Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪತಿ-ಪತ್ನಿ ಅನುಬಂಧ - ಮುರಿಯದಿರಲಿ ಬಾಂಧವ್ಯ
ಮನುಷ್ಯನ ಜೀವನದಲ್ಲಿ ಸಂಬಂಧಕ್ಕೆ ಅದರದೇ ಆದ ಅರ್ಥವಿದೆ. ತಂದೆ ತಾಯಿ ಹಾಗೂ ಮಕ್ಕಳ ನಡುವಿನ ಸಂಬಂಧ, ಒಡನಾಡಿಗಳ ಸ್ನೇಹವೆಂಬ ಪವಿತ್ರ ಸಂಬಂಧ, ಪ್ರೇಮಿಗಳ ಪ್ರೀತಿಯ ಸಂಬಂಧ, ಗಂಡ ಹೆಂಡತಿಯರ ನಡುವಿನ ಅನುಬಂಧ ಹೀಗೆ ನಮ್ಮ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಸಂಬಂಧವನ್ನು ಬೆಳೆಸುವುದಕ್ಕಿಂತ ಅದನ್ನು ಉಳಿಸುವುದು ಅತೀ ಮುಖ್ಯವಾದದು.
ಅದರಲ್ಲೂ ದಾಂಪತ್ಯ ಎನ್ನುವುದು ಸುಂದರ ಕಾವ್ಯ. ಇಲ್ಲಿ ಗಂಡ ಹೆಂಡತಿ ಪದಗಳಿದ್ದಂತೆ. ಸರಿಯಾಗಿ ಒಂದೊಂದು ಪದವನ್ನು ಜೋಡಿಸಿದಾಗ ಸುಂದರ ಕಾವ್ಯವಾಗಲು ಸಾಧ್ಯ. ಆದರೆ ಗಂಡ ಹೆಂಡತಿಯರ ನಡುವೆಯೇ ನಂಬಿಕೆ ದ್ರೋಹವಾದರೆ ದಾಂಪತ್ಯಕ್ಕೆ ಅರ್ಥವೆಲ್ಲಿ ಅಲ್ಲವೇ? ಹೌದು ದೀರ್ಘಾವಧಿಯ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಸಂಗಾತಿಗಳು ನಿರಂತರ ಪ್ರಯತ್ನ ಮತ್ತು ಹೊಂದಾಣಿಕೆಯನ್ನು ತೋರಬೇಕಾಗುತ್ತದೆ, ಅದರಲ್ಲಿಯೂ ತಮ್ಮ ಸಂಗಾತಿಯನ್ನು ಅರ್ಥಮಾಡಿಕೊಂಡು ಜೀವನ ನಡೆಸುವುದೇ ಇಲ್ಲಿ ಮುಖ್ಯಪಾತ್ರವಹಿಸುತ್ತದೆ

ಪ್ರಾಮಾಣಿಕತೆ
ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ನಿಮ್ಮ ಸಂಗಾತಿಯ ಬಗ್ಗೆ ಇನ್ನೇನು ತಾನೇ ಹೇಳಲಾದೀತು. ಸಂಬಂಧದ ಬುನಾದಿಯೇ ಪ್ರಾಮಾಣಿಕತೆ. ನಿಮ್ಮ ಸಂಬಂಧವನ್ನು ಶಾಶ್ವತಗೊಳಿಸುವ ಮೊದಲು ಆತ ಅಥವಾ ಆಕೆಯು ನಿಮ್ಮೆಡೆಗೆ ಪ್ರಾಮಾಣಿಕತೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ.
ಸಂಶಯ
ಸಂಶಯ ಎನ್ನುವುದು ಸಂಬಂಧದಲ್ಲಿ ಹುಳಿ ಹಿಂಡಿದಂತೆ. ನಿಮ್ಮ ಸಂಗಾತಿಯನ್ನು ನೀವು ಹೆಚ್ಚು ಸಂಶಯಿಸುತ್ತಿದ್ದೀರಿ ಎಂದಾದಲ್ಲಿ ಇದು ಸಂಬಂಧವನ್ನು ಹಾಳುಮಾಡುತ್ತದೆ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳುಗೆಡವುತ್ತದೆ. ಆದ್ದರಿಂದ ಸಂಶಯ ಆದಷ್ಟು ನಿಮ್ಮ ಸಂಬಂಧದಲ್ಲಿ ಬರದಂತೆ ನೋಡಿಕೊಳ್ಳಿ. ನಿಮ್ಮ ಪತ್ನಿ ಎದುರು ಇಂತಹ ಗುಟ್ಟುಗಳನ್ನು ರಟ್ಟುಮಾಡದಿರಿ!
ವಾದ, ಪ್ರತಿವಾದಗಳಿಗೆ ಆಸ್ಪದ ನೀಡಬೇಡಿ
ಪ್ರತಿಯೊಂದು ಸಂಬಂಧದಲ್ಲಿ ಏರಿಳಿತಗಳು ಇರುವುದು ಸಹಜ. ವಾದ ಮತ್ತು ಪ್ರತಿ ವಾದಗಳು ಇಲ್ಲದಿದ್ದಲ್ಲಿ ಸಂಬಂಧದಲ್ಲಿ ಸ್ವಾರಸ್ಯವೇ ಇರುವುದಿಲ್ಲ. ಎರಡು ಭಿನ್ನ ವಾತಾವರಣದಲ್ಲಿ ಬೆಳೆದ ಗಂಡು- ಹೆಣ್ಣುಗಳು ಒಟ್ಟಿಗೆ ಜೀವಿಸುವಾಗ ಇಂತಹ ಸನ್ನಿವೇಶಗಳು ಉದ್ಭವಿಸುವುದು ಸಹಜ. ಈ ವಾದ ಪ್ರತಿವಾದಗಳು ಯಾವಾಗ ತಮ್ಮ ಗಡಿಯನ್ನು ದಾಟುತ್ತವೆಯೋ, ಆಗ ನೊಂದ ಮನಸ್ಸೊಂದು ಇದರಿಂದ ನೋವನ್ನು ಅನುಭವಿಸುತ್ತದೆ. ಆಗ ಸಹಜವಾಗಿ ಆ ಸಂಬಂಧ ತನ್ನ ಜೀವವನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ನಿಲ್ಲುತ್ತದೆ. ಹಾಗಾಗಿ ಇಂತಹ ವಾದ ಪ್ರತಿ ವಾದಗಳಿಗೆ ಆಸ್ಪದ ನೀಡಬೇಡಿ
ಸುಳ್ಳು
ಕೆಲವೊಂದು ಸಂಕಷ್ಟ ಪರಿಸ್ಥಿತಿಗಳಿಂದ ಬಿಡುಗಡೆ ಹೊಂದಲು ಜೋಡಿಗಳು ಸುಳ್ಳು ಹೇಳುತ್ತಾರೆ. ಆದರೆ ಈ ಸುಳ್ಳುಗಳೇ ಮುಂದೆ ಯುದ್ಧಕ್ಕೆ ಕಾರಣವಾಗುವುದು ಮತ್ತು ಒಂದು ಮಧುರವಾದ ದಾಂಪತ್ಯ ಜೀವನ ಕೊನೆಗೊಳ್ಳಲು ಕಾರಣವಾಗುವುದು. ಹಾಗಾಗಿ ಸಂಗಾತಿ ಜೊತೆ ಸುಳ್ಳಿಗೆ ಅವಕಾಶ ಮಾಡಿಕೊಡಬೇಡಿ.



Click it and Unblock the Notifications
