ವಿವಾಹದ ಬಳಿಕ ಅಂಕುರಿಸಿದ ಪ್ರೀತಿ ಶಾಶ್ವತವಂತೆ! ನಿಜವೇ?

By Super

ಇಂದಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ವಿಚ್ಛೇದನಕ್ಕೆ ನೀಡುವ ಕಾರಣಗಳು ಹೆಚ್ಚಾಗಿ ಕ್ಷುಲ್ಲುಕವಾಗಿರುತ್ತವೆ. ಇದು ಯಾವುದೇ ಧರ್ಮ ಅಥವಾ ಪಂಗಡದಲ್ಲಿ ಆಗಿರಲಿ, ಅಲ್ಲಿನ ಹಿರಿಯರು "ನಮ್ಮ ಕಾಲದಲ್ಲಿ ಹೀಗಿರಲಿಲ್ಲವಪ್ಪಾ, ನಾವೆಲ್ಲಾ ನಮ್ಮ ಪತ್ನಿಯರ/ಪತಿಯರ ಮುಖ ನೋಡಿದ್ದೇ ಮದುವೆಯ ಮಂಟಪದಲ್ಲಿ!

ಈಗ ನೋಡಿ, ಮದುವೆಗೂ ಮುಂಚೆ ಇಷ್ಟೊಂದು ಒಟ್ಟಿಗಿದ್ದೂ, ಎಲ್ಲಾ ರೀತಿಯಲ್ಲಿ ಒಬ್ಬರನ್ನೊಬ್ಬರು ಒಪ್ಪಿ ಮದುವೆಯಾದ ಬಳಿಕವೂ ಬೇರೆಯಾಗಿದ್ದಾರೆ ಎಂದರೆ!" ಎಂದು ಹತಾಶೆಯ ನಿಟ್ಟುಸಿರು ಬಿಡುವುದನ್ನು ಕಾಣಬಹುದು. ಇದರರ್ಥ ವಿವಾಹದ ವೈಫಲ್ಯಕ್ಕೆ ವಿವಾಹಪೂರ್ವ ಪ್ರೇಮವೇ ಕಾರಣ! ಮದುವೆಯ ಬಳಿಕ ಏಕೆ ಇಷ್ಟೊಂದು ನೀರಸ ಮೌನ?

ವಿಚ್ಛೇದನಕ್ಕೆ ವಿವಾಹವೇ ಕಾರಣ ಎಂಬುದೊಂದು ಹಳೆಯ ಜೋಕು. ಆದರೆ ವಿಚ್ಛೇದನಕ್ಕೆ ಅಹಂಭಾವವೇ ಕಾರಣ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ. ಆದರೆ ವಿಚ್ಛೇದನವಾಗಿರುವ ಪ್ರಕರಣಗಳಲ್ಲಿ ಸಿಂಹಪಾಲು ಪ್ರೇಮವಿವಾಹಗಳದ್ದೇ ಎಂಬ ಸತ್ಯವನ್ನು ಮರೆಮಾಚಲಾಗದು. ಕಡಿಮೆ ಪ್ರಕರಣದಲ್ಲಿಯಾದರೂ ಸರಿ, ಎಷ್ಟೋ ವಿವಾಹಗಳು ಹಿರಿಯರು ನಿಶ್ಚಯಿಸಿದ್ದರೂ ಆಗಿವೆಯೆಲ್ಲಾ! ಪರಿಣಿತರಿಂದ ಇದಕ್ಕೆ ಸಿಗುವ ಉತ್ತರ - ಬದ್ಧತೆಯಲ್ಲಿ ಕೊರತೆ.

