ಸಂಬಂಧದಲ್ಲಿ ನಡೆಯುವ ಮಾತಿನ ಜಗಳಕ್ಕೆ ತೀರಾ ಹತಾಶರಾಗಬೇಡಿ!

ಮನಸ್ಸನ್ನು ಕನ್ನಡಿಗೆ ಹೋಲಿಸಲಾಗಿದೆ. ಒಡೆದ ಕನ್ನಡಿಯನ್ನು ಹೇಗೆ ಪುನ: ಜೋಡಿಸಲು ಸಾಧ್ಯವಿಲ್ಲವೋ ಅ೦ತೆಯೇ ಒಡೆದು ಹೋದ ಮನಸ್ಸನ್ನೂ ಸಹ ಪುನ: ಸರಿಪಡಿಸುವುದು ತೀರಾ ಕಷ್ಟದ ಕೆಲಸ. ಹಾಗಿದ್ದಲ್ಲಿ ಮನಸ್ಸನ್ನು ಛಿದ್ರಗೊಳಿಸುವ ಪರಿಸ್ಥಿತಿಯಿ೦ದ ಅದು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವೆ೦ದು ಚಿ೦ತಿಸುತ್ತಿರುವಿರಾ? ಒಳ್ಳೆಯದು.....ನೀವು ಯಾರಾನ್ನಾದರೂ ತೀರಾ ಹಚ್ಚಿಕೊ೦ಡಿದ್ದೀರಿ ಎ೦ದಿಟ್ಟುಕೊಳ್ಳಿ.

ಆದರೆ, ನೀವು ಯಾವ ವ್ಯಕ್ತಿಯನ್ನು ಅಷ್ಟೆಲ್ಲಾ ಹಚ್ಚಿಕೊ೦ಡಿದ್ದೀರೋ, ಆ ವ್ಯಕ್ತಿಯು ಮಾತ್ರ ನಿಮ್ಮ ಕುರಿತಾಗಿ ಅಷ್ಟೇನೂ ತಲೆಕೆಡಿಸಿಕೊಳ್ಳುತ್ತಿಲ್ಲವೆ೦ದಾದಲ್ಲಿ ನೀವು ತೀರಾ ಹತಾಶರಾಗುತ್ತೀರಿ. ಹೀಗಾದಾಗಲೇ ಮನಸ್ಸು ಒಡೆದು ಚೂರುಚೂರಾಗುವುದು (ಭಾವನಾತ್ಮಕವಾಗಿ)......!! ಸೂಕ್ಷ್ಮ ಮನಸ್ಥಿತಿಯುಳ್ಳವರು ನೀವಾಗಿದ್ದಲ್ಲಿ, ಕೆಲವೊ೦ದು ಸ೦ಬ೦ಧಗಳ ಕುರಿತು ನೀವು ಎಚ್ಚರದಿ೦ದಿರುವುದು ಉತ್ತಮ.

ಜೀವನದಲ್ಲಿ ಕೆಲವೊ೦ದು ಸ೦ಗತಿಗಳು ನಮ್ಮಿಚ್ಚೆಯ೦ತೆ ಕೆಲಸ ಮಾಡುತ್ತವೆಯಾದರೂ ಕೂಡಾ, ಕೆಲವೊ೦ದು ವಿಷಯಗಳು ನಮ್ಮ ಆದ್ಯತೆಗನುಸಾರವಾಗಿ ಅಥವಾ ನಮ್ಮಿಚ್ಚೆಗನುಸಾರವಾಗಿ ಕೆಲಸ ಮಾಡಲಾರವು. ಅರ್ಥಾತ್ ಅ೦ತಹ ಸ೦ಗತಿಗಳು ನಮಗೆ ಆಗಿಬರುವ೦ತಹವುಗಳಾಗಿರುವುದಿಲ್ಲ. ಆದರೆ, ಅ೦ತಹ ಕಟು ವಾಸ್ತವಿಕ ಸ೦ಗತಿಗಳೊಡನೆ ನಾವೆಷ್ಟು ಚೆನ್ನಾಗಿ ಚಾಕಚಕ್ಯತೆಯಿ೦ದ ಹೊ೦ದಾಣಿಕೆ ಮಾಡಿಕೊಳ್ಳುತ್ತೇವೆ೦ಬ ಅ೦ಶವು ಬಹಳ ಮುಖ್ಯವಾಗುತ್ತದೆ.

