Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಪತ್ನಿಗೆ ಜೀವನಾಂಶ ನೀಡಲು 1, 2 ರುಪಾಯಿ ನಾಣ್ಯಗಳ ಮೂಟೆಗಳನ್ನು ಕೋರ್ಟ್‌ಗೆ ತಂದ ವ್ಯಕ್ತಿ! ಆತ ಯೋಚಿಸಿದ್ದೇ ಒಂದು ಆದದ್ದೇ ಮತ್ತೊಂದು
ಒಬ್ಬ ವ್ಯಕ್ತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾರೆ ಎಂದ ಮೇಲೆ ಆತ ಆಕೆಯಿಂದ ಎಷ್ಟು ರೋಸಿ ಹೋಗಿರಬೇಡ. ಆತ ಕೊಟ್ಟ ಜೀವನಾಂಶದ ಹಣವನ್ನು ಎಣಿಸಿಯೇ ಸಾಕಾಗಬೇಕು, ಅಷ್ಟೊಂದು ನಾಣ್ಯಗಳನ್ನು ಎಲ್ಲಿಂದ ಸಂಗ್ರಹಿಸಿದೆನೋ, ಆದರೆ ಮಾಜಿ ಹೆಂಡತಿ ಈತ ಕೊಡುವ ಜೀವನಾಂಶ ನೋಡಿಯೇ ಬೆಚ್ಚಿ ಬೀಳಬೇಕು ಆ ರೀತಿಯಾಗಿ ಜೀವನಾಂಶ ನೀಡಿದ್ದಾನೆ.

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ತಮಿಳುನಾಡಿನ ಕುಟುಂಬ ನ್ಯಾಯಾಲಯ ಆ ವ್ಯಕ್ತಿ (ಆತ ತನ್ನ ಹೆಸರು ಬಹಿರಂಗ ಪಡಿಸಲು ಇಚ್ಚಿಸಿಲ್ಲ) ತನ್ನ ಪತ್ನಿಗೆ 2 ಲಕ್ಷ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತು, 37 ವರ್ಷದ ಆ ವ್ಯಕ್ತಿ ಕೊಯಂಬತ್ತೂರಿನ ನಿವಾಸಿ. ಈತ ಜೀವನಾಂಶ ನೀಡಲು ಕೋರ್ಟ್‌ಗೆ 1 ಹಾಗೂ 2 ರುಪಾಯಿ ನಾಣ್ಯಗಳ ಹಣದ ಚೀಲ ತಂದಿದ್ದಾನೆ.
ಈತನಿಗೆ ವಿಚ್ಛೇದನ ಕಳೆದ ವರ್ಷ ನಡೆದಿತ್ತು, ಹೆಂಡತಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶ ನೀಡಿತ್ತು
ಈತ ವೃತ್ತಿಯಲ್ಲಿ ಆಟೋ ಡ್ರೈವರ್. ಈತನ ಡಿಸೆಂಬರ್ 18ರಂದು ಒಟ್ಟು ಹಣದ ನಾಣ್ಯಗಳ ಚೀಲವನ್ನು ಹಿಡಿದು ಕೋರ್ಟ್‌ಗೆ ಬರುತ್ತಾನೆ. ಈತ ನಾಣ್ಯಗಳನ್ನು ಈ ರೀತಿ ತಂದಾಗ ಜಡ್ಜ್ ಸೇರಿ ಅಲ್ಲಿದ್ದವರಿಗೆ ಆಶ್ಚರ್ಯ ಉಂಟಾಗಿದೆ, ಆ ಹಣದ ಚೀಲಗಳನ್ನು ನೋಡಿ ಏನು ಹೇಳಬೇಕು ಎಂದು ಯಾರಿಗೂ ತಿಳಿಯದಾಗಿದೆ.
ಬಹುಶಃ ಆತನ ಮಾಜಿ ಪತ್ನಿಗೆ ಆ ಹಣದ ಚೀಲಗಳನ್ನು ನೋಡಿ ತಲೆಸುತ್ತು ಬಂದಿರಬಹುದು, ಆತ ಎಷ್ಟು ಹಣ ತಂದಿದ್ದಾನೆ ಎಂದು ಎಣಿಸುವಷ್ಟರಲ್ಲಿ ಆಕೆಗೆ ಸುಸ್ತಾಗಿರಬಹುದು ಅಲ್ವಾ? ಆತ 80 ಸಾವಿರ ಹಣವನ್ನು ನಾಣ್ಯದ ರೂಪದಲ್ಲಿ ಸಂಗ್ರಹಿರಬೇಕೆಂದರೆ ಎಷ್ಟು ಶ್ರಮ ಹಾಕಿರಬೇಡ, ನಾನು ಕೊಡುವ ಹಣ ಕೂಡ ಅವಳು ಸುಲಭವಾಗಿ ಎಣಿಸಿ ಇಡುವಂತಾಗಬಾರದು ಎಂಬ ಲೆಕ್ಕಾಚಾರದಲ್ಲಿ ಆತ ಈ ರೀತಿ ತಂದಿರಬಹುದು, ವಿಚ್ಛೇದನ ಪಡೆದು ಬೇರೆಯಾಗಿದ್ದರೂ ಆತನಿಗೆ ಆಕೆಯ ಮೇಲಿರುವ ದ್ವೇಷ, ಬೇಸರ ಸ್ಪಷ್ಟವಾಗಿ ಕಾಣುತ್ತೆ ಅಲ್ವಾ?
