ಛೇ! ಈಗೆಲ್ಲಾ ಆಗುತ್ತೆ ಅಂತ ಅಂದುಕೊಂಡೇ ಇರಲಿಲ್ಲ

By Manu

ದಾಂಪತ್ಯ ಎನ್ನುವುದು ಸುಂದರ ಕಾವ್ಯ. ಇಲ್ಲಿ ಗಂಡ ಹೆಂಡತಿ ಪದಗಳಿದ್ದಂತೆ. ಸರಿಯಾಗಿ ಒಂದೊಂದು ಪದವನ್ನು ಜೋಡಿಸಿದಾಗ ಸುಂದರ ಕಾವ್ಯವಾಗಲು ಸಾಧ್ಯ. ಆದರೆ ಗಂಡ ಹೆಂಡತಿಯರ ನಡುವೆಯೇ ನಂಬಿಕೆ ದ್ರೋಹವಾದರೆ ದಾಂಪತ್ಯಕ್ಕೆ ಅರ್ಥವೆಲ್ಲಿ? ದಾಂಪತ್ಯದಲ್ಲಿ ದ್ರೋಹವಾದರೆ ಅದನ್ನು ನಿಭಾಯಿಸುವುದು ಅತ್ಯಂತ ಕಷ್ಟ.

ಹಲವಾರು ಸಂಬಂಧಗಳು ಹಾಳಾಗುವುದೇ ಒಬ್ಬರನ್ನೊಬ್ಬರು ಎಲ್ಲಾ ವಿಷಯಗಳಲ್ಲೂ ಆಕ್ಷೇಪ ಮಾಡುವುದರಿಂದ! ಯಾವಾಗ ನೀವು ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಡತ್ತೀರೋ ಅಂದೇ ನೀವು ಸಂಬಂಧಗಳನ್ನು ಅರಿತುಕೊಳ್ಳಲು ಸಾಧ್ಯ. ಯಾವುದೇ ವಿಷಯದ ಬಗ್ಗೆ ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವುದರಿಂದ ಯಾವ ಸಮಸ್ಯೆಗಳಿಗೂ ಪರಿಹಾರ ದೊರೆಯಲು ಸಾಧ್ಯವಿಲ್ಲ.

ಸಂಬಂಧಗಳನ್ನು ಮಾಡಿಕೊಳ್ಳುವುದು ಸುಲಭ, ಆದರೆ ಅದನ್ನು ನಿಭಾಯಿಸುವುದು ಕಷ್ಟ. ಅದರಲ್ಲೂ ಈ ಕಾಲದಲ್ಲಿ ಸಂಬಂಧಗಳನ್ನು ಅದರಲ್ಲೂ ದೀರ್ಘಾವಧಿಯ ಸಂಬಂಧಗಳನ್ನು ನಿಭಾಯಿಸುವುದು ಕಷ್ಟ- ಕಷ್ಟ. ದೀರ್ಘಾವಧಿಯ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಸಂಗಾತಿಗಳು ನಿರಂತರ ಪ್ರಯತ್ನ ಮತ್ತು ಹೊಂದಾಣಿಕೆಯನ್ನು ತೋರಬೇಕಾಗುತ್ತದೆ.

ಆದರೆ ಅತ್ಯಂತ ವಿರಳವಾಗಿ ಈ ಪ್ರಯತ್ನಗಳೆಲ್ಲವು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥವಾಗಿ ಬಿಡುತ್ತದೆ. ಆಗ ಆ ಸಂಬಂಧವು ತನ್ನ ಕೊನೆಯ ಹಂತಕ್ಕೆ ಬಂದು ನಿಂತು ಬಿಡುತ್ತದೆ. ಛೇ!, ಹೀಗಾಗ ಬಾರದು. ಎಂದು ಕಳವಳ ಪಡುವ ಮುನ್ನ ನಿಮ್ಮ ಸಂಬಂಧದ ಗಟ್ಟಿತನವನ್ನು ಪ್ರಶ್ನಿಸಿಕೊಳ್ಳಿ. ಯಾವಾಗ ಸಂಗಾತಿಗಳು ಇಂತಹ ಸ್ಥಿತಿಗೆ ಬಂದು ನಿಲ್ಲುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾವಿಲ್ಲಿ ನಿಮಗಾಗಿ ಅಂತಹ ಮುನ್ಸೂಚನೆಗಳನ್ನು ನೀಡಿದ್ದೇವೆ, ಓದಿಕೊಳ್ಳಿ...