ಮದುವೆಗೆ ಮುನ್ನ ತಮ್ಮ ಸಂಗಾತಿಯಲ್ಲಿ ಕಂಡುಬರುತ್ತಿದ್ದ ಒಳ್ಳೆಯ ಸಂಗತಿಗಳನ್ನೆಲ್ಲಾ ಮದುವೆಯ ಬಳಿಕ ಕಂಡುಕೊಳ್ಳುವ ಚಿಕ್ಕಪುಟ್ಟ ನ್ಯೂನ್ಯತೆಗಳು ತಿಂದುಹಾಕುವುದೇ ಮನಸ್ತಾಪ ಬೆಳೆಯಲು ಮೂಲ. ಆದ್ದರಿಂದ ವಿವಾಹವಾದ ಬಳಿಕ ಪ್ರೇಮ ಅಂಕುರಿಸಿದರೇ ಅದು ಜೀವನಪೂರ್ತಿ ಉಳಿಯಲು ಸಾಧ್ಯ ಎಂದು ಹಲವು ಪರಿಣಿತರು ಅಭಿಪ್ರಾಯಪಡುತ್ತಾರೆ. ಒಟ್ಟಾರೆ, ಹಿರಿಯರ ಮತ್ತು ಪರಿಣಿತರ ಅಭಿಪ್ರಾಯವನ್ನು ಪರಿಗಣಿಸುವುದಾದರೆ ವಿವಾಹದ ಬಳಿಕ ಪ್ರೇಮಾಂಕುರವಾದರೆ ಅದು ಶಾಶ್ವತ.

ವಿವಾಹಕ್ಕಿಂತಲೂ ವಿವಾಹನಂತರದ ಬದ್ಧತೆಗೆ ಹೆಚ್ಚಿನ ಆದ್ಯತೆ

ವಿವಾಹಕ್ಕಿಂತಲೂ ವಿವಾಹನಂತರದ ಬದ್ಧತೆಗೆ ಹೆಚ್ಚಿನ ಆದ್ಯತೆ

ಡೇಟಿಂಗ್ ವ್ಯವಸ್ಥೆಯಲ್ಲಿ ಹೆಚ್ಚಿನವರು ಕೇವಲ ತಮ್ಮ ವಯಸ್ಸಿನ, ಸೌಂದರ್ಯ ಅಥವಾ ತನ್ನಲ್ಲಿರುವ ಇನ್ನಾವುದೋ ಒಂದು ಆಕರ್ಷಣೆಯನ್ನು ಬಳಸಿಕೊಂಡು ಎದುರಿಗಿರುವ ಪುರುಷನ/ಮಹಿಳೆಯ ಜೊತೆಯಲ್ಲಿ ಚೆಲ್ಲಾಟವಾಡಲು, ಸಾಧ್ಯವಾದರೆ ದೈಹಿಕ ಸಂಪರ್ಕ ಪಡೆದು ಬಳಿಕ ದೂರಾಗುವ ಇರಾದೆಯಲ್ಲಿಯೇ ಇರುತ್ತಾರೆ. ಇವರಿಗೆ ಮದುವೆಯಾಗಲೇಬೇಕು ಎಂಬ ಯಾವುದೇ ಸ್ಪಷ್ಟವಾದ ನಿರ್ಧಾರ ಇರುವುದಿಲ್ಲ. ಆದರೆ ಡೇಟಿಂಗ್ ಮಾಡುತ್ತಿರುವಾಗ ಎದುರಿನ ವ್ಯಕ್ತಿಯ ಯಾವುದೋ ಒಂದು ಗುಣ ಅವರಿಗೆ ಇಷ್ಟವಾಗಿಬಿಟ್ಟು ಇರಾದೆ ಮದುವೆಗೆ ಮುಂದುವರೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಾಹಕ್ಕಿಂತಲೂ ವಿವಾಹನಂತರದ ಬದ್ಧತೆಗೆ ಹೆಚ್ಚಿನ ಆದ್ಯತೆ

