Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಸಂಬಂಧದಲ್ಲಿ ಪ್ರೀತಿ, ವಿಶ್ವಾಸವೇ ಜೀವನದ ಜೀವಾಳ
ನಿನ್ನ ಸಂಬಂಧಿಕರನ್ನು ನಾನೇ ಕೊಟ್ಟಿದ್ದೇನೆ, ಆದರೆ ನಿನ್ನ ಸ್ನೇಹಿತರನ್ನು ಮಾತ್ರ ನೀನೇ ಹುಡುಕಿಕೊಳ್ಳಬೇಕಪ್ಪಾ ಎಂದು ದೇವರು ನಮ್ಮನ್ನು ಸೃಷ್ಟಿಸುವ ಮೊದಲೇ ಹೇಳಿ ಕಳಿಸಿರುತ್ತಾನಂತೆ! ಹೌದು, ಸಂಬಂಧಗಳು ನಿಜವಾಗಿಯೂ ದೇವರಿಂದಲೇ ನೀಡಲ್ಪಟ್ಟ ಒಂದು ಸುಂದರ ವರ. ಮಾನವ ಸಂಘಜೀವಿ. ಒಂಟಿಯಾಗಿ ಬಾಳಲು ಸಾಧ್ಯವೇ ಇಲ್ಲ.
ಒಂದು ಸಮಾಜದಲ್ಲಿದ್ದು ತನ್ನಿಂತ ಇತರರಿಗೆ ಹಾಗೂ ಇತರರಿಂದ ತನಗೆ ಪರಸ್ಪರ ಸಹಕರಿಸುತ್ತಾ ಜೀವನ ನಡೆಸುವುದರಿಂದ ಸುಖವಾದ ಬಾಳು ಸಾಧ್ಯ. ಆದರೆ ಸಮಾಜದ ಎಲ್ಲರೂ ಅತ್ಯಂತ ಆಪ್ತರಾಗಿರಲು ಸಾಧ್ಯವಿಲ್ಲ. ಆದ್ದರಿಂದಲೇ ದೇವರು ನಮಗೆ ತಾಯಿಯನ್ನು ಅತ್ಯಂತ ಅಪ್ತಳಾದ ಸಂಬಂಧಿಕಳನ್ನಾಗಿ ಮಾಡಿ ಇನ್ನುಳಿದವರನ್ನು ಆ ಬಳಿಕದ ಆಪ್ತರನ್ನಾಗಿಸಿದ್ದಾನೆ. ಅನುಮಾನವೇ ಸಂಸಾರವನ್ನು ನುಚ್ಚುನೂರು ಮಾಡಬಹುದು!

ಕೆಲವು ಕೈದಿಗಳ ಬಳಿ ಅವರು ಮಾಡಿದ ಘೋರ ಕಾರ್ಯಕ್ಕೆ ಏಕೆ ಏನೂ ಹೆದರಿಕೆಯಾಗಲಿಲ್ಲ ಎಂದು ಕೇಳಿದರೆ ಕೆಲವರಿಂದ ನಮಗೆ ಅಳುವವರು ಯಾರಿದ್ದಾರೆ ಎಂಬ ಉತ್ತರ ಬರುತ್ತದೆ. ಅಂದರೆ ಅವರಿಗಾಗಿ ಮನೆಯಲ್ಲಿ ಅಳುವವರು, ಅಥವಾ ಅವರಿಗಾಗಿ ಕಾಯುವವರು ಯಾರೂ ಇಲ್ಲದಿದ್ದುದರಿಂದ ಒಂಟಿಯಾಗಿದ್ದ ಜೀವನಕ್ಕೆ ಭಂಡ ಧೈರ್ಯ ಬಂದಿದೆ. ಬಂಧುಗಳೊಂದಿಗೆ ಹಾಗೂ ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೂಲಕ ಜೀವನ ಸೊಗಸಾಗಲು ಸಾಧ್ಯ. ಅಂತೆಯೇ ಒಂಟಿಜೀವನ ಜೀವನವನ್ನು ರಸಹೀನವಾಗಿಸಿ ನೀರಸ ಬದುಕಾಗುತ್ತದೆ.
