್ಲಿ ಬರುವ ಕನಸಿನ ರಾಜಕುಮಾರ. ಈ ರಾಜಕುಮಾನ ನಿಜಜೀವನದಲ್ಲಿ ಸಿಗಲು ಸಾಧ್ಯವೇ ಇಲ್ಲ....

ಆಕೆಯ ಗುಪ್ತ ಕಲ್ಪನೆ.....
ಈ ಗುಣಗಳಿರುವ ವ್ಯಕ್ತಿಯನ್ನು ಪಡೆಯಲು ಆಕೆ ಇಚ್ಛಿಸಿದರೂ ತನ್ನ ಪತಿಯಲ್ಲಿ ಈ ಕನಸಿನ ರಾಜಕುಮಾರನ ಎಲ್ಲಾ ಗುಣಗಳನ್ನು ಕಾಣಲಾಗದೇ ಈ ರಾಜಕುಮಾರನನ್ನು ಆಕೆ ತನ್ನ
ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದು ತನ್ನ ಪತಿಯೊಂದಿಗೂ ಹಂಚಿಕೊಳ್ಳುವುದಿಲ್ಲ.

ನೂರಾರು ಆಲೋಚನೆಗಳು
ಮಹಿಳೆಯರ ಮೆದುಳು ಪುರುಷರಿಗಿಂತ ಐದು ಪಟ್ಟು ಹೆಚ್ಚು ತೀಕ್ಷ್ಣವಾಗಿ ಯೋಚಿಸುತ್ತದೆಯಂತೆ. ಆದರೆ ಈ ಆಲೋಚನೆಗಳು ಒಂದೆಡೆ ಕೇಂದ್ರೀಕೃತವಾಗಿರದೇ ವಿವಿಧ ವಿಷಯಗಳತ್ತ ಹಂಚಿಹೋಗಿರುತ್ತದೆ. ಸಾಮಾನ್ಯ ಜೀವನ, ಭವಿಷ್ಯ, ಮೇಕಪ್, ಶಾಪಿಂಗ್, ಸುಖ, ದುಃಖ, ಭಯ, ಅಸುರಕ್ಷತಾ ಭಾವನೆ ಮೊದಲಾದ ಹತ್ತು ಹಲವು ವಿಷಯಗಳು ಆಕೆಯ ಮನಸ್ಸನ್ನು ಕಾಡುತ್ತಿದ್ದು ಇವುಗಳಲ್ಲಿ ಕೆಲವನ್ನು ಮಾತ್ರ ಆಕೆ ಪತಿಯೊಂದಿಗೆ
ಹಂಚಿಕೊಳ್ಳುತ್ತಾಳೆ.

ನೂರಾರು ಆಲೋಚನೆಗಳು
ಉಳಿದ ಸೂಕ್ಷ್ಮ ವಿಷಯಗಳನ್ನು ಹಂಚಿಕೊಳ್ಳಲು ಯತ್ನಿಸಿದರೂ ಪುರುಷರು ಇದಕ್ಕೆ ಹೆಚ್ಚಿನ ಮಹತ್ವ ನೀಡದೇ ಇರುವ ಕಾರಣ ಈ ವಿಷಯಗಳನ್ನು ಆಕೆ ಸುಮ್ಮನೆ ನಗುತ್ತಾ ಇರುತ್ತಾಳೆಯೇ ಹೊರತು ಹಂಚಿಕೊಳ್ಳುವುದಿಲ್ಲ.

ಹಿಂದಿನ ಪ್ರೇಮಿಯ ಬಗೆಗಿನ ಭಾವನೆ
ಹದಿಹರೆಯದಲ್ಲಿ ಪ್ರತಿ ಯುವತಿಯೂ ತನ್ನ ಬಾಳಸಂಗಾತಿಯನ್ನು ತಾನು ಕಂಡ ಅಥವಾ ಕೇಳಿದ ವ್ಯಕ್ತಿಯಲ್ಲಿ ಕಾಣುತ್ತಾಳೆ. ಏಕಮುಖ ಪ್ರೀತಿಯ ಈ ವ್ಯಕ್ತಿಯನ್ನು ಆಕೆ ಜೀವನದಾದ್ಯಂತ ಮರೆಯಲಾರಳು. ಒಂದು ವೇಳೆ ಈ ಬಗ್ಗೆ ತಿಳಿಸುವಂತೆ ಪತಿರಾಯರೇನಾದರೂ ಒತ್ತಡ ಹೇರಿದರೋ, ಆಗ ಪತಿರಾಯರೂ ಆಕೆಗೆ ಖಾಸಗಿ ವಿಷಯಗಳನ್ನು ಕೆದಕುವ ಅತಿಕ್ರಮಿಯಂತೆಯೇ ತೋರುತ್ತಾರೆ.

ತನ್ನ ಪತಿಯೇ ಹಿಂದಿನ ಪ್ರೇಮಿಗಿಂತ ಮಿಗಿಲು.....
ಮದುವೆಯ ಬಳಿಕ ತನ್ನ ಹಿಂದಿನ ಎಲ್ಲಾ ಕಾಮನೆಗಳನ್ನು ಮನಸ್ಸಿನಾಳದಲ್ಲಿ ಬಂಧಿಸಿಟ್ಟು ತನ್ನ ಪ್ರೀತಿಯನ್ನು ಪತಿಗೇ ಮೀಸಲಾಗಿರಿಸಿದರೂ ತಾನು ತನ್ನ ಪತಿಯ ಏಕಮಾತ್ರ ಪ್ರೇಯಸಿಯಾಗಿರಬೇಕೆಂದು ಬಯಸುತ್ತಾಳೆ.

ತನ್ನ ಪತಿಯೇ ಹಿಂದಿನ ಪ್ರೇಮಿಗಿಂತ ಮಿಗಿಲು.....
ಇದಕ್ಕಾಗಿ ಆಕೆ ಪತಿಯ ಹಿಂದಿನ ಪ್ರೇಮಿ ಅಥವಾ ಪತಿಯ ಸಹೋದ್ಯೋಗಿಗಳಿಗಿಂತಲೂ ಮಿಗಿಲು ಎಂದು ತೋರ್ಪಡಿಸಲು ಶ್ರಮಿಸುತ್ತಾಳೆ.



Click it and Unblock the Notifications
