Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮವಳ ಈ ರಹಸ್ಯಗಳು ನಿಮಗೆ ಗೊತ್ತಿದೆಯೇ?
ಮಹಿಳೆಯರು ಏನನ್ನು ಬಯಸುತ್ತಾರೆ? ಸಂಬಂಧಗಳಲ್ಲಿ ಅವರ ಅಭಿಲಾಷೆಗಳೇನು ಎಂಬಿತ್ಯಾದಿ ಅಂಶಗಳನ್ನು ಸಾಮಾನ್ಯವಾಗಿ ಯಾರೂ ಯೋಚಿಸಿರುವುದಿಲ್ಲ. ಆದರೆ ಮಹಿಳೆಯರು ಬಯಸುವ ಕೆಲವು ವಿಷಯಗಳು ಬಹಳ ಸೂಕ್ಷ್ಮವಾಗಿರುತ್ತವೆ. ಇಲ್ಲಿ ಕೆಲವು ಇಂತಹ ರಹಸ್ಯಗಳನ್ನು ಹೇಳಲಾಗಿದೆ. ಇವು ಆರೋಗ್ಯ, ಸಂತೋಷಕರ ದಂಪತಿಗಳು ಮತ್ತು ಲಿಂಗ ಬದಲಾವಣೆಗಳ ಆಧಾರದ ಅಧ್ಯಯನದ ಮೇಲೆ ಹೇಳಲಾಗಿದೆ.
ಮಹಿಳೆಯರು ಬಯಸುವ ರಹಸ್ಯಗಳು:

1. ಕೇರಿಂಗ್ ಗೈ ಇಸ್ ಎ ಹಾಟ್ ಗೈ
ಮಹಿಳೆಯರು ಯಾವಾಗ ಬೇಜಾರಿನಲ್ಲಿರುತ್ತಾರೋ ಅಂತಹ ಸಂದರ್ಭಗಳಲ್ಲಿ ಅವರನ್ನು ಸಮಾಧಾನ ಮಾಡುವ ಜೊತೆಗಿರುವ ಸಂಗಾತಿಯನ್ನು ಬಯಸುತ್ತಾರೆ. ಅವರು ಅಳುತ್ತಿರುವಾಗ ಅವರನ್ನು ತಬ್ಬಿ ಹಿಡಿದು ಸಂತೈಸುವ ಪ್ರಯತ್ನಮಾಡಿ.

2. ಮಧುರ ಸಂಗಮ
ಪ್ರಣಯದ ವಿಷಯ ಬಂದಾಗ ಪ್ರತಿ ಮಹಿಳೆಯರು ತನ್ನ ಸಂಗಾತಿ ಸಾಂಪ್ರದಾಯಿಕವಾಗಿರಬೇಕೆಂದು ಬಯಸುತ್ತಾರೆ. ಅವರ ಆಸೆಗಳನ್ನು ಆತನೇ ಅರ್ಥ ಮಾಡುಕೊಳ್ಳಬೇಕೆಂದು ಬಯಸುತ್ತಾರೆ. ಹಾಗೂ ತನ್ನ ಸಂಗಾತಿ ಶ್ರೇಷ್ಠನಾಗಿ ವರ್ತಿಸಬೇಕೆಂದು ಇಷ್ಟಪಡುತ್ತಾರೆ.

3. ಆಕರ್ಷಿಸುವ ಉಡುಪು
ಕೆಲವರ ಜೀವನ ಶೈಲಿ ಇವತ್ತಿದ್ದಂತೆ ನಾಳೆಯೂ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಸಂಗಾತಿ ಬಯಸಿದ ಉಡುಪನ್ನೇ ಧರಿಸಿ ಅವರಿಗೆ ಟೈಟ್ ಜೀನ್ಸ್ ಇಷ್ಟವಾದರೆ ಅದನ್ನೇ ಧರಿಸಿ.

4. ನಿಮ್ಮ ತಪ್ಪನ್ನು ಮುಚ್ಚಿಡಬೇಡಿ
ಮಹಿಳೆಯರು ಒಬ್ಬ ಉತ್ತಮ ಮನುಷ್ಯನನ್ನು ಹೃದಯದಲ್ಲಿಟ್ಟು ಪೂಜಿಸುತ್ತಾರೆ. ಪ್ರೀತಿಸುತ್ತಾರೆ. ಸದಾ ಸಂಗಾತಿಯ ಮಾತಿನ ಮೇಲೆ ನಂಬಿಕೆ ಇಡುತ್ತಾರೆ. ಈ ನಂಬಿಕೆಯನ್ನು ಉಳಿಸುಕೊಳ್ಳುವುದು ಗಂಡನ ಕರ್ತವ್ಯ. ಮಹಿಳೆಯರು ಚಿಂತನಶೀಲ, ಮೃದು ಮನಸ್ಸಿನ ಗಂಡನನ್ನು ಇಷ್ಟಪಡುತ್ತಾರೆ. ಕೆಲಸದ ಒತ್ತಡದಲ್ಲಿರುವ ಸಂಗಾತಿಯನ್ನು ತಕ್ಷಣಕ್ಕೆ ಗುರುತಿಸುವ ಗಂಡನನ್ನು ಹೆಚ್ಚು ಇಷ್ಟಪಡುತ್ತಾರೆ.