ನಮ್ಮೆಲ್ಲರಿಗೂ ಮನೆಯಲ್ಲಿ ಯಾರಾದರೂ ಕಾಯುತ್ತಿದ್ದಾರೆಂಬ ಒಂದು ಯೋಚನೆಯೇ ಪುಳಕ ಮೂಡಿಸುತ್ತದೆ. ಒಂದು ಸಂಶೋಧನೆಯ ಪ್ರಕಾರ ಒಂಟಿಯಾಗಿರುವವರು ತಮ್ಮ ಒಂಟಿತನವನ್ನು ತಾಳಲಾರದೇ ಸಾಕುಪ್ರಾಣಿಗಳಲ್ಲಿ ತಮ್ಮ ಆತ್ಮೀಯರನ್ನು ಕಾಣುವ ಪ್ರಯತ್ನ ಮಾಡುತ್ತಾರೆ. ನಮ್ಮ ಜೀವನಗಳಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದರ ಅಗತ್ಯತೆಯನ್ನು ಕೆಳಗೆ ವಿವಿರಿಸಲಾಗಿದೆ: ಮದುವೆಯ ಬಗ್ಗೆ ಸಾಮಾನ್ಯರಲ್ಲಿ ಮನೆಮಾಡಿರುವ ತಪ್ಪುಕಲ್ಪನೆಗಳು
ಸುರಕ್ಷಾ ಭಾವನೆಯುಂಟುಮಾಡುತ್ತದೆ
ನೀವು ಒಂಟಿಯಾಗಿಲ್ಲದೇ ನಿಮ್ಮ ಜೊತೆಗೆ ಮನೆಯವರಿದ್ದಾಗ ನಿಮ್ಮಲ್ಲಿ ಸುರಕ್ಷತೆಯ ಭಾವನೆ ಮೂಡುತ್ತದೆ. ಮನೆಗೆ ಹಿರಿಯರಾಗಿದ್ದವರಿಗೆ ತಮ್ಮನ್ನು ಅವಲಂಬಿಸಿದವರಿಗೆ ಸುರಕ್ಷತೆ ನೀಡಬೇಕಾದ ಜವಾಬ್ದಾರಿ ಜೀವನದ ಹುಮ್ಮಸ್ಸನ್ನು ಹೆಚ್ಚಿಸಿದರೆ ಅವರ ಮನೆಯವರು ಹಿರಿಯರಿರುವ ಸುರಕ್ಷತೆಯಿಂದ ನೆಮ್ಮದಿಯಿಂದಿರುತ್ತಾರೆ. ಜೀವನದಲ್ಲಿ ಸುರಕ್ಷತೆಯೂ ಊಟ, ಬಟ್ಟೆ ಮತ್ತು ವಸತಿಗಳಂತೆಯೇ ಜೀವನಾವಶ್ಯವಾಗಿದೆ.
ಒಂಟಿತನ ಒಂದು ನೋವು
ಒಂಟಿಬಾಳು ನರಕಕ್ಕೆ ಸಮಾನ ಎನ್ನುತ್ತದೆ ಒಂದು ಸುಭಾಷಿತ. ಒಂಟಿಬಾಳು ಎಂದರೆ ಮದುವೆಯಾಗದೇ ಇರುವ ಬ್ರಹ್ಮಚಾರಿಗಳು ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ, ಸುತ್ತಮುತ್ತಲ ಎಲ್ಲರೊಂದಿಗೂ ತಮ್ಮ ನಂಟನ್ನು ಕಳೆದುಕೊಂಡು ಯಾರೊಂದಿಗೂ ಬೆರೆಯದೇ, ಯಾರ ಸಹಾಯವನ್ನೂ ಪಡೆಯದೇ, ಯಾರಿಗೂ ಸಹಾಯ ಮಾಡದೇ ದೇವರಿಗೆ ಬಿಟ್ಟ ಕುರಿಯ ತರಹ ತನ್ನ ಮನಸ್ಸಿಗೆ ತೋಚಿದ್ದನ್ನೇ ಮಾಡುತ್ತಾ ಕಾಲಕಳೆಯುವುದೇ ಒಂಟಿಜೀವನ.