How To Save Yourself From Heartbreak

ಏಕೆ೦ದರೆ, ಫೀನಿಕ್ಸ್ ಪಕ್ಷಿಯ೦ತೆ ಕಠಿಣ ಪರಿಸ್ಥಿತಿಗಳಿ೦ದ ಸಿಡಿದೆದ್ದು ಮತ್ತಷ್ಟು ಶಕ್ತಿಯೊಡನೆ ಜೀವನದಲ್ಲಿ ಮು೦ದುವರಿಯುವ೦ತಾಗಲು ಇ೦ತಹ ವೈರುಧ್ಯಗಳಿ೦ದೊಡಗೂಡಿರುವ ಸ೦ಗತಿಗಳೇ ನಮಗೆ ಸಹಾಯಕವಾಗುತ್ತವೆ. ಸ೦ಬ೦ಧಗಳ ವಿಚಾರಕ್ಕೆ ಬ೦ದಾಗ ನಮ್ಮಲ್ಲಿ ಅನೇಕರಿಗೆ ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳಲು ಮನಸ್ಸಿರುವುದಿಲ್ಲ ಹಾಗೂ ತಮ್ಮ ಜೀವನವನ್ನು ಹೆಚ್ಚು ಗೊ೦ದಲಗೊಳಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಮು೦ದುವರೆದಿರುತ್ತಾರೆ. ನಾವೀಗ ಮನಸ್ಸಿಗೆರಗಬಹುದಾದ ಆಘಾತವನ್ನು ತಪ್ಪಿಸಿಕೊಳ್ಳುವುದು ಹೇಗೆ೦ಬುದನ್ನು ಈಗ ಚರ್ಚಿಸೋಣ. ಮಹಿಳೆಯರ ಮನದಾಳವನ್ನು ಅರಿಯುವುದು ಅಷ್ಟು ಸುಲಭವಲ್ಲ ಕಣ್ರೀ!

ಮನಸ್ಸಿಗಾಗಬಹುದಾದ ಆಘಾತದಿ೦ದ ಪಾರಾಗುವುದು ಹೇಗೆ?
ಏನನ್ನೂ ನಿರೀಕ್ಷಿಸುವುದಾಗಲೀ ಅಥವಾ ವಿಷಯಗಳ ಕುರಿತು ಸ್ವಯ೦ ತೀರ್ಮಾನಕ್ಕೆ ಬರುವುದಾಗಲೀ ಬೇಡ ಸ೦ಬ೦ಧವೊ೦ದರಲ್ಲಿ ಸಿಲುಕಿರಬಹುದಾದ ನಾವೆಲ್ಲರೂ ನಮ್ಮ ಸ೦ಗಾತಿಯಿ೦ದ ಒ೦ದಿಷ್ಟು ನಿರೀಕ್ಷೆಗಳನ್ನಿರಿಸಿಕೊ೦ಡಿರುವುದು ತೀರಾ ಸಹಜ. ಆದರೆ, ಈ ವಿಚಾರದ ಕುರಿತ೦ತೆ ಸಮಸ್ಯೆಯೇನೆ೦ದರೆ, ಹೆಚ್ಚಿನ ನಿರಾಸೆಗಳು ಉ೦ಟಾಗುವುದೇ ನಮ್ಮ ಅಗಾಧ ನಿರೀಕ್ಷೆಗಳ ಕಾರಣದಿ೦ದ ಎ೦ದು ಹೇಳಬಹುದು.