ವಿವಾಹಕ್ಕಿಂತಲೂ ವಿವಾಹನಂತರದ ಬದ್ಧತೆಗೆ ಹೆಚ್ಚಿನ ಆದ್ಯತೆ

ಸರಿ, ಇದನ್ನೇ ಪ್ರೇಮವಿವಾಹವೆಂದು ಕರೆದು ವಿವಾಹವಾದ ಬಳಿಕ ಸಂಗಾತಿಯಲ್ಲಿ ಇರುವ ಬೇರೆ ನ್ಯೂನ್ಯತೆಗಳು ಕಂಡುಬರುತ್ತಾ, ಡೇಟಿಂಗಿನಲ್ಲಿದ್ದ ಮಜಾ ಈಗ ಇಲ್ಲದಿರುವುದು ಚುಚ್ಚಲು ತೊಡಗುತ್ತದೆ. ಆಗ ಮದುವೆಯಾದ ಬಳಿಕ ಇರುವ ಬದ್ಧತೆ ಅಲ್ಲಾಡತೊಡಗುತ್ತದೆ. ಮದುವೆಗೂ ಮುನ್ನ ಇದ್ದ ಪ್ರೇಮವೆಲ್ಲಾ ಕ್ಷಣಿಕ ಆಕರ್ಷಣೆಗಳು ಅನ್ನಿಸತೊಡಗುತ್ತವೆ. ಪರಿಣಾಮ ಇಬ್ಬರಲ್ಲಿಯೂ ದ್ವೇಶ ಪ್ರಾರಂಭವಾಗುತ್ತದೆ. ಈ ಅಂತರ ಹೆಚ್ಚುತ್ತಾ ಹೆಚ್ಚುತ್ತಾ ಬಳಿಕ ಒಂದು ದಿನ ವಿಚ್ಚೇದನದ ಮೂಲಕ ಕಡಿದುಕೊಳ್ಳುತ್ತದೆ.

ವಿವಾಹವೆಂದರೆ ಹಲವು ಕಟ್ಟುಬದ್ಧತೆಗಳ ಮೇಲೆ ಅವಲಂಬಿತವಾಗಿದೆ

ವಿವಾಹವೆಂದರೆ ಹಲವು ಕಟ್ಟುಬದ್ಧತೆಗಳ ಮೇಲೆ ಅವಲಂಬಿತವಾಗಿದೆ

ಭಾರತದಂತಹ ರಾಷ್ಟ್ರಗಳಲ್ಲಿ ವಿವಾಹವೆಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧಕ್ಕಿಂತಲೂ ಎರಡು ಕುಟುಂಬಗಳ ನಡುವೆ ನಡೆಯುವ ಬೆಸುಗೆಗೇ ಹೆಚ್ಚಿನ ಮಹತ್ವ ನೀಡಲಾಗಿದೆ. ಡೇಟಿಂಗ್ ವ್ಯವಸ್ಥೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರ ಭಾವನೆಗಳು ಮೂಡುತ್ತವೆಯೇ ಹೊರತು ಅವರ ಕುಟುಂಬದವರೊಂದಿಗಲ್ಲ. ಎಷ್ಟೋ ಜನರಿಗೆ ತಮ್ಮ ಸಂಗಾತಿಯ ತಂದೆ ತಾಯಿಯರ ಹೆಸರೇ ನೆನಪಿರುವುದಿಲ್ಲ! ಪ್ರೇಮವಿವಾಹಗಳಲ್ಲಿ ಹೆಚ್ಚಿನವರು ತಮ್ಮ ಮನೆಯವರನ್ನು ತೊರೆದು ಬಂದಿದ್ದು ವಿವಾಹದ ಬಳಿಕ ಮನೆಯವಯ ಬಾಂಧವ್ಯವನ್ನು ಮರೆಯಲಾಗದೇ, ಇತ್ತ ಸಂಗಾತಿಯ ಸಂಗವನ್ನೂ ಬಿಟ್ಟಿರಲಾರದೇ ಪರಿತಪಿಸುತ್ತಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿವಾಹವೆಂದರೆ ಹಲವು ಕಟ್ಟುಬದ್ಧತೆಗಳ ಮೇಲೆ ಅವಲಂಬಿತವಾಗಿದೆ