ವಾದ, ಪ್ರತಿವಾದ ಸಾಕಲ್ಲವೇ ಬೆಂಕಿ ಹಚ್ಚಲು..!

ವಾದ, ಪ್ರತಿವಾದ ಸಾಕಲ್ಲವೇ ಬೆಂಕಿ ಹಚ್ಚಲು..!

ನಿರಂತರವಾಗಿ ಸಾಗುವ ವಾದ, ಪ್ರತಿವಾದಗಳು ಪ್ರತಿಯೊಂದು ಸಂಬಂಧದಲ್ಲಿ ಏರಿಳಿತಗಳು ಇರುವುದು ಸಹಜ. ವಾದ ಮತ್ತು ಪ್ರತಿ ವಾದಗಳು ಇಲ್ಲದಿದ್ದಲ್ಲಿ ಸಂಬಂಧದಲ್ಲಿ ಸ್ವಾರಸ್ಯವೇ ಇರುವುದಿಲ್ಲ. ಎರಡು ಭಿನ್ನ ವಾತಾವರಣದಲ್ಲಿ ಬೆಳೆದ ಗಂಡು- ಹೆಣ್ಣುಗಳು ಒಟ್ಟಿಗೆ ಜೀವಿಸುವಾಗ ಇಂತಹ ಸನ್ನಿವೇಶಗಳು ಉದ್ಭವಿಸುವುದು ಸಹಜ. ಈ ವಾದ ಪ್ರತಿವಾದಗಳು ಯಾವಾಗ ತಮ್ಮ ಗಡಿಯನ್ನು ದಾಟುತ್ತವೆಯೋ, ಆಗ ನೊಂದ ಮನಸ್ಸೊಂದು ಇದರಿಂದ ನೋವನ್ನು ಅನುಭವಿಸುತ್ತದೆ. ಆಗ ಸಹಜವಾಗಿ ಆ ಸಂಬಂಧ ತನ್ನ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ನಿಲ್ಲುತ್ತದೆ.

ಪದೇ ಪದೇ ಸಿಟ್ಟು ಮಾಡಿಕೊಳ್ಳುವುದು

ಪದೇ ಪದೇ ಸಿಟ್ಟು ಮಾಡಿಕೊಳ್ಳುವುದು

ದಾಂಪತ್ಯದಲ್ಲಿ ವಂಚನೆಗಳಾದರೆ ಅದು ಸರಿಹೋಗಲು ಸ್ಪಲ್ವ ಸಮಯ ಬೇಕಾಗುತ್ತದೆ. ಆದರೆ ಯಾವುದೇ ವಿಷಯದ ಬಗ್ಗೆ ತಾಳ್ಮೆಗೆಟ್ಟು, ಸಿಟ್ಟಾಗುವುದು ಅಥವಾ ವಸ್ತುಗಳನ್ನು ಬಿಸಾಡುವುದು ಇಂತಹ ತಪ್ಪುಗಳನ್ನು ಮಾಡಬೇಡಿ. ಪ್ರತಿಯೊಂದು ಹಂತದಲ್ಲಿಯೂ ಸಂಬಂಧಗಳು ಸರಿಯಾಗುವಾಗ ಹಚ್ಚು ಸಮಯ ಬೇಕಾಗುತ್ತದೆ. ಆದರೆ ನಿಮ್ಮ ಆತ್ಮವಿಶ್ವಾಸ, ನಿಮ್ಮ ಪ್ರಯತ್ನ, ಹಾಗೂ ನೀವು ಸಂಬಂಧವನ್ನು ಸರಿಮಾಡಿಕೊಳ್ಳಲು ಮೀಸಲಿಟ್ಟ ಸಮಯ ನಿಮ್ಮ ಪ್ರೀತಿಯನ್ನು ನಿಮಗೆ ಹಿಂತಿರುಗಿಸಬಹುದು!