ಮನೆಯವರಿಂದ ದೂರಾಗಿದ್ದರೂ ತನ್ನ ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಾಮರಸ್ಯ ಹೊಂದಿರುವವರನ್ನು ಒಂಟಿ ಎನ್ನಲಾಗುವುದಿಲ್ಲ. ಒಟ್ಟಾರೆ ನಾಲ್ಕು ಜನರ ಮಧ್ಯೆ ಇದ್ದು ಒಬ್ಬರಿಗೊಬ್ಬರು ಸಹಕರಿಸಿಕೊಂಡಿದ್ದರೆ ಸರಿ, ಜೀವನ ಸುಂದರವಾಗಿತ್ತದೆ.
ಪರಸ್ಪರ ಅವಲಂಬನೆಯೇ ಜೀವನದ ಜೀವಾಳ
ಈ ಜಗತ್ತಿನಲ್ಲಿ ಪ್ರತಿಯೊಂದೂ ಒಂದಕ್ಕೊಂದು ಅವಲಂಬಿತವಾಗಿದೆ. ಈ ಅವಲಂಬನೆಯನ್ನೇ ನಿಸರ್ಗ ಜೋಡಿಗಳಾಗಿಸಿದೆ. ಅಂತೆಯೇ ಪ್ರತಿಜೀವಿಯಲ್ಲಿಯೂ ಗಂಡು ಹೆಣ್ಣು ಜಾತಿಗಳನ್ನು ಸೃಷ್ಟಿಸಿ ಒಂದು ಇನ್ನೊಂದಕ್ಕೆ ಪರಸ್ಪರ ಅವಲಂಬಿಸುವಂತೆ ಮಾಡಿದೆ. ಮಾನವರೂ ಇದಕ್ಕೆ ಹೊರತಲ್ಲ. ಪ್ರತಿ ಗಂಡಿಗೂ ಒಂದು ಹೆಣ್ಣು ಎಂದು ನಿಸರ್ಗ ಸೃಷ್ಟಿಸಿಯೇ ಇರುತ್ತದೆ.
ಜೋಡಿಯಾಗಿರುವ ಭಾವನೆ ಪರಸ್ಪರರಿಗೆ ಅವಲಂಬಿತರಾಗುವ ಮೂಲಕ ನಿಸರ್ಗದ ನಿಯಮದ ಪಾಲನೆಯಾಗುತ್ತದೆ. ಅಂತೆಯೇ ನಮ್ಮ ಬಂಧುಗಳ ಮಿತ್ರರ ನಡುವೆಯೂ ಪರಸ್ಪರ ಅವಲಂಬನೆಯೇ ಜೀವನದಲ್ಲಿ ಸುಖವಾಗಿರಲು ತಳಪಾಯವಾಗಿದೆ. ಒಂದು ವೇಳೆ ನೀವು ಒಂಟಿಯಾಗಿಯೇ ಇರಲು ಇಚ್ಛಿಸಿದರೂ ಒಂದಲ್ಲಾ ಒಂದು ದಿನ ತನಗೊಬ್ಬ ಸಂಗಾತಿ ಇದ್ದರೆ ಒಳ್ಳೆಯದಿತ್ತು ಎಂದು ಹಲಬುವ ಕಾಲ ಬರುತ್ತದೆ.
ಸಂಬಂಧದಲ್ಲಿದ್ದಾಗ ಸಂತಸ ಹೆಚ್ಚುತ್ತದೆ
ಯಾವುದೇ ಸಂಬಂಧದಲ್ಲಿ ಕೇವಲ ಸುಖ ಮಾತ್ರ ಇರುತ್ತದೆ ಎಂದು ಹೇಳಲಾಗದು. ಯುಗಾಗಿಯಲ್ಲಿ ನೀಡುವ ಬೇವು ಬೆಲ್ಲವೂ ಜೀವನದ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುವ ಸೂಚನೆಯಾಗಿದೆ. ಆದರೆ ಸಂಬಂಧದಲ್ಲಿದ್ದಾಗ ಕಷ್ಟಗಳು ಎಷ್ಟು ಬಂದರೂ ಅದನ್ನು ಎದುರಿಸಲು ನಮ್ಮ ಸಂಬಂಧಗಳು ಪ್ರೇರಣೆ ನೀಡುತ್ತವೆ. ಕಷ್ಟಗಳನ್ನು ಎದುರಿಸಿ ನಡೆವ ಜೀವನ ಹೆಚ್ಚು ಸುಖ ನೀಡುತ್ತದೆ. ಸಂಬಂಧಗಳ ಮೂಲಕ ಸಿಗುವ ಸುಖಕ್ಕಾಗಿ ದುಃಖವನ್ನೆದುರಿಸಲೂ ಎಲ್ಲರೂ ಸಿದ್ಧರಿರುತ್ತಾರೆ. ಆದ್ದರಿಂದಲೇ ವಿಶ್ವದಾದ್ಯಂತ ವಿವಾಹ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ.