ವಿವಾಹವೆಂದರೆ ಹಲವು ಕಟ್ಟುಬದ್ಧತೆಗಳ ಮೇಲೆ ಅವಲಂಬಿತವಾಗಿದೆ

ಎರಡು ಪಾತ್ರೆಗಳಿದ್ದರೆ ಸದ್ದು ಅನಿವಾರ್ಯವೆಂಬಂತೆ ಎಷ್ಟೇ ಅನ್ಯೋನ್ಯವಾದ ಪತಿಪತ್ನಿಯರಾಗಿದ್ದರೂ ಯಾವುದೋ ಒಂದು ಕ್ಷಣದಲ್ಲಿ ಅನಾಚೂನವಾಗಿ ಮಾಡಿದ ಒಂದು ಮಾತು ಈ ಪರಿತಾಪವನ್ನು ಭುಗಿಲೆಬ್ಬಿಸುತ್ತದೆ. ಒಮ್ಮೆ ಈ ಭುಗಿಲೆದ್ದ ಪರಿತಾಪ ದ್ವೇಶದಲ್ಲಿ ಪರಿವರ್ತಿತವಾಗುವುದರಲ್ಲಿ ಹೆಚ್ಚು ಸಮಯ ಬೇಕಾಗಿಲ್ಲ. ಏಕೆಂದರೆ ಈ ಸಮಯದಲ್ಲಿ ಬೇಕಾಗಿರುವುದು ತಮ್ಮವರ (ಅದರಲ್ಲೂ ತಾಯಿಯ) ಆಪ್ತ ಸಲಹೆ. ಪ್ರೇಮವಿವಾಹದಲ್ಲಿ ಈ ಆಪ್ತತೆಯನ್ನು ಕಳೆದುಕೊಂಡಿರುವುದರಿಂದ ಹೊತ್ತಿದ ಕಿಡಿ ವಿಚ್ಛೇದನದ ಕಾಳ್ಗಿಚ್ಚಿನಲ್ಲಿ ಬದಲಾಗಲು ಹೆಚ್ಚು ಕಾಲ ಬೇಕಾಗಿಲ್ಲ.

ಜೀವನದಲ್ಲಿ ಭದ್ರತೆಗಿದೆ ಪ್ರೇಮಕ್ಕಿಂತ ಹೆಚ್ಚಿನ ಆದ್ಯತೆ

ಜೀವನದಲ್ಲಿ ಭದ್ರತೆಗಿದೆ ಪ್ರೇಮಕ್ಕಿಂತ ಹೆಚ್ಚಿನ ಆದ್ಯತೆ

ಯಾವುದೇ ಹೆಣ್ಣು ತನ್ನ ಪ್ರೇಮವನ್ನು ತನ್ನ ತಂದೆತಾಯಿಯರಲ್ಲಿ ನಿವೇದಿಸಿಕೊಂಡಾಗ ಅವರು ಕೇಳುವ ಮೊದಲ ಪ್ರಶ್ನೆ - ಹುಡುಗ ಏನು ಮಾಡಿಕೊಂಡಿದ್ದಾನೆ? ಇದರಲ್ಲಿ ಹುಡುಗನಲ್ಲಿ ಯಾವ ಗುಣಗಳನ್ನು ತಮ್ಮ ಮಗಳು ಇಷ್ಟಪಟ್ಟಿದ್ದಾಳೆ ಎಂಬ ವಿಷಯ ಪ್ರಮುಖವಲ್ಲ, ಮದುವೆಯಾದ ಬಳಿಕ ತಮ್ಮ ಮಗಳು ಆ ವ್ಯಕ್ತಿಯ ಜೊತೆ ಸುಖವಾಗಿ ಬಾಳಲು ಆತ ಸಮರ್ಥನಿದ್ದಾನೆಯೇ? ಜೀವನಪೂರ್ತಿ ಭದ್ರತೆ ಒದಗಿಸಲು ಅವನಿಗೆ ಸಾಧ್ಯವೇ ಎಂಬ ಕಳಕಳಿ ಇರುತ್ತದೆ. ಒಂದು ವೇಳೆ ಆ ವ್ಯಕ್ತಿ ಜವಾಬ್ದಾರಿಯಿಲ್ಲದ, ಅಪ್ಪಾಪೋಲಿಯಾಗಿದ್ದು ಭೂಮಿಗೆ ಭಾರ ಎನಿಸಿದರೆ ಯಾವುದೇ ತಂದೆ ತನ್ನ ಮಗಳನ್ನು ಇಂತಹ ವ್ಯಕ್ತಿಗೆ ನೀಡಲು ಒಪ್ಪಲಾರರು. ಆದ್ದರಿಂದಲೇ ಗುಣ ನೋಡಿ ಹೆಣ್ಣು ಕೊಡು ಎಂಬ ಗಾದೆ ಬಂದಿರುವುದು. ಒಮ್ಮೆ ಜೀವನದಲ್ಲಿ ಭದ್ರತೆ ಮೂಡಿತೋ, ಪ್ರೇಮ ತನ್ನಿಂತಾನೇ ಅಂಕುರವಾಗುತ್ತದೆ, ಇದು ಹಿರಿಯರ ಅನುಭವದ ಮಾತು.