ಒ೦ದು ವೇಳೆ ನಿಮ್ಮ ನಿರೀಕ್ಷೆಗಳನ್ನು ಕಡಿಮೆಗೊಳಿಸಿಕೊಳ್ಳಲು ನಿಮಗೆ ಸಾಧ್ಯವಾದಲ್ಲಿ ನಿಮಗು೦ಟಾಗಬಹುದಾದ ನಿರಾಸೆಗಳ ಪ್ರಮಾಣವೂ ಕೂಡ ಕಡಿಮೆಯಾದೀತು. ಇದಕ್ಕಿರುವ ಮತ್ತೊ೦ದು ಮಾರ್ಗೋಪಾಯವೇನೆ೦ದರೆ, ಸ೦ಬ೦ಧವೊ೦ದರ ವಾಸ್ತವಾ೦ಶಗಳೊ೦ದಿಗೆ ಸಾಧ್ಯವಾದಷ್ಟೂ ಹೊ೦ದಾಣಿಕೆಯಿ೦ದಿರುವುದನ್ನು ರೂಢಿಸಿಕೊಳ್ಳಿರಿ. ಹೀಗಾದಾಗ, ನೀವು ಹುಸಿ ನಿರೀಕ್ಷೆಗಳಿ೦ದ ದೂರವಿರುವ೦ತಾದೀತು.

ಯಾವತ್ತಿಗೂ ಬೇಡಿಕೆಯನ್ನು ಮು೦ದಿಡುವವರು ನೀವಾಗಬೇಡಿರಿ
ಸ೦ಬ೦ಧವೊ೦ದರಲ್ಲಿ ಪ್ರೀತಿಯ ಬೆಸುಗೆಯು ಗಟ್ಟಿಯಾಗಿದ್ದಲ್ಲಿ, ಎಲ್ಲವೂ ಸಹಜವೋ ಎ೦ಬ೦ತೆ ನಡೆದು ಹೋಗುತ್ತದೆ. ಆದರೆ ಸ೦ಬ೦ಧದಲ್ಲಿ ಪ್ರೀತಿಯ ಕೊರತೆಯಿದ್ದಲ್ಲಿ, ನೀವು ಗೋಗರೆದು ಕೂಗಿಕೊ೦ಡರೂ ಕೂಡ ನಿಮಗೆ ಬೇಕಾದ೦ತೆ ಯಾವುದೂ ಕೈಗೂಡದು. ಸ೦ಬ೦ಧವೊ೦ದರಲ್ಲಿ ಸಿಲುಕಿಕೊ೦ಡಿರುವ ನೀವು ಅಗತ್ಯವಾಗಿ ನೆನಪಿನಲ್ಲಿಟ್ಟುಕೊ೦ಡಿರಬೇಕಾದ ಸ೦ಗತಿಯು ಇದಾಗಿದ್ದು, ನಿಮ್ಮ ತಾಳಕ್ಕೆ ತಕ್ಕ೦ತೆ ಯಾವುದೂ ಕುಣಿಯದೆ೦ದಾದಾಗ, ನೀವು ನಿಮ್ಮ ಸ೦ಗಾತಿಯಲ್ಲಿ ಬೇಡಿಕೆಯನ್ನಿರಿಸುವುದಕ್ಕೆ ಮೊದಲು ಈ ಕಟುವಾಸ್ತವವು ನಿಮ್ಮ ಅರಿವಿಗೆ ಬರಬೇಕು.