ಸಂಬಂಧದಲ್ಲಿದ್ದಾಗ ಖಿನ್ನತೆಯ ಸಾಧ್ಯತೆ ಅತಿ ಕಡಿಮೆ
ಖಿನ್ನತೆಗೆ ಕಾರಣಗಳನ್ನು ಹುಡುಕಿದರೆ ಒಂಟಿತನ ಪ್ರಮುಖವಾದ ಕಾರಣವಾಗಿರುವುದು ಕಂಡುಬರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಒಂಟಿಯಾಗಿರುವುದು ಮಾತ್ರವಲ್ಲ, ಸುತ್ತ ಮುತ್ತಲ ಜನರೊಂದಿಗೆ ಹೊಂದಿಕೊಳ್ಳದೇ ಇರುವುದೂ ಖಿನ್ನತೆಗೆ ಇನ್ನೊಂದು ಕಾರಣ. ಒಂದು ಕಾನೂನು ವ್ಯವಸ್ಥೆಯಲ್ಲಿದ್ದಾಗ ಅದರ ಪ್ರಕಾರ ನಡೆಯುವುದು ಪ್ರತಿ ನಾಗರಿಕನ ಕರ್ತವ್ಯ.
ಒಂದು ವೇಳೆ ಒಂಟಿಯಾಗಿದ್ದವರು ತಮಗೆ ಸರಿಬಂದಂತೆ ನಡೆದು, ಆ ನಡೆ ಕಾನೂನಿಗೆ ವಿರುದ್ಧವಾಗಿದ್ದರೆ ಎದುರಾಗುವ ತಡೆಗಳನ್ನು ಸ್ವೀಕರಿಸಲಾಗದೇ ಖಿನ್ನತೆಗೆ ಒಳಗಾಗುತ್ತಾರೆ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ವಿವಾಹದ ಬಳಿಕ ಅಂಕುರಿಸಿದ ಪ್ರೀತಿ ಶಾಶ್ವತವಂತೆ! ನಿಜವೇ?
ಅದೇ ಸಂಬಂಧದಲ್ಲಿದ್ದರೆ ಹಿತೈಷಿಗಳು ಈ ನಡೆಯನ್ನು ಗುರುತಿಸಿ ತಪ್ಪನ್ನು ತಿದ್ದಿಕೊಳ್ಳಲು ಸಲಹೆ ಹಾಗೂ ನೆರವು ನೀಡುತ್ತಾರೆ. ಅದಕ್ಕೇ ಹಿರಿಯರಿರಬೇಕು ಮನೆಯಲ್ಲಿ ಎಂದು ಹೇಳುವುದು. ಜೀವನದಲ್ಲಿ ಪಡೆದ ಯಾವುದೇ ಫಲವನ್ನು ಮನೆಯವರೊಂದಿಗೆ ಹಂಚಿ ತಿನ್ನುವ ಸಂತಸವನ್ನು ಯಾವುದೇ ಐಶ್ವರ್ಯ ನೀಡಲು ಸಾಧ್ಯವಿಲ್ಲ. ವಾಸ್ತವ: ನಿಮ್ಮವರು ಯಾರು ಎಂದು ಕಂಡುಹಿಡಿಯಬೇಕೇ? ನಿಮ್ಮಿಂದ ಏನನ್ನೂ ಅಪೇಕ್ಷಿಸದೇ ನಿಮಗಾಗಿ ಯಾರು ತಮ್ಮ ಸಮಯವನ್ನು ವ್ಯಯಿಸಲು ಸಿದ್ಧರಿದ್ದಾರೋ ಅವರೇ ನಿಮ್ಮವರು.



Click it and Unblock the Notifications