ನಿಮ್ಮ ಪತ್ನಿಯನ್ನು ಪ್ರೇಮಿಸುವುದು ಬಹಳ ಸುಲಭ

ನಿಮ್ಮ ಪತ್ನಿಯನ್ನು ಪ್ರೇಮಿಸುವುದು ಬಹಳ ಸುಲಭ

ಯಾವುದೇ ಇಬ್ಬರು ವ್ಯಕ್ತಿಗಳ ನಡುವೆ ಪ್ರೇಮವಿರಲು ಆಪ್ತತೆ ಮತ್ತು ಏಕಾಂತ ಅಗತ್ಯವಾಗಿದೆ. ಮದುವೆಗೂ ಮುನ್ನಿನ ಪ್ರೇಮ ಹೆಚ್ಚಿನ ಪಕ್ಷದಲ್ಲಿ ಆ ಕ್ಷಣದ ಆಕರ್ಷಣೆಯೇ ಹೊರತು ಜೀವನವಿಡೀ ಇರಬಹುದಾದ ಆಪ್ತತೆಯಲ್ಲ. ವಿಚ್ಛೇದನಗಳನ್ನು ಕೂಲಂಕಶವಾಗಿ ಅಭ್ಯಸಿಸಿದ ಪರಿಣಿತರು ಮೊದಲ ಹೆರಿಗೆಯ ಬಳಿಕ ಅಥವಾ ಮದುವೆಯ ಬಳಿಕ ಮಹಿಳೆಯರ ದೇಹದ ಗಾತ್ರ ಸ್ಥೂಲವಾಗುವುದನ್ನು ಪತಿಯರು ಸಹಿಸದಿರುವುದನ್ನೂ ಒಂದು ಪ್ರಮುಖ ಕಾರಣವೆಂದು ಗುರುತಿಸಿದ್ದಾರೆ. ನಿಜವಾದ ಪ್ರೇಮ ಸಂಗಾತಿಯ ಸೌಂದರ್ಯ, ಮೈಮಾಟದ ಆಕರ್ಷಣೆಯನ್ನು ಮೀರಿದುದಾಗಿದೆ. ವಿವಾಹದ ಬಳಿಕ ಅಂಕುರವಾದ ಪ್ರೇಮ ಈ ರೀತಿಯದ್ದಾಗಿದ್ದು ಶಾಶ್ವತವಾಗಿ ಉಳಿದುಕೊಳ್ಳುವ ಸಾಧ್ಯತೆ ಪ್ರೇಮವಿವಾಹಕ್ಕಿಂತ ಹೆಚ್ಚಾಗಿದೆ.

X
Desktop Bottom Promotion