5. ಇದನ್ನು ಮತ್ತೆ ಮತ್ತೆ ಹೇಳಿ
ಮಹಿಳೆಯರು, ಅವರು ಸುಂದರವಾಗಿ ಕಾಣುತ್ತಿದ್ದಾರೆ ಎಂಬುದನ್ನು ಮತ್ತೆ ಮತ್ತೆ ಹೇಳಬೇಕೆಂದು ಬಯಸುತ್ತಾರೆ. ಅವರ ಉಡುಪು ಅಥವಾ ಸ್ಟೈಲ್ ಬಗ್ಗೆ ಹೇಳದೆನೇ ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಆದ್ದರಿಂದ ಅವರ ಹೊಸ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಕ್ಷಣವೇ ವ್ಯಕ್ತಪಡಿಸಿ.

6. ಸಂಬಂಧಗಳ ಮಾತನಾಡಲು ಭಯಬೇಡ:
ನಿಮ್ಮ ಸಂಗಾತಿ ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡುತ್ತಾರೆ ಎಂದಾದರೆ ಅದರ ಅರ್ಥ ನೀವ್ ತಪ್ಪು ಮಾಡಿದ್ದೀರಿ ಎಂದಲ್ಲ. ಸಂಬಂಧಗಳ ಬಗ್ಗೆ ಆಗಾಗ ಮಾತನಾಡುವುದು ಒಳ್ಳೆಯದೆ. ಮುಚ್ಚುಮರೆಯಿಲ್ಲದೇ ಮಾತನಾಡುವುದು ಸಂಗಾತಿಗಳನ್ನು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರ ತರುತ್ತದೆ.

7. ಸರಳ ಪ್ರಣಯ
ನೀವು ಜೊತೆಗಿದ್ದು ಇಪ್ಪತ್ತು ತಿಂಗಳು ಅಥವಾ ಇಪ್ಪತ್ತು ವರ್ಷಗಳಾಗಿರಲಿ. ಅವರು ಯಾವ ರೀತಿಯ ಪ್ರಣಯವನ್ನು ಬಯಸುತ್ತಾರೆ ಎಂಬುದು ನಿಮ್ಮ ಗಮನದಲ್ಲಿರಲಿ. ಪ್ರಣಯದಲ್ಲಿ ಹೊಂದಾಣಿಕೆಯಿದ್ದರೆ ಜೀವನದ ಪ್ರತಿ ವಿಷಯದಲ್ಲೂ ಹೊಂದಾಣಿಕೆಯಿರುತ್ತದೆ. ಈ ರೀತಿ ಮಾಡಿದರೆ ಅವರ ಪ್ರಶಂಸೆಗೂ ನೀವು ಪಾತ್ರರಾಗುವಿರಿ.

8. ಅವರ ಬಯಕೆಗಳನ್ನು ಕೇಳಿ
ಪ್ರಣಯದ ಸಂದರ್ಭದಲ್ಲಿ ಅವರ ಬಯಕೆಗಳನ್ನು ಕೇಳಿ. ಅವರು ಬಯಸಿದ್ದನ್ನೇ ಮಾಡಿ ಮತ್ತು ನಿಮ್ಮ ಸಮ್ಮಿಲನ ಸಕಾರಾತ್ಮಕವಾಗಿರಲಿ.

9. ಅವರ ಜಗತ್ತನ್ನು ನಿರ್ಮಿಸಿ
ಸಾಕಷ್ಟು ಸಮಯ ಮಹಿಳೆಯರು ತಮ್ಮ ಸಂಗಾತಿ ತನ್ನ ಮಾತುಗಳನ್ನು ಕೇಳಲಿ ಎಂದೇ ಬಯಸುತ್ತಾರೆ ಅಂತಹ ಸಮಯದಲ್ಲಿ ನಿಮ್ಮ ಸಲಹೆಗಳನ್ನು ನೀಡದೆ ಅವರು ಹೇಳಿದ್ದನ್ನು ಆಲಿಸಿ. ಈ ರೀತಿ ಮಾತುಗಳನ್ನು ಆಲಿಸುವುದರಿಂದ ಸಂಬಂಧಗಳ ಒಳಹೊರಗಳು ಶುದ್ಧವಾಗಿರುತ್ತದೆ.

10. ತಲೆದೂಗುವಿಕೆಯೊಂದೆ ಸಾಲದು!
ಸಂಗಾತಿಯ ಮಾತುಗಳನ್ನು ಮುಖ್ಯ. ಆದರೆ ಅವರ ಜೊತೆ ನೀವು ಸದಾ ಇರಬೇಕು. ಅವರು ಬೇಜಾರಲ್ಲಿದ್ದಾಗ ನೀವು ಅವರನ್ನು ಪ್ರೀತಿಯಿಂದ ಮಾತನಾಡಿಸಿದರೆ ಅವರು ಬೇಜಾರಾದ ಕಾರಣವನ್ನು ತಿಳಿಸುತ್ತಾರೆ. ನಿಮ್ಮಿಂದ ಯಾವುದೇ ತಪ್ಪು ಮಾಡಿದಾಗ ಕ್ಷಮಾಪಣೆ ಕೇಳುವುದು ಅಷ್ಟೇ ಮುಖ್ಯ.
ಒಟ್ಟಿನಲ್ಲಿ ನಿಮ್ಮ ಸಂಗಾತಿ ಏನನ್ನು ಬಯಸುತ್ತಾರೆ ಎಂಬುದನ್ನು ತಿಳಿದುಕೊಂಡು ಅವರನ್ನು ಸಂಬಾಳಿಸಿ ಸುಂದರ ಸಂಸಾರವನ್ನು ಸಾಗಿಸುವುದು ಪ್ರತಿಯೊಬ್ಬ ಗಂಡಸಿನ ಜವಾಬ್ದಾರಿ!



Click it and Unblock the Notifications