ಈತ ನಾಣ್ಯಗಳನ್ನು ತಂದಾಗ ಹಣವನ್ನು ಕ್ಯಾಶ್ ಮೂಲಕ ನೀಡಬೇಕೆಂದ ನ್ಯಾಯಾಧೀಶರು ಸೂಚಿಸಿದರು, ಆತ ಹಣದ ಚೀಲದ ಮೂಲಕ ಹೊರ ಹೋಗಿ ನಂತರ ಕ್ಯಾಶ್ ತಂದು ಕೊಟ್ಟಿದ್ದಾನೆ.
ಕಳೆದ ವರ್ಷವು ಇಂಥದ್ದೇ ಘಟನೆ ಸಂಭವಿಸಿತು
ರಾಜಾಸ್ಥಾನದ ವ್ಯಕ್ತಿಯೊಬ್ಬರಿಗೆ ವಿಚ್ಛೇದಿತ ಪತ್ನಿಗೆ 55, 000 ಜೀವನಾಂಶ ಹಣವನ್ನು ನಾಣ್ಯದ ರೂಪದಲ್ಲಿ ನೀಡಿದ್ದಾನೆ. ಆತ 11 ತಿಂಗಳ ಕಾಲ ಪತ್ನಿಗೆ ಜೀವನಾಂಶ ನೀಡದೆ ಓಡಾಡುತ್ತಿದ್ದ, ಈ ಕಾರಣಕ್ಕೆ ಆತನನ್ನು ಅರೆಸ್ಟ್ ಮಾಡಲಾಯ್ತು, ಆವಾಗ ಆತನ ಒಂದು ಹಾಗೂ ಎರಡು ರುಪಾಯಿ ನಾಣ್ಯಗಳನ್ನು ತಂದು ಕೊಟ್ಟಿದ್ದ. ಆವಾಗ ಪತ್ನಿ ಈತ ಈ ರೀತಿ ನಾಣ್ಯಗಳನ್ನು ತಂದು ಎಣಿಸುವಂತೆ ಮಾಡಲು ಯತ್ನಿಸಿರುವುದು ಮಾನಸಿಕ ಕಿರುಕುಳ ಎಂದು ಹೇಳಿದಾಗ ನ್ಯಾಯಧೀಶರು ಈತನ ಬಳಿಯೇ ಎಣಿಸಿ ಕೊಡುವಂತೆ ಸೂಚಿಸಿದ್ದರು. ಆತನಿಗೆ 1000 ರುಪಾಯಿಯಂತೆ ಸೆಟ್ ಮಾಡಿ ನೀಡುವಂತೆ ಸೂಚಿಸಿದ್ದರು.
ವಿಚ್ಚೇನದಲ್ಲಿ ಜೀವನಾಂಶ ಬಹುತೇಕ ಪುರುಷರಿಗೂ ಶಾಪವೂ ಆಗಿದೆ
ವಿಚ್ಚೇದನ ಬಳಿಕ ಸಾಕಷ್ಟು ಹಣಕ್ಕೆ ಡಿಮ್ಯಾಂಡ್ ಮಾಡುವ ಹಲವಾರು ಪ್ರಕರಣಗಳಿವೆ. ಇತ್ತೀಚೆಗೆ ಪತ್ನಿ ಗಂಡನಿಂದ ತಿಂಗಳಿಗೆ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣವನ್ನು ಜೀವನಾಂಶವಾಗಿ ಕೇಳಿದಾಗ ಕೋರ್ಟ್ ಆಕೆಗೆ ನಿಮ್ಮ ಲಕ್ಷುರಿಗೆ ನೀವು ದುಡಿದು ಮಾಡಿಕೊಳ್ಳಿ, ನಿಜವಾಗಿ ಎಷ್ಟು ಜೀವನಾಂಶದ ಅವಶ್ಯಕತೆಯಿದೆ ಎಂಬುವುದಷ್ಟೇ ಹೇಳಿ ಎಂಬಂತೆ ಎಚ್ಚರಿಕೆ ನೀಡಿತ್ತು. ಅತುಲ್ ಸುಭಾಷ್ ಎಂಬ ವ್ಯಕ್ತಿಯ ಆತ್ಮಹತ್ಯೆ ರಾಷ್ಟ್ರಮಟ್ಟದಲ್ಲಿ ಸಿದ್ದಿ ಮಾಡಿತು. ಪತ್ನಿ ಜೀವನಾಂಶವಾಗಿ 3 ಕೋಟಿ ಹಣ ಕೇಳಿ ಹಿಂಸೆಡ ನೀಡುತ್ತಿದ್ದಾಳೆ ಎಂಬ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳನ್ನು ಕೆಲ ಮಹಿಳೆಯರು ದುರ್ಬಳಿಕೆ ಮಾಡುತ್ತಿದ್ದಾರೆ, ಇಂಥವರಿಗೂ ಕಠಿಣ ಶಿಕ್ಷೆಯ ಅಗ್ಯತವಿದೆ.



Click it and Unblock the Notifications