ಕ್ಷುಲ್ಲುಕ ಕಾರಣ

ಕ್ಷುಲ್ಲುಕ ಕಾರಣ

ನಿಮ್ಮಿಬ್ಬರ ನಡುವೆ ಸದಾ ಜಗಳವಾಗುತ್ತಿದ್ದು ಇದಕ್ಕೆ ಕಾರಣಗಳನ್ನು ಕೆದಕಿದರೆ ಕೋಳಿಪುಕ್ಕ ಹಾರಿಬಂದಿದ್ದ, ಮೇಲೆ ಸಿಕ್ಕಿಸಿದ್ದ ಅಂಗಿ ಗಾಳಿಗೆ ಕೆಳಕ್ಕೆ ಬಿದ್ದಿದ್ದ, ತನ್ನ ಮೊಬೈಲಿಗೆ ತಾಗಿಸಿದ್ದ ಚಾರ್ಜರ್ ಬದಲಿಸಿದ್ದಂತಹ ಕ್ಷುಲ್ಲುಕ ಕಾರಣಗಳು ಕಂಡುಬರುತ್ತಿವೆಯೇ? ಇದು ಸಹಾ ಅಪಾಯದ ಮುನ್ಸೂಚನೆಯಾಗಿದೆ.

ಮಾತಿನ ಮೇಲಿನ ಹತೋಟಿ ತಪ್ಪಿದಾಗ

ಮಾತಿನ ಮೇಲಿನ ಹತೋಟಿ ತಪ್ಪಿದಾಗ

ಸಂಬಂಧಗಳಲ್ಲಿ ನಾವು ಮಾತನಾಡುವ ಪದಗಳನ್ನು ಅತಿ ಸೂಕ್ಷ್ಮವಾಗಿ ಬಳಸಬೇಕಾಗುತ್ತದೆ. ಆದರೆ ಕೆಲವೊಮ್ಮೆ ಹೊರಗಿನ ಸಮಾಜದಲ್ಲಿ ಬಳಸುವ ಕೆಟ್ಟ ಪದಗಳೇ ಸಿಟ್ಟಿನ ಸಮಯದಲ್ಲಿ ನೆನಪಿಗೆ ಬರುತ್ತವೆ. ಇಷ್ಟೇ ಸಾಕು ಸಂಬಂಧ ಅಲ್ಲೋಲ ಕಲ್ಲೋಲವಾಗಲು.

ನಿಂದನೆ ಮಾತು

ನಿಂದನೆ ಮಾತು

ತಮ್ಮ ತಪ್ಪಿಗಾಗಿ ಹೊರಗಿನವರ ನಿಂದನೆಗಿಂತಲೂ ನಮ್ಮ ಆಪ್ತರ, ಅದರಲ್ಲೂ ತಾಯಿ, ಜೀವನ ಸಂಗಾತಿ, ಅತ್ಯಂತ ನಿಕಟವರ್ತಿಗಳಾದ ಸ್ನೇಹಿತರು ನಿಂದಿಸಿದರೆ ಆ ನಿಂದನೆ ಮನಸ್ಸಿಗೆ ಆಳವಾಗಿ ನಾಟುತ್ತದೆ. ಇದರ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಮನೆಯಲ್ಲಿ ಈ ವಿಷಯ ತಿಳಿದರೆ ಯಾವ ನಿಂದನೆ ಬರುತ್ತದೆಯೋ ಎಂಬ ಭಯದಿಂದಲೇ ಜೀವನ ಕೊನೆಗೊಳಿಸಿರುವ ನಿದರ್ಶನಗಳಿವೆ. ಹೀಗಾಗಿ ಸಹಜವಾಗಿಯೇ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಮೂಡಿ, ತಾವು ಬೇರೆ ಬೇರೆಯಾಗಿರಲು ನಿರ್ಧರಿಸಿಬಿಡುತ್ತಾರೆ.

Story first published: Tuesday, December 1, 2015, 16:45 [IST]
X
Desktop Bottom Promotion