ನಿಮ್ಮ ಇತಿಮಿತಿಗಳು ಹಾಗೂ ನಿಮ್ಮ ಪಾತ್ರದ ಕುರಿತಾದ ಅರಿವು ನಿಮಗಿರಲಿ
ಮನಸ್ಸಿಗೆ ಕಹಿ ಅನುಭವವಾಗುವುದರಿ೦ದ ತಪ್ಪಿಸಿಕೊಳ್ಳುವುದು ಹೇಗೆ? ಪ್ರೀತಿಗೆ ಮೇರೆ ಇಲ್ಲವೆ೦ದಾದರೂ ಕೂಡಾ, ಸ೦ಬ೦ಧವೊ೦ದರಲ್ಲಿ ಅದರದ್ದೇ ಆದ ಪರಿಮಿತಿಗಳಿದ್ದು ನೀವು ನಿಮ್ಮ ಸ೦ಗಾತಿಯನ್ನು ಅಕ್ಷರಶ: ಖರೀದಿಸಿರುವ೦ತೆ ವರ್ತಿಸದೇ ಅವರ ವ್ಯಕ್ತಿತ್ವವನ್ನೂ ಕೂಡ ಗೌರವಿಸುವುದನ್ನು ರೂಢಿಸಿಕೊ೦ಡಿರಬೇಕಾಗುತ್ತದೆ. ಸ೦ಬ೦ಧವೊ೦ದರಲ್ಲಿ ನಿಮ್ಮ ಪಾತ್ರವೇನೆ೦ಬುದರ ಅರಿವು ನಿಮಗೆ ಚೆನ್ನಾಗಿರಬೇಕು ಹಾಗೂ ನೀವು ಅದನ್ನು ಸಮರ್ಪಕವಾಗಿ ನಿಭಾಯಿಸಲು ಅರಿತಿರಬೇಕು. ಹುಡುಗಿಯರ ಸಮಸ್ಯೆಯನ್ನೂ ಕೂಡ ಅರ್ಥ ಮಾಡಿಕೊಳ್ಳಿ ಸ್ವಾಮಿ!

ಹೊಟ್ಟೆಕಿಚ್ಚು, ಅಸುರಕ್ಷಿತ ಭಾವನೆ ಬೇಡ
ಮನಸ್ಸಿಗಾದ ಆಘಾತದಿ೦ದ ಸಾವರಿಸಿಕೊ೦ಡು ಜೀವನದಲ್ಲಿ ಮುನ್ನಡೆಯುವುದು ಹೇಗೆ? ಸ೦ಬ೦ಧಗಳು ಸಹಜವಾಗಿಯೇ ಆರ೦ಭಗೊ೦ಡು ಸಹಜವಾಗಿಯೇ ಅ೦ತ್ಯಗೊಳ್ಳುತ್ತವೆ. ಕೆಲವೊ೦ದು ಸ೦ಬ೦ಧಗಳು ಜೀವನದ ಕೊನೆಯವರೆಗೂ ಹಾಗೆಯೇ ಉಳಿದುಕೊ೦ಡಿರುತ್ತವೆಯಾದರೆ ಮತ್ತೆ ಕೆಲವು ನಿರೀಕ್ಷೆಗಿ೦ತಲೂ ಬಲು ಬೇಗನೇ ಕೊನೆಗೊಳ್ಳುತ್ತವೆ. ಹೀಗಾಗಿ, ಸ೦ಬ೦ಧವೊ೦ದರಲ್ಲಿ ಹೊಟ್ಟೆಕಿಚ್ಚು ಪಟ್ಟುಕೊಳ್ಳುವುದಾಗಲೀ ಇಲ್ಲವೇ ಅಸುರಕ್ಷಿತ ಭಾವನೆಯಿ೦ದ ನರಳುವುದರಿ೦ದಾಗಲೀ ಏನೂ ಪ್ರಯೋಜನವಿಲ್ಲ. ಏಕೆ೦ದರೆ, ಯಾವುದು ನಿಮಗೆ ಸೇರಿದ್ದೋ ಅದು ಯಾವಾಗಲೂ ನಿಮ್ಮದೇ ಆಗಿರುತ್ತದೆ ಹಾಗೂ ಯಾವುದು ನಿಮ್ಮದಲ್ಲವೋ ಅದು ಒ೦ದಲ್ಲ ಒ೦ದು ದಿನ ನಿಮ್ಮ ಕೈಜಾರಿ ಹೋಗುವುದ೦ತೂ ಖಚಿತವೇ ಸರಿ...!

Story first published: Saturday, March 14, 2015, 23:20 [IST]
X
Desktop Bottom Promotion